ವಾಟ್ಸಾಪ್ ಬಳಕೆದಾರರೇ ಎಚ್ಚರ!!!

Written By:

ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಬಳಸಲಾದ ಅಪ್ಲಿಕೇಶನ್ ಆಗಿ ವಾಟ್ಸಾಪ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಉತ್ತಮ ಸಂವಹನ ಪರಿಕರ ಕೂಡ ಹೌದು. ಬಳಸಲು ಸುಲಭವಾಗಿರುವ ವಾಟ್ಸಾಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇತರ ಅಪ್ಲಿಕೇಶನ್‌ಗಳಂತೆಯೇ ವಾಟ್ಸಾಪ್ ಕೂಡ ನಿಮ್ಮ ಗೌಪ್ಯತೆಯನ್ನು ಬಿಟ್ಟುಕೊಡಬಹುದು ಎಂಬುದು ನಿಮಗೆ ಗೊತ್ತೇ? ಆದ್ದರಿಂದಲೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೆಚ್ಚು ಹೆಚ್ಚು ವಾಟ್ಸಾಪ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಇಲ್ಲಿ ನಾವು ಕೆಲವೊಂದು ಭದ್ರತಾ ಪರಿಹಾರಗಳನ್ನು ನಿಮಗೆ ನೀಡುತ್ತಿದ್ದೇವೆ.

ಓದಿರಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ಇಂದಿನ ಲೇಖನದಲ್ಲಿ ಆ ಭದ್ರತಾ ಅಂಶಗಳೇನು ಎಂಬುದನ್ನು ನೋಡೋಣ. ವಾಟ್ಸಾಪ್‌ನಲ್ಲಿ ನೀವು ಹೊಂದಿರುವ ಗೌಪ್ಯ ಮಾಹಿತಿಗಳನ್ನು ಈ ಭದ್ರತಾ ಅಂಶಗಳು ಜೋಪಾನವಾಗಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಕ್ ಮಾಡಿ

ಲಾಕ್ ಮಾಡಿ

ವಾಟ್ಸಾಪ್ ಲಾಕ್ ಮಾಡಿ

ನಿಮ್ಮ ಫೋನ್‌ನಲ್ಲಿರುವ ವಾಟ್ಸಾಪ್‌ನ ಸಂರಕ್ಷಣೆಗಾಗಿ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಬಳಸಿ. ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಈ ಕೆಲಸವನ್ನು ಮಾಡುತ್ತವೆ.

ಫೋಟೋ ರೋಲ್‌

ಫೋಟೋ ರೋಲ್‌

ಫೋಟೋ ರೋಲ್‌ನಲ್ಲಿ ಗೋಚರಿಸುವಲ್ಲಿಂದ ವಾಟ್ಸಾಪ್ ಫೋಟೋಗಳನ್ನು ಬ್ಲಾಕ್ ಮಾಡಿ

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ವಾಟ್ಸಾಪ್ "ಚಿತ್ರಗಳು" ಮತ್ತು ವೀಡಿಯೋಗಳ" ಫೋಲ್ಡರ್ ಅನ್ನು ಹುಡುಕಿ. ಪ್ರತಿಯೊಂದರಲ್ಲಿ ನೋಮೀಡಿಯಾ ಫೋಲ್ಡರ್ ಅನ್ನು ರಚಿಸಿ. ಫೋಲ್ಡರ್ ಸ್ಕ್ಯಾನಿಂಗ್ ಮಾಡುವಲ್ಲಿಂದ ಆಂಡ್ರಾಯ್ಡ್‌ನ ಗ್ಯಾಲರಿಯನ್ನು ಇದು ನಿಲ್ಲಿಸುತ್ತದೆ.

ಲಾಸ್ಟ್ ಸೀನ್

ಲಾಸ್ಟ್ ಸೀನ್

ಲಾಸ್ಟ್ ಸೀನ್ ಮರೆಮಾಡಿ

ನೀವು ಯಾವಾಗ ಆನ್‌ಲೈನ್‌ನಿಂದ ಹೊರಹೋಗಿರುತ್ತೀರಿ ಎಂಬ ಸುದ್ದಿಯನ್ನು ಲಾಸ್ಟ್ ಸೀನ್ ಬಳಕೆದಾರರಿಗೆ ತಿಳಿಸುತ್ತದೆ. ಇದು ಇತರರಿಗೆ ತಿಳಿಯುವುದು ಬೇಡ ಎಂಬುದು ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಮರೆಮಾಡಿ.

ನಿರ್ಬಂಧ ಹೇರಿ

ನಿರ್ಬಂಧ ಹೇರಿ

ಪ್ರೊಫೈಲ್ ಚಿತ್ರಕ್ಕೆ ನಿರ್ಬಂಧ ಹೇರಿ

ನಿಮ್ಮ ಪ್ರೊಫೈಲ್ ಚಿತ್ರವನ್ನು ಲಿಂಕ್‌ಡ್ ಇನ್, ಫೇಸ್‌ಬುಕ್, ಇಲ್ಲವೇ ಟ್ವಿಟ್ಟರ್‌ನಲ್ಲಿ ನೀವು ಬಳಸಿದ್ದೀರಿ ಎಂದಾದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.

ಸ್ಕ್ಯಾಮ್

ಸ್ಕ್ಯಾಮ್

ಸ್ಕ್ಯಾಮ್‌ಗಳಿಗಾಗಿ ವೀಕ್ಷಿಸಿ

ವಾಟ್ಸಾಪ್ ಎಂದಿಗೂ ಅಪ್ಲಿಕೇಶನ್ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ. ಚಾಟ್ಸ್, ವಾಯ್ಸ್ ಸಂದೇಶ, ಪೇಮೆಂಟ್, ಫೋಟೋಗಳು ಅಥವಾ ವೀಡಿಯೊಗಳ ಕುರಿತಾದ ಇಮೇಲ್‌ಗಳನ್ನು ಕಳುಹಿಸುವುದಿಲ್ಲ. ಆದ್ದರಿಂದ ವಾಟ್ಸಾಪ್ ಹೆಸರುಳ್ಳ ಸ್ಕ್ಯಾಮ್ ಮೇಲ್‌ಗಳು ಬಂದಾಗ ಆದಷ್ಟು ಎಚ್ಚರವಾಗಿರಿ.

ವಾಟ್ಸಾಪ್ ನಿಷ್ಕ್ರಿಯಗೊಳಿಸಿ

ವಾಟ್ಸಾಪ್ ನಿಷ್ಕ್ರಿಯಗೊಳಿಸಿ

ಫೋನ್ ಕಳೆದುಹೋದಾಗ ವಾಟ್ಸಾಪ್ ನಿಷ್ಕ್ರಿಯಗೊಳಿಸಿ

ನಿಮ್ಮ ಫೋನ್ ಕಳೆದು ಹೋದಲ್ಲಿ ಅಥವಾ ಕದ್ದು ಹೋದಲ್ಲಿ ವಾಟ್ಸಾಪ್ ಖಾತೆಯನ್ನು ಸರಳವಾಗಿ ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೆಟ್‌ವರ್ಕ್ ಪ್ರೊವೈಡರ್‌ನಿಂದ ಸಿಮ್ ಕಾರ್ಡ್ ಲಾಕ್ ಮಾಡುವ ಮೂಲಕ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ಬೇರೆ ಸಿಮ್ ಬಳಸಿ ಬೇರೆ ಫೋನ್‌ನಿಂದ ಹೊಸ ಫೋನ್ ಸಂಖ್ಯೆಯ ಮೂಲಕ ವಾಟ್ಸಾಪ್ ಸಕ್ರಿಯಗೊಳಿಸಬಹುದಾಗಿದೆ.

ಡಿಜಿಟಲ್ ಸಂವಹನ

ಡಿಜಿಟಲ್ ಸಂವಹನ

ನಿಮ್ಮ ಮಾತುಗಳ ಬಗ್ಗೆ ಎಚ್ಚರವಾಗಿರಿ

ನಿಮ್ಮ ಡಿಜಿಟಲ್ ಸಂವಹನದ ಬಗ್ಗೆ ನೀವು ಆದಷ್ಟು ಎಚ್ಚರವಾಗಿರಿ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂವಹನದಲ್ಲಿ ಕಳುಹಿಸಬೇಡಿ. ಫೋನ್ ಸಂಖ್ಯೆಗಳು, ಇಮೇಲ್ ವಿಳಾಸ ಇತ್ಯಾದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp is probably one of the most used apps on any smartphone. And for right reasons. It is a pretty great communication tool. It is simple to use and it works well, even with relatively slower connections. For your whatsapp safety here are the tricks.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot