ಬೆಂಗಳೂರಿನಲ್ಲಿ ಕೈತುಂಬಾ ಸಂಬಳಕ್ಕೆ ಇನ್ನು ಕೊರತೆಯಿಲ್ಲ

By Shwetha
|

ಫ್ಲಿಪ್‌ಕಾರ್ಟ್, ಓಲಾ ಮತ್ತು ಇನ್‌ಮೊಬಿಯಂತಹ ದೊಡ್ಡ ದೊಡ್ಡ ಕಂಪೆನಿಗಳನ್ನೇ ಹೊಂದಿರುವ ಬೆಂಗಳೂರು ದೇಶದ ಪ್ರಮುಖ ತಂತ್ರಜ್ಞಾನ ಕ್ಷೇತ್ರವಾಗಿ ಮುನ್ನುಗ್ಗುತ್ತಿದೆ. ವಿಶ್ವದಲ್ಲೇ ಎರಡನೆಯ ಸ್ಟಾರ್ಟಪ್‌ಗಳನ್ನು ಹೊಂದಿರುವ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉದ್ಯಾನ ನಗರಿಯಲ್ಲಿ ಟೆಕ್ ಸಂಸ್ಥೆಗಳಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.

ಓದಿರಿ: ಮಹಿಳಾ ಸಂಸ್ಥಾಪಕರನ್ನು ಹೊಂದಿರುವ ಭಾರತದ 10 ಟೆಕ್‌ ಉದ್ಯಮಗಳು

ವರ್ಷಗಳು ಕಳೆದಂತೆಲ್ಲಾ ಇನ್ನಷ್ಟು ಬೆಳವಣಿಗೆಯನ್ನು ತಂತ್ರಜ್ಞಾನ ಕ್ಷೇತ್ರವು ಕಂಡುಕೊಳ್ಳುತ್ತಿದ್ದು ಈ ಮಾಧ್ಯಮದಲ್ಲೇ ಹತ್ತು ಹಲವು ಶೋಧನೆಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ತಕ್ಕಂತೆ ಹಲವಾರು ಅನ್ವೇಷಣೆಗಳನ್ನು ಕೈಗೊಳ್ಳಲಾಗುತ್ತಿದೆ. ಇಂದಿನ ಲೇಖನದಲ್ಲಿ ಸಿಲಿಕಾನ್ ನಗರಿಯಲ್ಲಿ ನೀವು ಮುಂದೆ ಕಂಡುಕೊಳ್ಳಲಿರುವ ಸ್ಟಾರ್ಟಪ್ ಸಂಸ್ಥೆಗಳ ಮಾಹಿತಿಯನ್ನು ನೀಡುತ್ತಿದ್ದು ಸ್ಲೈಡರ್ ಪರೀಕ್ಷಿಸಿಕೊಳ್ಳಿ.

ಹೆಡ್ ಔಟ್

ಹೆಡ್ ಔಟ್

ಸ್ಥಾಪನೆ: 2014
ಹೆಚ್ಚು ಬೇಡಿಕೆಯಲ್ಲಿರುವ ಮೊಬೈಲ್ ಮಾರ್ಕೆಟ್ ಪ್ಲೇಸ್ ಹೆಡ್ ಔಟ್ ನಿಮ್ಮ ಪ್ರಯಾಣ, ಚಟುವಟಿಕೆಗಳು, ಈವೆಂಟ್‌ಗಳಿಗೆ ಕೈಜೋಡಿಸಲಿದೆ.

ಜೂಮ್ ಕಾರ್

ಜೂಮ್ ಕಾರ್

ಸ್ಥಾಪನೆ: 2012
ಸೆಲ್ಫ್ ಡ್ರೈವ್ ಕಾರು ರೆಂಟಲ್ ಸರ್ವೀಸ್ ಆಗಿರುವ ಜೂಮ್ ಕಾರ್ ಗಂಟೆಗೆ, ದಿನಕ್ಕೆ, ವಾರಕ್ಕೆ, ಅಥವಾ ತಿಂಗಳಿಗೆ ಕಾರು ಬುಕ್ ಮಾಡಿಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಲಿದೆ. ಹೆಚ್ಚಿನ ದರವನ್ನು ಪಡೆದುಕೊಳ್ಳದೇ ಕಾರು ಬುಕ್ ಮಾಡುವ ಸೌಲಭ್ಯ ಇಲ್ಲಿದೆ.

ನೆಸ್ಟ್ ಅವೇ

ನೆಸ್ಟ್ ಅವೇ

ಸ್ಥಾಪನೆ: 2015
ಬೆಂಗಳೂರು ಮೂಲದ ಆನ್‌ಲೈನ್ ನಿರ್ವಹಿತ ಹೋಮ್ ರೆಂಟಲ್ ಮಾರ್ಕೆಟ್ ಪ್ಲೇಸ್ ಆಗಿದೆ ನೆಸ್ಟ್ ಅವೇ. ಅನ್‌ಫರ್ನಿಶ್ ಆಗಿರುವ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ಫರ್ನಿಶ್‌ಗೊಳಿಸಿ ನಿಮಗೆ ನೀಡುತ್ತದೆ.

ಲುಕ್ ಅಪ್

ಲುಕ್ ಅಪ್

ಸ್ಥಾಪನೆ: 2014
ರಿಸರ್ವೇಶನ್ ಮಾಡಲು, ಅಪಾಯಿಂಟ್‌ಮೆಂಟ್ ಬುಕ್ ಮಾಡಿಕೊಳ್ಳಲು ಸ್ಥಳೀಯ ವ್ಯವಹಾರಗಳು ಮತ್ತು ಶಾಪ್‌ಗಳೊಂದಿಗೆ ಚಾಟ್ ಮಾಡುವ ಅವಕಾಶವನ್ನು ಲುಕ್ ಅಪ್ ನಿಮಗೆ ಒದಗಿಸುತ್ತದೆ.

ತ್ರಿಲ್ಲೊಫಿಲ್ಲಾ

ತ್ರಿಲ್ಲೊಫಿಲ್ಲಾ

ಸ್ಥಾಪನೆ: 2010
ಇದೊಂದು ಮಾರುಕಟ್ಟೆ ಸ್ಥಳವಾಗಿದ್ದು ಟೂರ್ ಮತ್ತು ಚಟುವಟಿಕೆಗಳನ್ನು ನಿಯೋಜಿಸಲು ಸೂಕ್ತವೆಂದೆನಿಸಿದೆ. 2500 ಕ್ಕಿಂತಲೂ ಹೆಚ್ಚಿನ ಟೂರ್‌ಗಳು ಮತ್ತು ಬೇರೆ ಬೇರೆ ಚಟುವಟಿಕೆಗಳನ್ನು ಇದು ನಿರ್ದೇಶಿಸುತ್ತದೆ.

ಹ್ಯಾಕರ್ ಅರ್ತ್

ಹ್ಯಾಕರ್ ಅರ್ತ್

ಸ್ಥಾಪನೆ: 2012
ಹ್ಯಾಕರ್ ಅರ್ತ್ ಒಂದು ಉತ್ಪನ್ನ ಕಂಪೆನಿಯಾಗಿದ್ದು ಇದು ತಾಂತ್ರಿಕ ಸೌಲಭ್ಯ ಪರಿಹಾರಗಳನ್ನು ಒದಗಿಸುತ್ತದೆ. ಇದು ಸೂಕ್ತ ಅಭ್ಯರ್ಥಿಗಳನ್ನು ನಿಯೋಜಿಸಲು ಸಹಕಾರಿಯಾಗಿದೆ.

ಸ್ವಿಗ್ಗಿ

ಸ್ವಿಗ್ಗಿ

ಸ್ಥಾಪನೆ: 2014
ನಿಮ್ಮ ಮೆಚ್ಚಿನ ಹೋಟೆಲ್‌ಗಳಿಂದ ಆಹಾರಗಳನ್ನು ಒದಗಿಸುವ ಕಾರ್ಯವನ್ನು ಸ್ವಿಗ್ಗಿ ಮಾಡುತ್ತದೆ.

ಲಿವ್ ಸ್ಪೇಸ್

ಲಿವ್ ಸ್ಪೇಸ್

ಸ್ಥಾಪನೆ: 2012
ಇದೊಂದು ಇ ಕಾಮರ್ಸ್ ಸ್ಟಾರ್ಟಪ್ ಆಗಿದ್ದು ಹೋಮ್ ಡಿಸೈನ್ ಮತ್ತು ಡೆಕೋರ್ ಸ್ಪೇಸ್ ವಿನ್ಯಾಸವನ್ನು ಮಾಡುತ್ತದೆ. ಇದೊಂದು ಆನ್‌ಲೈನ್ ಸ್ಟೋರ್ ಆಗಿದ್ದು ಒಳಾಂಗಣ ವಿನ್ಯಾಸ ಸೌಲಭ್ಯವನ್ನು ಒದಗಿಸಿಕೊಡುತ್ತದೆ.

ಇನ್‌ಸ್ಟಾಮೊಜೊ

ಇನ್‌ಸ್ಟಾಮೊಜೊ

ಸ್ಥಾಪನೆ: 2012
ವೆಬ್ ಆಧಾರಿತ ಕಂಪೆನಿಯಾಗಿರುವ ಇನ್‌ಸ್ಟಾಮೊಜೊ ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳಿಗೆ ಸಹಾಯವನ್ನು ನೀಡುತ್ತದೆ. ಈ ವಿಭಾಗದಲ್ಲಿ ಕಲಾವಿದರು, ಫ್ರಿಲಾನ್ಸರ್ಸ್, ಆಫ್‌ಲೈನ್ ಸ್ಟೋರ್ಸ್, ಫೇಸ್‌ಬುಕ್ ಸೆಲ್ಲರ್ಸ್‌ಗೂ ಇದು ನೆರವಿನ ಹಸ್ತವನ್ನು ಚಾಚುತ್ತದೆ.

ಫ್ಯುರ್‌ಲೆಂಕೊ

ಫ್ಯುರ್‌ಲೆಂಕೊ

ಸ್ಥಾಪನೆ: 2012
ಭಾರತದ ಪ್ರಥಮ ಹೋಮ್ ಫರ್ನೀಚರ್ ಚಂದಾದಾರಿಕೆ ಪ್ರೊಗ್ರಾಮ್ ಆಧಾರಿತ ಸಂಸ್ಥೆಯಾಗಿರುವ ಫ್ಯುರ್‌ಲೆಂಕೊ ಬೆಂಗಳೂರಿನಲ್ಲಿ ತನ್ನ ಉದ್ಯಮವನ್ನು ಆರಂಭಿಸಿ ಈಗ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

Best Mobiles in India

English summary
Here's a list of Bengaluru-based growth stage startups that you should watch out for this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X