ಜಿಮೇಲ್‌ನಲ್ಲಿ ಒಂದೇ ಕ್ಲಿಕ್‌ನಿಂದ ಜಂಕ್‌ ಇಮೇಲ್‌ಗಳ ಅನ್‌ಸಬ್‌ಸ್ಕ್ರೈಬ್ ಹೇಗೆ?

Written By:

ಜಿಮೇಲ್‌ ಬಳಕೆದಾರರಿಗೆ ಇದು ಸಮಸ್ಯೆ ಎಂದು ತಿಳಿದಿರುವ ವಿಷಯ. ದಿನನಿತ್ಯ ಜಿಮೇಲ್ ಓಪನ್‌ ಮಾಡಿದರೆ ತಲೆ ಬಿಸಿ ಆಗುವ ಮೇಲ್‌ಗಳ ವಿಷಯವಿದು. ಹೌದು, ಇಂದು ಆನ್‌ಲೈನ್‌ ತಾಣಗಳು, ಇಕಾಮರ್ಸ್‌ ತಾಣಗಳು ಹೇರಳವಾಗಿವೆ. ಜಿಮೇಲ್‌ ಬಳಕೆದಾರರ ಹತ್ತಿರ ಯಾರ ಮೇಲ್‌ ಐಡಿ ಇದೆಯೊ ಇಲ್ಲವೋ? ಆದ್ರೆ ಬಹುಸಂಖ್ಯಾತ ಆನ್‌ಲೈನ್‌ ನ್ಯೂಸ್‌ ತಾಣಗಳು, ಇಕಾಮರ್ಸ್ ತಾಣಗಳ ಬಳಿ ನಿಮ್ಮ ಇಮೇಲ್‌ ವಿಳಾಸ ಇದ್ದೇ ಇರುತ್ತದೆ.

ಹೌದು, ಇಂದು ಹಲವು ನ್ಯೂಸ್‌ ತಾಣಗಳು, ಇಕಾಮರ್ಸ್‌ ತಾಣಗಳು ತಮ್ಮ ಪ್ರಾಡಕ್ಟ್‌ ಪ್ರಮೋಶನ್‌ಗಾಗಿ ಜಿಮೇಲ್ ಬಳಕೆದಾರರು ಸಬ್‌ಸ್ಕ್ರೈಬ್‌ ಆಗದಿದ್ದರೂ ಸಹ ನ್ಯೂಸ್‌ ಲೆಟರ್‌ಗಳು ಮತ್ತು ಆಫರ್, ಡಿಸ್ಕೌಂಟ್, ಹೀಗೆ ಹಲವು ಅಸಂಖ್ಯಾತ ಮೇಲ್‌ಗಳನ್ನು ಇತರರ ಜಿಮೇಲ್‌ ವಿಳಾಸಕ್ಕೆ ಕಳುಹಿಸುತ್ತಲೇ ಇರುತ್ತಾರೆ. ಹೀಗೆ ಬೆಳಿಗ್ಗೆ ಇದ್ದ ಪುಶ್‌ ಮಾಡಿ ಮಾಡಿ ಯಾರಾದ್ರು ಜಿಮೇಲ್ ಬಳಕೆದಾರರು ತಮ್ಮ ಖಾತೆ ಓಪನ್‌ ಮಾಡಿದರೆ ಡಿಲೀಟ್ ಮಾಡಲು ಟೈಮ್‌ ಸಿಗದಷ್ಟು ಅನಗತ್ಯ ಇಮೇಲ್‌ಗಳು ಬಂದಿರುತ್ತವೆ.

ಹ್ಯಾಕರ್‌ಗಳಿಂದ ಜಿಮೇಲ್ ಸಂರಕ್ಷಣೆ ಹೇಗೆ?

ಜಿಮೇಲ್‌(Gmail) ಬಳಕೆದಾರರು ಸಬ್‌ಸ್ಕ್ರೈಬ್‌ ಆಗದ ತಾಣಗಳಿಂದ ಇಮೇಲ್‌ಗಳನ್ನು ಪಡೆಯುತ್ತಿದ್ದಲ್ಲಿ, ಕೇವಲ ಒಂದೇ ಕ್ಲಿಕ್‌ನಿಂದ ಇಂತಹ ತಾಣಗಳನ್ನು ಅನ್‌ಸಬ್‌ಸ್ಕ್ರೈಬ್‌ ಮಾಡುವುದು ಹೇಗೆ ಎಂದು ನಾವು ತಿಳಿಸುತ್ತೇವೆ. ಜಿಮೇಲ್‌ ಓಪನ್‌ ಮಾಡಿದಾಗ ಅನಗತ್ಯ ತಾಣಗಳಿಂದ ಬಂದ ಇಮೇಲ್‌ಗಳನ್ನು(Emails) ಡಿಲೀಟ್‌ ಮಾಡಲು ಸಮಯವಿಲ್ಲ ಎಂದು ಯಾತನೆ ಪಡುವ ಅಗತ್ಯವಿಲ್ಲ. ನಾವು ತಿಳಿಸುವ ಈ ಹಂತಗಳನ್ನು ಫಾಲೋ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೊದಲಿಗೆ unroll.me ವೆಬ್‌ಸೈಟ್‌ಗೆ ಲಾಗಿನ್‌ ಆಗಿ

ಮೊದಲಿಗೆ unroll.me ವೆಬ್‌ಸೈಟ್‌ಗೆ ಲಾಗಿನ್‌ ಆಗಿ

ಈ ಕೂಲ್‌ ಕೂಲ್‌ ವೆಬ್‌ಸೈಟ್ ನಿಮಗೆ ಕಿರಿಕಿರಿ ಉಂಟುಮಾಡುವ ಎಲ್ಲಾ ನೆಟ್‌ವರ್ಕ್‌ ತಾಣಗಳಿಂದ ಅನ್‌ಸಬ್‌ಸ್ಕ್ರೈಬ್‌ ಆಗಲು ಸಹಾಯಕವಾಗಿದೆ. ಈ ವೆಬ್‌ಸೈಟ್‌ ಓಪನ್‌ ಮಾಡಿ 'Get started now' ಎಂಬಲ್ಲಿ ಕ್ಲಿಕ್ ಮಾಡಿ

 unroll.me ನಲ್ಲಿ ಸೈನಪ್ ಆಗಿ

unroll.me ನಲ್ಲಿ ಸೈನಪ್ ಆಗಿ

ನಂತರ ಓಪನ್‌ ಆದ ಪೇಜ್‌ನಲ್ಲಿ ನಿಮ್ಮ ಜಿಮೇಲ್ ಖಾತೆ ವಿಳಾಸ ನೀಡಿ ಸೈನಪ್‌ ಆಗಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 unroll.me ಗೆ ನಿಮ್ಮ ಜಿಮೇಲ್ ಆಕ್ಸೆಸ್ ನೀಡಿ

unroll.me ಗೆ ನಿಮ್ಮ ಜಿಮೇಲ್ ಆಕ್ಸೆಸ್ ನೀಡಿ

ಮುಂದಿನ ಹಂತದಲ್ಲಿ unroll.me ಸೈಟ್‌ ನಿಮ್ಮ ಜಿಮೇಲ್‌ ಅನ್ನು ಆಕ್ಸೆಸ್ ಮಾಡಲು ಅವಕಾಶ ಕೇಳುತ್ತದೆ. 'Allow' ಎಂಬಲ್ಲಿ ಕ್ಲಿಕ್ ಮಾಡಿ.

Next Step'ಗೆ ಹೋಗಿ

Next Step'ಗೆ ಹೋಗಿ

unroll.me ಸೈಟ್‌ ನಿಮ್ಮ ಜಿಮೇಲ್‌ನಲ್ಲಿನ ಪೂರ್ಣ ಇಮೇಲ್‌ಗಳನ್ನು ಸ್ಕ್ಯಾನ್‌ ಮಾಡುತ್ತದೆ. ಎಲ್ಲಾ ಸಬ್‌ಸ್ಕ್ರಿಪ್ಶನ್‌ ಮತ್ತು ನ್ಯೂಸ್‌ಲೆಟರ್‌ಗಳನ್ನು ಮಾರ್ಕ್‌ ಮಾಡುತ್ತದೆ. ನಂತರ 'Continue' ಎಂಬಲ್ಲಿ ಕ್ಲಿಕ್ ಮಾಡಿ.

ಅನ್‌ಸಬ್‌ಸ್ಕ್ರೈಬ್‌ ಮಾಡಿ

ಅನ್‌ಸಬ್‌ಸ್ಕ್ರೈಬ್‌ ಮಾಡಿ

ನಂತರ ಓಪನ್‌ ಆಗುವ ಪೇಜ್‌ನಲ್ಲಿ, ಅನ್‌ಸಬ್‌ಸ್ಕ್ರೈಮ್‌ ಅಥವಾ ಸೇವ್‌ ಇನ್‌ ಇಂಬಾಕ್ಸ್ ಎಂಬ ಆಪ್ಶನ್‌ಗಳು ಇರುತ್ತವೆ. ಲೀಸ್ಟ್‌ ಅನ್ನು ಎಚ್ಚರದಿಂದ ನೋಡುತ್ತ ನಿಮಗೆ ಬೇಡವಾದ ತಾಣಗಳನ್ನು 'Unsubscribe' ಮೇಲೆ ಕ್ಲಿಕ್‌ ಮಾಡಿ ಅನಗತ್ಯ ಮೇಲ್‌ಗಳು ಬರದಂತೆ ಮಾಡಿ. ದಟ್ಸ್‌ ಇಟ್.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
5 Simple Steps to Unsubscribe Junk Emails within A Minute. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot