ಮೊಬೈಲ್ ಆಪ್‌ ಮೂಲಕ ಪ್ರತಿದಿನವೂ ಹಣಗಳಿಸಿ!!

Written By: Bhaskar N J

ಇಂಟರ್‌ನೆಟ್ ಮೂಲಕ ಹಣಗಳಿಸುವುದು ಹೇಗೆ ಎಂದು ನಮ್ಮಲ್ಲಿ ಹಲವರು ಚಿಂತಿಚಿರುತ್ತಾರೆ. ಇನ್ನು ಗೂಗಲ್‌ನಲ್ಲಿ ಹುಡುಕಿ ಹುಡುಕಿ ಸುಸ್ತಾಗಿರುತ್ತಾರೆ. ಇನ್ನು ಇದನ್ನೆ ತಮ್ಮ ವಂಚನೆಯ ಬಂಡವಾಳ ಮಾಡಿಕೊಂಡಿರುವ ಮೋಸಗಾರರು, ಮೊಬೈಲ್‌ ಮೂಲಕ ಮನೆಯಲ್ಲಿಯೇ ಕುಳಿತು ಹಣಗಳಿಸಿರಿ ಎನ್ನುವ ಸುಳ್ಳು ಜಾಹಿರಾತು ನೀಡಿ ಮೋಸಮಾಡುತ್ತಾರೆ.

ಇದೆಲ್ಲಾ ಬಿಡಿ, ಇಂಟರ್‌ನೆಟ್ ಮುಖಾಂತರ ಹಣಗಳಿಸಲು ಸಾಧ್ಯವೆ ಎಂದರೆ ಅದು ನಿಮ್ಮ ನಿಮ್ಮ ಕೌಶಲ್ಯಕ್ಕೆ ಸರಿಹೋಗುತ್ತದೆ. ಯಾರೆ ಆದರು ನಿಮಗೆ ಸುಖಾಸುಮ್ಮನೆ ಹಣವನ್ನು ನೀಡುವುದಿಲ್ಲ. ಇಂಟರ್‌ನೆಟ್‌ ವ್ಯವಹಾರದಲ್ಲಿ ನಿಮ್ಮ ಕೌಶಲ್ಯ ಹೆಚ್ಚಿದ್ದರೆ ಕೆಲವರು ಮಾತ್ರ ಹಣಗಳಿಸಬಹುದು ಅಷ್ಟೆ. ಆದರೆ, ಇಲ್ಲಿ ನಾವು ಇಲ್ಲಿ ಹೇಳುತ್ತಿರುವುದು ಕೇವಲ ಫನ್ ಮೂಲಕ ಎಲ್ಲರೂ ಪ್ರತಿದಿನ ಹಣಗಳಿಸುವುದನ್ನು! ಮುಂದೆ ಓದಿ.

 ಮೊಬೈಲ್ ಆಪ್‌ ಮೂಲಕ ಪ್ರತಿದಿನವೂ ಹಣಗಳಿಸಿ!!

ಇಂಟರ್ನೆಟ್ ಮೂಲಕ ಯೂಟ್ಯೂಬ್ ಬಳಸಿ ಹಣಸಂಪಾದಿಸಿ

ಇದಕ್ಕಾಗಿಯೇ ಕೆಲವು ಫನ್ ಮೊಬೈಲ್ ಆಪ್‌ಗಳಿವೆ! ಅದರಿಂದ ಪ್ರತಿದಿನವೂ ಹಣಗಳಿಸುವುದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅದಕ್ಕಾಗಿ ನೀವು ಉಚಿತ ಅಂಡ್ರಾಯ್ಡ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅವುಗಳು ಯಾವುವು ಎಂದು ಈ ಕೆಳಗೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಡಿ ಮತ್ತು ಗಳಿಸಿ! (watch & earn)

ನೋಡಿ ಮತ್ತು ಗಳಿಸಿ! (watch & earn)

ಈ ರೀತಿಯ ಆಪ್‌ಗಳಿಂದ ನಾವು ನಿಜವಾಗಿಯೂ ಹಣ ಗಳಿಸಬಹುದು ಎಂದು ಸಂಶಯ ಪಡಬೇಡಿ. ನೋಡಿ ಮತ್ತು ಗಳಿಸಿ! (watch & earn) ಎನ್ನುವುದು ಒಂದು ಫನ್ ಆಪ್. ಇದರಲ್ಲಿ ನೀವು ವಿಡಿಯೋ ನೋಡಿದರೆ ಅವರು ನಿಮಗೆ ಹಣಪಾವತಿಸುತ್ತಾರೆ. ಜೊತೆಗೆ ಬಂದಂತಹ ಹಣವನ್ನು ನೀವು ಗೂಗಲ್ ಪ್ಲೇ ಓಚರ್ ಮತ್ತು ಅಮೇಜಾನ್ ಗಿಫ್ಟ್ ಕಾರ್ಡ್‌ ಮೂಲಕವು ಉಪಯೋಗಿಸಬಹುದು.

ಎಂ ಸೆಂಟ್ (mCent)

ಎಂ ಸೆಂಟ್ (mCent)

ಹಣಗಳಿಸೋ ಆಪ್‌ಗಳಲ್ಲಿಯೇ ಹೆಚ್ಚು ಬಳಕೆಯಾಗುತ್ತಿರುವ ಆಪ್‌ಇದು. ಉಚಿತ ಆಪ್‌ ಮತ್ತು ಗೇಮ್‌ಗಳನ್ನು ಡೌನ್‌ಲೋಡ್‌ ಮಾಡುವ ಮೂಲಕ ನೀವು ಇಲ್ಲಿ ಹಣಗಳಿಸಬಹುದು. ಇಲ್ಲಿ ನಿಮಗೆ ಉಲ್ಲೇಖಿತ ( Referral ) ಕೋಡ್‌ಗಳನ್ನು ನೀಡಲಾಗುತ್ತದೆ. ನಿಮ್ಮ ಫ್ರೆಂಡ್ಸ್ ಆ ಕೋಡ್‌ ಉಪಯೋಗಿಸಿ ಆಪ್‌ ಮತ್ತು ಗೇಮ್‌ಗಳಿಗೆ ಸೈನ್‌ಇನ್‌ ಆದರೆ ನೀವು ಹಣ ಪಡೆಯುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಣಗಳಿಸಿ! (Earn money)

ಹಣಗಳಿಸಿ! (Earn money)

ಹಣಗಳಿಸಿ (Earn money) ಎನ್ನುವ ಆಪ್ ಸತತ ಮೂರುವರ್ಷಗಳಿಂದ ಉಳಿದುಬಂದಿದೆ. ಈ ಆಪ್‌ಮೂಲಕ ಅವರು ನೀಡುವ ಆಪ್ ಅಥವಾ ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮ್ಮವರಿಗೆ ರಿಕ್ವೆಸ್ಟ್ ಕಳುಹಿಸಬೇಕು. ಅವರು ನಿಮ್ಮ ರಿಕ್ವೆಸ್ಟ್ ಒಪ್ಪಿಕೊಂಡು ಆಪ್ ಅಥವಾ ಗೇಮ್‌ ಡೌನ್‌ಲೋಡ್‌ ಮಾಡಿಕೊಂಡರೆ ಒಬ್ಬರಿಗೆ 17 ರೂಪಾಯಿಯಂತೆ ನಿಮಗೆ ಹಣ ಸಂದಾಯವಾಗುತ್ತದೆ.

ಕ್ಯಾಶ್ ಪೈರೇಟ್( cashpirate)

ಕ್ಯಾಶ್ ಪೈರೇಟ್( cashpirate)

ಕ್ಯಾಶ್ ಪೈರೇಟ್( cashpirate) ಸಹ ಹಣಗಳಿಸುವ ಫನ್ ಆಪ್‌ಗಳಲ್ಲಿ ಬೆಸ್ಟ್ ಆಪ್. ಕ್ಯಾಶ್ ಪೈರೇಟ್ ಆಪ್ ಮೂಲಕ ಹಣ ಗಳಿಸಲು ನೀವು ಆಪ್ ರೆಫರ್ ಮಾಡಬೇಕು . ನೀವು ರೆಫರ್ ಮಾಡಿದವರು ಮತ್ತೆ ಬೇರೆಯವರಿಗೆ ರೆಫರ್ ಮಾಡಿದರೆ ನೀವು ಅರಿಂದಲೂ ಹಣಗಳಿಸಬಹುದು.

ಲ್ಯಾಡೋ Ladooo

ಲ್ಯಾಡೋ Ladooo

ಮೊಬೈಲ್ ಟಾಕ್ಟೈಮ್ ಉಚಿತವಾಗಿ ಪಡೆಯಲು ಈ ಆಪ್ ನಿಮಗೆ ಬಹಳ ಸಹಕಾರಿ. ಭಾರತದಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚುಜನರು ಈ ಆಪ್ ಉಪಯೋಗಿಸುತ್ತಿದ್ದಾರೆ. ಹೆಚ್ಚು ವಿಶ್ವಾಸಾರ್ಹತೆ ಹೊಂದಿರುವ ಈ ಆಪ್ ಪ್ರಮೋಶನ್ ಮಾಡುವ ಮೂಲಕ ನೀವು ಹಣಗಳಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Now you can easily earn some extra cash by downloading and using these apps on your Android device. to know more visit to kiannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot