ಅಯ್ಯೊಯ್ಯೊ! ಒಂದು ಫೋನ್‌ನಿಂದ ಇಷ್ಟೆಲ್ಲಾ ಅವಾಂತರವೇ?

|

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಮನುಷ್ಯ ನೀರು ಆಹಾರವನ್ನು ಬಿಟ್ಟು ಬೇಕಾದರೂ ಇರಬಲ್ಲ ಆದರೆ ತನ್ನ ಫೋನ್ ಅನ್ನು ಬಿಟ್ಟು ಇರಲಾರ ಎಂಬುದು ಅಕ್ಷರಶಃ ನಿಜವಾದ ಮಾತಾಗಿದೆ. ಏಕೆಂದರೆ ಇಂದು ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಎಂದೆನಿಸಿದ್ದು, ಸುದ್ದಿ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿಂದ ಹಿಡಿದು ನಮ್ಮ ಸುತ್ತ ಮುತ್ತಲಿನ ಸುದ್ದಿಯನ್ನು ಕೂಡ ಅರಹುವ ಪಾಂಡಿತ್ಯ ಇದರಲ್ಲಿದೆ. ಇಂದು ನಿಮ್ಮ ಫೋನ್ ಬಳಸಿಕೊಂಡು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ ಗೇಮ್ ಆಡುವುದು, ಸಂಗೀತ ಆಲಿಸುವುದು, ಅಡುಗೆ ಕಲಿಯುವುದು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು, ಪ್ರಶ್ನೆಪತ್ರಿಕೆಗಳ ಸಮಾಚಾರ ಹೀಗೆ ಒಂದೆಲ್ಲಾ ಎರಡಲ್ಲಾ ಹಲವಾರು ಕೆಲಸಗಳನ್ನು ನಿಮ್ಮ ಫೋನ್ ಬೆರಳ ತುದಿಯಿಂದಲೇ ಮಾಡುತ್ತದೆ. ಇಷ್ಟಲ್ಲಾ ಚಾಕಚಕ್ಯತೆ ಚಾಣಾಕ್ಷತನವನ್ನು ನಿಮ್ಮ ಫೋನ್ ಹೊಂದಿದ್ದರೂ, ಕೆಲವೊಂದು ಸಮಯಗಳಲ್ಲಿ ನಿಮ್ಮ ಫೋನ್ ಅನ್ನು ನೀವು ಬದಿಗಿರಿಸಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಅಯ್ಯೊಯ್ಯೊ! ಒಂದು ಫೋನ್‌ನಿಂದ ಇಷ್ಟೆಲ್ಲಾ ಅವಾಂತರವೇ?

ಸ್ಮಾರ್ಟ್‌ಫೋನ್‌ನಿಂದ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯ ಕೂಡ ಇದೆ ಎಂಬುದನ್ನು ನೀವು ಹಲವಾರು ಸುದ್ದಿಗಳಿಂದ ತಿಳಿದುಕೊಂಡಿರಬಹುದು. ಎಷ್ಟೋ ಫೋನ್‌ಗಳು ಸ್ಫೋಟಗೊಂಡ ಸುದ್ದಿಯನ್ನು ನೀವು ಆಲಿಸಿರಬಹುದು, ಇದು ಕೆಲವೊಮ್ಮೆ ಫೋನ್ ತಯಾರಿಕಾ ದೋಷವಿರಬಹುದು ಇಲ್ಲವೇ ಫೋನ್ ಬಳಕೆದಾರರ ಅಜಾಗರೂಕತೆಯಾಗಿರಬಹುದು.

ಅದರಲ್ಲೂ ನೀವು ಒಮ್ಮೊಮ್ಮೆ ಗಂಭೀರ ಕೆಲಸಗಳನ್ನು ಮಾಡುತ್ತಿರುವಾಗ ನಿಮ್ಮ ಜಂಗಮ ವಾಣಿಯನ್ನು ಪಕ್ಕದಲ್ಲಿರಿಸಿಕೊಳ್ಳಲೇಬೇಕು ಇಲ್ಲದಿದ್ದರೆ ಅವಾಂತರವಾಗಬಹುದು. ಉದಾಹರಣೆಗೆ ನೀವು ಚಾಲನೆ ಮಾಡುತ್ತಿರುವಾಗ, ಇಲ್ಲವೇ ಪರೀಕ್ಷೆಗೆ ಓದುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ, ರಸ್ತೆ ದಾಟುತ್ತಿರುವಾಗ ಹೀಗೆ ಕೆಲವೊಂದು ಸಮಯದಲ್ಲಿ ನೀವು ಫೋನ್ ಬಳಕೆಯನ್ನು ಮಾಡಬಾರದು. ಇಂದಿನ ನಮ್ಮ ಲೇಖನದಲ್ಲಿ ನಿಮ್ಮ ಫೋನ್ ಬಳಕೆಗೆ ಯಾವಾಗ ಕಡಿವಾಣ ಹಾಕಬೇಕು ಎಂಬ ಕಿವಿಮಾತುಗಳನ್ನು ನಾವು ತಿಳಿಸುತ್ತಿದ್ದು ಇದರಿಂದ ನಿಮಗಾಗುವ ಪ್ರಯೋಜನಗಳನ್ನು ನೀವು ಅರಿತುಕೊಳ್ಳಬಹುದಾಗಿದೆ.

ಕಾರು ಇಲ್ಲವೇ ಬೈಕ್ ಚಾಲನೆ ಮಾಡುತ್ತಿರುವಾಗ

ಕಾರು ಇಲ್ಲವೇ ಬೈಕ್ ಚಾಲನೆ ಮಾಡುತ್ತಿರುವಾಗ

ನೀವು ಚಾಲನೆ ಮಾಡುತ್ತಿರುವಾಗ ಫೋನ್ ಬಳಸುತ್ತಿದ್ದೀರಿ ಎಂದಾದರೆ ನಿಮ್ಮ ಜೀವಕ್ಕೆ ಇದು ಅಪಾಯವನ್ನುಂಟು ಮಾಡುತ್ತದೆ. ಹೌದು ಸ್ನೇಹಿತರೇ ನೀವು ರಸ್ತೆ ಬದಿಗಳಲ್ಲಿ ಚಾಲನೆ ಮಾಡುವಾಗ ಫೋನ್ ಬಳಸದಿರಿ ಎಂಬಂತಹ ಬೋರ್ಡ್‌ಗಳನ್ನು ಕಂಡಿರಬಹುದು. ಇದರಿಂದಲೇ ಚಾಲನೆ ಮಾಡುತ್ತಿರುವಾಗ ಫೋನ್ ಬಳಕೆ ಎಷ್ಟು ಅಪಾಯಕಾರಿ ಎಂಬುದನ್ನು ಮನಗಾಣಿ.

ಕಲಿಕಾ ಸಮಯದಲ್ಲಿ

ಕಲಿಕಾ ಸಮಯದಲ್ಲಿ

ನಿಮ್ಮ ಓದಿನ ಸಮಯವೆಂದರೆ ನಿಮ್ಮ ಉತ್ತಮ ಭವಿಷ್ಯದ ಚಿಂತನೆಯನ್ನು ಮಾಡುವ ಸಮಯವಾಗಿದೆ. ನೀವು ಓದುವ ಸಮಯದಲ್ಲಿ ಮೊಬೈಲ್ ಬಳಸಿದರೆ ಇದರಿಂದ ನಿಮ್ಮ ಏಕಾಗ್ರತೆ ನಷ್ಟವಾಗುತ್ತದೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಸಾಧ್ಯವಾಗದಿರಬಹುದು. ಆದ್ದರಿಂದ ಓದುವಾಗ ಕಡ್ಡಾಯವಾಗಿ ಮೊಬೈಲ್ ಬಳಕೆಯನ್ನು ಮಾಡದಿರಿ. ಉತ್ತಮ ಗುರಿಯನ್ನಿರಿಸಿಕೊಂಡು ಓದಿ.

ಅಡುಗೆ ಮಾಡುವಾಗ

ಅಡುಗೆ ಮಾಡುವಾಗ

ನಿಮ್ಮ ಮನೆಗೆ ಅತಿಥಿಗಳು ಬಂದಿರುವ ಸಮಯದಲ್ಲಿ ನೀವು ಅಡುಗೆ ಮಾಡುವುದನ್ನು ಬಿಟ್ಟು ಫೋನ್‌ನಲ್ಲಿ ಸಂಭಾಷಿಸುತ್ತಿದ್ದರೆ ನಿಮ್ಮ ಕೆಲಸಕ್ಕೆ ಅಡ್ಡಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತೆಯೇ ಅಡುಗೆ ರುಚಿಯಲ್ಲಿ ವ್ಯತ್ಯಾಸಗಳುಂಟಾಗಿ ನೀವು ಮುಜುಗರಕ್ಕೆ ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಮಾಡದಿರಿ.

ಕೆಲಸ ಮಾಡುತ್ತಿರುವಾಗ

ಕೆಲಸ ಮಾಡುತ್ತಿರುವಾಗ

ನೀವು ಹೆಚ್ಚಿನ ಮುತುವರ್ಜಿಯ ಕೆಲಸವನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್ ಬಳಕೆಯನ್ನು ಕಡಿಮೆ ಮಾಡಿ. ಇದರಿಂದ ಕೆಲಸದಲ್ಲಿ ಉಂಟಾಗುವ ತೊಂದರೆಗಳನ್ನು ನೀವು ನಿವಾರಿಸಿಕೊಳ್ಳಬಹುದಾಗಿದೆ. ಅಂತೆಯೇ ಮೇಲಾಧಿಕಾರಿಯ ಬೈಗುಳದಿಂದ ನಿಮ್ಮನ್ನು ಕಾಪಾಡಿಕೊಳ್ಳಬಹುದು.

ಸ್ನಾನ ಮಾಡುವಾಗ

ಸ್ನಾನ ಮಾಡುವಾಗ

ಸ್ನಾನ ಮಾಡುವಾಗ ಮೊಬೈಲ್ ಫೋನ್‌ನ ಬಳಕೆ ಮಾಡಿದಲ್ಲಿ ಇದರಿಂದ ಉಂಟಾಗುವ ಅಪಾಯವನ್ನು ನೀವು ಭರಿಸಬೇಕಾಗುತ್ತದೆ. ನಿಮ್ಮ ಸ್ನಾನದ ನೀರು ಫೋನ್ ಮೇಲೆ ಬಿದ್ದು ಖಂಡಿತ ಅನಾಹುತವುಂಟಾಗುತ್ತದೆ.

ಸಿನಿಮಾ ಮಂದಿರಗಳಲ್ಲಿ

ಸಿನಿಮಾ ಮಂದಿರಗಳಲ್ಲಿ

ನೀವು ಸಿನಿಮಾ ನೋಡುತ್ತಿರುವ ಸಮಯದಲ್ಲಿ ಹೆಚ್ಚು ಏಕಾಗ್ರತೆಯ ದೃಶ್ಯವೊಂದು ಕಂಡುಬಂದಿದೆ ಮತ್ತು ಅಕಸ್ಮತ್ತಾಗಿ ನಿಮ್ಮ ಫೋನ್ ರಿಂಗಾಗಿದೆ ಈ ಸಮಯದಲ್ಲಿ ನಿಮ್ಮೊಂದಿಗೆ ನೀವು ಇತರರ ಸಿನಿಮಾ ನೋಡುವಿಕೆಗೂ ಭಂಗವನ್ನುಂಟು ಮಾಡುತ್ತಿದ್ದೀರಿ ಎಂದಾಗಿದೆ. ಅಂತೆಯೇ ಚಿತ್ರ ಮಂದಿರಗಳಲ್ಲಿ ನೀವು ಫೋನ್ ಸಂಭಾಷಣೆಯಲ್ಲಿ ತೊಡಗಿದರೆ ಅದು ಇತರ ಪ್ರೇಕ್ಷಕರಿಗೂ ಅಡ್ಡಿಯನ್ನುಂಟು ಮಾಡುವುದು ಖಂಡಿತ.

ಬಸ್ಸಿಗೆ ಕಾಯುತ್ತಿರುವ ಸಂದರ್ಭದಲ್ಲಿ

ಬಸ್ಸಿಗೆ ಕಾಯುತ್ತಿರುವ ಸಂದರ್ಭದಲ್ಲಿ

ನೀವು ಬಸ್ಸಿಗೆ ಕಾಯುತ್ತಿರುವ ಸಂದರ್ಭದಲ್ಲಿ ಫೋನ್ ಸಂಭಾಷಣೆಯಲ್ಲಿ ತೊಡಗಿದಿರಿ ಎಂದರೆ ನೀವು ಬಸ್ ಮಿಸ್ ಮಾಡಿಕೊಳ್ಳುವುದು ಖಂಡಿತ. ಇಲ್ಲಾ ಇನ್ನರ್ಧ ಗಂಟೆ ಬಸ್‌ಗಾಗಿ ಕಾಯುವ ಸಂದರ್ಭ ನಿಮಗೆ ಒದಗಿ ಬಂದೀತು. ಫೋನ್ ಬದಿಗಿಟ್ಟು ಬಸ್‌ಗೆ ಹತ್ತಿಕೊಳ್ಳಿ.

ವಿಮಾನ ಪ್ರಯಾಣ ಮಾಡುತ್ತಿರುವಾಗ

ವಿಮಾನ ಪ್ರಯಾಣ ಮಾಡುತ್ತಿರುವಾಗ

ನೀವು ವಿಮಾನ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಗಗನ ಸಖಿಯರು ತಿಳಿಸುವ ಸೂಚನೆಗಳನ್ನು ಪಾಲಿಸಬೇಕು. ವಿಮಾನ ಚಾಲನೆ ಸಮಯದಲ್ಲಿ ಫೋನ್ ಅನ್ನು ಫ್ಲೈಟ್ ಮೋಡ್ ಇಲ್ಲವೇ ಸ್ವಿಚ್ ಆಫ್ ಮಾಡಿ ಇಲ್ಲದಿದ್ದರೆ ರೇಡಿಯೇಶನ್ ವಿಮಾನದ ಇಲೆಕ್ಟ್ರಾನಿಕ್ ಅಂಶಗಳ ಮೇಲೆ ಪರಿಣಾಮ ಬೀರಿ ನಿಮ್ಮ ದುರ್ವರ್ತನೆಗೆ ನೀವು ಶಿಕ್ಷೆಗೆ ಒಳಗಾಗಬೇಕಾದೀತು.

ರಸ್ತೆ ದಾಟುವಾಗ

ರಸ್ತೆ ದಾಟುವಾಗ

ರಸ್ತೆ ದಾಟುವಾಗ ಸಂಗೀತ ಆಲಿಸುವುದೂ ಕೂಡ ಅಪಾಯವನ್ನುಂಟು ಮಾಡಬಹುದು. ನೀವು ಫೋನ್ ಇಲ್ಲವೇ ಸಂಗೀತ ಆಲಿಸದೇ ರಸ್ತೆ ದಾಟಿದರೆ ಯಾವುದೇ ಅಪಾಯವಿಲ್ಲದೆ ನೀವು ಮುಂದುವರಿಯಬಹುದು. ವಾಹನಗಳು ಯಾವ ದಿಕ್ಕಿನಿಂದ ಬರುತ್ತದೆ ಎಂಬುದನ್ನು ನೋಡಬಹುದು. ಇಲ್ಲದಿದ್ದರೆ ಅಪಘಾತಕ್ಕೆ ನೀವು ಒಳಗಾಗುವುದು ಖಂಡಿತ.

Best Mobiles in India

English summary
Since you are an intelligent breed, you would definitely not entertain to operate handsets while bathing. Stop operating while staying at the bus stop. There is some more awareness which has to be dealt while using the handsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X