ಈ ತಪ್ಪುಗಳಿಂದ ಐಫೋನ್ ಬ್ಯಾಟರಿಯನ್ನು ಕೊಲ್ಲುತ್ತಿದ್ದೀರಿ

Written By:

ದಿನಪೂರ್ತಿ ನಿಮ್ಮ ಫೋನ್ ಅನ್ನು ಚಾರ್ಜ ಮಾಡಿದರೂ ದಿನದ ಅಂತ್ಯದಲ್ಲಿ ಫೋನ್ ಚಾರ್ಜ್ ಕೊನೆಯಾಗುತ್ತದೆ. ಈ ಸಮಯ ನಿಮಗೆ ಹೆಚ್ಚು ಇರಿಸು ಮುರಿಸನ್ನು ಉಂಟುಮಾಡುವಂತಿರುತ್ತದೆ. ತುರ್ತು ಪರಿಸ್ಥಿಗಳಲ್ಲಿ ಫೋನ್ ಚಾರ್ಜ್ ಖಾಲಿಯಾಗುವುದು ಖಂಡಿತ ಆ ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಗೊತ್ತು. ಆದರೆ ಮಾಡಿದ್ದುಣ್ಣೋ ಮಹಾರಾಯ ಎಂಬ ಮಾತಿನಂತೆ ನಿಮ್ಮ ಈ ಪರಿಸ್ಥಿತಿಗೆ ನೀವು ಮಾಡುತ್ತಿರುವ ತಪ್ಪು ಕಾರಣವಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು

ನೀವು ಮಾಡುತ್ತಿರುವ ತಪ್ಪುಗಳು ನಿಮಗೆ ಗೊತ್ತಿಲ್ಲದೇ ನಡೆಯುತ್ತಿರಬಹುದು. ಆ ತಪ್ಪುಗಳೇನು ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಟ್ರಿಕ್ಸ್ ಬಳಸಿ ಐಫೋನ್‌ನ ಬ್ಯಾಟರಿಯನ್ನು ದೀರ್ಘಸಮಯದವರೆಗೆ ಇರಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವಾಗಲೂ 100%

ಯಾವಾಗಲೂ 100%

#1

ಕೆಲವರಿಗೆ 100% ಚಾರ್ಜ್ ಮಾಡುವ ಅಭ್ಯಾಸವಿರುತ್ತದೆ. ಆದರೆ ಅಚಾನಕ್ಕಾಗಿ ಅರ್ಧದಲ್ಲಿಯೇ ಫೋನ್ ಅನ್ನು ಚಾರ್ಜರ್ ಅನ್ನು ತೆಗೆಯುತ್ತೀರಿ ಆಗ ನಿಮ್ಮ ಚಾರ್ಜರ್ ಪ್ರಮಾಣ 97% ವಾಗಿರುತ್ತದೆ. ಹೀಗೆ ಮಾಡುವುದು ಬ್ಯಾಟರಿಯ ಜೀವನವನ್ನು ಕುಗ್ಗಿಸುತ್ತದೆ.

ಬೇಕೆಂದೇ ಕೊಲ್ಲುವುದು

ಬೇಕೆಂದೇ ಕೊಲ್ಲುವುದು

#2

ಲಿಥಿಯಮ್ ಇಯಾನ್ ಬ್ಯಾಟರಿಗಳಲ್ಲಿ ಚಾರ್ಜ್ ಖಾಲಿಯಾದೊಡನೆ ಕೂಡಲೇ ಸೂಚನೆಯನ್ನು ನೀಡುತ್ತವೆ. ಆದ್ದರಿಂದ 'ಲೊಬ್ಯಾಟರಿ' ಗುರುತು ಬರುವುದನ್ನೇ ಕಾಯುತ್ತಿರಬೇಡಿ. ಇದು ನೀವು ಬೇಕಂತಲೇ ಮಾಡುತ್ತಿರುವ ತಪ್ಪಾಗಿದೆ.

ಬ್ಯಾಟರಿ ಬಿಸಿ

ಬ್ಯಾಟರಿ ಬಿಸಿ

#3

ಬ್ಯಾಟರಿ ಬಿಸಿಯಾಗುವುದರಿಂದ ಕೂಡ ಚಾರ್ಜ್ ಖಾಲಿಯಾಗುತ್ತದೆ ಮತ್ತು ಇದರಿಂದ ಡಿವೈಸ್‌ಗೆ ಹಾನಿಯಾಗುತ್ತದೆ. ಸೂರ್ಯನ ಬಿಸಿಲಿಗೆ ಫೋನ್ ಅನ್ನು ಒಡ್ಡುವುದರಿಂದ ಕೂಡ ಬ್ಯಾಟರಿ ಬಿಸಿಯಾಗುತ್ತದೆ.

ಕವರ್ ಚಾರ್ಜಿಂಗ್

ಕವರ್ ಚಾರ್ಜಿಂಗ್

#4

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್‌ಗಳು ಬಿಲ್ಟ್ ಇನ್ ಬ್ಯಾಟರಿ ಕೇಸ್‌ನೊಂದಿಗೆ ಬರುತ್ತಿರುತ್ತವೆ. ನೀವು ಪ್ರಯಾಣದಲ್ಲಿರುವಾಗ ಇದು ನಿಮಗೆ ಸಹಕಾರಿಯಾಗಲಿದೆ. ಆದರೆ ಇದು ನಿಮ್ಮ ಬ್ಯಾಟರಿಗೆ ಹಾನಿಯನ್ನುಂಟು ಮಾಡಲಿದೆ. ನಿಮ್ಮ ಬ್ಯಾಟರಿಗೆ ನಿರಂತರ ಪವರ್ ಸೋರ್ಸ್ ಅನ್ನು ಅಟ್ಯಾಚ್ ಮಾಡುತ್ತಿರುವುದು ಬ್ಯಾಟರಿಯ ದೀರ್ಘತೆಯನ್ನು ಇಳಿಮುಖಗೊಳಿಸುತ್ತದೆ

ಕೇಸ್ ಆನ್

ಕೇಸ್ ಆನ್

#5

ಕೇಸ್‌ನೊಂದಿಗೆ ಫೋನ್ ಚಾರ್ಜ್ ಮಾಡುವುದೂ ಕೂಡ ಫೋನ್ ಬ್ಯಾಟರಿಯನ್ನು ಇಳಿಮುಖವಾಗಿಸುತ್ತದೆ. ನಿಮ್ಮ ಫೋನ್ ಅನ್ನು ಕವರ್‌ನೊಂದಿಗೆ ಚಾರ್ಜ್ ಮಾಡುವಾಗ ಬಿಸಿಯನ್ನು ಇದು ಹೊರಬಿಡುತ್ತದೆ. ಇದು ನಿಮ್ಮ ಬ್ಯಾಟರಿ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.

ಬ್ಯಾಕಪ್ ಫೋನ್

ಬ್ಯಾಕಪ್ ಫೋನ್

#6

ನಿಮ್ಮ ಬಳಿ ಎರಡು ಫೋನ್ ಇದೆ. ಒಂದು ನಿಮ್ಮ ಪ್ರೈಮರಿ ಡಿವೈಸ್, ಇನ್ನೊಂದನ್ನು ಹೆಚ್ಚು ಬಳಸುವುದಿಲ್ಲ. ಇದು ಉತ್ತಮ ಉಪಾಯವಾಗಿದ್ದರೂ ಫೋನ್ ಅನ್ನು ಆದಷ್ಟು ಶೀತಲ ಪ್ರದೇಶದಲ್ಲಿರಿಸಿ. ಅಂತೆಯೇ ಫೋನ್ ಅನ್ನು ಹೆಚ್ಚು ಕಾಲ ಬಳಸದೇ ಇರುವುದು ಕೂಡ ಚಾರ್ಜ್ ಅನ್ನು ಅರ್ಧಕ್ಕೆ ಇರಿಸುವುದೂ ಅಷ್ಟೊಂದು ಯೋಗ್ಯವಲ್ಲ.

ಒರಿಜಿನಲ್ ಆಕ್ಸೆಸರೀಸ್

ಒರಿಜಿನಲ್ ಆಕ್ಸೆಸರೀಸ್

#7

ನಿಮ್ಮ ಫೋನ್‌ನೊಂದಿಗೆ ಬಂದಿರುವ ಚಾರ್ಜರ್ ಅನ್ನು ಬಳಸಿಕೊಂಡೇ ಫೋನ್ ಚಾರ್ಜ್ ಮಾಡಿ. ಆದಷ್ಟು ಒರಿಜಿನಲ್ ಆಕ್ಸೆಸರೀಸ್ ಅನ್ನು ಬಳಸಿಕೊಂಡೇ ಫೋನ್ ಚಾರ್ಜ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 7 things you need to avoid from killing your battery.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot