“ಓಕೆ ಗೂಗಲ್” ತಪ್ಪನ್ನು ಪರಿಹರಿಸಲು ಇವೆ 6 ವಿಧಾನಗಳು..!

By GizBot Bureau
|

ನಮ್ಮ ಮೊಬೈಲ್ ಗಳು ಎಷ್ಟು ಮುಂದುವರಿದಿವೆ ಎಂದರೆ ಯಾವುದನ್ನೂ ಟೈಪ್ ಮಾಡಿ ಅಲ್ಲ, ಬದಲಾಗಿ ಜಸ್ಟ್ ಗೂಗಲ್ ಹೇಳಿಯೇ ಕೆಲಸ ಮಾಡಿಕೊಳ್ಳಬಹುದು. ಅಂತದ್ದೊಂದು ವೈಶಿಷ್ಟ್ಯವನ್ನು ಇತ್ತೀಚೆಗಷ್ಟೇ ಗೂಗಲ್ ಸೇರಿಸಿದೆ. ಅದುವೇ ಗೂಗಲ್ ಅಸಿಸ್ಟೆಂಟ್. ಓಕೆ ಗೂಗಲ್ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಬಹುದು. ಜಸ್ಟ್ ಓಕೆ ಗೂಗಲ್ ಎಂದು ಹೇಳಿದರೆ ಸಾಕು, ನಿಮ್ಮ ಗೂಗಲ್ ನಿಮ್ಮ ಕೆಲಸ ಮಾಡಿಕೊಡಲು ಸಿದ್ಧಗೊಳ್ಳುತ್ತದೆ.

ನೀವು ಓಕೆ ಗೂಗಲ್ ಎಂದು ಹೇಳಿದ ಕೂಡಲೇ ನಿಮ್ಮ ಗೂಗಲ್ ಅಸಿಸ್ಟೆಂಟ್ ನಿಮ್ಮ ಸ್ಕ್ರೀನ್ ನಲ್ಲಿ ಬರಬೇಕು. ಆದರೆ ಹೆಚ್ಚಿನ ಸಂದರ್ಬದಲ್ಲಿ ಫೋನಿನ ಕೆಲವು ಸಮಸ್ಯೆಗಳಿಂದಲೋ ಅಥವಾ ಇನ್ಯಾವುದೇ ಸಮಸ್ಯೆಗಳಿಂದಲೋ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ. ಓಕೆ ಗೂಗಲ್ ನ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಸರಳ ವಿಧಾನಗಳನ್ನು ನಾವಿವತ್ತು ನಿಮಗೆ ತಿಳಿಸಲಿದ್ದೇವೆ.

“ಓಕೆ ಗೂಗಲ್” ತಪ್ಪನ್ನು ಪರಿಹರಿಸಲು ಇವೆ 6 ವಿಧಾನಗಳು..!

1. “Ok Google” ವಾಯ್ಸ್ ಕಮಾಂಡನ್ನು ಎನೇಬಲ್ ಮಾಡಿ

1. “Ok Google” ವಾಯ್ಸ್ ಕಮಾಂಡನ್ನು ಎನೇಬಲ್ ಮಾಡಿ

" ಓಕೆ ಗೂಗಲ್ " ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ಡಿಸೇಬಲ್ ಆಗಿದ್ದರೆ ಕೆಲಸ ಮಾಡುವುದಿಲ್ಲ.ಕೆಲವೊಮ್ಮೆ ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವು ಅನೇಬಲ್ ಆಗಿದ್ದು, ವಾಯ್ಸ್ ಕಮಾಂಡ್ ಡಿಸೇಬಲ್ ಆಗಿರುತ್ತದೆ. ಇಂತಹ ಸಂದರ್ಬದಲ್ಲೂ ಕೂಡ ಗೂಗಲ್ ಅಸಿಸ್ಟೆಂಟ್ ಕೆಲಸ ಮಾಡುವುದಿಲ್ಲ. ಗೂಗಲ್ ಅಸಿಸ್ಟೆಂಟ್ ಮತ್ತು ವಾಯ್ಸ್ ಕಮಾಂಡ್ ಎರಡೂ ವೈಶಿಷ್ಟ್ಯವನ್ನೂ ಅನೇಬಲ್ ಮಾಡಿ.

2.ಭಾಷೆಯನ್ನು ಪರೀಕ್ಷಿಸಿ

2.ಭಾಷೆಯನ್ನು ಪರೀಕ್ಷಿಸಿ

ಗೂಗಲ್ ಅಸಿಸ್ಟೆಂಟ್ ಒಂದು ಅಮೇರಿಕನ್ ಕಂಪೆನಿ. ಹಾಗಾಗಿ ಅದರ ಡೀಫಾಲ್ಟ್ ಭಾಷೆ ಯುಎಸ್ ಇಂಗ್ಲೀಷ್ ಆಗಿರುತ್ತದೆ. ಒಂದು ವೇಳೆ ನಿಮಗೆ ಯುಎಸ್ ಇಂಗ್ಲೀಷ್ ಗೆ ಸ್ವಿಚ್ ಆಗುವುದು ಕಷ್ಟವಾದರೆ, ನೀವು ಯಾವಾಗಲೂ ನಿಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.ನಿಮ್ಮ ಭಾಷೆಯನ್ನು ಬದಲಾಯಿಸಲು ಸೆಟ್ಟಿಂಗ್ಸ್ ಗೆ ತೆರಳಿ - ಸರ್ಚ್ ಲಾಂಗ್ವೇಜ್ ನ್ನು ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ಭಾಷೆಯನ್ನು ಆಯ್ಕೆ ಮಾಡಬಹುದು.

3. ನಿಮ್ಮ ಮೈಕ್ರೋಫೋನ್ ಕೆಲಸ ಮಾಡುತ್ತಾ ಅಥವಾ ಇಲ್ವಾ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ

3. ನಿಮ್ಮ ಮೈಕ್ರೋಫೋನ್ ಕೆಲಸ ಮಾಡುತ್ತಾ ಅಥವಾ ಇಲ್ವಾ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ

ಒಂದು ವೇಲೆ ನೀವು ನಿಮ್ಮ ಮೈಕ್ರೋಫೋನ್ ಗಳನ್ನು ಓಕೆ ಗೂಗಲ್ ಕಮಾಂಡ್ ಗಳನ್ನು ನೀಡಲು ಬಳಸುತ್ತಿದ್ದರೆ, ಒಮ್ಮೆ ನೀವು ನಿಮ್ಮ ಮೈಕ್ರೋಫೋನ್ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂದು ತಿಳಿದುಕೊಳ್ಳಿ. ಗೂಗಲ್ ಅಸಿಸ್ಟೆಂಟ್ ನಿಮ್ಮ ಮೈಕ್ರೋಫೋನ್ ಗೆ ಆಕ್ಸಿಸ್ ಬೇಡುತ್ತದೆ. ಒಂದು ವೇಳೆ ಇದು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದಲ್ಲಿ ಗೂಗಲ್ ಅಸಿಸ್ಟೆಂಟ್ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ. ಯಾವುದಾದರೂ ಹಾಡನ್ನು ಪ್ಲೇ ಮಾಡಿ, ಇಲ್ಲವೇ ನಿಮ್ಮ ಗೆಳೆಯರಿಗೋ ಅಥವಾ ಇನ್ಯಾರಿಗಾದರೂ ಕಾಲ್ ಮಾಡಿ , ನಿಮ್ಮ ಮೈಕ್ರೋ ಫೋನ್ ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳಿ.

4. S Voice ಮತ್ತು Bixby ಗೆ ಗುಡ್ ಬಾಯ್ ಹೇಳಿ

4. S Voice ಮತ್ತು Bixby ಗೆ ಗುಡ್ ಬಾಯ್ ಹೇಳಿ

S Voice ಮತ್ತು Bixby ಗಳು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಡೀಫಾಲ್ಟ್ ಆಗಿ ಅನೇಬಲ್ ಆಗಿರುತ್ತದೆ.. ಸಮಸ್ಯೆಯೇನೆಂದರೆ, ಯಾವಾಗ ನೀವು ನಿಮ್ಮ S Voice ಮತ್ತು Bixby ಯನ್ನು ಅನೇಬಲ್ ಆಗಿಸಿರುತ್ತೀರೋ, ಆಗ ಗೂಗಲ್ ಅಸಿಸ್ಟೆಂಟ್ ಕೆಲಸ ಮಾಡುವುದಿಲ್ಲ..ಗೂಗಲ್ ಅಸಿಸ್ಟೆಂಟ್ ಗಳನ್ನು ಅನೇಬಲ್ ಮಾಡಲು ನೀವು ಡಿಫಾಲ್ಟ್ ಆಗಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಅನೇಬಲ್ ಆಗಿರುವ ಈ ಆಯ್ಕೆಯನ್ನು ಡಿಸೇಬಲ್ ಮಾಡಿಕೊಳ್ಳಬೇಕಾಗುತ್ತದೆ.

5. ನಿಮ್ಮ ಇಂಟರ್ ನೆಟ್ ಕನೆಕ್ಷನ್ ಪರೀಕ್ಷಿಸಿಕೊಳ್ಳಿ

5. ನಿಮ್ಮ ಇಂಟರ್ ನೆಟ್ ಕನೆಕ್ಷನ್ ಪರೀಕ್ಷಿಸಿಕೊಳ್ಳಿ

ಒಂದು ವೇಳೆ ನಿಮ್ಮಲ್ಲಿ ಆಕ್ಟೀವ್ ಆಗಿರುವ ಇಂಟರ್ ನೆಟ್ ಕನೆಕ್ಷನ್ ಇಲ್ಲದೇ ಇದ್ದರೆ, ಗೂಗಲ್ ಸಹಾಯಕ ಕೆಲಸ ಮಾಡುವುದಿಲ್ಲ. ನಿಮ್ಮ ಡಾಟಾ ಪ್ಲಾನ್ ಸರಿಯಾಗಿದೆಯೇ ಅಥವಾ ವೈ-ಫೈ ಕನೆಕ್ಷನ್ ಸರಿಯಾಗಿ ಇದೆಯಾ ಪರೀಕ್ಷಿಸಿಕೊಳ್ಳಿ. ಒಮ್ಮೆ ನಿಮ್ಮ ಸಿಸ್ಟಮ್ ನ್ನು ರೀಬೂಟ್ ಮಾಡಿ, ಪುನಃ ಗೂಗಲ್ ಅಸಿಸ್ಟೆಂಟ್ ಕೆಲಸ ಮಾಡುತ್ತಿದೆಯಾ ಪರೀಕ್ಷಿಸಿ. ಗೂಗಲ್ ಸಹಾಯಕವನ್ನು ಅಪ್ ಡೇಟ್ ಮಾಡಿ ಮತ್ತು ಪುನಃ ಬಳಕೆ ಮಾಡಿ. ಗೂಗಲ್ ಆಪ್ ನ ಸ್ಯಾಚೇ(cache)ಯನ್ನು ಡಿಲೀಟ್ ಮಾಡಿ. ಅಷ್ಟೇ ಅಲ್ಲ, ನೀವು ಗೂಗಲ್ ಆಪ್ ನ ಅಪ್ ಡೇಟ್ ಗಳನ್ನು ಅನ್ ಇನ್ಸ್ಟಾಲ್ ಮಾಡಬಹುದು ಮತ್ತು ಪುನಃ ಎಲ್ಲವನ್ನೂ ರಿ-ಇನ್ಸ್ಟಾಲ್ ಮಾಡಿ ಪರೀಕ್ಷಿಸಬಹುದು.ಅಷ್ಟೇ ಅಲ್ಲ, ನೀವು ನಿಮ್ಮ ಬ್ಯಾಕ್ ಗ್ರೌಂಡ್ ಆಪ್ ಗಳನ್ನು ಕಿಲ್ ಮಾಡಿ ಕೂಡ ಪುನಃ ಸ್ಟೇಟಸ್ ಚೆಕ್ ಮಾಡಬಹುದು.

6. ನಿಮ್ಮ ಗೂಗಲ್ ಅಸಿಸ್ಟೆಂಟ್ ನ್ನು ಟ್ರೈನ್ ಮಾಡಿ

6. ನಿಮ್ಮ ಗೂಗಲ್ ಅಸಿಸ್ಟೆಂಟ್ ನ್ನು ಟ್ರೈನ್ ಮಾಡಿ

ಈಗಲೂ ನಿಮ್ಮ ಗೂಗಲ್ ಅಸಿಸ್ಟೆಂಟ್ ಕಾರ್ಯ ನಿರ್ವಹಿಸುತ್ತಿಲ್ಲವಾದರೆ., ನಿಮ್ಮ ಧ್ವನಿಯನ್ನು ಗುರುತಿಸಲು ಅದಕ್ಕೆ ಸಾಧ್ಯವಾಗದೇ ಇರುವ ಸಾಧ್ಯತೆಗಳು ಹೆಚ್ಚಿದೆ. ಇಂತಹ ಸಂದರ್ಬದಲ್ಲಿ, ನಿಮ್ಮ ಗೂಗಲ್ ಅಸಿಸ್ಟೆಂಟ್ ನ್ನು ನೀವು ಹಿಂಪಡೆಯಬೇಕಾಗುತ್ತದೆ . ಮತ್ತು ನೀವು "ಓಕೆ,ಗೂಗಲ್" ಎಂದು ಹೇಳಿದಾಗ ಇದು ನಿಮ್ಮ ಧ್ವನಿಯನ್ನು ಗುರುತಿಸುವಲ್ಲಿ ಗೂಗಲ್ ಸಹಾಯಕರಿಗೆ ಸಹಾಯ ಮಾಡುತ್ತದೆ. ಇದು ಒಂದು ರೀತಿ ನೀವು ಗೂಗಲ್ ಸಹಾಯಕರಿಗೆ ಟ್ರೈನಿಂಗ್ ನೀಡುವುದು ಎಂದರೆ ತಪ್ಪಾಗಲಿಕ್ಕಿಲ್ಲ.

Best Mobiles in India

English summary
6 solutions to fix 'Ok Google' error. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X