ಅತ್ಯುಪಯುಕ್ತ ಟಾಪ್ ಆಂಡ್ರಾಯ್ಡ್ ಟಿಪ್ಸ್

By Shwetha
|

ನಿಮ್ಮ ಆಂಡ್ರಾಯ್ಡ್ ಫೋನ್‌ ಅನ್ನು ಅತ್ಯುಪಯುಕ್ತ ಡಿವೈಸ್ ಆಗಿ ಮಾರ್ಪಡಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ಫೋನ್‌ನಲ್ಲಿ ನಿಮ್ಮ ಅನುಭವವನ್ನು ಇದು ಹೆಚ್ಚಿಸಲಿದೆ. ಈ ಟಿಪ್ಸ್‌ಗಳು ನಿಮ್ಮ ಫೋನ್‌ನಲ್ಲಿ ಇನ್ನಷ್ಟನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಮಾಹಿತಿಯನ್ನು ನೀಡಲಿದ್ದು ಇದರಿಂದ ನಿಮ್ಮ ಫೋನ್ ಒಂದು ಚಮತ್ಕಾರೀ ವಸುವಾಗಲಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ಗೂಗಲ್‌ ಮ್ಯಾಪ್‌ ರಹಸ್ಯ ಫೀಚರ್‌ಗಳು

ಫೋನ್‌ನ ಗುಣಮಟ್ಟ, ಬಾಳಿಕೆ, ಬ್ಯಾಟರಿ ದೀರ್ಘತೆ ಹೀಗೆ ಬಹಳಷ್ಟನ್ನು ಈ ಟಿಪ್ಸ್ ಒಳಗೊಂಡಿದ್ದು ಇದನ್ನು ಅನುಸರಿಸಿದಲ್ಲಿ ನಿಮ್ಮ ಫೋನ್ ಇನ್ನಷ್ಟು ವೇಗವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ.

ಅಧಿಸೂಚನೆ

ಅಧಿಸೂಚನೆ

ಯಾವುದೇ ಅಧಿಸೂಚನೆಗಳು ಫೋನ್‌ನಲ್ಲಿ ಬಂದು ನಿಮಗೆ ತೊಂದರೆ ಕೊಡುತ್ತಿವೆ ಎಂದಾದಲ್ಲಿ ಅದನ್ನು ನಿವಾರಿಸಿಕೊಳ್ಳಲೇಬೇಕು. ಇದನ್ನು ನಿರ್ವಹಿಸಲು ಅಪ್ಲಿಕೇಶನ್ ಮಾಹಿತಿ > ಅಧಿಸೂಚನೆ > ಓಕೆ ಕ್ಲಿಕ್ ಮಾಡಿ.

ಮೊಬೈಲ್ ಡೇಟಾ

ಮೊಬೈಲ್ ಡೇಟಾ

ನಿಮಗೆ ಯಾವಾಗಲೂ ಮೊಬೈಲ್ ಡೇಟಾ ಬೇಡ ಎಂದಾದಲ್ಲಿ ಇದನ್ನು ನಿಷ್ಕ್ರಿಯ ಮಾಡಿಕೊಂಡು ಫೋನ್ ಬ್ಯಾಟರಿಯನ್ನು ಉಳಿಸಿಕೊಳ್ಳಿ. ಸೆಟ್ಟಿಂಗ್ಸ್ > ಡೇಟಾ ಯೂಸೇಜ್ ಮೊಬೈಲ್ ಡೇಟಾ ಸೆಟ್ಟಿಂಗ್‌ನಲ್ಲಿ ಆನ್ ಮತ್ತು ಆಫ್ ಬಟನ್ ಅನ್ನು ನಿಮಗೆ ಕ್ಲಿಕ್ ಮಾಡಬಹುದಾಗಿದೆ.

ತಿಂಗಳ ಮೊಬೈಲ್ ಡೇಟಾ

ತಿಂಗಳ ಮೊಬೈಲ್ ಡೇಟಾ

ನಿಮ್ಮ ತಿಂಗಳ ಮೊಬೈಲ್ ಡೇಟಾ ಹೇಗೆ ಖರ್ಚಾಗುತ್ತಿದೆ ಎಂಬುದನ್ನು ಮಾನಿಟರ್ ಮಾಡಲು ಸೆಟ್ಟಿಂಗ್ಸ್ > ಡೇಟಾ ಬಳಕೆ ಇಲ್ಲಿಗೆ ಹೋಗಿ. ಇದರಲ್ಲಿರುವ ಕಿತ್ತಳೆ ಬಣ್ಣದ ರೇಖೆಯನ್ನು ಎಳೆದು ನಿಮ್ಮ ಡೇಟಾ ಮಿತಿ ಹೊಂದಿಸಬಹುದಾಗಿದೆ. ತಿಂಗಳ ಆರಂಭ ಮತ್ತು ಅಂತ್ಯವನ್ನು ಆಧರಿಸಿ ಡೇಟಾ ಬಳಕೆ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಬಹುದಾಗಿದೆ.

ಗೂಗಲ್ ಖಾತೆ

ಗೂಗಲ್ ಖಾತೆ

ಆಂಡ್ರಾಯ್ಡ್ ಫೋನ್ ಬಳಸಲು ನಿಮಗೆ ಗೂಗಲ್ ಖಾತೆ ಬೇಕು. ಆದರೆ ನಿಮ್ಮ ಫೋನ್‌ನಲ್ಲಿ ಒಂದಕ್ಕಿಂತ ಹೆಚ್ಚಿನ ಗೂಗಲ್ ಖಾತೆಗಳನ್ನು ನಿಮಗೆ ಆರಿಸಿಕೊಳ್ಳಬಹುದು ಎಂಬುದನ್ನು ನೀವು ಅರಿತಿದ್ದೀರಾ? ಸೆಟ್ಟಿಂಗ್ಸ್‌ಗೆ ಹೋಗಿ ಗೂಗಲ್ ಆಯ್ಕೆಮಾಡಿ ಮತ್ತು ನಿಮ್ ಹೊಸ ಅಥವಾ ಪ್ರಸ್ತುತ ಗೂಗಲ್ ಖಾತೆಯನ್ನು ಹೊಂದಿಸಿ ಒಮ್ಮೆ ಸೇರಿಸಿದ ನಂತರ, ಖಾತೆಯೊಂದಿಗೆ ನೀವು ಏನನ್ನು ಸಿಂಕ್ ಮಾಡಬೇಕು ಅದನ್ನು ಆರಿಸಿ

ಅಪ್ಲಿಕೇಶನ್ ಅಡಾಪ್ಟ್‌

ಅಪ್ಲಿಕೇಶನ್ ಅಡಾಪ್ಟ್‌

ಅಪ್ಲಿಕೇಶನ್ ಅನುಮತಿಗಳನ್ನು ಓದಿಕೊಳ್ಳಿ ಮತ್ತು ಅಪ್ಲಿಕೇಶನ್ ಅಡಾಪ್ಟ್‌ಗಳನ್ನು ಆರಿಸಿ. ಸ್ವಯಂಚಾಲಿತ ಅಪ್ಲಿಕೇಶನ್ ಅಪ್‌ಡೇಟ್‌ಗಳನ್ನು ನೀವು ನಿಷ್ಕ್ರಿಯಗೊಳಿಸಬೇಕು. ಪ್ಲೇ ಸ್ಟೋರ್ ತೆರೆಯಿರಿ ಆಟೊ ಅಪ್‌ಡೇಟ್ ಅಪ್ಲಿಕೇಶನ್ ಇದನ್ನು ಸ್ಪರ್ಶಿಸಿ ಡು ನಾಟ್ ಆಟೊ - ಅಪ್‌ಡೇಟ್ ಅಪ್ಲಿಕೇಶನ್ ಆರಿಸಿ

ಸಿಸ್ಟಮ್‌ಗಾಗಿ ಹೊಸ ಅಪ್‌ಡೇಟ್‌

ಸಿಸ್ಟಮ್‌ಗಾಗಿ ಹೊಸ ಅಪ್‌ಡೇಟ್‌

ಸ್ಟಾಕ್ ROM ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಸಿಸ್ಟಮ್‌ಗಾಗಿ ಹೊಸ ಅಪ್‌ಡೇಟ್‌ಗಳನ್ನು ನೀವು ನೋಡಬೇಕು. ಸೆಟ್ಟಿಂಗ್ಸ್ > ಅಬೌಟ್ ಫೋನ್/ಟ್ಯಾಬ್ಲೆಟ್ ಸಿಸ್ಟಮ್ ಅಪ್‌ಡೇಟ್ಸ್ ಮೇಲೆ ಸ್ಪರ್ಶಿಸಿ ಸಿಸ್ಟಮ್ ಅಪ್‌ಡೇಟ್‌ಗಳಿಗಾಗಿ ಚೆಕ್ ನೌ ಸ್ಪರ್ಶಿಸಿ

ಡೀಫಾಲ್ಟ್ ಅಪ್ಲಿಕೇಶನ್‌

ಡೀಫಾಲ್ಟ್ ಅಪ್ಲಿಕೇಶನ್‌

ನಿರ್ದಿಷ್ಟ ಕೆಲಸಗಳಿಗಾಗಿ ಡೀಫಾಲ್ಟ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದಲ್ಲಿ ಇದನ್ನು ಬದಲಾಯಿಸಿಕೊಳ್ಳಬಹುದಾಗಿದೆ ಸೆಟ್ಟಿಂಗ್ಸ್ > ಅಪ್ಲಿಕೇಶನ್ ಬಲಕ್ಕೆ ಸ್ವೈಪ್ ಮಾಡಿ ಮತ್ತು ಎಲ್ಲಾ ಟ್ಯಾಬ್‌ಗಾಗಿ ನೋಡಿ ಡೀಫಾಲ್ಟ್‌ನಂತಿರುವ ನೀವು ತೆಗೆದು ಹಾಕಬೇಕಾಗಿರುವ ಅಪ್ಲಿಕೇಶನ್ ಆಯ್ಕೆಮಾಡಿ ಕ್ಲಿಯರ್ ಡೀಫಾಲ್ಟ್ಸ್ ಸ್ಪರ್ಶಿಸಿ

ಇನ್‌ಸ್ಟಾಲ್

ಇನ್‌ಸ್ಟಾಲ್

ನೀವು ಬಹಳಷ್ಟು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದೀರಿ ಮತ್ತು ಹೋಮ್ ಸ್ಕ್ರೀನ್ ಅಪ್ಲಿಕೇಶನ್ ಶಾರ್ಟ್‌ಕಟ್‌ಗಳಿಂದ ತುಂಬಿ ಹೋಗಿದ್ದಲ್ಲಿ ಇದಕ್ಕಾಗಿ ಫೋಲ್ಡರ್‌ಗಳನ್ನು ನಿಮಗೆ ನಿರ್ಮಿಸಿಕೊಳ್ಳಬಹುದಾಗಿದೆ.

ವೇಗವಾಗಿ ರನ್

ವೇಗವಾಗಿ ರನ್

ನಿಮ್ಮ ಫೋನ್ ಅನ್ನು ಕೊಂಚ ವೇಗವಾಗಿ ರನ್ ಮಾಡುವುದು ಹೇಗೆ ಎಂಬುದಕ್ಕೆ ಟಿಪ್ಸ್ ಇಲ್ಲಿದೆ. ಅನಿಮೇಶನ್ ನಿಷ್ಕ್ರಿಯಗೊಳಿಸಿ.

ಇನ್‌ಪುಟ್ ಸೆಟ್ಟಿಂಗ್ ಐಕಾನ್

ಇನ್‌ಪುಟ್ ಸೆಟ್ಟಿಂಗ್ ಐಕಾನ್

ಸೆಟ್ಟಿಂಗ್ಸ್ > ಲಾಂಗ್ವೇಜ್ ಮತ್ತು ಇನ್‌ಪುಟ್ ಸೆಟ್ಟಿಂಗ್ ಐಕಾನ್ ಸ್ಪರ್ಶಿಸಿ ಇದು ನಿಮ್ಮ ಗೂಗಲ್ ಕೀಬೋರ್ಡ್ ಸಮೀಪದಲ್ಲಿ ಇರುತ್ತದೆ ಆಟೊ ಕರೆಕ್ಶನ್‌ಗಾಗಿ ನೋಡಿ ಸ್ಪರ್ಶಿಸಿ ಇದನ್ನು ಆಫ್ ಮಾಡಲು ಆಫ್ ತಟ್ಟಿರಿ.

Best Mobiles in India

English summary
In this article we can see tips on Useful android tips and tricks for better phone usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X