ಅಮೆಜಾನ್‌ ಪ್ರೈಮ್‌ ವೀಡಿಯೊದಲ್ಲಿ ವಾಚ್‌ಪಾರ್ಟಿ‌ ಫೀಚರ್ಸ್‌ ಬಳಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ವೀಡಿಯೋ ಸ್ಟ್ರೀಮಿಂಗ್‌ ಸೇವೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಸದ್ಯ ಭಾರತದಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಹೆಚ್ಚಿನ ಪ್ರಸಿದ್ದಿ ಪಡೆದುಕೊಂಡಿದೆ. ಇನ್ನು ಬಳಕೆದಾರರಿಗೆ ಹಲವು ಮಾದರಿಯ ಹೊಸತನದ ಫೀಚರ್ಸ್‌ ಪರಿಚಯಿಸಿರುವ ಅಮೆಜಾನ್‌ ಪ್ರೈಮ್‌ ಇದೀಗ ಭಾರತದಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಅಮೆಜಾನ್‌ ಕಂಪನಿಯು ತನ್ನ ಪ್ರೈಮ್ ವಿಡಿಯೋದಲ್ಲಿ ವಾಚ್ ಪಾರ್ಟಿ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಹೌದು, ಅಮೆಜಾನ್‌ ತನ್ನ ವಿಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಚ್‌ ಪಾರ್ಟಿ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಅಮೆಜಾನ್ ಪ್ರೈಮ್ ವಿಡಿಯೋ ವಾಚ್ ಪಾರ್ಟಿ ಫೀಚರ್ಸ್‌ ಪ್ರೈಮ್ ವಿಡಿಯೋ ಬಳಕೆದಾರರಿಗೆ ವೀಡಿಯೊವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಅದು ಚಲನಚಿತ್ರವಾಗಿರಬಹುದು ಅಥವಾ ಟಿವಿ ಸರಣಿಯಾಗಿರಬಹುದು ಮತ್ತು ಅವರು ತಮ್ಮ ಸ್ನೇಹಿತರೊಂದಿಗೆ ಪರಸ್ಪರ ದೂರವಿದ್ದು, ವೀಕ್ಷಿಸಲು ಅನುವು ಮಾಡಿಕೊಡಲಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ ವಿಡಿಯೋ ಪರಿಚಯಿಸಿರುವ ವಾಚ್‌ ಪಾರ್ಟಿ ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಿದೆ. ವಾಚ್‌ಪಾರ್ಟಿ ಫೀಚರ್ಸ್‌ ಬಳಸಿ 100 ಪ್ರೈಮ್ ಚಂದಾದಾರರು ಅಥವಾ ಪ್ರೈಮ್ ವಿಡಿಯೋ ಚಂದಾದಾರರು ತಮ್ಮ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಿಂದ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೀಡಿಯೊಗಳನ್ನು ವೀಕ್ಷಿಸಬಹುದು. ಅಲ್ಲದೆ ಪ್ರೈಮ್ ವೀಡಿಯೊದ ಮೊಬೈಲ್‌ನಿಂದ ಸಹ ನೀವು ಈ ಫೀಚರ್ಸ್‌ ಅನ್ನು ಬಳಸಬಹುದು ಎಂದು ಹೇಳಲಾಗಿದೆ. ಇದರಿಂದ ನೀವು ನಿಮ್ಮ ಸ್ನೇಹಿತರು ಎಲ್ಲಿಯೇ ಇದ್ದರೂ ವಿಡಿಯೋ ವೀಕ್ಷಣೆಗೆ ಆಹ್ವಾನಿಸಬಹುದು. ಜೊತೆಗೆ ಚಲನಚಿತ್ರ ವೀಕ್ಷಿಸುತ್ತಾ ಎಂಜಾಯ್‌ ಮಾಡಬಹುದಾಗಿದೆ.

ಅಮೆಜಾನ್‌ ಪ್ರೈಮ್‌ ವೀಡಿಯೊದಲ್ಲಿ ವಾಚ್‌ಪಾರ್ಟಿ‌ ಫೀಚರ್ಸ್‌ ಬಳಸುವುದು ಹೇಗೆ?

ಅಮೆಜಾನ್‌ ಪ್ರೈಮ್‌ ವೀಡಿಯೊದಲ್ಲಿ ವಾಚ್‌ಪಾರ್ಟಿ‌ ಫೀಚರ್ಸ್‌ ಬಳಸುವುದು ಹೇಗೆ?

ಹಂತ 1: ಬೆಂಬಲಿತ ವೆಬ್ ಬ್ರೌಸರ್‌ನಲ್ಲಿ ಮೊದಲು ಅಮೆಜಾನ್ ಪ್ರೈಮ್ ವೀಡಿಯೊವನ್ನು ತೆರೆಯಿರಿ. ಚಲನಚಿತ್ರಗಳಿಗಾಗಿ ನಿಮ್ಮ ಡೆಸ್ಕ್‌ಟಾಪ್‌ ಮೇಲೆ ವಾಚ್ ಪಾರ್ಟಿ ಐಕಾನ್ ಕ್ಲಿಕ್ ಮಾಡಿ. ಟಿವಿ ಕಾರ್ಯಕ್ರಮಗಳಿಗಾಗಿ ಎಪಿಸೋಡ್ ಪಟ್ಟಿಯಲ್ಲಿ ಕಾಣಬಹುದಾಗಿದೆ.

ಹಂತ 2: ವಾಚ್ ಪಾರ್ಟಿಯಲ್ಲಿ ಚಾಟ್ ಮಾಡುವಾಗ ನೀವು ನಿಮಗಾಗಿ ಬಳಸಲು ಬಯಸುವ ಹೆಸರನ್ನು ನಮೂದಿಸಿ. ನೀವು ಹೆಸರನ್ನು ಆರಿಸಿದ ನಂತರ, ಕೆಳಗೆ ಲಭ್ಯವಿರುವ ನಿಮ್ಮ ವಾಚ್ ಪಾರ್ಟಿ ರಚಿಸಿ ಬಟನ್ ಟ್ಯಾಪ್ ಮಾಡಿ.

ಹಂತ 3: ನಿಮ್ಮ ವಾಚ್ ಪಾರ್ಟಿ ಲಿಂಕ್ ಅನ್ನು 100 ಜನರೊಂದಿಗೆ ಹಂಚಿಕೊಳ್ಳಬಹುದಾಗಿದ್ದು, ನಿಮ್ಮ ಸ್ನೇಹಿತರು ಅವರ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಸೇರಬಹುದು.

ಹಂತ 4: ಎಲ್ಲರೂ ಸಿದ್ಧವಾದ ನಂತರ, ನಿಮ್ಮ ವಾಚ್ ಪಾರ್ಟಿಯನ್ನು ಪ್ರಾರಂಭಿಸಿ. ಪಾರ್ಟಿ ಹೊಸ್ಟ್‌ ಮಾಡಿದವರು ಪಾರ್ಟಿಯನ್ನ ಪ್ಲೇ ಮಾಡಬಹುದು, ವಿರಾಮಗೊಳಿಸಬಹುದು ಮತ್ತು ಬಿಟ್ಟುಬಿಡಬಹುದು.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ವಿಷಯದ ಸಿಂಕ್ರೊನೈಸ್ ಮಾಡಿದ ಪ್ಲೇಬ್ಯಾಕ್ ಅನ್ನು ಅನುಮತಿಸುತ್ತದೆ, ಮತ್ತು ಚಾಟ್ ಫೀಚರ್ಸ್ ಗುಂಪಿನ ಸದಸ್ಯರು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ವಾಚ್ ಪಾರ್ಟಿ ಸೆಸನ್‌ ಅಲ್ಲಿ ಅಮೆಜಾನ್ ಗರಿಷ್ಠ 100 ಸದಸ್ಯರನ್ನು ಅನುಮತಿಸುತ್ತದೆ. ಇದಲ್ಲದೆ, ಪ್ರತಿ ಸದಸ್ಯರು ಗ್ರೂಪಿಗೆ ಸೇರಲು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರಬೇಕಾಗಿದೆ.

Best Mobiles in India

English summary
Amazon today introduced a new feature on its video streaming platform in India. The company has introduced the Watch Party feature on Prime Video.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X