ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು

By Suneel
|

ಆಂಡ್ರಾಯ್ಡ್‌ ಮೊಬೈಲ್‌ ಆಪರೇಟ್‌ ಮಾಡ್ತಾ ಮಾಡ್ತಾ ಏನೋ ಮಿಸ್‌ ಆಗಿ ಮುಖ್ಯವಾದ ಒಂದು ಎಸ್‌ಎಂಎಸ್‌ ಡಿಲೀಟ್‌ ಆಗಿ ಬಿಡುತ್ತೆ. ಅಲ್ಲದೇ ಕೆಲವು ವೇಳೆ ಆಕಸ್ಮಿಕವಾಗಿ ಸಹ ಮೆಸೇಜ್‌ಗಳು ಡಿಲೀಟ್‌ ಆಗಿಹೋಗುತ್ತೆ. ಅಂತಹ ಸಂದರ್ಭದಲ್ಲಿ ಏನೇ ಪ್ರಯತ್ನ ಪಟ್ರು ಆ ಮೆಸೇಜ್‌ ಹಿಂದಿರುಗಿ ಪಡೆಯಲು ಆಗಲ್ಲ. ಆದರೆ ಈಗ ಇಂಟರ್ನೆಟ್ ಮುಂದೆ ಕುಳಿತು ಇದಕ್ಕೆ ಪರಿಹಾರ ಹುಡುಕಿದ್ರೆ ಸಾಕು ಡಿಲೀಟ್ ಆದ ಮೆಸೇಜ್‌ಗಳನ್ನು ಹಿಂದಿರುಗಿ ಪಡೆಯಬಹುದು.

ಓದಿರಿ:ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಡಾಕುಮೆಂಟ್ಸ್‌ ರಿಕವರಿ ಹೇಗೆ

ಕೆಲವು ಟೂಲ್ಸ್‌ಗಳು ಹಾಗೂ ಆಪ್‌ಗಳು ಇಂದು ಡಿಲೀಟ್‌ ಆದ ಮೆಸೇಜ್‌ಗಳನ್ನು ಸಹ ಹಿಂದಿರುಗಿ ಪಡೆಯಲು ಸಹಕರಿಸುತ್ತವೆ. ಇವುಗಳು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಮೆಮೋರಿ ಸ್ಕ್ಯಾನ್‌ ಮಾಡಿ ಡಿಲೀಟ್‌ ಆದ ಮೆಸೇಜ್‌ಗಳನ್ನು ಹಿಂದಿರುಗಿಸುತ್ತವೆ. 'ಡಾ|| ಫೊನೆ' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ವಂಡರ್‌ಶೇರ್‌ ಮತ್ತು ಕೂಲ್‌ಮಸ್ಟರ್ ಆಂಡ್ರಾಯ್ಡ್ ಎಸ್‌ಎಂಎಸ್‌+ಕಾಂಟ್ಯಾಕ್ಟ್‌ ರಿಕವರಿ ಟೂಲ್‌ಗಳನ್ನು ನೀಡಿದ್ದಾರೆ. ಆದರೆ ನೆನಪಿಡಿ ಈ ಟೂಲ್‌ಗಳು ಮೆಸೇಜ್‌ಗಳು ಡಿಲೀಟ್‌ ಆಗಿ ಹೆಚ್ಚು ದಿನಗಳು ಆಗಿರಬಾರದು. ಆಗ ಮಾತ್ರ ವಂಡರ್‌ಶೇರ್‌ ಟೂಲ್‌ಗಳನ್ನು ಬಳಸಿ ಡಿಲೀಟ್‌ ಆದ ಮೆಸೇಜ್‌ಗಳನ್ನು ಹಿಂಪಡೆಯಬಹುದು.

ವಂಡರ್‌ಶೇರ್‌ ಟೂಲ್‌ಗಳ ಮುಖಾಂತರ ಡಿಲೀಟ್‌ ಮೆಸೇಜ್‌ಗಳನ್ನು ಹಿಂಪಡೆಯುವ ಸರಳ ವಿಧಾನಗಳು

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ Setting>>about Phone>> Build Number ಗೆ ಹೋಗಿ. ಅಲ್ಲಿ Build Number ಅನ್ನು ಒಂದು ನೋಟಿಫಿಕೇಶನ್‌ ಪಡೆಯುವವರೆಗೆ ಟ್ಯಾಪ್‌ ಮಾಡಿ ಹಿಡಿದಿಟ್ಟುಕೊಳ್ಳಿ.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ನಂತರ ಸೆಟ್ಟಿಂಗ್ಸ್‌ಗೆ ಹಿಂದಿರಿಗಿ. ಈಗ ಮೆನುನಲ್ಲಿ ಡೆವಲಪರ್ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್‌ ಮಾಡಿ USB debugging ಎಂಬುದನ್ನು ಸೆಲೆಕ್ಟ್‌ ಮಾಡಿ.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಆಂಡ್ರಾಯ್ಡ್‌ ಫೋನ್‌ನಲ್ಲಿ ಒಮ್ಮೆ USB debugging ಆಯ್ಕೆಯನ್ನು ಎನೇಬಲ್‌ ಮಾಡಿದ ನಂತರ ಸ್ಮಾರ್ಟ್‌ಫೋನ್‌ ಅನ್ನು ಕಂಪ್ಯೂಟರ್‌ ಗೆ ಸಂಪರ್ಕಿಸಿ.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ನೀವು ವಂಡರ್‌ಶೇರ್‌ ಪ್ರಾಯೋಗಿಕ ವರ್ಸನ್‌ ಅನ್ನು ಡೌನ್‌ಲೋಡ್ ಮಾಡದಿದ್ದಲ್ಲಿ ಅದನ್ನು ಡೌನ್‌ಲೋಡ್‌ ಮಾಡಿ ಇನ್ಸ್ಟಾಲ್‌ ಮಾಡಿ. ಅಥವಾ ಟೂಲ್‌ಗಳನ್ನು ಡೇಟಾ ರಿಕವರಿಗಾಗಿ ಬಳಸಬಹುದು.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಕಂಪ್ಯೂಟರ್‌ಗೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸಂಪರ್ಕಿಸಿದ ಮೇಲೆ Debugging ಆಯ್ಕೆ ಎನೇಬಲ್‌ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಈಗ ವಂಡರ್‌ಶೇರ್‌ ಪ್ರಾಯೋಗಿಕ ಪ್ಯಾಕ್‌ಗೆ ಹಿಂದಿರುಗಿ.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ವಿಧಾನಗಳನ್ನು ಅನುಸರಿಸುವ ಮೂಲಕ ರಿಕವರಿ ಪ್ರೋಗ್ರಾಮ್‌ನಲ್ಲಿ ನಿಮ್ಮ ಫೋನ್‌ ಗುರುತಿಸಿ, ಟೂಲ್‌ಗಳನ್ನು ಫೋನ್‌ ಮೆಮೋರಿ ಸ್ಕ್ಯಾನ್‌ ಮಾಡಲು ಎನೇಬಲ್‌ ಮಾಡಬೇಕು.

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಡಿಲೀಟ್‌ ಮೆಸೇಜ್‌ ಹಿಂಪಡೆಯುವ ವಿಧಾನ

ಸ್ಕ್ಯಾನಿಂಗ್‌ ಪ್ರಕ್ರಿಯೆ ಮುಗಿದ ನಂತರ, ಡಿಲೀಟ್‌ ಆದ ಮೆಸೇಜ್‌ಗಳನ್ನು ಬ್ರೌಸ್‌ ಮಾಡಬಹುದು ಅಥವಾ ನೋಡಬಹುದು. ಅಲ್ಲದೇ ಅವುಗಳನ್ನು ರಿಕವರಿ ಬಟನ್‌ ಪ್ರೆಸ್‌ ಮಾಡಿ ಮರಳಿ ಪಡೆಯಬಹುದು.

Best Mobiles in India

English summary
7 Steps to recover deleted SMSes on Android smartphone.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X