ಸ್ಟೀಫನ್ ಹಾಕಿಂಗ್ ಹೇಳಿದಂತೆ ಮನುಕುಲದ ನಾಶಕ್ಕೆ ಕೃತಕ ಬುದ್ದಿಮತ್ತೆ ಕಾರಣವಾಗಲಿದೆಯೇ?

ಯಾವುದೇ ತಂತ್ರಜ್ಞಾನ ಅಭಿವೃದ್ಧಿಗೆ ಬಳಕೆಯಾದರೆ ಪರವಾಗಿಲ್ಲ. ಆದರೆ ಅದನ್ನು ಬಳಸಿಕೊಂಡು ವಿನಾಶಕಾರಿ ಚಟುವಟಿಕೆಗಳನ್ನು ನಡೆಸಿದರೆ ಅದು ಮನುಕುಲಕ್ಕೆ ಅಪಾಯ ಎಂಬ ಆತಂಕ ಕೃತಕಬುದ್ಧಿಮತ್ತೆ ವಿಜ್ಞಾನಿಗಳನ್ನು ಕಾಡುತ್ತಿದೆ.!!

|

ಕೃತಕ ಬುದ್ದಿಮತ್ತೆ ತಂತ್ರಜ್ಞಾನವವು ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನವನ್ನೇ ಮೂಡಿಸುತ್ತಿದೆ. ಆದರೆ, ಯಾವುದೇ ತಂತ್ರಜ್ಞಾನ ಅಭಿವೃದ್ಧಿಗೆ ಬಳಕೆಯಾದರೆ ಪರವಾಗಿಲ್ಲ. ಆದರೆ ಅದನ್ನು ಬಳಸಿಕೊಂಡು ವಿನಾಶಕಾರಿ ಚಟುವಟಿಕೆಗಳನ್ನು ನಡೆಸಿದರೆ ಅದು ಮನುಕುಲಕ್ಕೆ ಅಪಾಯ ಎಂಬ ಆತಂಕ ಕೃತಕಬುದ್ಧಿಮತ್ತೆ ವಿಜ್ಞಾನಿಗಳನ್ನು ಕಾಡುತ್ತಿದೆ.!!

ಹೌದು, ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸಂಶೋಧನಾ ತಂಡವೊಂದು ವರದಿಯೊಂದನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದರಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿವರಗಳನ್ನು ಸಹ ನೀಡಿದೆ. ಇದೇ ವೇಳೆ ಇಂತಹ ದುರ್ಬಳಕೆ ತಡೆಯಲು ಸಾಧ್ಯ ಎಂಬುದನ್ನೂ ತಿಳಿಸಿದ್ದಾರೆ.!!

ಮನುಕುಲದ ನಾಶಕ್ಕೆ ಕೃತಕ ಬುದ್ದಿಮತ್ತೆ ಕಾರಣವಾಗಲಿದೆಯೇ?

ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತೆ ಕೃತಕ ಬುದ್ಧಿಮತ್ತೆ ಸಾಧನಗಳು ನಿರೀಕ್ಷೆಯನ್ನೇ ಮಾಡದ ಕೆಲಸಗಳಿಗೆ ಬಳಕೆಯಾಗುತ್ತಿವೆ ಎಂಬ ಆತಂಕ ಇದೀಗ ಸಂಶೋಧಕರನ್ನು ಕಾಡುತ್ತಿದೆ. ಈ ರೀತಿ ಕಡಿಮೆ ಹಣಕ್ಕೆ ತಂತ್ರಜ್ಞಾನ ದೊರೆತರೆ ಮನು ಕುಲಕ್ಕೆ ಅಪಾಯ ಎದುರಾಗಬಹುದು ಎಂದು ಸ್ಕೈಡಿಯೊ ವಿಜ್ಞಾನಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.!

ಮನುಕುಲದ ನಾಶಕ್ಕೆ ಕೃತಕ ಬುದ್ದಿಮತ್ತೆ ಕಾರಣವಾಗಲಿದೆಯೇ?

ಕೃತಕ ಬುದ್ದುಮತ್ತೆ ತಂತ್ರಜ್ಞಾನ ಬಳಸಿದ ಸಾಧನಗಳಿಂದ ಜನರ ಮೇಲೆ ದಾಳಿ ನಡೆಸಿದರೆ ಅಥವಾ ಇಂಟರ್‌ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಕದಿಯುವಂತಾದರೆ ಏನು ಮಾಡುವುದು ಎಂಬುದು ಸಂಶೋಧಕರ ಆತಂಕವಾಗಿದೆ. ಇಂತಹ ವಿಷಯಗಳ ಮೇಲೆ ರಕ್ಷಣಾತ್ಮಕವಾಗಿ ಕ್ರಮ ಕೈಗೊಳ್ಳುವಲ್ಲಿ ಸಂಶೋಧಕ ಕೆಲಸ ಮಾಡುತ್ತಿದ್ದಾರೆ.!!

How to Check Your Voter ID Card Status (KANNADA)

ಇತ್ತೀಚಿಗೆ ಬೆಂಗಳೂರಿನ ಸ್ಟಾರ್ಟ್‌ಅಪ್‌ವೊಂದು ಕೃತಕ ಬುದ್ದಿಮತ್ತೆ ಡ್ರೋನ್‌ ಅನ್ನು ತಯಾರಿಸಿದ್ದು ಸಹ ಇದಕ್ಕೆ ಉದಾಹರಣೆಯಾಗಬಹುದು. ಈ ಡ್ರೋಣ್ ಒಬ್ಬ ವ್ಯಕ್ತಿಯನ್ನು ಗುರುತಿಸಿ ಅವನು ಹೋದ ಕಡೆಯಲ್ಲೆಲ್ಲ ಇದು ಹಿಂಬಾಲಿಸುತ್ತಲೇ ಇರುತ್ತದೆ. ಇದಕ್ಕೆ ಒಮ್ಮೆ ಸೂಚನೆ ನೀಡಿದರೆ ಅದು ಕೆಲಸ ಮುಗಿದ ನಂತರ ಸ್ವ ಸ್ಥಳಕ್ಕೆ ವಾಪಸ್ ಆಗಲಿದೆ.!!

ಓದಿರಿ: ರಾಜ್ಯದಲ್ಲಿ ಮೊದಲ BSNL 4ಜಿ ಟವರ್‌ ಉದ್ಘಾಟನೆ!..ಜಿಯೋಗೆ ಟಾಂಗ್ ನೀಡಿದ ಸಚಿವರು!!

Best Mobiles in India

English summary
artificial intelligence will one day lead to thinking machines that will take over from us. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X