ಒಂದೇ ಪಾಸ್‌ವರ್ಡ್ ಅನ್ನು ನಾಲ್ಕೈದು ಕಡೆ ಬಳಸುತ್ತಿದ್ದೀರಾ?..ಹಾಗಾದ್ರೆ ಈ ಶಾಕಿಂಗ್ ಸ್ಟೋರಿ ನೋಡಿ!!

ಎಟಿಎಂ, ಸ್ಮಾರ್ಟ್‌ಪೋನ್, ಫೇಸ್‌ಬುಕ್, ಟ್ವಿಟರ್, ಬ್ಯಾಂಕಿಂಗ್ ಮತ್ತು ಗೂಗಲ್ ಹೀಗೆ ಒಂದೊಂದು ವ್ಯವಸ್ಥೆಗೂ ಒಂದೊಂದು ವಿವಿಧ ರೀತಿಯ ಪಾಸ್‌ವರ್ಡ್ ಅನ್ನು ಬಹುತೇಕರು ಇಟ್ಟುಕೊಂಡಿರುತ್ತಾರೆ.!!

|

ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರನು ಕನಿಷ್ಟಪಕ್ಷ ಏನಿಲ್ಲವೆಂದರೂ 10 ಪಾಸ್‌ವರ್ಡ್‌ಗಳನ್ನು ಬಳಕೆ ಮಾಡುತ್ತಿರುತ್ತಾನೆ ಎನ್ನುತ್ತವೆ ವರದಿಗಳು. ಎಟಿಎಂ, ಸ್ಮಾರ್ಟ್‌ಪೋನ್, ಫೇಸ್‌ಬುಕ್, ಟ್ವಿಟರ್, ಬ್ಯಾಂಕಿಂಗ್ ಮತ್ತು ಗೂಗಲ್ ಹೀಗೆ ಒಂದೊಂದು ವ್ಯವಸ್ಥೆಗೂ ಒಂದೊಂದು ವಿವಿಧ ರೀತಿಯ ಪಾಸ್‌ವರ್ಡ್ ಅನ್ನು ಬಹುತೇಕರು ಇಟ್ಟುಕೊಂಡಿರುತ್ತಾರೆ.!!

ಆದರೆ, ಇನ್ನು ಕೆಲವರು ಒಂದೇ ಪಾಸ್‌ವರ್ಡ್ ಅನ್ನು ಹಲವು ಸೇವೆಗೆ ಬಳಕೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಫೇಸ್‌ಬುಕ್‌ಗೆ ಬಳಸಿದ ಪಾಸ್‌ವರ್ಡ್‌ ಅನ್ನೇ ಬ್ಯಾಂಕಿಂಗ್ ಆಪ್‌ಗಳಿಗೂ ಬಳಸಿರುತ್ತಾರೆ. ತಮ್ಮ ಹೆಸರು, ಹೆಂಡತಿ ಹೆಸರು, ಮಕ್ಕಳ ಹೆಸರು ಅಥವಾ ತಮ್ಮ ಮನೆ ಹೆಸರನ್ನೇ ಹೆಚ್ಚು ಜನರು ಪಾಸ್‌ವರ್ಡ್‌ ಮಾಡಿಕೊಂಡಿರುತ್ತಾರೆ ಎಂದು ವರದಿಯೊಂದು ಹೇಳಿದೆ.!!

ಒಂದೇ ಪಾಸ್‌ವರ್ಡ್ ಅನ್ನು ನಾಲ್ಕೈದು ಕಡೆ ಬಳಸುತ್ತಿದ್ದೀರಾ?

ಹಲವು ವ್ಯವಸ್ಥೆಗಳಿಗೆ ಒಂದೇ ಪಾಸ್‌ವರ್ಡ್‌ ನೀಡವುದು ತಪ್ಪು ಎಂದು ತಿಳಿದಿದ್ದರೂ ಕೂಡ ಪಾಸ್‌ವರ್ಡ್‌ಗಳನ್ನು ಮರೆತರೆ ಕಷ್ಟ ಎಂಬ ಕಾರಣಕ್ಕೆ ಜನರು ಒಂದೇ ಪಾಸ್‌ವರ್ಡ್‌ ಅನ್ನು ಹಲವು ವ್ಯವಸ್ಥೆಗಳಿಗೆ ಬಳಸುತ್ತಾರಂತೆ. ಹಾಗಾದರೆ, ಪಾಸ್‌ವರ್ಡ್‌ಗಳನ್ನು ಜನರು ಹೇಗೆಲ್ಲಾ ಬಳಸುತ್ತಿದ್ದಾರೆ ಎಂಬ ಶಾಕಿಂಗ್ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.!!

50 ಲಕ್ಷ ಜನರ ಮಾಹಿತಿ ಸೋರಿಕೆ!!

50 ಲಕ್ಷ ಜನರ ಮಾಹಿತಿ ಸೋರಿಕೆ!!

ಇತರರು ಊಹಿಸಲಾಗದ ಪಾಸ್‌ವರ್ಡ್‌ಗಳನ್ನು ಬಳಸದಿರುವುದರಿಂದ ಸುಮಾರು 50 ಲಕ್ಷ ಜನರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಡೇಟಾ ಸ್ಲ್ಯಾಶ್ ತಿಳಿಸಿದೆ.

ಆರು ಗಂಟೆಯಲ್ಲಿ ಹ್ಯಾಕ್ ಮಾಡಬಹುದು!!

ಆರು ಗಂಟೆಯಲ್ಲಿ ಹ್ಯಾಕ್ ಮಾಡಬಹುದು!!

ಶೇ 90ರಷ್ಟು ಉದ್ಯೋಗಿಗಳು ತಮ್ಮ ಖಾತೆಗಳು ಮತ್ತು ಸಾಧನಗಳಿಗೆ ಬಳಸುತ್ತಿರುವ ಪಾಸ್‌ವರ್ಡ್‌ಗಳು ಕೇವಲ ಆರು ಗಂಟೆಯಲ್ಲಿ ಹ್ಯಾಕಿಂಗ್‌ಗೆ ಗುರಿಯಾಗುತ್ತವಂತೆ.

ಪಾಸ್‌ವರ್ಡ್‌ ಬದಲಾಗಲು ವರ್ಷಗಳೇ ಬೇಕು!!

ಪಾಸ್‌ವರ್ಡ್‌ ಬದಲಾಗಲು ವರ್ಷಗಳೇ ಬೇಕು!!

ಶೇ 40ರಷ್ಟು ನೆಟ್‌ ಬಳಕೆದಾರರು ಒಮ್ಮೆ ಪಾಸ್‌ವರ್ಡ್‌ ನೀಡಿದರೆ ಎಷ್ಟು ವರ್ಷಗಳಾದರೂ ಅದನ್ನು ಪುನಃ ಬದಲಾಯಿಸಲು ಆಸಕ್ತಿ ತೋರುತ್ತಿಲ್ಲವಂತೆ.

ಸಾಕು ಪ್ರಾಣಿಯೇ ಪಾಸ್‌ವರ್ಡ್!

ಸಾಕು ಪ್ರಾಣಿಯೇ ಪಾಸ್‌ವರ್ಡ್!

ಕುಟುಂಬ ಸದಸ್ಯರ ಹೆಸರುಗಳಿಗಿಂತ ಹೆಚ್ಚಾಗಿ ತಮ್ಮ ಸಾಕು ಪ್ರಾಣಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ಗಳಾಗಿ ಬಳಸಿಕೊಳ್ಳಲು ಹಲವು ನೆಟ್‌ ಬಳಕೆದಾರರು ಆಸಕ್ತಿ ತೋರಿಸುತ್ತಿದ್ದಾರಂತೆ.

ನಾಲ್ಕೈದು ಕಡೆ ಬಳಕೆ!

ನಾಲ್ಕೈದು ಕಡೆ ಬಳಕೆ!

ಶೇ 60 ರಷ್ಟು ನೆಟ್‌ ಬಳಕೆದಾರರು ಒಂದೇ ರಹಸ್ಯ ಪದವನ್ನು ನಾಲ್ಕೈದು ಕಡೆ ಬಳಸುತ್ತಿದ್ದಾರೆ.

ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಚೇಂಜ್!!

ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಚೇಂಜ್!!

ಕೇವಲ ಶೇ 37ರಷ್ಟು ಮಂದಿ ಮಾತ್ರ ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸಲು ಆಸಕ್ತಿ ತೋರಿಸುತ್ತಿದ್ದಾರೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಮನೆ ಹೆಸರೇ ಪಾಸ್‌ವರ್ಡ್‌

ಮನೆ ಹೆಸರೇ ಪಾಸ್‌ವರ್ಡ್‌

ಶೇ 25ರಷ್ಟು ಮಂದಿ ತಮ್ಮ ಮನೆ ಹೆಸರನ್ನೇ ಪಾಸ್‌ವರ್ಡ್‌ ಮಾಡಿಕೊಂಡಿದ್ದಾರಂತೆ.

ಓದಿರಿ:ಸ್ಟೀಫನ್ ಹಾಕಿಂಗ್ ಹೇಳಿದಂತೆ ಮನುಕುಲದ ನಾಶಕ್ಕೆ ಕೃತಕ ಬುದ್ದಿಮತ್ತೆ ಕಾರಣವಾಗಲಿದೆಯೇ?

</a></strong><a class=ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!" title="ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!" loading="lazy" width="100" height="56" />ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!

Best Mobiles in India

English summary
-A study by Ofcom, the UK communications watchdog, has unearthed some appalling statistics which reveal just how badly the general public treat password security. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X