Subscribe to Gizbot

ಗೂಗಲ್‌ ಕ್ರೋಮ್‌ನಲ್ಲಿ ಡೇಟಾ ಬಳಕೆ ಕಡಿಮೆ ಮಾಡುವುದು ಹೇಗೆ?

Written By:

ದಿನನಿತ್ಯ ಮಾಹಿತಿಗಾಗಿ, ಸಾಮಾಜಿಕ ತಾಣ ಬಳಕೆಗಾಗಿ, ಆನ್‌ಲೈನ್‌ ಗೇಮ್‌ಗಾಗಿ ಇಂಟರ್ನೆಟ್‌ ಬಳಸುವವರು ಅಸಂಖ್ಯಾತ. ವೀಡಿಯೊ ಅಪ್‌ಲೋಡ್‌/ಡೌನ್‌ಲೋಡ್‌, ಫೋಟೋಗಳ ಡೌನ್‌ಲೋಡ್, ಮ್ಯೂಸಿಕ್‌ ಡೌನ್‌ಲೋಡ್ ಹೀಗೆ ಹಲವಾರು ಚಟುವಟಿಕೆಗಳಿಗಾಗಿ ಇಂಟರ್ನೆಟ್‌ ಬಳಸುವುದುಂಟು. ಆದರೆ ಬೇಸರ ತರಿಸುವ ಸಂಗಿತ ಅಂದ್ರೆ ಕಂಪ್ಯೂಟರ್‌ ಮತ್ತು ಮೊಬೈಲ್‌ ಎರಡರಲ್ಲೂ ಹೆಚ್ಚು ಡೇಟಾ ಬಳಕೆಯಾಗುವುದು ಮಾತ್ರ.

ಕೆಲವೊಮ್ಮೆ ಕಂಪ್ರೆಸ್‌ ಆಗದ ವೀಡಿಯೋ, ಫೋಟೋ, ಹಾಗೂ ಕಂಪ್ರೆಸ್‌ ಆಗದ ಕೆಲವು ಡೇಟಾ ಪೇಜ್‌ಗಳು ಸಹ ಹೆಚ್ಚು ಡೇಟಾವನ್ನು ತಿನ್ನುಬಿಡುತ್ತವೆ. ಆದ್ದರಿಂದ ನಿಮ್ಮ ಬ್ರೌಸರ್‌ ಕಡಿಮೆ ಡೇಟಾ ಬಳಕೆ ಮಾಡುವಂತೆ ವ್ಯವಸ್ಥೆಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲೇಬೇಕು.

ಗೂಗಲ್‌ ಕ್ರೋಮ್‌ನ 'Google Chrome extension' ಇನ್‌ಸ್ಟಾಲ್‌ ಮಾಡುವ ಮುಖಾಂತರ, ಇಂಟರ್ನೆಟ್ ಕನೆಕ್ಟ್ ವೇಗಗೊಳಿಸಿ ಇಂಟರ್ನೆಟ್‌ ಡೇಟಾ ಬಳಕೆ ಕಡಿಮೆ ಆಗುವಂತೆ ಮಾಡಬಹುದು. ಅದು ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

1

ಮೊದಲಿಗೆ ನಿಮ್ಮ ಕಂಪ್ಯೂಟರ್‌ಗೆ ಲೇಟೆಸ್ಟ್‌ 'ಗೂಗಲ್‌ ಕ್ರೋಮ್‌ ಬ್ರೌಸರ್'‌ ಅನ್ನು ಪಡೆಯಿರಿ.

ಹಂತ 2

2

ನಿಮ್ಮ ಕ್ರೋಮ್‌ ಬ್ರೌಸರ್‌ನಲ್ಲಿ "Data Saver (Beta)" ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.
ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಂತ 3

3

Data Saver (Beta)" ಎಕ್ಸ್ಟೆನ್ಶನ್ ಅನ್ನು ಕ್ರೋಮ್‌ ಬ್ರೌಸರ್‌ಗೆ ಆಡ್‌ ಮಾಡಿದ ನಂತರ ಫೋಟೋದಲ್ಲಿರುವಂತೆ ಮೆಸೇಜ್‌ ಬರುತ್ತದೆ. ಕ್ರೋಮ್‌ ಬ್ರೌಸರ್‌ಗೆ ಡೇಟಾ ಸೇವರ್ ಆಡ್‌ ಆಗಿರುತ್ತದೆ.

ಹಂತ 4

4

ಈ ಹಂತದಲ್ಲಿ ಮೆಸೇಜ್‌ ಮೇಲೆ ಜಸ್ಟ್‌ ಕ್ಲಿಕ್‌ ಮಾಡುವ ಮುಖಾಂತರ ಡೇಟಾ ಬಳಕೆ ಮಾನಿಟರಿಂಗ್‌ ಆಕ್ಟಿವೇಟ್‌ ಆಗುತ್ತದೆ. ನಂತರ ಎಕ್ಸ್‌ಟ್ರಾ ಡೇಟಾ ಬಳಕೆಯು ನಿಮ್ಮ ಕ್ರೋಮ್ ಬ್ರೌಸರ್‌ನಲ್ಲಿ ಸ್ಟಾಪ್‌ ಆಗುತ್ತದೆ. ನೀವು ಹೆಚ್ಚು ಡೇಟಾ ಬಳಕೆ ತೊಂದರೆಯಿಂದ ಮುಕ್ತರಾಗುತ್ತೀರಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Reduce Data Usage in Google Chrome. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot