ಫೇಸ್‌ಬುಕ್‌, ಟ್ವಿಟರ್ ಅಕೌಂಟ್ ಹ್ಯಾಕ್ ಆಗದಂತೆ ಎಚ್ಚರ ವಹಿಸಿ! ತಪ್ಪು ನಮ್ಮದೇ ಹೆಚ್ಚಿದೆ!!

|

ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಟರ್‌ನೆಟ್ ಬಳಕೆ ಮಾಡದೇ ಬದುಕಲು ಸಾಧ್ಯವೇ ಇಲ್ಲ ಎನ್ನಬಹುದು. ನಾವು ಎಷ್ಟು ಇಂಟರ್‌ನೆಟ್ ಉಪಯೋಗಿಸುತ್ತೇವೆ ಎನ್ನುವುದಕ್ಕಿಂತ, ಇಂಟರ್‌ನೆಟ್ ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಎನ್ನುವುದು ಮುಖ್ಯ!

ಆದರೆ, ಇಂಟರ್‌ನೆಟ್ ಲೂಕದಲ್ಲಿ ಇರುವಷ್ಟು ಮೋಸಗಾರಿಕೆ ಮತ್ತಿನೆಲ್ಲೂ ಇಲ್ಲ! ಹೀಗಿದ್ದರೂ ವ್ಯವಹಾರಿಕ ಮತ್ತು ಸಾಮಾಜಿಕ ಜೀವನವನ್ನು ಇಂಟರ್‌ನೆಟ್‌ಗೆ ನೀಡಿರುವ ನಾವು ಅದರಿಂದ ಹೊರಗೆ ಬರಲು ಸಾಧ್ಯವಾಗುವುದು ಇಲ್ಲ. ಹಾಗಾಗಿ ನಾವೇ ಇಂಟರ್‌ನೆಟ್‌ನಲ್ಲಿ ಹೇಗೆ ಸುರಕ್ಷಿತವಾಗಿರುವುದು ಎಂಬುದನ್ನು ತಿಳಿಯೋಣ

ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಇಂಟರ್‌ನೆಟ್ ಬಳಸುವುದು ಹೇಗೆ?

ಸೈಬರ್‌ ಕ್ರಿಮಿನಲ್‌ಗಳು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಾಂಗ್ರೆಸ್ ಮತ್ತು ರಾಹುಲ್‌ ಗಾಂಧಿ ಅಕೌಂಟ್ ಹ್ಯಾಕ್ ಮಾಡಿ ಅವರನ್ನು ಅವಹೇಳನ ಮಾಡಿದ್ದರು, ಇಂತಹ ಉದಾಹರಣೆಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಲವು ಸಿಕ್ಕಿವೆ. ಹಾಗಾಗಿ ಈ ರೀತಿಯ ಸೈಬರ್‌ ಕ್ರಿಮಿನಲ್‌ಗಳಿಗೆ ನಾವು ಸಿಕ್ಕಿಹಾಕಿಕೊಳ್ಳದಂತೆ ಏನು ಮಾಡಬಹುದು ಎಂದು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ಉತ್ತಮ ಪಾಸ್‌ವರ್ಡ್ ನೀಡಿ.

ಉತ್ತಮ ಪಾಸ್‌ವರ್ಡ್ ನೀಡಿ.

ಇದು ಕೇವಲ ಟ್ವಿಟರ್ ಮತ್ತು ಫೇಸ್‌ಬುಕ್ ಅಕೌಂಟ್‌ಗೆ ಮಾತ್ರವಲ್ಲ. ನಿಮ್ಮ ಎಲ್ಲಾ ಇಂಟರ್‌ನೆಟ್ ಆಧಾರಿತ ಗೌಪ್ಯ ದಾಖಲೆಗಳಿಗೆ ಉತ್ತಮ ಪಾಸ್‌ವರ್ಡ್ ನೀಡಿರಿ. ಉದಾಹರಣೆಗೆ ಮೇಲಿನ ಚಿತ್ರವನ್ನು ಗಮನಿಸಿ.

