ಆಂಡ್ರಾಯ್ಡ್ ಫೋನ್ ಸರಳ ಬಳಕೆಗೆ 7 ಸೂತ್ರಗಳು

By Shwetha
|

ನೀವು ಖರೀದಿಸಿರುವ ಫೋನ್ ನಿಮ್ಮ ನೂರಾರು ಅಗತ್ಯಗಳನ್ನು ಪೂರೈಸುವಷ್ಟು ಅತ್ಯುತ್ತಮವಾಗಿದ್ದರೂ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ನಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಆ ಪ್ರಯೋಜನಗಳನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದು ಇದು ಖಂಡಿತ ನಿಮಗೆ ಸಹಕಾರಿ ಎಂದೆನಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಉತ್ತಮತೆಗಾಗಿ ನೀವು ಅನುಸರಿಸಬೇಕಾದ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಓದಿರಿ: ಪ್ಲಾಸ್ಟಿಕ್‌ನಿಂದ ನೀಡಲಿದೆ ಒಡೆದ ಫೋನ್ ಪರದೆಗೆ ಮರುಜೀವ

ಈ ಸಲಹೆಗಳು ತುಂಬಾ ಸರಳವಾಗಿದ್ದು ನಿಮ್ಮ ಫೋನ್ ಮೂಲಕ ಇಷ್ಟೆಲ್ಲಾ ಕೆಲಸಗಳನ್ನು ಮಾಡುವುದು ಸಾಧ್ಯವೇ ಎಂಬುದಾಗಿ ನೀವು ಆಶ್ಚರ್ಯಪಡುವುದು ಖಂಡಿತ. ಬನ್ನಿ ಹಾಗಿದ್ದರೆ ಕೆಳಗಿನ ಅಂಶಗಳನ್ನು ಅರಿತುಕೊಂಡು ನಿಮ್ಮ ಫೋನ್ ಎಂತಹ ಅದ್ಭುತ ಮಾಯಾ ಪೆಟ್ಟಿಗೆ ಎಂಬುದನ್ನು ಅರಿತುಕೊಳ್ಳಿ.

ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ತ್ವರಿತ ಪ್ರವೇಶ

ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ತ್ವರಿತ ಪ್ರವೇಶ

ಡ್ರಾಪ್ ಡೌನ್ ನೋಟಿಫಿಕೇಶನ್ ಬಾರ್‌ನಲ್ಲಿ ನೋಟಿಫಿಕೇಶನ್ ಅನ್ನು ಒತ್ತಿಹಿಡಿಯಿರಿ ನಂತರದ ಅಧಿಸೂಚನೆಗೆ ಇದು ಸೆಟ್ಟಿಂಗ್ ಐಕಾನ್ ಅನ್ನು ತೋರಿಸುತ್ತದೆ ಇಲ್ಲಿ ನಿಮಗೆ ಆಫ್ ಮಾಡುವುದು ಅಥವಾ ಹೊಂದಿಸುವುದು ಮೊದಲಾದವನ್ನು ನಡೆಸಬಹುದಾಗಿದೆ.

ಹೈ ಕಾಂಟ್ರಾಸ್ಟ್ ಟೆಕ್ಸ್ಟ್

ಹೈ ಕಾಂಟ್ರಾಸ್ಟ್ ಟೆಕ್ಸ್ಟ್

ಸ್ಮಾರ್ಟ್‌ಫೋನ್‌ನಲ್ಲಿ ಪಠ್ಯ ಓದುವುದು ಹೆಚ್ಚಿನವರಿಗೆ ಕಷ್ಟವಾಗಿರುತ್ತದೆ. ಇದಕ್ಕಾಗಿ ಹೈ ಕಾಂಟ್ರಾಸ್ಟ್ ಟೆಕ್ಸ್ಟ್ ಅನ್ನು ಸಕ್ರಿಯಗೊಳಿಸಿ ಸೆಟ್ಟಿಂಗ್ಸ್ > ಆಕ್ಸೆಸಿಬಿಲಿಟಿ. ಒಮ್ಮೆ ಸಕ್ರಿಯಗೊಂಡ ನಂತರ ನಿಮಗೆ ಪಠ್ಯ ಓದುವಿಕೆ ಸರಳವಾಗಿರುತ್ತದೆ.

ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ಭದ್ರತಾ ಕಾರಣಗಳಿಗಾಗಿ, ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೊಂದಿಸಬೇಕು. ಸೆಕ್ಯುರಿಟಿ > ಸ್ಮಾರ್ಟ್ ಲಾಕ್ ಮತ್ತು ನಿಮ್ಮ ಹೋಮ್ ಲೊಕೇಶನ್ ಹಾಗೂ ವಿಶ್ವಾಸಾರ್ಹ ಸ್ಥಳಗಳನ್ನು ಸೇರಿಸಿ. ಬ್ಲ್ಯೂಟೂತ್ ಡಿವೈಸ್ ಅನ್ನು ಕೂಡ ಸೇರಿಸಬಹುದಾಗಿದೆ.

ಸೈಲೆಂಟ್ ಫೋನ್ ಪತ್ತೆ

ಸೈಲೆಂಟ್ ಫೋನ್ ಪತ್ತೆ

ನಿಮ್ಮ ಫೋನ್ ರಿಂಗರ್ ಅನ್ನು ಸ್ವಿಚ್ ಆಫ್ ಮಾಡಿದ್ದೀರಾ ಅಥವಾ ಫೋನ್ ಎಲ್ಲಿದೆ ಎಂಬುದು ತಿಳಿದಿಲ್ಲವೇ? ಇದು ಸೈಲೆಂಟ್ ಮೋಡ್‌ನಲ್ಲಿದ್ದರೆ, ಇನ್ನೊಂದು ಫೋನ್‌ನಿಂದ ಅದಕ್ಕೆ ಕರೆ ಮಾಡುವುದು ವ್ಯರ್ಥ. ಅದಕ್ಕಾಗಿ http:android.comdevicemanage ಮತ್ತು ಫೋನ್‌ನಲ್ಲಿರುವ ಅದೇ ಗೂಗಲ್ ಐಡಿಯನ್ನು ಬಳಸಿ ಪ್ರವೇಶಿಸಿ.

ಕಸ್ಟಮ್ ರಿಜೆಕ್ಟ್ ಎಸ್‌ಎಮ್‌ಎಸ್

ಕಸ್ಟಮ್ ರಿಜೆಕ್ಟ್ ಎಸ್‌ಎಮ್‌ಎಸ್

ಸೆಟ್ಟಿಂಗ್ಸ್‌ಗೆ ಹೋಗಿ ಡೈಲರ್ ತೆರೆಯಿರಿ ಮತ್ತು ಫೋನ್ ಸೆಟ್ಟಿಂಗ್ಸ್ ಪ್ರವೇಶಿಸಿ. ಮೆನುವಿನಲ್ಲಿ ರಿಜೆಕ್ಟ್ ವಿದ್ ಎಸ್‌ಎಮ್‌ಎಸ್ ಆಪ್ಶನ್ ನಿಮಗೆ ಕಾಣುತ್ತದೆ. ಸೆಟ್ಟಿಂಗ್‌ನಲ್ಲಿ, ಪ್ರಿ ಸೆಟ್ ಸಂದೇಶಗಳನ್ನು ತೆಗೆದುಹಾಕುವುದು ಅಥವಾ ಸಂಪಾದಿಸುವುದನ್ನು ನಿಮಗೆ ಮಾಡಬಹುದಾಗಿದೆ

ಇಂಟರ್ಫೇಸ್ ವೇಗವನ್ನು ಹೆಚ್ಚಿಸಲು

ಇಂಟರ್ಫೇಸ್ ವೇಗವನ್ನು ಹೆಚ್ಚಿಸಲು

ಸೆಟ್ಟಿಂಗ್ಸ್ > ಅಬೌಟ್ ಫೋನ್ ಮತ್ತು 'ಬಿಲ್ಡ್ ನಂಬರ್' ಮೆನುವಿನ ಮೇಲೆ 7 ಬಾರಿ ತಟ್ಟಿರಿ. ಸೆಟ್ಟಿಂಗ್‌ಗಳಲ್ಲಿ ಡೆವಲಪರ್ ಆಪ್ಶನ್ ಅನ್ನು ಇದು ಸಕ್ರಿಯಗೊಳಿಸುತ್ತದೆ. ಸೆಟ್ಟಿಂಗ್ಸ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಟ್ರಾನ್ಸಿಶನ್ ಅನಿಮೇಶನ್ ಸ್ಕೇಲ್ ದೊರೆಯುತ್ತದೆ.

ಸ್ವಯಂಚಾಲಿತ ಶಾರ್ಟ್‌ಕಟ್‌ಗಳನ್ನು ನಿಲ್ಲಿಸಿ

ಸ್ವಯಂಚಾಲಿತ ಶಾರ್ಟ್‌ಕಟ್‌ಗಳನ್ನು ನಿಲ್ಲಿಸಿ

ಪ್ಲೇ ಸ್ಟೋರ್‌ನಿಂದ ಪ್ರತೀ ಸಲ ನೀವು ಹೊಸ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದಂತೆಲ್ಲಾ ಹೋಮ್ ಸ್ಕ್ರೀನ್‌ನಲ್ಲಿ ಶಾರ್ಟ್ ಕಟ್ ಐಕಾನ್ ಪ್ಲೇಸ್ ಆಗಿರುತ್ತದೆ. ಪ್ಲೇ ಸ್ಟೋರ್ ತೆರೆಯಿರಿ, ಮೇಲ್ಭಾಗದ ಎಡಬದಿಯಲ್ಲಿರುವ ಮೂರು ಬಾರ್ ಅನ್ನು ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್ ತೆರೆಯಿರಿ.

Best Mobiles in India

English summary
You don't always find everything you need to know in the user manual ­ plus, who reads that thing anyway?If you want to find out more about some hidden tips and tricks for your Android smartphone/tablet device, read this non-exhaustive list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X