ಜಿಮೇಲ್‌ನಲ್ಲಿರುವ ತಲೆತಿರುಗಿಸುವ 8 ವಿಶೇಷ ಫೀಚರ್ಸ್!

|

ಸದಾ ಅನೇಕ ವಿಶಿಷ್ಟ ಸೌಲಭ್ಯಗಳನ್ನು ಒದಗಿಸುತ್ತಿರುವ ಗೂಗಲ್ ಕಂಪೆನಿಯ ಜಿಮೇಲ್ ಈಗ ಇಮೇಲ್‌ಗೆ ಎಂಬ ಪದಕ್ಕೆ ಪರ್ಯಾಯ ಎನ್ನುವಷ್ಟು ಬೆಳೆದುನಿಂತಿದೆ ನಿಜ. ಆದರೆ, ಅದು ಅಲ್ಲಿಗೆ ನಿಂತಿಲ್ಲ.! ಬದಲಾಗಿ ಗ್ರಾಹಕರಿಗೆ ಅತ್ಯಾಧುನಿಕ ಸೌಲಭ್ಯವನ್ನು ನೀಡಲು ಜಿಮೇಲ್‌ಗೆ ಕಳೆದ ಒಂದು ವರ್ಷದಲ್ಲಿ ಗೂಗಲ್‌ ಕಂಪನಿ ಅನೇಕ ಹೊಸ ಹೊಸ ಸೌಲಭ್ಯಗಳನ್ನು ಒದಗಿಸಿದೆ. ಇದರಿಂದ ಜಿಮೇಲ್ ಈಗ ಮತ್ತಷ್ಟು ಸರಳವಾಗಿ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ ಎನ್ನಬಹುದು.

ಜಿಮೇಲ್‌ನಲ್ಲಿರುವ ತಲೆತಿರುಗಿಸುವ 8 ವಿಶೇಷ ಫೀಚರ್ಸ್!

ಹೌದು, ಹೆಚ್ಚು ಗ್ರಾಹಕಸ್ನೇಹಿಯಾಗಿಸುವ ಸಲುವಾಗಿ ಜಿಮೇಲ್‌ನಲ್ಲಿ ಮತ್ತಷ್ಟು ಜನಪ್ರಿಯ ಫೀಚರ್‌ಗಳನ್ನು ತರಲಾಗಿದೆ. ಮೇಲ್‌ ಷೆಡ್ಯುಲ್ ಮಾಡುವದು, ಮೇಲ್‌ ವಾಪಸ್‌ ಪಡೆಯಬಹುದಾದ ಹಾಗೂ ಪ್ರಿ ಸೆಟ್‌ ರಿಪ್ಲೈಸ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಗ್ರಾಹಕರಿಗೆ ಲಭ್ಯವಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಜಿಮೇಲ್‌ನಲ್ಲಿ ಆಗಿರುವಂತಹ ಬದಲಾವಣೆಗಳು ಯಾವುವು?, ಏನೆಲ್ಲಾ ಹೊಸ ಫೀಚರ್ಸ್ ಬಳಕೆದಾರರ ಗಮನಸೆಳೆಯುತ್ತಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮೇಲ್‌ ಅನ್ನು ವಾಪಸ್‌ ಪಡೆಯಿರಿ

ಮೇಲ್‌ ಅನ್ನು ವಾಪಸ್‌ ಪಡೆಯಿರಿ

ಇನ್ನೂ ಬರೆಯುತ್ತಿರುವಾಗಲೇ ಮೇಲ್‌ ಕಳುಹಿಸಿದ್ದರೆ, ಮೇಲ್‌ ಮಾಡುವ ಬಗ್ಗೆ ಖಚಿತ ಇಲ್ಲದಿದ್ದಾಗಲೇ ಮೇಲ್‌ ಕಳುಹಿಸಿದ್ದರೆ ಅಥವಾ ತಪ್ಪಾಗಿ ಮೇಲ್‌ ಹೋಗಿದ್ದರೆ ಅಂಥ ಮೇಲ್‌ ಅನ್ನು ನೀವು ವಾಪಸ್‌ ಪಡೆಯುವ ಆಯ್ಕೆಯನ್ನು ತರಲಾಗಿದೆ. ತಪ್ಪಾದ ಮೇಲ್‌ಗಳನ್ನು ವಾಪಸ್‌ ಪಡೆಯಲು ಅವಕಾಶ ಇರುವುದರಿಂದ ಸಂವಹನ ಕೊರತೆಯಿಂದಾಗಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ನೀವು ಜಿಮೇಲ್‌ನ ಸೆಟ್ಟಿಂಗ್ಸ್‌ ಟ್ಯಾಬ್‌ನಲ್ಲಿ ಈ ಆಯ್ಕೆಯನ್ನು ಕಾಣಬಹುದು.

ಸ್ಮಾರ್ಟ್‌ ಕಂಪೋಜಿಂಗ್ ಮತ್ತು ಪಾಸ್‌ಕೋಡ್‌

ಸ್ಮಾರ್ಟ್‌ ಕಂಪೋಜಿಂಗ್ ಮತ್ತು ಪಾಸ್‌ಕೋಡ್‌

ಈಗ ನೀವು ಒಂದು ಇ ಮೇಲ್‌ ಬರೆಯುವುದು ಮತ್ತಷ್ಟು ಸುಲಭವಾಗಿದೆ. ನೀವು ಒಂದು ನಿಗದಿತ ವಿಷಯದ ಬಗ್ಗೆ ಬರೆಯುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಶಬ್ದಗಳನ್ನು ಊಹೆ ಮಾಡಿಕೊಂಡು ಜಿಮೇಲ್ ಅಂಥ ಶಬ್ದಗಳನ್ನು ಸಲಹಾತ್ಮಕವಾಗಿ ನೀಡುತ್ತದೆ. ಇದರಿಂದ ನಿಮ್ಮ ಗ್ರಾಮರ್ ತಪ್ಪಾಗುವ ಭಯವೂ ಹೋಗುತ್ತದೆ ಮತ್ತು ಟೈಪ್ ಮಾಡುವ ಶ್ರಮವೂ ತಪ್ಪುತ್ತದೆ ಮತ್ತು ಸಮಯವು ಉಳಿಯುತ್ತದೆ. ಇನ್ನು ಲಾಕ್‌ ಐಕಾನ್ ಮೇಲೆ ಟ್ಯಾಪ್‌ ಮಾಡುವ ಮೂಲಕ smm ಪಾಸ್‌ಕೋಡ್‌ ಬಳಸಿ ನಿಮ್ಮ ಜಿಮೇಲ್ ಖಾತೆಯನ್ನು ಇನ್ನಷ್ಟು ಭದ್ರಗೊಳಿಸಬಹುದು.

ಅನಗತ್ಯವಾದದ್ದನ್ನು ಮ್ಯೂಟ್ ಮಾಡಿ

ಅನಗತ್ಯವಾದದ್ದನ್ನು ಮ್ಯೂಟ್ ಮಾಡಿ

ಚೈನ್ ಕನ್ವರ್ಜಷನ್ ಮೇಲ್‌ ಅನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ಇದೀಗ ಜಿಮೇಲ್‌ನಲ್ಲಿ ಪರಿಚಯಿಸಲಾಗಿದೆ. ಯಾರೋ ನಿಮ್ಮನ್ನು ಮೇಲ್‌ನಲ್ಲಿ ಟ್ಯಾಗ್‌ ಮಾಡುತ್ತಾರೆ. ಅವರು ಎಲ್ಲರಿಗೂ ಟ್ಯಾಗ್‌ ಮಾಡಿರುವುದರಿಂದ ಪ್ರತಿ ಹೊಸ ಮೇಲ್‌ ಬಂದಾಗ ಅದು ನಿಮಗೆ ಕಿರಿಕಿರಿಯುಂಟು ಮಾಡುತ್ತದೆ. ಇದನ್ನು ತಪ್ಪಿಸಲು ಜಿಮೇಲ್ ನಿಮಗೆ ಅವಕಾಶ ಕಲ್ಪಿಸಿದೆ. ಜಿಮೇಲ್‌ನ ಮೇಲ್ಭಾಗದ ಬಾರ್‌ನಲ್ಲಿ ಕಾಣಿಸುವ ಮೂರು ಡಾಟ್‌ಗಳ ಮೇಲೆ ಟ್ಯಾಪ್‌ ಮಾಡಿ ಮತ್ತು ಅಲ್ಲಿರುವ ಮ್ಯೂಟ್ ಸೆಲೆಕ್ಟ್‌ ಮಾಡಿ.

ಹುಡುಕಿ ಡಿಲೀಟ್‌ ಮಾಡುವುದು ಸುಲಭ

ಹುಡುಕಿ ಡಿಲೀಟ್‌ ಮಾಡುವುದು ಸುಲಭ

ನೀವು ಸರ್ಚ್ ಬಾರ್‌ ಮೇಲೆ ಟ್ಯಾಪ್ ಮಾಡಿ ಬೇಕಿದ್ದ ಮಾಹಿತಿಯನ್ನು ಕೆಲವೇ ಕ್ಷಣದಲ್ಲಿ ಜರಡಿ ಮಾಡಬಹುದು. ನಿಮಗೆ ಯಾರು ಇಮೇಲ್‌ಗಳ್ನು ಕಳುಹಿಸಿದ್ದಾರೆ, ನೀವು ಯಾರಿಗೆ ಕಳುಹಿಸಿದ್ದೀರಿ, ಮೇಲ್‌ ಗಾತ್ರದ ಆಧಾರ ಇತ್ಯಾದಿಗಳನ್ನು ಪರಿಗಣಿಸಿ ಮೇಲ್‌ಗಳನ್ನು ಫಿಲ್ಟರ್‌ ಮಾಡಬಹುದು. ಇದೇ ರೀತಿ ನೀವು ನಿಮಗೆ ಬೇಡವಾದ ಇಮೇಲ್‌ಗಳನ್ನೂ ಡಿಲಿಟ್ ಮಾಡಬಹುದು. ಇದರಿಂದಾಗಿ ಜಿಮೇಲ್‌ನಲ್ಲೀನ ಮೇಲ್‌ಗಳನ್ನು ಹುಡುಕುವುದು ಮತ್ತು ಅವುಗಳ್ನು ಡಿಲಿಟ್ ಮಾಡುವುದು ಮತ್ತಷ್ಟು ಸುಲಭವಾಗಿದೆ.

ಮೇಲ್‌ ಷೆಡ್ಯುಲ್ ಮಾಡಬಹುದು

ಮೇಲ್‌ ಷೆಡ್ಯುಲ್ ಮಾಡಬಹುದು

ನೀವು ಯಾರಿಗೆ ಮೇಲ್‌ ಕಳುಹಿಸಬೇಕಾಗಿದೆಯೋ ಅವರ ಇನ್‌ ಬಾಕ್ಸ್‌ಗೆ ಇಂತಿಂಥ ದಿನಾಂಕ ಮತ್ತು ಸಮಯಕ್ಕೆ ತಲುಪವ ಹಾಗೆ ನಿಮ್ಮ ಮೇಲ್ ಅನ್ನು ಷೆಡ್ಯುಲ್ ಮಾಡಬಹುದು. ಮುಂದಿನ ತಿಂಗಳು ಅಥವಾ ಮುಂದಿನ ವರ್ಷವೇ ಆಗಿರಬಹುದು, ಮೇಲ್‌ ಡೆಲಿವರಿ ಆಗಬೇಕಿರುವ ಮೇಲ್‌ ಅನ್ನು ಇಂದೇ ಕಳುಹಿಸಬಹುದು ಮತ್ತು ಡೆಲಿವರಿ ದಿನಾಂಕವನ್ನು ನಮೂದಿಸಿದರೆ ಅದು ಅದೇ ದಿನಾಂಕದಂದು ಅವರ ಇನ್‌ಬಾಕ್ಸ್‌ ಗೆ ಬಂದು ಬೀಳುತ್ತದೆ. ಇದರಿಂದ ಮೇಲ್ ಕಳುಹಿಸಬೇಕಾದುದ್ದನ್ನು ಮರೆಯುವುದು ತಪ್ಪುತ್ತದೆ.

ಮೇಲ್‌ಗೆ ಟೈಮರ್ ಸೆಟ್‌ ಮಾಡಿ

ಮೇಲ್‌ಗೆ ಟೈಮರ್ ಸೆಟ್‌ ಮಾಡಿ

ಜಿಮೇಲ್ ಕಳೆದ ವರ್ಷವೇ ಪರಿಚಯಿಸಿರುವ ಈ ಪೀಚರ್‌ನಲ್ಲಿ ನೀವು ಕಳುಹಿಸುವ ಮೇಲ್‌ಗೆ ಟೈಮರ್ ಸೆಟ್‌ ಮಾಡಬಹುದು. ಹಾಗೇ ಕಳುಹಿಸಿದ ಮೇಲ್‌ ಓಪನ್‌ ಮಾಡಿದಾಗ ಆ ಟೈಮರ್‌ ಕಾಣಿಸುವುದಿಲ್ಲ. ಈ ಫೀಚರ್ ಅನ್ನು ಸೆಲ್ಫ್ ಡಿಸ್ಟ್ರಕ್ಟಿಂಗ್ ಇಮೇಲ್ಸ್ ಎಂದು ಕರೆಯಲಾಗುತ್ತದೆ. ಈ ಫೀಚರ್ ನೀವು ನಿಗದಿಪಡಿಸಿದ ಟೈಮ್ ಮುಗಿದ ತಕ್ಷಣ ಆ ಮೇಲ್‌ ಅನ್ನು ನೀವು ಯಾರಿಗೆ ಕಳುಹಿಸಿರುತ್ತೀರೊ ಅವರಿಗೆ ಕಾಣುವುದಿಲ್ಲ. ಅಂದರೆ ಅವರ ಜಿಮೇಲ್‌ನಲ್ಲಿ ನಿಮ್ಮ ಇಮೇಲ್ ಡಿಲೀಟ್ ಆಗುತ್ತದೆ.

ಪ್ರಿ ಸೆಟ್‌ ರಿಪ್ಲೈಸ್ ಪೀಚರ್!

ಪ್ರಿ ಸೆಟ್‌ ರಿಪ್ಲೈಸ್ ಪೀಚರ್!

ನಿಮಗೆ ಪ್ರತಿದಿನ ನೂರಾರು ಇಮೇಲ್‌ಗಳು ಬರುತ್ತವೆ ಎಂದಿಟ್ಟುಕೊಳ್ಳಿ. ಆವಾಗ ಅವರೆಲ್ಲರಿಗೂ ರಿಪ್ಲೈ ಮಾಡಲು ಸಾಧ್ಯವಿಲ್ಲ. ಆಗ ನೀವು ಪ್ರಿ ಸೆಟ್‌ ರಿಪ್ಲೈಸ್ ಫೀಚರ್ ಅನ್ನು ಸೆಟ್ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ಆಪ್ಷನ್‌ಗಳು ಸೆಟ್ಟಿಂಗ್ಸ್‌ನಲ್ಲಿದ್ದು, ಎಲ್ಲರಿಗೂ ಒಮ್ಮೆಲೆ ಉತ್ತರ ಹೋಗಬೇಕು ಎಂಬುದನ್ನು ನೀವು ಸೆಟ್ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಮೇಲ್‌ ಮಾಡಿದ ಅಸಂಖ್ಯೆ ಜನರಿಗೆ ಒಂದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಕಷ್ಟು ಟೈಮ್ ಬೇಕಾಗುವುದಿಲ್ಲ.

ವ್ಯೂ ಸೆಟ್ಟಿಂಗ್ಸ್ ಬದಲಿಸಿ

ವ್ಯೂ ಸೆಟ್ಟಿಂಗ್ಸ್ ಬದಲಿಸಿ

ಔಟ್‌ಲುಕ್‌ ರೀತಿಯಲ್ಲೇ ನೀವು ಜಿಮೇಲ್‌ನಲ್ಲಿ ಮೇಲ್‌ಗಳನ್ನು ಇದೀಗ ವೀಕ್ಷಿಸಬಹುದು. ಇದಕ್ಕಾಗಿ ನೀವು ಜಿಮೇಲ್‌ನಲ್ಲಿನ ವ್ಯೂ ಸೆಟ್ಟಿಂಗ್ಸ್ ಬದಲಿಸಬೇಕಾಗುತ್ತದೆ. ಜಿಮೇಲ್ ತೆರೆದು ಸೆಟ್ಟಿಂಗ್ಸ್ ಹೋಗಿ, ಅಡ್ವಾನ್ಸಡ್‌ ಆಯ್ಕೆ ಮಾಡಿಕೊಳ್ಳಿ. ನಂತರ ಎನೇಬಲ್ ಪ್ರಿವ್ಯೂ ಪೆನ್ ಆಯ್ಕೆ ಮಾಡಿಕೊಳ್ಳಿ. ಆ ಮೇಲೆ ಇನ್‌ಬಾಕ್ಸ್‌ ಗೆ ಹೋಗಿ ಮತ್ತು ಅದೇ ಬಾರ್‌ನಲ್ಲಿ ಬಲಗಡೆಯ ಮೇಲ್ಭಾಗದಲ್ಲಿ ಸೆಟ್ಟಿಂಗ್ಸ್ ಅಕ್ಸೆಸ್‌ ಪಡೆದುಕೊಳ್ಳಬಹುದು. ಇದರಿಂದ ಔಟ್‌ಲುಕ್‌ ರೀತಿಯಲ್ಲೇ ನೀವು ಜಿಮೇಲ್‌ನಲ್ಲಿ ಮೇಲ್‌ಗಳನ್ನು ಇದೀಗ ವೀಕ್ಷಿಸಬಹುದು

Best Mobiles in India

English summary
Just a quick Guide on How to use Gmail more efficiently. How to use gmail labels, filters, a Vocation mail, and Right-side Chat. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X