ಲಾಗ್‌ಇನ್ ವೆರಿಫಿಕೇಷನ್.

ಲಾಗ್‌ಇನ್ ವೆರಿಫಿಕೇಷನ್.

ಟ್ವಿಟರ್ ಎರಡು ಹಂತದ ಲಾಗಿನ್ ವೆರಿಫಿಕೇಷನ್ ಮಾಡಿಕೊಳ್ಳಲು ಅವಕಾಶ ಕಲ್ಪಸಿದೆ. ಟ್ವಿಟರ್ ಲಾಗಿನ್ ಆಗುವ ಮುನ್ನ ನಿಮ್ಮ ಮೊಬೈಲ್‌ಗೆ ಒಂದು ಸಮಯದ ಪಾಸ್‌ವರ್ಡ್ ನೀಡುತ್ತದೆ. ಆ ಪಾಸ್‌ವರ್ಡ್ ನೀಡದಿದ್ದರೆ ಟ್ವಿಟರ್ ಅಕೌಂಟ್‌ ತೆರೆಯುವುದಿಲ್ಲ. ಹಾಗಾಗಿ ಈ ಎರಡು ಹಂತದ ವೆರಿಫಿಕೇಷನ್ ಲಾಗಿನ್ ಆಯ್ದುಕೊಳ್ಳಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನುಮಾನಸ್ಪದ ಲಿಂಕ್‌ಗಳನ್ನು ತೆರೆಯಬೇಡಿ.

ಅನುಮಾನಸ್ಪದ ಲಿಂಕ್‌ಗಳನ್ನು ತೆರೆಯಬೇಡಿ.

ಇತ್ತೀಚಿಗೆ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ನಲ್ಲಿ ಕೆಲವು ಮೋಸದ HTTP ಇಂಟರ್‌ನೆಟ್ ಲಿಂಕ್‌ಗಳು ಬರುತ್ತವೆ. ಅವುಗಳನ್ನು ಕ್ಲಿಕ್ ಮಾಡಿದರೆ ಹ್ಯಾಕರ್‌ಗಳಿಗೆ ಬೀಗದ ಕೀ ಕೊಟ್ಟಂತೆಯೇ. ಹಾಗಾಗಿ ಇಂತಹ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

ಇತರೆ ಆಪ್ ಮೂಲಕ ಅಕೌಂಟ್ ಬಳಸಬೇಡಿ

ಇತರೆ ಆಪ್ ಮೂಲಕ ಅಕೌಂಟ್ ಬಳಸಬೇಡಿ

ಟ್ವಿಟರ್ ಮತ್ತು ಫೇಸ್‌ಬುಕ್ ಅಕೌಂಟ್ ತೆರೆಯಲು ನೇರವಾಗಿ ಅವುಗಳ ಅಫಿಷಿಯಲ್ ಆಪ್ ಬಳಸಿ. ಅಕೌಂಟ್ ಬಳಕೆಗೆ ಇತರೆ ಆಪ್ ಬಳಸಿದರೆ ಆ ಆಪ್‌ಗಳಲ್ಲಿ ನಿಮ್ಮ ಮಾಹಿತಿ ಸೇರಿಕೊಳ್ಳಬಹುದು.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ನಿಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಸಾಫ್ಟವೇರ್ ಅಪ್‌ಡೇಟ್ ಮಾಡಿ. ಹೀಗೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರಿಂದ ಹ್ಯಾಕರ್‌ಗಳಿಗೆ ಮಾಹಿತಿ ಕದಿಯಲು ಸಾಧ್ಯವಿಲ್ಲ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
At such an advanced technological era, it would be reckless for someone to consider their Twitter and facebook account is bulletproof from online dangers – nothing is 100 percent safe. to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X