ಆಂಡ್ರಾಯ್ಡ್ ಫೋನ್ ಇಂಟರ್ನಲ್ ಸ್ಟೋರೇಜ್ ಕ್ಲಿಯರ್ ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿರಲಿ ಅಥವಾ ಟ್ಯಾಬ್ಲೆಟೇ ಆಗಿರಲಿ ಹೆಚ್ಚಿನ ಸಂದರ್ಭಗಳಲ್ಲಿ ನಾವು ಸ್ಥಳಾವಕಾಶ ಸಮಸ್ಯೆಯನ್ನು ಎದುರಿಸುತ್ತಿರುತ್ತೇವೆ. 'ಸ್ಟೋರೇಜ್ ಸ್ಪೇಸ್ ರನ್ನಿಂಗ್ ಔಟ್' ಈ ಸಂದೇಶ ಹೆಚ್ಚಿನ ಬಜೆಟ್ ಫೋನ್‌ಗಳಲ್ಲಿ ನೀವು ಕಾಣುವಂತಹ ಸಮಸ್ಯೆಯಾಗಿದೆ. ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

#1
ಡೀಫಾಲ್ಟ್ ಮೂಲಕ, ನಿಮ್ಮ ಫೋನ್‌ನಲ್ಲಿ ಪ್ರತೀ ಅಪ್ಲಿಕೇಶನ್ ಡೌನ್‌ಲೋಡ್ ಆಗುವುದು ಇಂಟರ್ನಲ್ ಸ್ಟೋರೇಜ್‌ನಲ್ಲಿ ಸೇವ್ ಆಗುತ್ತದೆ. ಸೆಟ್ಟಿಂಗ್ಸ್ > ಅಪ್ಲಿಕೇಶನ್ > ಡೌನ್‌ಲೋಡೆಡ್ ಅಪ್ಲಿಕೇಶನ್ ಇಲ್ಲಿ ಪ್ರತೀ ಅಪ್ಲಿಕೇಶನ್ ಅನ್ನು ಸ್ಪರ್ಶಿಸಿ ನಂತರ ಅದನ್ನು ಎಸ್‌ಡಿ ಕಾರ್ಡ್‌ಗೆ ಸರಿಸಿ. ಎಲ್ಲಾ ಅಪ್ಲಿಕೇಶನ್‌ಗಳು ಈ ಫೀಚರ್ ಅನ್ನು ಅನುಮೋದಿಸುವುದಿಲ್ಲ. 'ಮೂವ್ ಟು ಎಸ್‌ಡಿ' ಆಪ್ಶನ್ ಸಕ್ರಿಯಗೊಂಡಿರುವ ಅಪ್ಲಿಕೇಶನ್ ಅನ್ನು ಮಾತ್ರವೇ ಸರಿಸಬಹುದಾಗಿದೆ.

#2
ಹೆಚ್ಚುವರಿ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡುವ ಅಭ್ಯಾಸ ನಮ್ಮದಾಗಿದೆ ಅಲ್ಲವೇ? ಆದರೆ ಬೇಕು ಬೇಡದ ಅಪ್ಲಿಕೇಶನ್‌ಗಳನ್ನು ಫೋನ್‌ನಲ್ಲಿ ಇರಿಸುವುದೂ ಕೂಡ ಸ್ಟೋರೇಜ್ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ ನಿಮಗೆ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಮಾತ್ರವೇ ಫೋನ್‌ನಲ್ಲಿ ಇರಿಸಿಕೊಳ್ಳಿ.

#3
ಅಪ್ಲಿಕೇಶನ್‌ಗಳನ್ನು ಬಳಸಿದ ನಂತರ, ಕ್ಯಾಶ್ ಕ್ಲಿಯರ್ ಮಾಡಿಕೊಳ್ಳುವುದನ್ನು ಮರೆಯದಿರಿ. ಕ್ಯಾಶ್ ಕೂಡ ನಿಮ್ಮ ಫೋನ್ ಅನ್ನು ನಿಧಾನವಾಗಿಸುತ್ತದೆ. ಕ್ಯಾಶ್ ಕ್ಲೀನರ್, ಕ್ಲೀನ್ ಮಾಸ್ಟರ್ ಮತ್ತು ಸಿಕ್ಲೀನರ್ ಅಪ್ಲಿಕೇಶನ್‌ಗಳನ್ನು ನಿಮಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

#4
ಆಂಡ್ರಾಯ್ಡ್ ಸಿಸ್ಟಮ್ ಯಾವುದೇ ತರಹದ ಫೈಲ್‌ಗಳು ಅಂದರೆ ಪಿಡಿಎಫ್, ವರ್ಡ್ ಡಾಕ್ಯುಮೆಂಟ್ಸ್, ಮ್ಯೂಸಿಕ್ ಹೀಗೆ ಎಲ್ಲಾ ತರಹದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಇದೂ ಕೂಡ ಸ್ಥಳಾವಕಾಶವನ್ನು ಕಬಳಿಸುತ್ತದೆ.

#5
ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ವೀಡಿಯೊ ಮತ್ತು ಫೋಟೋಗೆ ಬೆಂಬಲವನ್ನು ನೀಡುತ್ತದೆ ಎಂದಾದಲ್ಲಿ ಫೋನ್‌ನಲ್ಲಿರುವ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಎಸ್‌ಡಿ ಕಾರ್ಡ್‌ಗೆ ಸರಿಸಿ. ಕ್ಯಾಮೆರಾ ಸೆಟ್ಟಿಂಗ್ಸ್‌ನಲ್ಲಿ ನಿಮಗೆ ಇದನ್ನು ನೇರವಾಗಿ ಮಾಡಬಹುದಾಗಿದೆ.

#6
ನಿಮ್ಮ ಫೋಟೋಗಳು, ವೀಡಿಯೊಗಳು ಅಥವಾ ಮ್ಯೂಸಿಕ್ ಆಗಿರಲಿ ಅದನ್ನು ಕ್ಲೌಡ್‌ನಲ್ಲಿ ಬ್ಯಾಕಪ್ ಮಾಡುವುದು ಒಳ್ಳೆಯ ಉಪಾಯವಾಗಿದೆ. ಒನ್ ಡ್ರೈವ್, ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್ ಆನ್‌ಲೈನ್‌ನಲ್ಲಿ ಡೇಟಾವನ್ನು ಉಳಿಸಲು ಸಹಕಾರಿಯಾಗಿದೆ. ಕ್ಲೌಡ್‌ನಲ್ಲಿ ಒಮ್ಮೆ ಸೇವ್ ಮಾಡಿಕೊಂಡ ನಂತರ ಈ ಫೈಲ್‌ಗಳನ್ನು ಸ್ಥಳೀಯ ಸಂಗ್ರಹಣೆಯಿಂದ ನಿಮಗೆ ಡಿಲೀಟ್ ಮಾಡಬಹುದಾಗಿದೆ. ಇದು ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ.

#7
ತಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ನಲ್ಲಿ ಹೆಚ್ಚಿನವರು ಇಂಟರ್ನೆಟ್ ಬಳಸುತ್ತಾರೆ. ಆದರೆ ಇದು ಕೆಲವೊಮ್ಮೆ ಕ್ಯಾಶ್ ಅನ್ನು ಸೃಷ್ಟಿಸಿರುತ್ತದೆ. ಡಿವೈಸ್ ಬ್ರೌಸರ್ ಅನ್ನು ಇದು ನಿಧಾನಗೊಳಿಸುತ್ತದೆ ಅಂತೆಯೇ ಸ್ಥಳಾವಕಾಶವನ್ನು ನುಂಗಿ ಹಾಕುತ್ತದೆ. ಸೆಟ್ಟಿಂಗ್ಸ್ > ಪ್ರೈವಸಿ ಏಂಡ್ ಸೆಕ್ಯುರಿಟಿ > ಕ್ಲಿಯರ್ ಕ್ಯಾಶ್ ಮತ್ತು ಹಿಸ್ಟರಿ ಈ ವಿಧಾನವನ್ನು ಅನುಸರಿಸಿ.

#8
ವಾಟ್ಸಾಪ್‌ನಲ್ಲಿ ನೀವು ಹಂಚಿಕೊಳ್ಳುವ ವೀಡಿಯೊ, ಫೋಟೋ ಇಲ್ಲವೇ ಹಾಡುಗಳು ನಿಮ್ಮ ಫೋನ್‌ನ ಸಾಕಷ್ಟು ಸ್ಥಳವನ್ನು ನುಂಗಿ ಹಾಕಬಹುದು. ವಾಟ್ಸಾಪ್‌ನಲ್ಲಿ ಈ ಚಟುವಟಿಕೆಗಳನ್ನು ನಿಮಗೆ ನಿಯಂತ್ರಿಸಬಹುದಾಗಿದೆ. ಸೆಟ್ಟಿಂಗ್ಸ್ > ಚಾಟ್ಸ್ ಮತ್ತು ಕಾಲ್ಸ್ > ಮೀಡಿಯಾ ಆಟೊ ಡೌನ್‌ಲೋಡ್ ಇಲ್ಲಿ ನಿಮಗೆ ನಿರ್ವಹಣೆ ಮಾಡಬಹುದಾಗಿದೆ.

#9
ಮೇಲೆ ತಿಳಿಸಿದ ಆಯ್ಕೆಗಳನ್ನು ಮಾಡಿ ಕೂಡ ಸಾಕಷ್ಟು ಸ್ಥಳಾವಕಾಶವನ್ನು ಪಡೆದುಕೊಳ್ಳುವಲ್ಲಿ ನೀವು ವಿಫಲರಾದಿರಿ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ಡೇಟಾ ಅಂತಿಮ ಆಯ್ಕೆ ಎಂದೆನಿಸಿದೆ. ಇದನ್ನು ಮಾಡಲು ಸೆಟ್ಟಿಂಗ್ಸ್ > ಬ್ಯಾಕಪ್ ಮತ್ತು ರೀಸೆಟ್ > ಫ್ಯಾಕ್ಟ್ರಿ ರೀಸೆಟ್ ಡೇಟಾ ಹೀಗೆ ಮಾಡಿ. ಅದರೆ ಇದನ್ನು ಮಾಡುವ ಮೊದಲು ನಿಮ್ಮೆಲ್ಲಾ ಫೈಲ್‌ಗಳನ್ನು ಬ್ಯಾಕಪ್ ಮಾಡಿಕೊಳ್ಳುವುದು ಉತ್ತಮ.



Click it and Unblock the Notifications








