ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?

|

ಪ್ರಸ್ತುತ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್ ಶುರುವಾಗಿದ್ದು, ಈ ಆಪ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲದೇ ಈಗ ಸ್ಮಾರ್ಟ್‌ ಟಿವಿಗಳನ್ನು ಸೇರಿವೆ. ಆದರೆ ಈ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ಸೌಲಭ್ಯ ಪಡೆಯಲು ಗ್ರಾಹಕರು ನಿಗದಿತ ಶುಲ್ಕ ಪಾವತಿಸಬೇಕಿದ್ದು, ಆನಂತರ ವೀಕ್ಷಣೆಗೆ ಅವಕಾಶ ದೊರೆಯಲಿದೆ. ಹೀಗಾಗಿ ಅನೇಕರು ಯೂಟ್ಯೂಬ್ ಆಪ್‌ ಬೆಟರ್‌ ಬಿಡ್ರಪ್ಪೊ ಎನ್ನುತ್ತಾರೆ. ಆದ್ರೆ ಯೂಟ್ಯೂಬ್‌ ಆಪ್‌ನಲ್ಲಿ ವೀಕ್ಷಣೆಯಲ್ಲಿ ಲಭ್ಯವಿರುವ ವಿಭಿನ್ನ ಆಯ್ಕೆಗಳನ್ನು ಹೆಚ್ಚಾಗಿ ಬಳಸಿರುವುದಿಲ್ಲ.

ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?

ಹೌದು, ಗೂಗಲ್ ಒಡೆತನದ 'ಯೂಟ್ಯೂಬ್ ಆಪ್‌' ಎಲ್ಲರಿಗೂ ಮಾಹಿತಿ ಮತ್ತು ಮನರಂಜನೆಯ ಒದಗಿಸುವ ತಾಣವಾಗಿದ್ದು, ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ವಿಡಿಯೊ ರೂಪದಲ್ಲಿ ತಿಳಿಯಬಹುದಾಗಿದೆ. ಯೂಟ್ಯೂಬ್‌ನಲ್ಲಿ ಸುದ್ದಿ ವಾಹಿನಿಗಳನ್ನು ನೇರ ವೀಕ್ಷಣೆ ಮಾಡಲು ಅವಕಾಶವಿದ್ದು, ಹಾಗೆಯೇ ಅನೇಕ ಮನರಂಜನೆಯ ಚಾನೆಲ್‌ಗಳನ್ನು ನೋಡಲು ಬಳಕೆದಾರರು ನೋಡಬಹುದಾಗಿದೆ.

ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?

ಯೂಟ್ಯೂಬ್ ಆಪ್‌ನಲ್ಲಿ ಅನೇಕ ಹೊಸ ಫೀಚರ್ಸ್‌ಗಳು ಇದ್ದು, ಅವುಗಳು ವಿಡಿಯೊ ವೀಕ್ಷಣೆಯಲ್ಲಿ ಭಿನ್ನತೆಯನ್ನು ನೀಡುತ್ತವೆ. ಫಾರ್ಡವರ್ಡ್, ಬ್ಯಾಕ್‌ವರ್ಡ್‌, ವಾಚ್ ಲೆಟರ್, ಡಾರ್ಕ್‌ ಥೀಮ್, ಹೀಗೆ ವೀಕ್ಷಕರಿಗೆ ಹಲವು ಅಗತ್ಯ ಅನುಕೂಲಕರ ಆಯ್ಕೆಗಳನ್ನು ಒದಗಿಸಿದೆ. ಹಾಗಾದರೇ ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆಗೆ ಅನುಕೂಲ ಒದಗಿಸುವ ಆಯ್ಕೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!ಓದಿರಿ : ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!

ಸ್ವೈಪ್‌ ಆಯ್ಕೆ

ಸ್ವೈಪ್‌ ಆಯ್ಕೆ

ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುತ್ತಿರುವಾಗ ಸ್ವೈಪ್‌ ಆಯ್ಕೆಯನ್ನು ಬಳಸಬಹುದಾಗಿದೆ. ಈ ಆಯ್ಕೆಯಲ್ಲಿ ಬ್ಯಾಕ್‌ ಹೋಗದೆ, ಹಿಂದಿನ ವಿಡಿಯೊ ಮತ್ತು ಮುಂದಿನ ವಿಡಿಯೊ ನೋಡಲು ಅವಕಾಶವಿದೆ. ಡಿಸ್‌ಪ್ಲೇಯಲ್ಲಿಯೇ ಸ್ವೈಪ್‌ ಆಯ್ಕೆ ಬಳಸಬಹುದಾಗಿದ್ದು, ಲೆಫ್ಟ್‌ ಸ್ವೈಪ್‌ ಮಾಡಿದರೇ ಹಿಂದಿನ ವಿಡಯೊ ಮತ್ತೆ ಪ್ಲೇ ಆಗುತ್ತದೆ. ಹಾಗೆಯೇ ಬಲಕ್ಕೆ ಸ್ವೈಪ್ ಮಾಡಿದರೇ ಮುಂದಿನ ವಿಡಿಯೊ ಪ್ಲೇ ಆಗುತ್ತದೆ.

ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್‌

ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್‌

ಯೂಟ್ಯೂಬ್‌ ವಿಡಿಯೊ ವೀಕ್ಷಿಸುವಾಗ ಫಾರ್ವರ್ಡ್‌ ಮತ್ತು ಬ್ಯಾಕ್‌ವರ್ಡ್‌ ಮಾಡಲು ಅವಕಾಶವಿದ್ದು, ಅದಕ್ಕಾಗಿ ಆಯ್ಕೆಗಳು ಇವೆ. ವಿಡಿಯೊವನ್ನು ಸುಮಾರು 10 ಸೆಕೆಂಡ್‌ಗೆ ಫಾರ್ವರ್ಡ್‌ ಮಾಡಲು ಪೇ ಆಗುತ್ತಿರುವ ವಿಡಿಯೊ ಡಿಸ್‌ಪ್ಲೇ ಬಲಕ್ಕೆ ಎರಡು ಟ್ಯಾಪ್‌ ಮಾಡಿರಿ. ಹಾಗೆಯೇ ಎಡಕ್ಕೆ ಡಬಲ್ ಟ್ಯಾಪ್ ಮಾಡಿದರೇ ವಿಡಿಯೊವು ಬ್ಯಾಕ್‌ವರ್ಡ್‌ ಆಗುತ್ತದೆ.

ಓದಿರಿ: ಪೇಟಿಎಮ್‌ ಆಪ್‌ನಲ್ಲಿ ಹಣ ವರ್ಗಾವಣೆ ಈಗ ಇನ್ನಷ್ಟು ಸುಲಭ!ಓದಿರಿ: ಪೇಟಿಎಮ್‌ ಆಪ್‌ನಲ್ಲಿ ಹಣ ವರ್ಗಾವಣೆ ಈಗ ಇನ್ನಷ್ಟು ಸುಲಭ!

ವಿಡಿಯೊ ಕ್ವಾಲಿಟಿ ಹೆಚ್ಚಿಸಿಕೊಳ್ಳಿ

ವಿಡಿಯೊ ಕ್ವಾಲಿಟಿ ಹೆಚ್ಚಿಸಿಕೊಳ್ಳಿ

ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆ ಮಾಡುವಾಗ ಪ್ಲೇ ಆಗುತ್ತಿರುವ ವಿಡಿಯೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಅದಕ್ಕಾಗಿ ಬಲಕ್ಕೆ ಕಾಣುವ ಮೂರು ಡಾಟ್‌ಗಳ ಮೆನು ಬಟನ್ ಸೆಲೆಕ್ಟ್ ಮಾಡಿರಿ. ಆನಂತರ ಕಾಣಿಸುವ ಆಯ್ಕೆಗಳ ಪಟ್ಟಿಯಲ್ಲಿ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಅಗತ್ಯವೆನಿಸುವ ಗುಣಮಟ್ಟದಲ್ಲಿ ಸೆಟ್‌ ಮಾಡಿ ವಿಡಿಯೊ ನೋಡಬಹುದಾಗಿದೆ.

ಶಾರ್ಟ್‌ಕಟ್‌ ಕೀ ವರ್ಡ್‌ ಬಳಕೆ

ಶಾರ್ಟ್‌ಕಟ್‌ ಕೀ ವರ್ಡ್‌ ಬಳಕೆ

ಕಂಪ್ಯೂಟರ್‌ನಲ್ಲಿ ಯೂಟ್ಯೂಬ್‌ ವೀಕ್ಷಿಸುತ್ತಿದ್ದರೇ ಕೇಲವು ಶಾರ್ಟ್‌ಕಟ್ ಕೀ ಬಳಸಿ ವಿಡಿಯೊ ನಿಯಂತ್ರಿಸುವ ಅವಕಾಶವಿದೆ. ವಿಡಿಯೊ ಫಾರ್ವರ್ಡ್‌ ಮಾಡಲು ಕ್ಯಾಪ್ಸ್ J ಕೀ ಬಳಕೆಯಾದರೇ, ಬ್ಯಾಕ್‌ವರ್ಡ್‌ ಮಾಡಲು ಕ್ಯಾಪ್ಸ್ L ಕೀ ನೆರವಾಗಲಿದೆ. ಹಾಗೆಯೇ ಕ್ಯಾಪ್ಸ್ K ಕೀ ಒತ್ತಿ ವಿಡಿಯೊ ನಿಲ್ಲಿಸಬಹುದು (pauses), ಮತ್ತು ಕ್ಯಾಪ್ಸ್‌ M ಪ್ರೆಸ್‌ ಮಾಡಿ ವಿಡಿಯೊದ ಆಡಿಯೊವನ್ನು ಮ್ಯೂಟ್‌ ಮಾಡಬಹುದಾಗಿದೆ.

ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್‌!.ಮನರಂಜನೆ ಡಬಲ್!ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್‌!.ಮನರಂಜನೆ ಡಬಲ್!

ಡಾರ್ಕ್ ಥೀಮ್ ಆಯ್ಕೆ

ಡಾರ್ಕ್ ಥೀಮ್ ಆಯ್ಕೆ

ಇತ್ತೀಚಿಗೆ ಹೆಚ್ಚು ಮುನ್ನೆಲೆಗೆ ಬಂದಿರುವ ಡಾರ್ಕ್‌ ಮೋಡ್‌ ಅಥವಾ ಡಾರ್ಕ್ ಥೀಮ್ ಆಯ್ಕೆಯನ್ನು ಯೂಟ್ಯೂಬ್‌ನಲ್ಲಿಯೂ ಕಾಣಬಹುದಾಗಿದೆ. ಡಾರ್ಕ್‌ ಥೀಮ್‌ ವಿಡಿಯೊ ವೀಕ್ಷಣೆಯನ್ನು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಕಣ್ಣಿಗೂ ಒಳ್ಳೆಯದು. ಬಳಕೆದಾರರು ಯೂಟ್ಯೂಬ್‌ನ ಮೆನು ಆಯ್ಕೆಯಲ್ಲಿ ಸೆಟ್ಟಿಂಗ್ ಸೆಲೆಕ್ಟ್ ಮಾಡಿ ಡಾರ್ಕ್‌ ಥೀಮ್ ಫೀಚರ್ಸ್ ಆನ್ ಮಾಡಿಕೊಳ್ಳಬಹುದಾಗಿದೆ.

ಓದಿರಿ : ಫ್ಲಿಪ್‌ಕಾರ್ಟ್‌ನಲ್ಲಿಗ ಹಳೆಯ ಸ್ಮಾರ್ಟ್‌ಫೋನ್‌ಗೆ ಬೆಸ್ಟ್‌ ಎಕ್ಸ್‌ಚೇಂಜ್ ಆಫರ್! ಓದಿರಿ : ಫ್ಲಿಪ್‌ಕಾರ್ಟ್‌ನಲ್ಲಿಗ ಹಳೆಯ ಸ್ಮಾರ್ಟ್‌ಫೋನ್‌ಗೆ ಬೆಸ್ಟ್‌ ಎಕ್ಸ್‌ಚೇಂಜ್ ಆಫರ್!

Best Mobiles in India

English summary
Youtube's these hacks to know that make using YouTube easier, more efficient, and more enjoyable. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X