ಕಳ್ಳತನದಿಂದ ನಿಮ್ಮ ಫೋನ್‌ನ ಸಂರಕ್ಷಣೆ ಹೇಗೆ?

By Shwetha
|

ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವುದು ಎಂದರೆ ನಿಮ್ಮಲ್ಲಿ ಏನೋ ಒಂದು ಉತ್ಸಾಹ ಎದ್ದು ಕಾಣುತ್ತಿರುತ್ತದೆ. ನಿಮಗೆ ಬೇಕಾದ ಫೈಲ್‌ಗಳು ಮತ್ತು ಸಂಪರ್ಕಗಳೆಲ್ಲವನ್ನೂ ಇದರಲ್ಲಿ ಸ್ಟೋರ್ ಮಾಡುತ್ತೀರಿ. ಇನ್ನು ಹೊಚ್ಚ ಹೊಸ ಮಾಡೆಲ್ ಎಂದಾದಲ್ಲಿ, ಇದನ್ನು ಹೆಚ್ಚು ಜಾಗರೂಕತೆಯಿಂದ ನೀವು ಸಂರಕ್ಷಿಸುತ್ತೀರಿ.

ಓದಿರಿ: ಯಾವುದೇ ಗ್ಯಾಜೆಟ್ ಖರೀದಿಸುವಾಗ ಈ ಅಂಶಗಳು ತಲೆಯಲ್ಲಿರಲಿ

ಆದರೆ ಇನ್ನಷ್ಟು ಸರಳ ವಿಧಾನಗಳಲ್ಲಿ ಮತ್ತು ಸುರಕ್ಷಿತವಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕಾಪಾಡಿಕೊಳ್ಳಬಹುದು ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ಫೋನ್ ಅನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅದರಲ್ಲಿರುವ ಡೇಟಾ ದುಷ್ಟರ ಕೈಗೆ ಸಿಗದಂತೆ ಕೂಡ ನಿಗಾವಹಿಸಬಹುದಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಡಿವೈಸ್ ಮ್ಯಾನೇಜರ್

ಡಿವೈಸ್ ಮ್ಯಾನೇಜರ್

ನಿಮ್ಮ ಡಿವೈಸ್ ಕಳೆದು ಹೋದಲ್ಲಿ, ಕದ್ದು ಹೋದಲ್ಲಿ, ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಡೇಟಾ ಅಥವಾ ಆಪಲ್‌ನ ಫೈಂಡ್ ಮೈ ಫೀಚರ್ ಅನ್ನು ಬಳಸಿಕೊಂಡು ಡಿವೈಸ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ. ಇನ್ನು ನಿರಂತರವಾಗಿ ರಿಂಗ್ ಮಾಡಿ ಕದ್ದವರ ಮನದಲ್ಲಿ ಭಯವನ್ನು ಹುಟ್ಟಿಸಬಹುದಾಗಿದೆ.

ಲಾಕ್ ಮಾಡಿ

ಲಾಕ್ ಮಾಡಿ

ಎಲ್ಲಾ ಸ್ಮಾರ್ಟ್‌ಫೋನ್ ಮಾಲೀಕರಂತೆ ನೀವು ನಿಮ್ಮದೇ ಪ್ಯಾಟ್ರನ್ ಅನ್ನು ಬಳಸಿಕೊಂಡು ಫೋನ್ ಲಾಕ್ ಮಾಡಬಹುದು. ಈ ಪ್ಯಾಟ್ರನ್ ಯಾವ ಮಾದರಿಯಲ್ಲಿ ಇರಬೇಕು ಎಂದರೆ ಬಳಸುವವರಿಗೆ ಅದು ಗೊಂದಲವನ್ನುಂಟು ಮಾಡುವಂತಿರಬೇಕು. ಇತ್ತೀಚಿನ ಮಾಡೆಲ್‌ಗಳು ನಿಮ್ಮ ಫಿಂಗರ್ ಪ್ರಿಂಟ್ ಅನ್ನು ಬಳಸಿಕೊಳ್ಳುವುದರಿಂದ ಈ ರೀತಿಯಲ್ಲೂ ನೀವು ಪ್ರಯತ್ನಿಸಬಹುದಾಗಿದೆ.

ಎನ್‌ಕ್ರಿಪ್ಟ್

ಎನ್‌ಕ್ರಿಪ್ಟ್

ನಿಮ್ಮ ಡಿವೈಸ್‌ನ ವಿಷಯಕ್ಕೆ ಬಂದಾಗ ಇದರಲ್ಲಿರುವ ವಿಷಯಗಳು ಹೆಚ್ಚು ಮುಖ್ಯವಾಗಿರುತ್ತದೆ. ನಿಮ್ಮ ಡಿವೈಸ್ ಕದ್ದು ಹೋದಾಗ ಅದರಲ್ಲಿರುವ ಮಾಹಿತಿಯನ್ನು ಯಾರಿಗೂ ಪ್ರವೇಶಿಸಲಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಗೂಗಲ್‌ನ ಹಂತ ಹಂತದ ಪ್ರಕ್ರಿಯೆಯನ್ನು ಬಳಸಿಕೊಂಡು ಬಳಕೆದಾರರು ಅದನ್ನು ಎನ್‌ಕ್ರಿಪ್ಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿರುವ ಸೆಕ್ಯುರಿಟಿ ಸೆಟ್ಟಿಂಗ್ ಅನ್ನು ಬಳಸಿಕೊಂಡು ಇದನ್ನು ಮಾಡಬಹುದಾಗಿದೆ.

ರಿಮೋಟ್ ಆಕ್ಸೆಸ್

ರಿಮೋಟ್ ಆಕ್ಸೆಸ್

ಕಳ್ಳರು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಸಿಮ್ ತೆಗೆದಲ್ಲಿ ಇನ್ನಷ್ಟು ಕಷ್ಟವನ್ನು ನೀವು ಪಡಬೇಕಾಗುತ್ತದೆ. ನಿಮ್ಮ ಮನೆಯಿಂದಲೇ ನಿಮ್ಮ ಡಿವೈಸ್ ಅನ್ನು ಪ್ರವೇಶಿಸಿ ಅದನ್ನು ನಿಷ್ಪ್ರಯೋಜಕವನ್ನಾಗಿ ಮಾಡಬಹುದಾಗಿದೆ. ಆಂಟಿ ಥೆಪ್ಟ್ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಅಳವಡಿಸಿಕೊಂಡು, ಬ್ರೌಸರ್‌ನಲ್ಲಿ ಇದೇ ಅಪ್ಲಿಕೇಶನ್ ಬಳಸಿ ಡಿವೈಸ್ ಅನ್ನು ನಿಯಂತ್ರಿಸಬಹುದಾಗಿದೆ.

ಪೋಲೀಸರಿಗೆ ಮಾಹಿತಿ

ಪೋಲೀಸರಿಗೆ ಮಾಹಿತಿ

ನಿಮ್ಮ ಕದ್ದ ಫೋನ್ ಅನ್ನು ತಪ್ಪು ಕೆಲಸಗಳಿಗೆ ಉಪಯೋಗಿಸುವ ಸಾಧ್ಯತೆ ಇರುತ್ತದೆ. ಪೋಲೀಸರು ನಿಮ್ಮ ಸ್ಥಳಕ್ಕೆ ಬರುವುದನ್ನು ತಪ್ಪಿಸಲು, ನಿಮ್ಮ ಡಿವೈಸ್ ಕದ್ದು ಹೋಗಿದೆ ಎಂಬುದನ್ನು ಅವರಿಗೆ ಮುಂಚಿತವಾಗಿ ತಿಳಿಸಿ. ಡಿವೈಸ್ ಅನ್ನು ಟ್ರ್ಯಾಕ್ ಮಾಡುವ ಲಾಕ್ ಮಾಡುವ ಸಾಮರ್ಥ್ಯವನ್ನು ಸರಕಾರಿ ಏಜೆನ್ಸಿಗಳು ಪಡೆದುಕೊಂಡಿವೆ.

ಅಪ್ಲಿಕೇಶನ್ ಲಾಕ್ಸ್

ಅಪ್ಲಿಕೇಶನ್ ಲಾಕ್ಸ್

ನಿಮ್ಮ ಫೋನ್ ಅನ್ನು ಲಾಕ್ ಮಾಡುವುದೂ ಮಾತ್ರವೇ ಡೇಟಾವನ್ನು ಪ್ರವೇಶಿಸದಂತೆ ನಿರ್ಬಂಧಿಸುವ ವಿಧಾನವಲ್ಲ. ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಮೂಲಕ ಕೂಡ ಈ ಕೆಲಸವನ್ನು ನಿರ್ವಹಿಸಬಹುದಾಗಿದೆ. ಆಪ್ ಲಾಕ್ ಇದರಲ್ಲಿ ಅತಿ ಮುಖ್ಯವಾಗಿದ್ದು, ಇದರ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಅಧಿಕೃತ ದಾಖಲೆ ಇಲ್ಲದೆ ಆಪ್ ಲಾಕ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲಾಗುವುದಿಲ್ಲ.

Best Mobiles in India

English summary
We take a look at some of the best ways you can safeguard your phone and data contained within.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X