7 ವಿಧಾನಗಳಲ್ಲಿ ಡೇಟಾ ಸ್ಟೋರೇಜ್ ಮಾಡಿ

By Shwetha
|

ಡೇಟಾವು ಅತ್ಯಂತ ಹೆಚ್ಚು ಸುರಕ್ಷಿತವಾಗಿ ಕಾಯ್ದುಕೊಳ್ಳಬೇಕಾಗಿರುವ ಅಂಶವಾಗಿದ್ದು ಅದನ್ನು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಪಿಸಿಯಲ್ಲಿ ಕೂಡ ಸಂರಕ್ಷಿಸಿಟ್ಟುಕೊಳ್ಳಬಹುದಾಗಿದೆ. ಈ ಫೈಲ್‌ಗಳನ್ನು ಸುರಕ್ಷಿತವಾಗಿ ಕಾಯ್ದಿರಿಸುವುದು ಹೆಚ್ಚು ಮುಖ್ಯ. ಕೆಲವು ಅಜ್ಞಾತ ಕಾರಣಗಳಿಗಾಗಿ ನಿಮ್ಮ ಸಿಸ್ಟಮ್ ಕ್ರ್ಯಾಶ್ ಆಗಬಹುದು. ಆದ್ದರಿಂದ ಹೊಸ ಬ್ಯಾಕಪ್ ಸ್ಟೋರೇಜ್ ಅನ್ನು ನೀವು ಪಡೆಯಬೇಕು ಎಂಬ ಸಂದರ್ಭದಲ್ಲಿ ಈ ಅಂಶಗಳು ಮೇಲೆ ಯಾವಾಗಲೂ ಕಣ್ಣಿಡಿ.

ಓದಿರಿ: ಗೂಗಲ್‌ ಕ್ರೋಮ್‌ನಲ್ಲಿ ಡೇಟಾ ಬಳಕೆ ಕಡಿಮೆ ಮಾಡುವುದು ಹೇಗೆ?

#1

#1

ನಿಮ್ಮ ಬಾಹ್ಯ ಹಾರ್ಡ್ ಡ್ರೈವ್‌ಗಳು ಹೆಚ್ಚು ಮುಖ್ಯವಾದುದಾಗಿದ್ದು ನಿಮ್ಮೆಲ್ಲಾ ಫೈಲ್‌ಗಳನ್ನು ಬ್ಯಾಕಪ್ ಮಾಡುವುದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದು. ಬಾಹ್ಯ ಹಾರ್ಡ್ ಡಿಸ್ಕ್‌ಗೆ ವಿನಿಯೋಗಿಸುವುದು, ಹೆಚ್ಚುವರಿ ರೀಡ್ ವ್ರೈಟ್ ವೇಗವನ್ನು ನೀವು ಪಡೆದುಕೊಳ್ಳುತ್ತೀರಿ ಎಂಬುದನ್ನು ಖಾತ್ರಿಪಡಿಸುತ್ತದೆ. ಹೆಚ್ಚಿನ ಫೈಲ್‌ಗಳನ್ನು ನಕಲಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಆದ್ದರಿಂದ ಉತ್ತಮ ವ್ರೈಟಿಂಗ್ ಸ್ಪೀಡ್ ಇರುವುದನ್ನು ನೀವು ಖರೀದಿಸಬೇಕಾಗುತ್ತದೆ.

#2

#2

ಹಾರ್ಡ್ ಡಿಸ್ಕ್‌ನ ಸಂಗ್ರಹಣಾ ಸಾಮರ್ಥ್ಯ ನೀವು ಎಂತಹ ವ್ಯಕ್ತಿ ಎಂಬುದನ್ನು ಆಧರಿಸಿರುತ್ತದೆ. ನೀವು ಫೋಟೋಗಳು, ಚಲನಚಿತ್ರಗಳು, ಗೇಮ್ಸ್ ಮತ್ತು ಮ್ಯೂಸಿಕ್ ಅನ್ನು ಹೆಚ್ಚು ಪ್ರಮಾಣದಲ್ಲಿ ಇರಿಸುತ್ತೀರಿ ಎಂದಾದಲ್ಲಿ, ನಿಮ್ಮ ಲೋಕಲ್ ಹಾರ್ಡ್ ಡಿಸ್ಕ್‌ಗಿಂತಲೂ ಹೆಚ್ಚು ಗಾತ್ರದ ಹಾರ್ಡ್ ಡಿಸ್ಕ್ ಖರೀದಿಸಿ.

#3

#3

ಸ್ಟೋರೇಜ್ ಮೀಡಿಯಾವನ್ನು ನಿರ್ಧರಿಸುವ ಸಂದರ್ಭದಲ್ಲಿ ನಿಮ್ಮ ಹಾರ್ಡ್ ಡಿಸ್ಕ್‌ನ ಬಿಲ್ಡ್ ಗುಣಮಟ್ಟ ಹೆಚ್ಚು ಮುಖ್ಯವಾದುದು. ಉತ್ತಮ ಹಾರ್ಡ್ ಡಿಸ್ಕ್ ಉತ್ತಮ ಕೇಸಿಂಗ್ ಅನ್ನು ಒಳಗೊಂಡಿದ್ದು ಇದು ಹೆಚ್ಚುವರಿ ಹೀಟಿಂಗ್ ಅನ್ನು ತಡೆಯುತ್ತದೆ.

#4

#4

ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಟೋರೇಜ್ ಡಿವೈಸ್‌ಗಳಿದ್ದು ಹಾರ್ಡ್ ಡಿಸ್ಕ್‌ನಲ್ಲಿ ಇದನ್ನು ಬಳಸಿ ಸ್ಟೋರ್ ಮಾಡಬಹುದಾಗಿದೆ. ಆದರೆ ಅವುಗಳನ್ನು ಆನ್‌ಲೈನ್‌ನಲ್ಲಿ ನಿಮಗೆ ಸಂಗ್ರಹಿಸಿಡಬೇಕಾಗುತ್ತದೆ.

#5

#5

ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲರ ಬಳಿ ಕ್ಲೌಡ್ ಸ್ಟೋರೇಜ್ ಲಭ್ಯವಿದೆ. ಆದರೆ ಕ್ಲೌಡ್‌ನಲ್ಲಿರುವ ಪ್ರತೀ ಫೈಲ್ ಅನ್ನು ಸಂಗ್ರಹಿಸಿಡುವುದಕ್ಕೆ ನಿಮಗೆ ಹೆಚ್ಚು ಬ್ರ್ಯಾಡ್‌ಬ್ಯಾಂಡ್ ಸಂಪರ್ಕದ ಅಗತ್ಯವಿದೆ.

#6

#6

ಬ್ಯಾಟರಿ ದೋಷದಿಂದಾಗಿ ನೀವು ಬಳಸದೇ ಇರುವ ಲ್ಯಾಪ್‌ಟಾಪ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ಹಾರ್ಡ್ ಡಿಸ್ಕ್ ಅನ್ನು ಹಾಗೆಯೇ ಇರಿಸುವ ತಪ್ಪನ್ನು ಮಾಡದಿರಿ. ಲ್ಯಾಪ್‌ಟಾಪ್‌ನ ಹಾರ್ಡ್ ಡಿಸ್ಕ್ ಅನ್ನು ತೆಗೆಯಿರಿ. ಥರ್ಡ್ ಪಾರ್ಟಿ ಹಾರ್ಡ್ ಡಿಸ್ಕ್ ಎನ್‌ಕ್ಲೋಶರ್‌ಗೆ ಲಗತ್ತಿಸುವ ಮೂಲಕ ಹಾರ್ಡ್ ಡಿಸ್ಕ್ ಅನ್ನು ನಿಮಗೆ ಬಳಸಬಹುದು.

#7

#7

ಸಿಡಿ ಮತ್ತು ಡಿವಿಡಿಗಳಲ್ಲಿ ಫೈಲ್‌ಗಳನ್ನು ಸಂಗ್ರಹಿಸುವುದು ಹಳೆಯ ವಿಧಾನವಾಗಿದೆ. ಆದರೆ ಕೆಲವು ಮುಖ್ಯ ಫೈಲ್‌ಗಳನ್ನು ಇದರಲ್ಲೂ ನಿಮಗೆ ಎತ್ತಿಡಬಹುದಾಗಿದೆ.

#8

#8

ಆಪರೇಟಿಂಗ್ ಸಿಸ್ಟಮ್‌ನಲ್ಲಿ ಬಿಲ್ಟ್ ಇನ್ ಫೀಚರ್‌ಗಳಿದ್ದು ಇವುಗಳು ಫೈಲ್‌ಗಳನ್ನು ಉಳಿಸುವಲ್ಲಿ ನೆರವಾಗಲಿವೆ. ವಿಂಡೋಸ್ ಮತ್ತು ಆಪಲ್‌ ಮ್ಯಾಕ್ ಓಎಸ್ ತಮ್ಮೆಲ್ಲಾ ಕಂಪ್ಯೂಟರ್‌ಗಳಲ್ಲಿ ಈ ಫೀಚರ್‌ಗಳನ್ನು ಹೊಂದಿದ್ದು ನಿಯಮಿತವಾಗಿ ಬಳಕೆದಾರರು ಇದರಲ್ಲಿ ಫೈಲ್‌ಗಳನ್ನು ಬ್ಯಾಕಪ್ ಮಾಡಿಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಮರೆತುಹೋದ ವಿಂಡೋಸ್‌ ಪಾಸ್‌ವರ್ಡ್‌ ರೀಸೆಟ್‌ ಹೇಗೆ?</a><br /><a href=ಬರೇ 10 ನಿಮಿಷದಲ್ಲಿ ಲ್ಯಾಪ್‌ಟಾಪ್ ಓವರ್‌ಹೀಟ್‌ ಸಮಸ್ಯೆ ಪರಿಹರಿಸಿ
ಹೊಸ ಫೋನ್ ಅನ್ನು ಮಗುವಿನಂತೆ ಜೋಪಾನ ಮಾಡಿ" title="ಮರೆತುಹೋದ ವಿಂಡೋಸ್‌ ಪಾಸ್‌ವರ್ಡ್‌ ರೀಸೆಟ್‌ ಹೇಗೆ?
ಬರೇ 10 ನಿಮಿಷದಲ್ಲಿ ಲ್ಯಾಪ್‌ಟಾಪ್ ಓವರ್‌ಹೀಟ್‌ ಸಮಸ್ಯೆ ಪರಿಹರಿಸಿ
ಹೊಸ ಫೋನ್ ಅನ್ನು ಮಗುವಿನಂತೆ ಜೋಪಾನ ಮಾಡಿ" />ಮರೆತುಹೋದ ವಿಂಡೋಸ್‌ ಪಾಸ್‌ವರ್ಡ್‌ ರೀಸೆಟ್‌ ಹೇಗೆ?
ಬರೇ 10 ನಿಮಿಷದಲ್ಲಿ ಲ್ಯಾಪ್‌ಟಾಪ್ ಓವರ್‌ಹೀಟ್‌ ಸಮಸ್ಯೆ ಪರಿಹರಿಸಿ
ಹೊಸ ಫೋನ್ ಅನ್ನು ಮಗುವಿನಂತೆ ಜೋಪಾನ ಮಾಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
So when you decide to get a new backup storage device, it is always great to keep your eyes open for these pointers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X