Subscribe to Gizbot

ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುವುದು ಏಕೆ? ಅದನ್ನು ಸರಿಪಡಿಸುವುದೇಗೆ?

Written By: Super Admin

ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಗಳು ಕಾರ್ಯನಿರ್ವಹಿಸುವಾಗ ಉತ್ಪತ್ತಿಯಾಗುವ ಶಾಖವನ್ನು ಕಡಿಮೆ ಮಾಡಲು ಫ್ಯಾನುಗಳಿವೆ ಎನ್ನುವುದು ಗೊತ್ತೇ ಇದೆ.

ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುವುದು ಏಕೆ? ಅದನ್ನು ಸರಿಪಡಿಸುವುದೇಗೆ?

900 ದಶಲಕ್ಷ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿಯಾಗಿವೆ; ವರದಿ

ಐಫೋನ್ ಅಥವಾ ಐಪ್ಯಾಡಿನಲ್ಲಿ ಫ್ಯಾನುಗಳಿಲ್ಲ. ಆದರೆ ಹೆಚ್ಚು ಉಪಯೋಗಿಸಿದಾಗ ಐಫೋನ್ ಕೂಡ ಬಿಸಿಯಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುವುದೇಕೆ?

ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುವುದೇಕೆ?

ಸತತವಾಗಿ ಉಪಯೋಗಿಸಿದಾಗ ನಿಮ್ಮ ಐಫೋನ್ ಅಥವಾ ಐಪ್ಯಾಡ್ ಬಿಸಿಯಾದರೆ ಗಾಬರಿ ಬೀಳಬೇಡಿ. ಹೆಚ್ಚು ಉಪಯೋಗಿಸಿದಾಗ ಬಿಸಿಯಾಗುವುದು ಸಹಜ. 3ಡಿ ಆಟಗಳನ್ನು ಆಡುವಾಗ, ಪ್ರೊಸೆಸರ್ರಿನ ಮೇಲೆ ಒತ್ತಡ ಹಾಕುವ ವೀಡಿಯೋ ಎಡಿಟರ್ ಉಪಯೋಗಿಸುವಾಗ, ಪೂರ್ತಿ ಹೆಚ್.ಡಿ ವೀಡಿಯೋಗಳನ್ನು ಹೆಚ್ಚಿನ ಸಮಯ ನೋಡಿದಾಗ, ಜಿಪಿಎಸ್ ಉಪಯೋಗಿಸುವಾಗ ನಿಮ್ಮ ಐಫೋನ್ ಅಥವಾ ಐಪ್ಯಾಡ್ ಬಿಸಿಯಾಗುತ್ತದೆ. ನಿಮ್ಮ ಸಾಧನದ ಬ್ಯಾಟರಿ ಮತ್ತು ಹಾರ್ಡ್ ವೇರ್ ಶಾಖವನ್ನು ಉತ್ಪಾದಿಸುತ್ತದೆ, ಮತ್ತದನ್ನು ತಣ್ಣಗಾಗಿಸಲು ಯಾವುದೇ ಫ್ಯಾನಿಲ್ಲ. ಆದರೆ ಮೆಟಲ್ ಫ್ರೇಮ್ ಶಾಖವನ್ನು ಹೀರಿಕೊಂಡುಬಿಡುತ್ತದೆ.

ಬಿಸಿಯಾಗುವುದು ಸಾಮಾನ್ಯ

ಬಿಸಿಯಾಗುವುದು ಸಾಮಾನ್ಯ

ನಿಮ್ಮ ಐ.ಒ.ಎಸ್ ಸಾಧನ ಬೆಚ್ಚಗಾಗಿದ್ದರೆ ಅದು ಸಾಮಾನ್ಯ ಸಂಗತಿ ಎನ್ನುವುದನ್ನು ಮರೆಯದಿರಿ. ಸಾಧನದ ಒಳಗಿನಿಂದ ಶಾಖ ಉತ್ಪತ್ತಿಯಾಗುತ್ತದೆ. ಆ್ಯಪಲ್ ಸಾಧನಗಳು ಎ.ಆರ್.ಎಮ್ ಚಿಪ್ಪುಗಳನ್ನು ಉಪಯೋಗಿಸುತ್ತವೆ; ಎ.ಆರ್.ಎಮ್ ಚಿಪ್ಪುಗಳು ಶಾಖವನ್ನು ಉತ್ಪಾದಿಸುತ್ತದೆ ಮತ್ತು ದೀರ್ಘ ಸಮಯದ ಕಾಲ ಸಾಧನವನ್ನು ಉಪಯೋಗಿಸಿದರೆ ಗಮನಾರ್ಹ ಮಟ್ಟದಲ್ಲಿ ಸಾಧನ ಬಿಸಿಯಾಗುತ್ತದೆ.

ಮೊಬೈಲ್ ಕೇಸುಗಳಿಂದ ಹೆಚ್ಚು ಪ್ರಯೋಜನವಿಲ್ಲ

ಮೊಬೈಲ್ ಕೇಸುಗಳಿಂದ ಹೆಚ್ಚು ಪ್ರಯೋಜನವಿಲ್ಲ

ನಿಮ್ಮ ಐಫೋನ್ ಅಥವಾ ಐಪ್ಯಾಡಿಗೆ ನೀವು ಕೇಸು ಹಾಕಿದ್ದರೂ ಹೆಚ್ಚು ಪ್ರಯೋಜನವಿಲ್ಲ. ಬೇಸಿಗೆಯ ಬಿಸಿಲಲ್ಲಿ ಅಥವಾ ಚಾರ್ಜು ಮಾಡುವಾಗ ನಿಮ್ಮ ಸಾಧನ ವಿಪರೀತ ಬಿಸಿಯಾಗುತ್ತಿದ್ದರೆ ಮೊಬೈಲ್ ಕೇಸನ್ನು ತೆಗೆದು ಚಾರ್ಜ್ ಮಾಡಿ. ಇದು ಮೊಬೈಲಿನ ಮೆಟಲ್ ಫ್ರೇಮ್ ಉತ್ತಮ ಕಾರ್ಯಕ್ಷಮತೆಯಿಂದ ಶಾಖವನ್ನು ಸುತ್ತಲಿನ ವಾತಾವರಣಕ್ಕೆ ಪ್ರಸರಿಸಿ ಮೊಬೈಲನ್ನು ತಣ್ಣಗಾಗಿಸಲು ಸಹಾಯ ಮಾಡುತ್ತದೆ.

ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಐ.ಒ.ಎಸ್ ಸಾಧನಗಳನ್ನು 0 ಡಿಗ್ರಿಯಿಂದ 35 ಡಿಗ್ರಿ ಸೆಲ್ಷಿಯಸ್ ಒಳಗೆ ಉಪಯೋಗಿಸುವಂತೆ ರೂಪಿಸಲಾಗಿದೆ. ಹೆಚ್ಚು ಅಥವಾ ಕಮ್ಮಿ ತಾಪಮಾನವು ಸಾಧನಕ್ಕೆ ತೊಂದರೆಯುಂಟು ಮಾಡಬಹುದು. ನಿಮ್ಮ ಸಾಧನವು ತುಂಬಾ ಬಿಸಿಯಾಗಿಬಿಟ್ಟರೆ, ಪರದೆಯ ಮೇಲೆ ಒಂದು ಎಚ್ಚರಿಕೆಯ ಸಂದೇಶ ನಿಮಗೆ ಮಾಹಿತಿ ಕೊಡಬಹುದು. ಜೊತೆಗೆ, ಫೋನಿನ ಮುಖ್ಯ ಕಾರ್ಯಗಳು ಸ್ತಬ್ಧವಾಗಿಬಿಡಬಹುದು. ಈ ಸಾಧನಗಳಲ್ಲಿರುವ ಲೀಥಿಯಂ ಬ್ಯಾಟರಿಗಳು ಉಳಿದ ಬ್ಯಾಟರಿಗಳಿಗಿಂತ ಸುರಕ್ಷಿತವಾದರೂ ಸಾಧನ ಹೆಚ್ಚೆಚ್ಚು ಬಿಸಿಯಾದರೆ ಬ್ಯಾಟರಿಗೆ ಹಾನಿಯಾಗಬಹುದು. ನಿಮ್ಮ ಫೋನ್ ತುಂಬಾ ಬಿಸಿಯಾಗಿಬಿಟ್ಟರೆ, ಫೋನನ್ನು ಸ್ವಿಚ್ ಆಫ್ ಮಾಡಿ, ಅದನ್ನು ಚಾರ್ಜ್ ಮಾಡಬೇಡಿ, ಮೊಬೈಲ್ ಕೇಸನ್ನು ತೆಗೆಯಿರಿ, ನೆರಳಿನಲ್ಲಿಟ್ಟು ಶಾಖವು ಕಡಿಮೆಯಾಗುವವರೆಗೆ ಕಾಯಿರಿ.

ಯಾವಾಗಲೂ ಬಿಸಿಯಾಗೇ ಇರುತ್ತದಾ?

ಯಾವಾಗಲೂ ಬಿಸಿಯಾಗೇ ಇರುತ್ತದಾ?

ಫೋನು ಬಿಸಿಯಾಗುವುದು ಸಾಮಾನ್ಯ, ಆದರೆ ನಿಮ್ಮ ಫೋನು ಯಾವಾಗಲೂ ಬಿಸಿಯಾಗಿಯೇ ಇದ್ದರೆ ಐ.ಎ.ಎಸ್ಸಿನಲ್ಲಿ ಅಥವಾ ಹಾರ್ಡ್ ವೇರಿನಲ್ಲಿ ಸಮಸ್ಯೆ ಇದೆಯೆಂದು ಅರ್ಥ. ಹೆಚ್ಚಿನಂಶ ಸಾಫ್ಟ್ ವೇರಿನಲ್ಲಿ ತೊಂದರೆಯಿದ್ದಾಗ ಫೋನು ಬಿಸಿಯಾಗುತ್ತದೆ. ಹೆಚ್ಚು ಉಪಯೋಗಿಸದೇ ಇದ್ದಾಗಲೂ ಫೋನು ಇದ್ದಕ್ಕಿದ್ದಂತೆ ಬಿಸಿಯಾಗುತ್ತಿದ್ದರೆ ನೀವು ಇತ್ತೀಚೆಗೆ ಇನ್ಸ್ಟಾಲ್ ಮಾಡಿಕೊಂಡ ಆ್ಯಪಿನ ಅನುಮತಿಗಳನ್ನು ರದ್ದು ಮಾಡಿ. ಇದನ್ನು ಮಾಡಲು ಸೆಟ್ಟಿಂಗ್ಸ್  ಜೆನರಲ್  ಬ್ಯಾಕ್ ಗ್ರೌಂಡ್ ಆ್ಯಪ್ ರಿಫ್ರೆಶ್ ಒತ್ತಿ. ಬ್ಯಾಕ್ ಗ್ರೌಂಡಿನಲ್ಲಿ ಎಲ್ಲಾ ಸಮಯದಲ್ಲೂ ಚಾಲ್ತಿಯಲ್ಲಿರುವ ಆ್ಯಪುಗಳನ್ನು ಡಿಲೀಟ್ ಮಾಡಿ. ಐ.ಒ.ಎಸ್ಸನ್ನು ಮತ್ತೊಮ್ಮೆ ಇನ್ಸ್ಟಾಲ್ ಮಾಡಿ, ಇಡೀ ಸಾಧನವನ್ನು ರೀಬೂಟ್ ಮಾಡುವುದನ್ನು ಪ್ರಯತ್ನಿಸಬಹುದು. ಒರಿಜಿನಲ್ ಅಲ್ಲದ ಚಾರ್ಜರುಗಳನ್ನು ಉಪಯೋಗಿಸುವುದರಿಂದಲೂ ಸಮಸ್ಯೆಯಾಗುತ್ತಿರಬಹುದು. ಇವ್ಯಾವುದೂ ಉಪಯೋಗಕ್ಕೆ ಬರದಿದ್ದರೆ, ಸಾಧನವನ್ನು ಹತ್ತಿರದ ಆ್ಯಪಲ್ ಸರ್ವೀಸ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Lately, an iPhone 6 user suffered from third-degree burns as the smartphone's battery exploded. Such incidents are not new and we have heard of many iPhones and iPad bursting into flames. Today, we will take a look at why the iOS device gets hot and how you can fix the issue.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot