ಗೂಗಲ್ ಅಕೌಂಟ್ ಸುರಕ್ಷತೆಗೆ ಗೊತ್ತಿರಲೇಬೇಕಾದ ಬೆಸ್ಟ್ ಟಿಪ್ಸ್ ಇಲ್ಲಿವೆ!?

ಗೂಗಲ್‌ ಖಾತೆಯಲ್ಲೇ ತಮ್ಮ ಅತ್ಯಮೂಲ್ಯ ಹೆಚ್ಚಿನ ಮಾಹಿತಿಗಳನ್ನು ಸ್ಟೋರ್‌ ಮಾಡಿರುತ್ತಾರೆ.!!

|

ಇಂಟರ್‌ನೆಟ್‌ ಬಳಕೆದಾರರು ದಿನನಿತ್ಯ ಒಮ್ಮೆಯಾದರೂ ಗೂಗಲ್‌ ಅನ್ನು ಬಳಸದೇ ಇರಲಾರರು.ಇರಲು ಸಾಧ್ಯವೂ ಇಲ್ಲ ಎನ್ನಬಹುದು ಬಿಡಿ.! ಏಕೆಂದರೆ ಗೂಗಲ್‌ ಇಲ್ಲದೇ ಅತಂರ್ಜಾಲ ಇಲ್ಲ ಎನ್ನುವ ಮಟ್ಟಿಗೆ ಇಂದು ಗೂಗಲ್ ಹೆಸರು ಮಾಡಿದೆ.!!

ಹಾಗಾಗಿ, ಇಂದು ಎಲ್ಲರೂ ಗೂಗಲ್ ಅಕೌಂಟ್ ಬಳಸುತ್ತಿದ್ದಾರೆ. ಮತ್ತು ಗೂಗಲ್‌ ಖಾತೆಯಲ್ಲೇ ತಮ್ಮ ಅತ್ಯಮೂಲ್ಯ ಹೆಚ್ಚಿನ ಮಾಹಿತಿಗಳನ್ನು ಸ್ಟೋರ್‌ ಮಾಡಿರುತ್ತಾರೆ.!! ಹಾಗಾಗಿ, ತಮ್ಮ ಯಾವುದೇ ಮಾಹಿತಿಯನ್ನು ಯಾರು ದಾಳಿ ಮಾಡದಂತ ಸುರಕ್ಷಿತಗೊಳಿಸುವುದು ಉತ್ತಮ.!!

ಗೂಗಲ್ ಎಷ್ಟೇ ಸುರಕ್ಷಿವಾಗಿದ್ದರೂ ಕೂಡ ಕೆಲವೊಮ್ಮೆ ನಮ್ಮದೇ ತಪ್ಪುಗಳಿಂದ ನಾವು ಹ್ಯಾಕರ್‌ಗಳ ದಾಳಿಗೆ ತುತ್ತಾಗುವ ಸಂಭವವಿರುತ್ತದೆ. ಹಾಗಾಘಿ, ಇಂದಿನ ಲೇಖನದಲ್ಲಿ ಗೂಗಲ್ ಅಕೌಂಟ್‌ ಅನ್ನು ಹೇಗೆ ಸುರಕ್ಷಿತವಾಗಿ ಇಡುವುದು ಎಂದು ತಿಳಿಸಿಕೊಡುತ್ತೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಹೇಗೆ ಎಂದು ತಿಳಿಯಿರಿ.!!

ಗೂಗಲ್ ಸೆಕ್ಯೂರಿಟಿ ಚೆಕಪ್

ಗೂಗಲ್ ಸೆಕ್ಯೂರಿಟಿ ಚೆಕಪ್

ಗೂಗಲ್‌, ಬಳಕೆದಾರರು ತಮ್ಮ ಖಾತೆ ಸುರಕ್ಷತೆ ಚೆಕ್‌ ಮಾಡಿಕೊಳ್ಳಲು ಇನ್‌ಬಿಲ್ಟ್ ಸೆಕ್ಯೂರಿಟಿ ಸೆಟ್ಟಿಂಗ್ಸ್ ಹೊಂದಿದೆ. ಹಾಗಾಗಿ, ಗೂಗಲ್ ಮೈ ಅಕೌಂಟ್ಸ್'ಗೆ ಹೋಗಿ ಸೆಕ್ಯೂರಿಟಿ ಚೆಕಪ್ ಆಕ್ಸೆಸ್ 'ಗಾಗಿ 'Sing &Security' ಆಪ್ಶನ್‌ ಕ್ಲಿಕ್ ಮಾಡಿ. ನಂತರ ನಿಮ್ಮ ಪೂರ್ಣ ರಿಕವರಿ ಮತ್ತು ಸೆಕ್ಯೂರಿಟಿ ಮಾಹಿತಿ ನೋಡಲು ವಿಂಡೋ ಒಂದು ಓಪನ್‌ ಆಗುತ್ತದೆ. ನಂತರ ಅಲ್ಲಿ ಎಲ್ಲಾ ಮಾಹಿತಿಗಳನ್ನು ಚೆಕ್‌ ಮಾಡಬಹುದು. ಚಿತ್ರ ಗಮನಿಸಿ.

 ನಿಮ್ಮ ಡಿವೈಸ್ ಜಿಮೇಲ್  ಕನೆಕ್ಟ್  ಚೆಕ್ ಮಾಡಿ.

ನಿಮ್ಮ ಡಿವೈಸ್ ಜಿಮೇಲ್ ಕನೆಕ್ಟ್ ಚೆಕ್ ಮಾಡಿ.

ಗೂಗಲ್ ಜಿಮೇಲ್ ಖಾತೆ ನಿಮ್ಮ ಸ್ಮಾರ್ಟ್‌ಫೋನ್‌ ಆಕ್ಸೆಸ್ ಮಾಡಲು ಬಳಕೆಯಾಗುತ್ತಿರುತ್ತದೆ. ಹಾಗಾಗಿ, ಜಿಮೇಲ್ ಖಾತೆಯನ್ನು ಪ್ರಸ್ತುತದಲ್ಲಿ ಯಾವ ಡಿವೈಸ್‌ನಿಂದ ಆಕ್ಸೆಸ್ ಮಾಡಲಾಗಿದೆ ಎಂದು ನೀವೆ ಖಚಿತಪಡಿಸಬೇಕು. ಒಂದು ವೇಳೆ ಎರಡು ಡಿವೈಸ್‌ಗಳಲ್ಲಿಯೂ ನೀವೆ ಖಾತೆ ಆಕ್ಸೆಸ್ ಮಾಡಿದ್ದರೆ 'Looks Good' ಎಂಬುದನ್ನು ಕ್ಲಿಕ್ ಮಾಡಿ. ನೀವು ಬಳಸದ ಇತರೆ ಡಿವೈಸ್ ತೋರಿಸುತ್ತಿದ್ದಲ್ಲಿ ಕೆಳಗೆ ಸ್ಕ್ರಾಲ್‌ ಮಾಡಿ 'Something looks wrong' ಕ್ಲಿಕ್‌ ಮಾಡಿ. !

2 ಹಂತದ ವೆರಿಫಿಕೇಶನ್

2 ಹಂತದ ವೆರಿಫಿಕೇಶನ್

ಗೂಗಲ್ ಖಾತೆ ಬಳಕೆದಾರರಿಗೆ 2 ಹಂತದ ವೆರಿಫಿಕೇಶನ್ ಸೆಟ್ಟಿಂಗ್ಅತಿ ಮುಖ್ಯವಾಗಿದೆ.ಫೋನ್ ನಂಬರ್ ಅನ್ನು ನೀಡಿ ನಿಮ್ಮ ಮೊಬೈಲ್‌ಗೆ ಒನ್‌ಟೈಮ್ ಪಾಸ್‌ವರ್ಡ್ ಪಡೆಯುವ ಸೌಲಭ್ಯವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಿ. ಇದು ಹ್ಯಾಕರ್‌ಗಳಿಂದ ನಿಮ್ಮ ಅಕೌಂಟ್ ರಕ್ಷಿಸುತ್ತದೆ.!!

ಕೊನೆಯ ಬಾರಿ ಪಾಸ್‌ವರ್ಡ್ ಬದಲಿಸಿದ ರಿವೀವ್ ನೋಡಿ

ಕೊನೆಯ ಬಾರಿ ಪಾಸ್‌ವರ್ಡ್ ಬದಲಿಸಿದ ರಿವೀವ್ ನೋಡಿ

2 ಹಂತದ ವೆರಿಫಿಕೇಶನ್‌ ಮುಗಿದಿದೆಯೇ ಎಂಬುದನ್ನು ಸಹ ನೋಡಬಹುದು. ಪುನಃ ಪಾಸ್‌ವರ್ಡ್‌ ಬದಲಿಸಬಹುದು ಮತ್ತು 2 ಹಂತದ ಪಾಸ್‌ವರ್ಡ್‌ ವೆರಿಫಿಕೇಶನ್ ಸ್ಟೇಟಸ್ ಚೆಕ್‌ ಮಾಡಬಹುದು. ಸೆಕ್ಯೂರಿಟಿ ವ್ಯವಸ್ಥೆಗೊಳಿಸಿದ ನಂತರ, 'Sign In & Security' ಟ್ಯಾಬ್ ಕ್ಲಿಕ್ ಮಾಡಿ. ನಂತರ ನೇರವಾಗಿ ಪಾಸ್‌ವರ್ಡ್ ಬದಲಿಸಿದ ಪೇಜ್‌ಗೆ ಹೋಗುತ್ತೀರಾ.!!

<strong>'ಟ್ರೂ ಕಾಲರ್' ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿ!!.ಏಕೆ ಗೊತ್ತಾ? </strong>'ಟ್ರೂ ಕಾಲರ್' ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿ!!.ಏಕೆ ಗೊತ್ತಾ?

Best Mobiles in India

English summary
We can’t imagine our life without Google in nowadays. to know more visit to kannadada.gibot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X