ಸ್ಮಾರ್ಟ್ ಫೋನುಗಳಿಂದ ಕಣ್ಣು ರಕ್ಷಿಸಿಕೊಳ್ಳಲು ಐದು ಟಿಪ್ಸುಗಳು.

|

ಡಿಜಿಟಲ್ ಪರದೆಯ ಸಮೀಪದಲ್ಲಿ ಕೂರುವುದರಿಂದ ಕಣ್ಣಿನ ಮೇಲೆ ಒತ್ತಡ ಬೀಳುತ್ತದೆ ಎನ್ನುವುದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಅಲ್ಲವೇ ನಮ್ಮ ಅಪ್ಪ ಅಮ್ಮ ಟಿವಿಯಿಂದ ದೂರ ಕುಳಿತುಕೊಳ್ಳಿ ಎಂದು ಹೇಳುತ್ತಿದ್ದದ್ದು. ತಂತ್ರಜ್ಞಾನವು ಬೆಳೆದಂತೆ, ಡಿಜಿಟಲ್ ಪರದೆಯ ವಿಧಗಳೂ ಅಭಿವೃದ್ಧಿ ಕಾಣುತ್ತಿದೆ.

ಓದಿರಿ: ಅತ್ಯುಪಯುಕ್ತ ಟಾಪ್ ಆಂಡ್ರಾಯ್ಡ್ ಟಿಪ್ಸ್

ಕೆಲವು ವರುಷದ ಮುಂಚೆ ಡಿಜಿಟಲ್ ಪರದೆಯೆಂದರೆ ಟಿವಿ ಪರದೆ ಮಾತ್ರವಾಗಿತ್ತು, ಈಗ ಡಿಜಿಟಲ್ ಪರದೆಯೆಂದರೆ ಸ್ಮಾರ್ಟ್ ಫೋನ್, ಐಪ್ಯಾಡ್, ಟ್ಯಾಬ್ಲೆಟ್, ಗೇಮಿಂಗ್ ಕನ್ಸೋಲ್ಸ್ ಇತ್ಯಾದಿ ಇತ್ಯಾದಿ. ನಮ್ಮ ದಿನದ ಬಹುತೇಕ ಭಾಗವನ್ನು ಕಂಪ್ಯೂಟರ್, ಲ್ಯಾಪ್ ಟಾಪ್ ಅಥವಾ ಇತರೆ ಡಿಜಿಟಲ್ ಪರದೆಯ ಮುಂದೆ ಕಳೆಯುತ್ತೇವೆ, ಕೆಲಸದ ಸಲುವಾಗಿ, ಯೋಜನೆಯ ಸಲುವಾಗಿ ಮತ್ತು ಇತರೆ ಚಟುವಟಿಕೆಯ ಕಾರಣಕ್ಕಾಗಿ.

ಹಾಗಾದರೆ ಕಣ್ಣನ್ನು ರಕ್ಷಿಸಿಕೊಳ್ಳಲು ನಾವೇನು ಮಾಡಬೇಕು?

ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ಟನ್ನು ಉಪಯೋಗಿಸುವಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕೆಂದು ಒಂದು ಪಟ್ಟಿ ತಯಾರು ಮಾಡಿದ್ದೇವೆ.

ಟಿಪ್ 1

ಟಿಪ್ 1

ಪರದೆಯ ಬ್ರೈಟ್ನೆಸ್ಸನ್ನು ಸರಿಪಡಿಸಿ

ನಿಮ್ಮ ಸಾಧನವನ್ನು ಉಪಯೋಗಿಸುವಾಗ, ನೀವಿರುವ ವಾತಾವರಣದ ಆಧಾರದ ಮೇಲೆ ಪರದೆಯ ಬ್ರೈಟ್ನೆಸ್ಸನ್ನು ಸರಿಪಡಿಸಿಕೊಳ್ಳಿ. ಇದನ್ನು ನೀವು ಮ್ಯಾನುಯಲ್ ಆಗಾದರೂ ಮಾಡಬಹುದು ಅಥವಾ ನಿಮ್ಮ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ಟಿನಲ್ಲಿರುವ ಆಟೋಮೇಟಿಕ್ ಆಯ್ಕೆಯನ್ನಾದರೂ ಬಳಸಿಕೊಳ್ಳಬಹುದು.

ನಿಮ್ಮ ವಾತಾವರಣದಲ್ಲಿರುವ ಬೆಳಕಿನ ಆಧಾರದ ಮೇಲೆ ಬ್ರೈಟ್ನೆಸ್ಸನ್ನು ನಿರ್ವಹಿಸುವ ಆ್ಯಪ್ ಗಳು ಕೂಡ ಲಭ್ಯವಿದೆ.

ಟಿಪ್ 2

ಟಿಪ್ 2

ನಿಮ್ಮ ಸ್ಮಾರ್ಟ್ ಫೋನನ್ನು ಕೊಂಚ ದೂರದಲ್ಲಿಟ್ಟುಕೊಳ್ಳಿ

ಸ್ಮಾರ್ಟ್ ಫೋನನ್ನು ದೂರದಲ್ಲಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ. ಬಹುತೇಕ ಬಳಕೆದಾರರು ಫೋನನ್ನು ಮುಖದಿಂದ ಎಂಟು ಇಂಚು ದೂರದಲ್ಲಷ್ಟೇ ಇಟ್ಟುಕೊಳ್ಳುತ್ತಾರೆ. ಕಣ್ಣಿನಿಂದ ಹದಿನೈದು ಇಂಚು ದೂರವಿಟ್ಟು ಫೋನ್ ಉಪಯೋಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಟಿಪ್ 3

ಟಿಪ್ 3

20-20-20 ನಿಯಮ

ಈ ನಿಯಮದ ಪ್ರಕಾರ, ಸತತವಾಗಿ ಇಪ್ಪತ್ತು ನಿಮಿಷ ಡಿಜಿಟಲ್ ಪರದೆಯನ್ನು ನೋಡಿದ ಬಳಿಕ ಇಪ್ಪತ್ತು ಸೆಕೆಂಡಿನಷ್ಟು ವಿರಾಮ ಕೊಡಬೇಕು. ಈ ಇಪ್ಪತ್ತು ಸೆಕೆಂಡಿನಲ್ಲಿ ಇಪ್ಪತ್ತು ಅಡಿಯಷ್ಟು ದೂರವಿರುವ ವಸ್ತುವೊಂದನ್ನು ನೋಡಬೇಕು.

ಟಿಪ್ 4

ಟಿಪ್ 4

ಕಣ್ಣು ಮಿಟುಕಿಸುವುದನ್ನು ಹೆಚ್ಚಿಸಿ

ಸಂಶೋಧಕರ ಪ್ರಕಾರ ಹೆಚ್ಚು ಕಣ್ಣು ಮಿಟುಕಿಸುವುದರಿಂದ ಕಣ್ಣುಗಳ ತೇವಾಂಶ ಚೆನ್ನಾಗಿರುತ್ತದೆ ಮತ್ತು ಒಣಗುವಿಕೆ ಕಡಿಮೆಯಾಗುತ್ತದೆ.

ಟಿಪ್ 5

ಟಿಪ್ 5

ಕನ್ನಡಕ ಅಥವಾ ಆ್ಯಂಟಿ ಗ್ಲೇರ್ ಪರದೆಯನ್ನು ಉಪಯೋಗಿಸಿ

ಸ್ಮಾರ್ಟ್ ಫೋನನ್ನು ದೀರ್ಘ ಸಮಯ ಉಪಯೋಗಿಸಬೇಕಾಗಿ ಬಂದಾಗ ಓದುವ ಸಲುವಾಗಿರುವ ಕನ್ನಡಕವನ್ನು ಉಪಯೋಗಿಸಿ. ಇಲ್ಲವಾದಲ್ಲಿ, ಮೊಬೈಲಿಗೊಂದು ಆ್ಯಂಟಿ ಗ್ಲೇರ್ ಪರದೆಯನ್ನು ಹಾಕಿಸಿ.

Best Mobiles in India

English summary
Many of us know, that sitting close to the digital screen will have worst effects our eyes. That's why our parents probably told us not to sit too close to the television. As the technology tends to grow, the digital screen varieties also expanding.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X