Subscribe to Gizbot

ಆಂಡ್ರಾಯ್ಡ್ ಫೋನ್‌ ರೂಟ್ ಮಾಡಲೇಬಾರದು: 5 ಕಾರಣಗಳು

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಕೆಲವೊಮ್ಮೆ ಹಲವು ಕಾರಣಗಳಿಂದ ರೂಟ್‌ ಮಾಡಲಾಗುತ್ತದೆ. ರೂಟ್ ಮಾಡುವುದರಿಂದ ಆಂಡ್ರಾಯ್ಡ್ ಡಿವೈಸ್‌ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಬಹುದು ಮತ್ತು ಹೆಚ್ಚಿನ ಫೀಚರ್‌ಗಳನ್ನು ಸಹ ಪಡೆಯಬಹುದು. ಅಲ್ಲದೇ ರೂಟ್ ಮಾಡಿದ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಕಸ್ಟಮೈಸ್ ಹೊಂದಬಹುದು.

ಆಂಡ್ರಾಯ್ಸ್ ಸ್ಮಾರ್ಟ್‌ಫೋನ್‌ ರೂಟ್‌ ಮಾಡುವುದರಿಂದ ಮೊದಲೇ ಹೇಳಿದಂತೆ ಹಲವು ಉಪಯೋಗಗಳಿರಬಹುದು. ಆದರೆ ಅಷ್ಟೇ ಸಮಸ್ಯೆಗಳು ರೂಟ್‌ ಮಾಡುವುದರಿಂದ ಸಂಭವಿಸುತ್ತವೆ. ಡಿವೈಸ್‌ ಸುರಕ್ಷತೆ ವಿಷಯದಲ್ಲಿ ರೂಟ್‌ ಮಾಡಿದ ನಂತರ ರಾಜಿ ಆಗಲೇಬೇಕಾಗುತ್ತದೆ. ಆಂಡ್ರಾಯ್ಡ್(Android) ಸ್ಮಾರ್ಟ್‌ಫೋನ್‌ ರೂಟ್ ಮಾಡುವುದು 5 ಕಾರಣಗಳಿಂದ ಉತ್ತಮವಲ್ಲ. ಆ ಕಾರಣಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

15,000 ರುಪಾಯಿಗಳೊಳಗಿನ ಹತ್ತು ಉತ್ತಮ ಬ್ಯಾಟರಿ ಸ್ಮಾರ್ಟ್ ಫೋನುಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಬಾಯ್‌

ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಬಾಯ್‌

ಆಂಡ್ರಾಯ್ಡ್ ಡಿವೈಸ್‌ ರೂಟ್ ಮಾಡುವುದರಿಂದ ಉಂಟಾಗುವ ಬಹುದೊಡ್ಡ ಅನಾನುಕೂಲವೆಂದರೆ, ಡಿವೈಸ್ ಸಾಫ್ಟ್‌ವೇರ್‌ ಅಪ್‌ಡೇಟ್‌ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತದೆ.

ಯಾವುದೇ ಸಾಫ್ಟ್‌ವೇರ್‌ ಕಾಲ ಕಾಲಕ್ಕೆ ಅಪ್‌ಡೇಟ್‌ ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ಹಲವು ಸಾಫ್ಟ್‌ವೇರ್‌ಗಳು ಹೊಸ ಹೊಸ ಸುರಕ್ಷತೆ ಫೀಚರ್‌ಗಳ ಅಪ್‌ಡೇಟ್‌ ಪಡೆಯುತ್ತವೆ. ಈ ಅಪ್‌ಡೇಟ್‌ಗಳಿಂದ ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡುವುದರಿಂದ ತಪ್ಪಿಸುತ್ತವೆ.

ಕಸ್ಟಮ್ ROM'ಗಳು ಎಲ್ಲಾ ವೇಳೆಯು ನಂಬುವಂತಹವುಗಳಲ್ಲ

ಕಸ್ಟಮ್ ROM'ಗಳು ಎಲ್ಲಾ ವೇಳೆಯು ನಂಬುವಂತಹವುಗಳಲ್ಲ

ಹಲವು ಆಂಡ್ರಾಯ್ಡ್ ಬಳಕೆದಾರರು ಕಸ್ಟಮ್ ROM ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಆದರೆ ROM's ಡಿವೈಸ್‌ನಲ್ಲಿ ಯಾವ ಕಾರ್ಯನಿರ್ವಹಿಸುತ್ತವೆ ಎಂಬುದೇ ತಿಳಿದಿರುವುದಿಲ್ಲ. ಕೇವಲ ಇಂಟರ್ನೆಟ್‌ನಲ್ಲಿ ನೀಡಲಾದ ಮಾಹಿತಿಯನ್ನು ಹಂತ ಹಂತವಾಗಿ ಫಾಲೋ ಮಾಡುತ್ತಾರೆ.

ಎಲ್ಲಾ ಕಸ್ಟಮ್ ROM'ಗಳು ನಂಬಿಕಾರ್ಹವಲ್ಲದವಾಗಿದ್ದು, ಡಿವೈಸ್‌ ಅನ್ನು ದುರ್ಬಲಗೊಳಿಸುತ್ತವೆ. ಕಸ್ಟಮ್ ROM's ಡೆವಲಪರ್‌ಗಳು 'ಗೂಗಲ್, ಸೋನಿ, ಎಚ್‌ಟಿಸಿ, ಮೊಟೊರೊಲಾ'ದಂತಹ ಯಾವುದೇ ಕಂಪನಿ ಹೊಂದಿರುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಆಪ್‌ಗಳಿಗೆ ರೂಟ್ ಆಕ್ಸೆಸ್ ನೀಡುವುದರಿಂದ ದುರಂತ ಸಂಭವಿಸಬಹುದು

ಆಪ್‌ಗಳಿಗೆ ರೂಟ್ ಆಕ್ಸೆಸ್ ನೀಡುವುದರಿಂದ ದುರಂತ ಸಂಭವಿಸಬಹುದು

ಕೆಲವು ಸ್ಮಾರ್ಟ್‌ಫೋನ್‌ ಬಳಕೆದಾರರು, ಕೆಲವು ಆಪ್‌ಗಳು ಡಿವೈಸ್‌ ರೂಟಿಂಗ್‌ ಆಕ್ಸೆಸ್ ಕೇಳಿದಾಗ 'Allow' ಬಟನ್ ಟ್ಯಾಪ್‌ ಮಾಡುವ ಮುಖಾಂತರ ಅವಕಾಶ ನೀಡುತ್ತಾರೆ. ಆದರೆ ಇದರಿಂದ ಆಗುವ ಪರಿಣಾಮದ ಬಗ್ಗೆ ತಿಳಿದಿರುವುದೇ ಇಲ್ಲ.

ರೂಟ್ ಆಕ್ಸೆಸ್ ಅನ್ನು ಕೆಲವು ಆಪ್‌ಗಳಿಗೆ ನೀಡುವುದರಿಂದ, ಆಪ್‌ಗಳು ಸಂಪೂರ್ಣ ಆಪರೇಟಿಂಗ್ ಸಿಸ್ಟಮ್‌ ನಿಯಂತ್ರಣ ಹೊಂದುತ್ತವೆ. ನಂತರ ಆಪ್‌ಗಳು ಡಿವೈಸ್‌ನಲ್ಲಿನ ಸೂಕ್ಷ್ಮ ವಿಷಯಗಳನ್ನು ಹ್ಯಾಕ್‌ ಮಾಡುವ ಸಂಭವವಿರುತ್ತದೆ. ಈ ಮಾಹಿತಿ ನಿಮಗೆ ಸಂಪೂರ್ಣ ತಿಳಿಯುವುದೇ ಇಲ್ಲ.

ಮಾಲ್‌ವೇರ್

ಮಾಲ್‌ವೇರ್

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ರೂಟ್‌ ಮಾಡುವುದರಿಂದ, ಡಿವೈಸ್ ಪ್ರಾಥಮಿಕವಾಗಿ ದುರ್ಬಲಗೊಂಡು ಮಾಲ್‌ವೇರ್‌ಗಳಾದ ಟ್ರೋಜನ್‌ಗಳು, ವೈರಸ್‌ಗಳು ಇತ್ಯಾದಿಗಳು ಡೌನ್‌ಲೋಡ್‌ ಮುಖಾಂತರ ಆಪ್‌ಗಳಿಗೆ ತೊಂದರೆ ಉಂಟುಮಾಡುತ್ತವೆ.

ವಾರಂಟಿ ಗ್ಯಾರಂಟಿ ಇಲ್ಲ

ವಾರಂಟಿ ಗ್ಯಾರಂಟಿ ಇಲ್ಲ

ಸ್ಮಾರ್ಟ್‌ಫೋನ್‌ ಮಾರಾಟಗಾರರು ರೂಟಿಂಗ್ ಅನ್ನು ವಿರೋಧಿಸುತ್ತಾರೆ. ಅಲ್ಲದೇ ವಾರಂಟಿಯನ್ನು ರದ್ದು ಮಾಡುತ್ತಾರೆ. ಸ್ಮಾರ್ಟ್‌ಫೋನ್‌ಗಳು ಸಾಫ್ಟ್‌ವೇರ್ ಸಮಸ್ಯೆಗೆ ಗುರಿಯಾದರೆ, ವಾರಂಟಿ ಮೂಲಕ ಡಿವೈಸ್‌ ರಿಪೇರಿ ಮಾಡಲು ನಿರಾಕರಿಸುತ್ತಾರೆ.

ರೂಟಿಂಗ್ ಆದ ನಂತರವು ಡಿವೈಸ್ ರಿಕವರಿಗಾಗಿ ಹಲವು ಮಾರ್ಗಗಳಿವೆ. ಕೆಲವು ಸ್ಮಾರ್ಟ್‌ಫೋನ್‌ಗಳು ಸಾಫ್ಟ್‌ವೇರ್‌ ಇನ್‌ಸ್ಟಾಲ್ ಟ್ರ್ಯಾಕ್‌ ಮಾಡಲು ಫರ್ಮ್‌ವೇರ್‌ ಹೊಂದಿದ್ದು ರದ್ದು ಆಗಿರುವ ಬಗ್ಗೆ ಅಥವಾ ವಾರಂಟಿ ಚೆಕ್‌ ಮಾಡಲು ಬಳಸಲಾಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
5 Reasons Why You Shouldn't Root Your Android Smartphone. To know more about this visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot