ಹಣ್ಣಿನಿಂದ ಫೋನ್ ಚಾರ್ಜರ್ ಟ್ರೈ ಮಾಡಿದ್ದೀರಾ?

Written By:

ಇಂದಿನ ಆಧುನಿಕ ತಂತ್ರಜ್ಞಾನ ಹೇಗೆ ಬೆಳೆದಿದೆ ಎಂದರೆ ಹೊಸ ಹೊಸ ಮಾರ್ಪಾಡುಗಳನ್ನು ಪರ್ಯಾಯ ವಿಧಾನಗಳನ್ನು ಕಂಡುಹಿಡಿಯುವಷ್ಟರ ಮಟ್ಟಿಗೆ ಪ್ರಗತಿಯನ್ನು ಕಾಣುತ್ತಿದೆ. ಚಂದ್ರನತ್ತ ಪ್ರಯಾಣ ಬೆಳೆಸುವ ನಾವು ಅಸಾಧ್ಯವಾಗಿರುವುದನ್ನು ಸಾಧ್ಯಗೊಳಿಸುವ ಕ್ರಿಯಾತ್ಮಕತೆ ಉಳ್ಳವರು. ಅಂದರೆ ನಾವು ಸವಾಲುಗಳನ್ನು ಸ್ವೀಕರಿಸಿ ಅದನ್ನು ಸಾಧಿಸಿ ತೋರಿಸಬಲ್ಲವರು.

ಇಂದಿನ ಸಾಧನೆ ಏನಾಗಿದೆ ಎಂದರೆ ಹಣ್ಣುಗಳಿಂದ ಫೋನ್ ಬ್ಯಾಟರಿ ಚಾರ್ಜ್ ಮಾಡುವುದಾಗಿದೆ. ಹೌದು ಲಿಂಬೆ, ಆಪಲ್‌ಗಳನ್ನು ಬಳಸಿಕೊಂಡು ಫೋನ್ ಚಾರ್ಜರ್‌ ಅನ್ನು ಸಿದ್ಧಪಡಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಜನ್‌ನಷ್ಟು ಆಸಿಡಿಕ್ ಹಣ್ಣು

ಡಜನ್‌ನಷ್ಟು ಆಸಿಡಿಕ್ ಹಣ್ಣು

#1

ಡಜನ್‌ನಷ್ಟು ಆಸಿಡಿಕ್ ಹಣ್ಣುಗಳನ್ನು ಸಿದ್ಧಪಡಿಸಿ, ಅಂದರೆ ಸಿಟ್ರಸ್, ಆಪಲ್ ಇತ್ಯಾದಿ

ತಾಮ್ರದ ಸ್ಕ್ರೂ

ತಾಮ್ರದ ಸ್ಕ್ರೂ

#2

ತಾಮ್ರದ ಸ್ಕ್ರೂವನ್ನು ಪ್ರತೀ ಹಣ್ಣಿಗೆ ಸಿಕ್ಕಿಸಿ.

ಜಿಂಕ್ ನೇಲ್

ಜಿಂಕ್ ನೇಲ್

#3

ಪ್ರತಿಯೊಂದು ಹಣ್ಣಿಗೂ ಜಿಂಕ್ ನೇಲ್ ಅನ್ನು ಅಳವಡಿಸಿ

ಅಂತರ

ಅಂತರ

#4

ಈ ಎರಡೂ ಮೊಳೆಗಳ ನಡುವೆ ಅಂತರವಿರುವಂತೆ ನೋಡಿಕೊಳ್ಳಿ.

ಸಮೀಪ

ಸಮೀಪ

#5

ಜಿಂಕ್ ನೇಲ್ ಸಮೀಪದಲ್ಲೇ ತಾಮ್ರದ ಚೂರನ್ನು ಅಳವಡಿಸಿ. ಇವೆರಡೂ ಸ್ಪರ್ಶಗೊಳ್ಳದಂತೆ ನೋಡಿಕೊಳ್ಳಿ.

ಇದೇ ಕ್ರಿಯೆ

ಇದೇ ಕ್ರಿಯೆ

#6

ಎಲ್ಲಾ ಹಣ್ಣುಗಳಿಗೂ ಇದೇ ಕ್ರಿಯೆಯನ್ನು ಅಳವಡಿಸಿ

ತಾಮ್ರದ ವಯರ್ ಸಂಪರ್ಕಪಡಿಸಿ

ತಾಮ್ರದ ವಯರ್ ಸಂಪರ್ಕಪಡಿಸಿ

#7

ವೃತ್ತಾಕಾರವಾಗಿ ಪ್ರತೀ ಹಣ್ಣನ್ನು ಸಂಪರ್ಕಪಡಿಸಲು ತಾಮ್ರದ ವಯರ್ ಅನ್ನು ಬಳಸಿ. ತಾಮ್ರದ ತುಂಡಿನಿಂದ ಇನ್ನೊಂದು ಹಣ್ಣಿನಲ್ಲಿ ಅಳವಡಿಸಿರುವ ಜಿಂಕ್‌ಗೆ ವಯರ್ ಅನ್ನು ಸಂಪರ್ಕಪಡಿಸಿ

ಯುಎಸ್‌ಬಿ ಚಾರ್ಜಿಂಗ್ ಕೇಬಲ್ ತೆರೆಯಿರಿ

ಯುಎಸ್‌ಬಿ ಚಾರ್ಜಿಂಗ್ ಕೇಬಲ್ ತೆರೆಯಿರಿ

#8

ಚಾರ್ಜಿಂಗ್ ಕೇಬಲ್‌ನ ದೊಡ್ಡ ಭಾಗವನ್ನು ತುಂಡು ಮಾಡಿ ವಯರ್ ಕಾಣಿಸುವಂತಿರಲಿ. ಹಣ್ಣಿನ ಚೈನ್‌ಗೆ ಪವರ್ ವಯರ್‌ಗಳನ್ನು ಸಂಪರ್ಕಪಡಿಸಿ

ಚಾರ್ಜರ್ ಸಿದ್ಧ

ಚಾರ್ಜರ್ ಸಿದ್ಧ

#9

ಪ್ರತೀ ಹಣ್ಣು ಅರ್ಧ ವೋಲ್ಟ್‌ನಷ್ಟು ವಿದ್ಯುತ್ ಅನ್ನು ನೀಡುತ್ತವೆ. ಅಂದರೆ ಹೆಚ್ಚು ಸಮಯಗಳವರೆಗೆ ಈ ಹಣ್ಣಿನ ಚಾರ್ಜ್ ಅನ್ನು ನಿಮಗೆ ಬಳಸಲಾಗುವುದಿಲ್ಲ. ಆದರೂ ಆಪತ್‌ಕಾಲದಲ್ಲಿ ಹಣ್ಣುಗಳ ಚಾರ್ಜರ್‌ನಿಂದ ಸ್ವಲ್ಪವಾದರೂ ಫೋನ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you tremendous tips on how to build a fruit charger in a easy way. These methods helps when emergency we need a charger.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot