ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕೋಡುಗಳು

|

ವೈಯಕ್ತಿಕ ಇಷ್ಟಾನಿಷ್ಟಕ್ಕೆ ತಕ್ಕಂತೆ ಬದಲಿಸಿಕೊಳ್ಳುವ ಸೌಕರ್ಯ ಆ್ಯಂಡ್ರಾಯ್ಡ್ ನಲ್ಲಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರಿನ ದೊಡ್ಡ ಮಟ್ಟದ ಮಾಹಿತಿಗಳನ್ನು ಸಾಮಾನ್ಯ ಬಳಕೆದಾರ ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ.

ಆದರೆ, ನಿಮಗೆ ಆ್ಯಂಡ್ರಾಯ್ಡಿನ ರಹಸ್ಯ ಕೋಡುಗಳ ಬಗ್ಗೆ ಅರಿವಿದ್ದಲ್ಲಿ, ಅವಿತುಕೊಂಡಿರುವ ಅನೇಕ ಮಾಹಿತಿಯನ್ನು ನೀವು ಹುಡುಕಬಹುದು ಮತ್ತು ನಿಮ್ಮ ಮೊಬೈಲನ್ನು ನಿಮ್ಮಿಷ್ಟಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.

ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕ

ಈ ರಹಸ್ಯ ಕೋಡುಗಳನ್ನು ಸರಿಯಾದ ರೀತಿಯಲ್ಲಿ ಮೊಬೈಲಿನ ಡಯಲರ್ ನಲ್ಲಿ ಟೈಪಿಸಿದರೆ ಸಾಕು. ಇವತ್ತು ನಾವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನ ಕೆಲವು ರಹಸ್ಯ ಕೋಡುಗಳನ್ನು ಪಟ್ಟಿ ಮಾಡಿದ್ದೇವೆ. ಈ ಕೋಡುಗಳು ನಿಮಗೆ ನಿಮ್ಮ ಸ್ಮಾರ್ಟ್ ಫೋನಿನ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತದೆ.

ಈ ಕೋಡುಗಳು ವಾಹಕಗಳ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ನೆನಪಿಡಿ, ಎಲ್ಲಾ ಮೊಬೈಲಿನಲ್ಲೂ ಈ ಕೋಡುಗಳು ಕೆಲಸ ಮಾಡದೇ ಹೋಗಬಹುದು. ನಿಮ್ಮ ಮೊಬೈಲ್ ಒಂದು ಕೋಡಿಗೆ ಪ್ರತಿಕ್ರಿಯಿಸದೇ ಇದ್ದಲ್ಲಿ, ಬದಲಿಸಲು ಪ್ರಯತ್ನಿಸಬೇಡಿ, ಮತ್ತೊಂದು ಕೋಡನ್ನು ಉಪಯೋಗಿಸಿ.

ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕ

ಸಾರ್ವತ್ರಿಕ ಆ್ಯಂಡ್ರಾಯ್ಡ್ ರಹಸ್ಯ ಕೋಡುಗಳು

ಈ ಕೆಳಗೆ ಪಟ್ಟಿ ಮಾಡಲಾಗಿರುವ ಕೋಡುಗಳು ಹೆಚ್ಚು ಕಮ್ಮಿ ಎಲ್ಲಾ ಆ್ಯಂಡ್ರಾಯ್ಡ್ ಫೋನುಗಳಲ್ಲೂ ಕಾರ್ಯನಿರ್ವಹಿಸುತ್ತವೆ.
*#06# - ಐ.ಎಮ್.ಇ.ಐ

*#*#7594#*#* - ಪರದೆಯನ್ನು ತೋರಿಸದೆಯೇ ನಿಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡುತ್ತದೆ

*#*#4636#*#* - ಫೋನ್, ಬ್ಯಾಟರಿ ಮತ್ತು ವೈಫೈ ಬಗೆಗಿನ ಮಾಹಿತಿಯನ್ನು ತೋರಿಸುತ್ತದೆ

*#*#7780#*#* - ಫ್ಯಾಕ್ಟರಿ ರಿಸೆಟ್ (ಎಲ್ಲಾ ಆ್ಯಪ್ ಗಳನ್ನು ಮತ್ತು ಆ್ಯಪ್ ಗಳಿಂದ ಸಂಗ್ರಹವಾಗಿದ್ದ ಮಾಹಿತಿಯನ್ನು ಅಳಿಸಿಹಾಕುತ್ತದೆ, ಫರ್ಮ್ ವೇರನ್ನು ಹೊರತುಪಡಿಸಿ)

*2767*3855# - ಫೋನಿನ ಸಂಪೂರ್ಣ ಮಾಹಿತಿಯನ್ನು ಅಳಿಸಿಹಾಕುತ್ತದೆ, ಫರ್ಮ್ ವೇರನ್ನೂ ಸೇರಿಸಿ (ಹುಷಾರಾಗಿ ಉಪಯೋಗಿಸಿ!)

*#*#273283*255*663282*#*#* - ನಿಮ್ಮ ಎಲ್ಲಾ ಫೋಟೋ ಮತ್ತು ವೀಡಿಯೋಗಳನ್ನು ಬ್ಯಾಕ್ ಅಪ್ ಮಾಡಿ

*#*#1472365#*#*- ಜಿಪಿಎಸ್ ಪರೀಕ್ಷಿಸಲು

ಓದಿರಿ: ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುವುದು ಏಕೆ? ಅದನ್ನು ಸರಿಪಡಿಸುವುದೇಗೆ?

*#*#1234#*#* - ಫೋನಿನ ಫರ್ಮ್ ವೇರ್ ಮತ್ತು ಪಿಡಿಎ ಮಾಹಿತಿಯನ್ನು ತೋರಿಸುತ್ತದೆ

*#*#232338#*#* - ವೈಫೈ ಮ್ಯಾಕ್ ವಿಳಾಸವನ್ನು ತೋರಿಸುತ್ತದೆ

*#*#8255#*#* - ಜಿಟಾಕ್ ಸೇವೆಯ ಪರದೆಯನ್ನು ಪ್ರವೇಶಿಸಲು

*#*#36245#*#* - ಈಮೇಲಿನ ಡಿಬಗ್ ಮಾಹಿತಿಯನ್ನು ಪಡೆದುಕೊಳ್ಳಲು

*#*#225#*#* - ಕ್ಯಾಲೆಂಡರ್

*#*#426#*#* - ಗೂಗಲ್ ಪ್ಲೇ ಸೇವೆಯ ಡಿಬಗ್ ಮಾಹಿತಿ

*#*#759#*#* - ಗೂಗಲ್ ಪಾರ್ಟ್ ನರ್ ವ್ಯವಸ್ಥೆಯನ್ನು ಪ್ರವೇಶಿಸಲು

ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕ

ಸ್ಯಾಮ್ಸಂಗಿನ ರಹಸ್ಯ ಕೋಡುಗಳು

*#*#34971539#*#* - ಕ್ಯಾಮೆರಾದ ಎಲ್ಲಾ ಮಾಹಿತಿಯನ್ನು ತೋರಿಸುತ್ತದೆ

*#*#197328640#*#* - ಸೇವೆಗಳಿಗಾಗಿ ಟೆಸ್ಟ್ ಮೋಡನ್ನು ಚಾಲ್ತಿ ಮಾಡಲು

*#*#232339#*#* - ನಿಸ್ತಂತು ಲ್ಯಾನ್ ಪರೀಕ್ಷಿಸಲು

*#*#1575#*#* - ಜಿಪಿಎಸ್ ಪರೀಕ್ಷಿಸಲು (ಸಾರ್ವತ್ರಿಕ ಕೋಡಿನ ಬದಲಿಗೆ ಇದನ್ನು ಉಪಯೋಗಿಸಬಹುದು)

*#*#0*#*#* - ನಿಮ್ಮ ಎಲ್.ಸಿ.ಡಿ ಪರದೆಯನ್ನು ಪರೀಕ್ಷಿಸಲು

*#*#4986*2650468#*#* - ಫೋನಿನ ಪ್ರಮುಖ ನಿರ್ಧಾರಕ ಮಾಹಿತಿಗಳನ್ನು ತೋರಿಸುತ್ತದೆ (ಪಿ.ಡಿ.ಎ, ಹಾರ್ಡ್ ವೇರ್, ಫರ್ಮ್ ವೇರ್ ಇತ್ಯಾದಿ.)

##778 ಮತ್ತು ಕಾಲ್ ಬಟನ್ನನ್ನು ಒತ್ತಿದಾಗ – ಇ.ಪಿ.ಎಸ್.ಟಿ ಮೆನು

ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕ

ಹೆಚ್.ಟಿ.ಸಿಯ ರಹಸ್ಯ ಕೋಡುಗಳು

*#*#3424#*#* - ಹೆಚ್.ಟಿ.ಸಿಯ ಕಾರ್ಯಕ್ಷಮೆಯನ್ನು ಪರೀಕ್ಷಿಸುವ ತಂತ್ರಾಂಶ

*#*# - ಹೆಚ್.ಟಿ.ಸಿಯ ಮಾಹಿತಿ ಪಟ್ಟಿ

*#*#8255#*#* - ಜಿಟಾಕ್ ಸೇವೆಯ ಪರದೆಯನ್ನು ಪ್ರವೇಶಿಸಲು

##3424# - ಡಯಾಗ್ನೋಸ್ಟಿಕ್ ಮೋಡ್

##3282# - ಇ.ಪಿ.ಎಸ್.ಟಿ ಮೆನು

##8626337# - ವೋಕೋಡರ್

##33284# - ಫೀಲ್ಡ್ ಟ್ರಯಲ್ ಮೆನು

##786# - ರಿವರ್ಸ್ ಲಾಜಿಸ್ಟಿಕ್ಸ್ ಸೇವೆ

##7738# - ಪ್ರೊಟೋಕಾಲ್ ಪರಿಷ್ಕರಣೆ

ಮೂಲ: ಆ್ಯಂಡ್ರಾಯ್ಡ್ ಪಿಟ್

Best Mobiles in India

English summary
Android platform is known for its customization. The Android smartphone holds a large amount of information about its hardware and system, that a common us

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X