Subscribe to Gizbot

ಆಂಡ್ರಾಯ್ಡ್ ಡಿವೈಸ್ ಆನ್ ಆಗದೇ ಇದ್ದಾಗ ಹೀಗೆ ಮಾಡಿ

Written By:

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ನೀವು ಬಟನ್ ಒತ್ತುವುದರೊಂದಿಗೆ ಆನ್ ಮಾಡುತ್ತೀರಿ. ಆದರೆ ಈ ಬಟನ್ ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸಿದಲ್ಲಿ, ನಿಜಕ್ಕೂ ಅದೊಂದು ಸಂದಿಗ್ಧ ಪರಿಸ್ಥಿತಿ ಎಂದೆನಿಸುತ್ತದೆ. ಕೆಲವೊಮ್ಮೆ ಹಾರ್ಡ್‌ವೇರ್ ಇಲ್ಲವೇ ಸಾಫ್ಟ್‌ವೇರ್ ಹಾನಿಯಿಂದ ಕೂಡ ಫೋನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಹಾಗಿದ್ದರೆ ಇಂತಹ ಪರಿಸ್ಥಿತಿಗಳಲ್ಲಿ ಫೋನ್ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ನಿಮ್ಮ ಫೋನ್ ಬ್ಯಾಟರಿ ಡೆಡ್ ಆದ ಸಂದರ್ಭದಲ್ಲಿ ಅಥವಾ ಬ್ಯಾಟರಿ ಖಾಲಿ ಎಂಬ ಸೂಚನೆಯನ್ನು ತೋರಿಸಿದಲ್ಲಿ 10-15 ನಿಮಿಷಗಳ ಫೋನ್ ಚಾರ್ಜ್ ಡಿವೈಸ್ ಅನ್ನು ಆನ್ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಹೊರತೆಗೆಯಿರಿ ಮತ್ತು ಪವರ್ ಬಟನ್ ದೀರ್ಘವಾಗಿ ಒತ್ತಿರಿ

#1

ಇತರ ಓಎಸ್‌ಗಳಂತೆ, ಆಂಡ್ರಾಯ್ಡ್ ಒಮ್ಮೊಮ್ಮೆ ಫ್ರೀಜ್ ಆಗುತ್ತದೆ ಮತ್ತು ಸ್ಪಂದಿಸುವುದಿಲ್ಲ. ಡಿವೈಸ್ ಸಂಪೂರ್ಣವಾಗಿ ಫ್ರೋಜನ್ ಆದಲ್ಲಿ ಫೋನ್ ಕಾರ್ಯನಿರ್ವಹಿಸುವುದಿಲ್ಲ. "ಹಾರ್ಡ್ ರೀಸೆಟ್" ಅಥವಾ "ಪವರ್ ರೀಸೈಕಲ್" ಅನ್ನು ನಿಮಗೆ ಮಾಡಬಹುದಾಗಿದೆ.

ನಾನ್ ರಿಮೂವೇಬಲ್ ಬ್ಯಾಟರಿ

#2

ಫೋನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದ್ದರೆ, ಅದನ್ನು ಹೊರತೆಗೆದು ನಂತರ ಹೊಂದಿಸಬಹುದಾಗಿದೆ. ಆದರೆ ನಿಮ್ಮ ಡಿವೈಸ್ ಬ್ಯಾಟರಿ ನಾನ್ ರಿಮೂವೇಬಲ್ ಆಗಿದ್ದರೆ 30 ಸೆಕೆಂಡ್‌ಗಳಿಗಿಂತ ಹೆಚ್ಚು ಸಮಯ ಬಟನ್ ಅನ್ನು ಒತ್ತಿಹಿಡಿಯಬೇಕಾಗುತ್ತದೆ. ಇದು ಫೋನ್ ಇಲ್ಲವೇ ಟ್ಯಾಬ್ಲೆಟ್ ಅನ್ನು ರೀಬೂಟ್ ಮಾಡಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಫ್ಯಾಕ್ಟ್ರಿ ರೀಸೆಟ್ ಮೋಡ್

#3

ನಿಮ್ಮ ಫೋನ್ ಇಲ್ಲವೇ ಟ್ಯಾಬ್ಲೆಟ್ ಬೂಟಿಂಗ್‌ಗೆ ಸ್ಪಂದಿಸುತ್ತಿದ್ದರೂ, ಒಮ್ಮೆಲೆ ಓಎಸ್ ಕ್ರ್ಯಾಶ್ ಆಗುತ್ತದೆ. ಆಗ ನಿಮ್ಮ ಡಿವೈಸ್ ಅನ್ನು ರಿಕವರಿ ಮೋಡ್‌ಗೆ ರಿಬೂಟ್ ಮಾಡಬಹುದು. ಬಟನ್ ಅನ್ನು ಹೆಚ್ಚು ಹೊತ್ತು ಒತ್ತಿ ಹಿಡಿಯುವುದರ ಮೂಲಕ ಅದನ್ನು ಬೂಟ್ ಮಾಡಬಹುದಾಗಿದೆ. ಬಟನ್ ಕಾಂಬಿನೇಶನ್ ಬೇರೆ ಬೇರೆ ಡಿವೈಸ್‌ಗೆ ಭಿನ್ನವಾಗಿರುತ್ತದೆ.

ಡಿವೈಸ್ ಫರ್ಮ್‌ವೇರ್ ರೀಸ್ಟೋರ್ ಮಾಡುವುದು

#4

ಡಿವೈಸ್ ಸಾಫ್ಟ್‌ವೇರ್ ಹಾನಿಗೊಂಡಿದ್ದಲ್ಲಿ, ಫ್ಯಾಕ್ಟ್ರಿ ರೀಸೆಟ್ ಪ್ರಕ್ರಿಯೆ ಕಾರ್ಯನಿರ್ವಹಿಸುವುದಿಲ್ಲ. ಡಿವೈಸ್ ತಯಾರಕರು ನೀಡಿರುವ ಚಿತ್ರದಿಂದ ಆಂಡ್ರಾಯ್ಡ್ ಓಎಸ್ ಅನ್ನು ನೀವು ಇನ್‌ಸ್ಟಾಲ್ ಮಾಡಬೇಕಾಗುತ್ತದೆ.

ಬ್ಯಾಟರಿ ಡೆಡ್

#5

ನಿಮ್ಮ ಫೋನ್ ಬ್ಯಾಟರಿ ಡೆಡ್ ಆದ ಸಂದರ್ಭದಲ್ಲಿ ಅಥವಾ ಬ್ಯಾಟರಿ ಖಾಲಿ ಎಂಬ ಸೂಚನೆಯನ್ನು ತೋರಿಸಿದಲ್ಲಿ 10-15 ನಿಮಿಷಗಳ ಫೋನ್ ಚಾರ್ಜ್ ಡಿವೈಸ್ ಅನ್ನು ಆನ್ ಮಾಡುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?
ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?
ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?
ವೋಡಾಫೋನ್ 4ಜಿ ಸಿಮ್ ಪಡೆದುಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It can also be caused by hardware damage or even Software Damage. In case of hardware damage, things can be hard to fix on your own. However, if your phone did not start because of software damage, a few steps here can help.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot