ಸ್ಮಾರ್ಟ್‌ಫೋನ್ ಸ್ಲೋ ಆಗಿದ್ರೆ ಏನೇನ್ ಮಾಡ್ಬೇಕು ಗೊತ್ತಾ? ಸಿಂಪಲ್ ಟ್ರಿಕ್ಸ್ ಇಲ್ಲಿವೆ!!

ಸರ್ವೇಸಾಮಾನ್ಯವಾಗಿ ಕಾಣಿಸುವ ಈ ತೊಂದರೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ನಾವು ನಿಮಗೆ ಪರಿಹಾರ ತಿಳಿಸುತ್ತೇವೆ.!!

|

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸ್ಲೋ ಆಗಿದ್ದರೆ ಚಿಂತಿಸಬೇಡಿ. ಏಕೆಂದರೆ ಈ ಸಮಸ್ಯೆ ಯಾವುದೇ ಫೋನ್‌ಗಳಲ್ಲಿ ಕಾಣುವ ಸರ್ವೇಸಾಮಾನ್ಯ ತೊಂದರೆ.! ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸುವ ಸಾಮಾನ್ಯ ತೊಂದರೆ ಎಂದರೆ ಸ್ಮಾರ್ಟ್‌ಫೋನ್‌ ನಿಧಾನವಾಗಿ ಕಾರ್ಯನಿರ್ವಹಣೆ ನೀಡುವುದು ಅಥವಾ ಸ್ಟ್ರಕ್ ಆಗುವುದು!!

ಸರ್ವೇಸಾಮಾನ್ಯವಾಗಿ ಕಾಣಿಸುವ ಈ ತೊಂದರೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ನಾವು ನಿಮಗೆ ಪರಿಹಾರ ತಿಳಿಸುತ್ತೇವೆ.!! ಹಾಗಾಗಿ, ಕೆಲವೊಂದು ಸರಳ ವಿಧಾನಗಳ ಮೂಲಕ ನಿಮ್ಮ ಫೋನ್‌ ಸ್ಪೀಡ್ ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿದುಕೊಳ್ಳಿ.!!

ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿ

ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿ

ಯಾವಾಗಲೂ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುತ್ತಿದ್ದರೆ ಸ್ಮಾರ್ಟ್‌ಫೋನ್ ಸ್ಲೂ ಆಗುವುದನ್ನು ತಪ್ಪಿಸಬಹುದು. ನಿಯಮಿತವಾಗಿ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುತ್ತಿದ್ದರೆ ಆಪ್‌ಗಳ ಕಾರ್ಯನಿರ್ವಹಣೆ ಹೆಚ್ಚಾಗಲಿದ್ದು, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಸ್ಪೀಡ್ ಆಗಲಿದೆ.!!

ಆಂಡ್ರಾಯ್ಡ್ ಫೋನ್ ರೀಬೂಟ್ ಮಾಡಿ.

ಆಂಡ್ರಾಯ್ಡ್ ಫೋನ್ ರೀಬೂಟ್ ಮಾಡಿ.

ಆಂಡ್ರಾಯ್ಡ್ ಫೋನ್ ರೀಬೂಟ್ ಮಾಡುವುದು ಅದನ್ನು ಪುನಃ ಹೊಸ ಸ್ಥಿತಿಗೆ ತರುತ್ತದೆ.! ಇದೊಂದು ಅತ್ಯುತ್ತಮ ಪರಿಹಾರವಾಗಿದ್ದು, ನಿಮ್ಮ ಫೋನ್ನಲ್ಲಿರುವ ಜಂಕ್ ಫೈಲ್‌ಗಳ ಕಾರ್ಯವನ್ನು ಸ್ಥಗಿತಗೊಳಿಸಿ ನಿಮ್ಮ ಫೋನ್ ಸ್ಪಿಡ್ ಆಗುವಂತೆ ನೋಡಿಕೊಳ್ಳುತ್ತದೆ.!!

ಆಂತರಿಕ ಮೆಮೊರಿ ಸ್ಪೇಸ್ ಪರಿಶೀಲಿಸಿ!!

ಆಂತರಿಕ ಮೆಮೊರಿ ಸ್ಪೇಸ್ ಪರಿಶೀಲಿಸಿ!!

ಕಡಿಮೆ ಇಂಟರ್ನಲ್ ಮೆಮೊರಿ ಕೂಡ ನಿಮ್ಮ ಫೋನ್ ನಿಧಾನಗತಿಯಲ್ಲಿ ಚಾಲನೆಯಾಗುವುದಕ್ಕೆ ಕಾರಣವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಎಲ್ಲಾ ಫೈಲ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಸರಿಸುವುದು ನಿಮಗೆ ಸಹಾಯ ಮಾಡುತ್ತದೆ!

ಕ್ಯಾಚೆ ಡೇಟಾ ಕ್ಲಿಯರ್ ಮಾಡಿ.!!

ಕ್ಯಾಚೆ ಡೇಟಾ ಕ್ಲಿಯರ್ ಮಾಡಿ.!!

ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ ತೆರೆದು ಮೆಮೊರಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಕ್ಲಿಯರ್ ಕ್ಯಾಚೆ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ದಿನಕ್ಕೆ ಒಮ್ಮೆ ಬಾರಿಯಾದರೂ ಕ್ಲಿಯರ್ ಮಾಡುತ್ತಿರಿ ನಿಮ್ಮ ಫೋನ್ ಸ್ಪೀಡ್ ಆಗುತ್ತದೆ.!!

ಉತ್ತಮ ಆಂಟಿವೈರಸ್!!

ಉತ್ತಮ ಆಂಟಿವೈರಸ್!!

ಉತ್ತಮ ಆಂಟಿವೈರಸ್ ಸ್ಮಾರ್ಟ್‌ಫೋನ್ ಸುರಕ್ಷತೆ ಮತ್ತು ಭಧ್ರತೆಗೆ ಪ್ರಮುಖವಾಗಿರುತ್ತದೆ. ಹಾಗಾಗಿ, ಉತ್ತಮ ಆಂಟಿವೈರಸ್ ಬಳಕೆ ಮಾಡುವುದರಿಮದ ಜಂಕ್‌ಫೈಲ್‌ಗಳನ್ನು ತಡೆಯಬಹುದು.ಇದರಿಂದ ಸ್ಮಾರ್ಟ್‌ಫೋನ್ ವೇಗೆ ಹೆಚ್ಚಾಗುತ್ತದೆ.!!

Best Mobiles in India

English summary
Your Android phone was probably fast when you first bought it, right? Then over time it began running more slowly.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X