Subscribe to Gizbot

ಯಾಹೂ ಅಕೌಂಟ್ ಭದ್ರತೆಗೆ ಎರಡು ಹಂತದ ಸುರಕ್ಷತೆ ಪಡೆಯುವುದು ಹೇಗೆ !!

Written By:

ಯಾಹೂ ಇನ್ಮುಂದೆ ಎರಡು ಹಂತದ ಸುರಕ್ಷತಾ ವಿಧಾನದಲ್ಲಿ ಕಾರ್ಯನಿರ್ವಹಣೆ ನೀಡಲಿದೆ.! ಇತ್ತೀಚಿಗೆ ಯಾಹುವಿನ ಕೋಟ್ಯಾಂತರ ಅಕೌಂಟ್‌ಗಳು ಹ್ಯಾಕ್ ಆದ ಬಗ್ಗೆ ಮಾಹಿತಿ ಬಿಡುಗಡೆಯಾಗಿದ್ದು, ಈ ಸುದ್ದಿಯ ಬೆನ್ನಲ್ಲೇ ಯಾಹೂ ಎರಡು ಹಂತದ ಸುರಕ್ಷತಾ ವಿಧಾನ ಅಳವಡಿಸಿಕೊಂಡಿದೆ.!!

ಅಕೌಂಟ್ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ದೃಷ್ಟಿಯಿಂದ ಪಾಸ್‌ವರ್ಡ್‌ ನೆನಪಿನಲ್ಲಿ ಇಟ್ಟುಕೊಳ್ಳುವಂಥಹ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಹಾಗಾಗಿ, ನಿಮ್ಮ ಡಿವೈಸ್‌ ಅನ್ನೇ ಎರಡನೇ ಹಂತದ ಲಾಗ್‌ ಇನ್‌ ವ್ಯವಸ್ಥೆಗೆ ಯಾಹೂ ಬಳಸಿಕೊಳ್ಳುತ್ತದೆ ಎಂದು ತಿಳಿಸಿದೆ.! ಹಾಗಾದರೆ, ಏನಿದು ಎರಡು ಹಂತದ ಸುರಕ್ಷತಾ ವಿಧಾನ? ಯಾಹೂ ಅಲೌಂಟ್‌ಗೆ ಸೆಟ್ಟಿಂಗ್ಸ್ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಹಂತದ ಸುರಕ್ಷತಾ ವಿಧಾನ!!

ಎರಡು ಹಂತದ ಸುರಕ್ಷತಾ ವಿಧಾನ!!

ಸುರಕ್ಷತಾ ದೃಷ್ಟಿಯಿಂದ ಒಟಿಪಿ ಅಥವಾ ಮತ್ತೊಂದು ಅಕೌಂಟ್ ಲಿಂಕ್ ಪಡೆದು ಆನ್‌ಲೈನ್ ಅಕೌಂಟ್‌ಗಳಿಗೆ ಲಾಗಿನ್ ಆಗುವುದನ್ನು ಎರಡು ಹಂತದ ಸುರಕ್ಷತಾ ವಿಧಾನ ಎಂದು ಕರೆಯಲಾಗಿದೆ. ಈ ರೀತಿ ಲಾಗಿನ್ ಆಗುವುದರಿಂದ ಆನ್‌ಲೈನ್ ಭದ್ರತಾ ಸುರಕ್ಷತೆ ಮತ್ತಷ್ಟು ಹೆಚ್ಚಲಿದೆ.!!

ಆಪ್ ಇದ್ದರೂ ಅಪ್ರೂವಲ್ ಬೇಕು!!

ಆಪ್ ಇದ್ದರೂ ಅಪ್ರೂವಲ್ ಬೇಕು!!

ಯಾಹೂ ಅಕೌಂಟ್ ಲಾಗ್‌ಇನ್‌ಗೆ ಎರಡನೇ ಹಂತದ ಸುರಕ್ಷತೆಯ ಕೀಲಿ ಇದಾಗಿದೆ.! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾಹೂ ಆಪ್ ಇದ್ದರೂ ಕೂಡ ವೆಬ್‌ ಬ್ರೌಸರ್‌ನಲ್ಲಿ ಯಾಹೂ ಅಕೌಂಟ್‌ಗೆ ಲಾಗ್‌ ಇನ್‌ ಆದರೆ ಮಾತ್ರ ಆಪ್‌ ಮೂಲಕ ನಿಮಗೆ ಲಾಗ್‌ ಇನ್‌ ಅಪ್ರೂವಲ್‌ ಸಂದೇಶ ಬರುತ್ತದೆ ಎಂದು ತಿಳಿಸಿದೆ.!!

ಯಾಹುವಿನಲ್ಲಿ ಎರಡು ಹಂತದ ಲಾಗಿನ್ ಹೇಗೆ?

ಯಾಹುವಿನಲ್ಲಿ ಎರಡು ಹಂತದ ಲಾಗಿನ್ ಹೇಗೆ?

ಯಾಹು ಸೆಟ್ಟಿಂಗ್ಸ್ ತೆರೆದು Always use Yahoo Account Key ಆಯ್ಕೆ ಮಾಡಿಕೊಳ್ಳಿ. ನಂತರ ಯಾಹೂ ಅಕೌಂಟ್ ಕ್ರಿಯೇಟ್ ಮಾಡುವ ವೇಳೆ ನೀಡಿರುವ ಮೊಬೈಲ್‌ ಸಂಖ್ಯೆಯನ್ನು ಖಚಿತಪಡಿಸಿ. ನಂತರ ಯಾಹುವಿನಲ್ಲಿ ಎರಡು ಹಂತದ ಲಾಗಿನ್ ನಿಮಗೆ ಲಭ್ಯವಿರಲಿದೆ.!!

ಇನ್‌ ಅಲರ್ಟ್ ಬರುತ್ತದೆ.!!

ಇನ್‌ ಅಲರ್ಟ್ ಬರುತ್ತದೆ.!!

ಈಗ ನೀವುಬ್ರೌಸರ್‌ನಲ್ಲಿ ಲಾಗ್ಇನ್ ಆಗಬೇಕಾದ ಸಂದರ್ಭದಲ್ಲೆಲ್ಲಾ ನಿಮ್ಮ ಡಿವೈಸ್‌ನಲ್ಲಿರುವ ಆಪ್‌ ಮೂಲಕ ನಿಮಗೆ ಲಾಗ್‌ ಇನ್‌ ಅಲರ್ಟ್ ಬರುತ್ತದೆ. ನೀವು ಅಪ್ರೂವ್ ಕ್ಲಿಕ್‌ ಮಾಡಿದರೆ ಮಾತ್ರ ನಿಮ್ಮ ಅಕೌಂಟ್‌ಗೆ ಲಾಗ್ಇನ್ ಆಗಲು ಸಾಧ್ಯ.!!

ಹ್ಯಾಕ್ ಆಗುವುದು ಕಷ್ಟ!!

ಹ್ಯಾಕ್ ಆಗುವುದು ಕಷ್ಟ!!

ಒಂದು ವೇಳೆ ನಿಮ್ಮ ಯಾಹು ಅಕೌಂಟ್‌ಗೆ ಬೇರೆ ಯಾರಾದರೂ ನಿಮ್ಮ ಅಕೌಂಟ್‌ನ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಕದ್ದು ಲಾಗ್‌ಇನ್‌ ಆಗಲು ಪ್ರಯತ್ನಿಸಿದರೆ ತಕ್ಷಣ ನಿಮಗೆ ಲಾಗ್‌ ಇನ್‌ ಅಲರ್ಟ್ ಬರುತ್ತದೆ. ನೀವು ಅಪ್ರೂವ್ ಕೊಡದೆ ನಿಮ್ಮ ಪಾಸ್‌ವರ್ಡ್‌ ಬದಲಿಸಿ ನಿಮ್ಮ ಅಕೌಂಟ್ ಸೇಫ್ ಮಾಡಿಕೊಳ್ಳಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Two-step verification is another layer of security that uses your password plus a code to verify your identity in yahoo.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot