ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುವಾಗ ಶೇ.90 ಜನರು ಈ ತಪ್ಪು ಮಾಡುತ್ತಿದ್ದಾರಂತೆ!!

  ಯಾವುದೇ ಸ್ಮಾರ್ಟ್‌ಪೋನ್‌ ಖರಿದೀಸುವ ಮುನ್ನ ಆ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇ ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುವರ ಸಂಖ್ಯೆ ಹೆಚ್ಚಿದೆ ಎಂದು ಈಗಾಗಲೇ ಹಲವು ವರದಿಗಳು ದೃಢಪಡಿಸಿವೆ. ಇನ್ನು ಸ್ವಲ್ಪ ಹೆಚ್ಚು ತಿಳಿದವರಾದರೆ, ಆ ಪೋನಿನ ವೇಗ ಎಷ್ಟು, ಸಾಫ್ಟ್‌ವೇರ್ ಯಾವುದು ಎಂದೆಲ್ಲಾ ಚೆಕ್ ಮಾಡುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲವಂತೆ.

  ಹೌದು, ಇತ್ತೀಚಿನ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಆ ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ, ಯಾವೋರ್ವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಸ್ಮಾರ್ಟ್‌ಪೋನ್ ಖರೀದಿಸುತ್ತಿದ್ದಾರೆ ಎಂದರೆ, ಅವರು ಖಂಡಿತವಾಗಿಯೂ ಮೋಸ ಹೋಗುತ್ತಿದ್ದಾರೆ ಎಂದರ್ಥ.!!

  ಆಂಡ್ರಾಯ್ಡ್ ಫೋನ್ ಖರೀದಿಸುವಾಗ ಶೇ.90 ಜನರು ಈ ತಪ್ಪು ಮಾಡುತ್ತಿದ್ದಾರಂತೆ!!

  ಇಂದಿನ ಮೊಬೈಲ್ ಯುಗದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.ಅಂತೆಯೇ ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಹಾಗಾಗಿ, ನಿಮ್ಮ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪಿಪಿಐ ಎಂದರೇನು?

  ಇಂಟರ್ನೆಟ್‌ನಲ್ಲಿ ಹುಡುಕಾಡಿದಾಗ ದೊರಕಿದ ಮಾಹಿತಿಯಂತೆ ಪಿಪಿಐ ಎಂದರೆ, ಪಿಕ್ಸೆಲ್ಸ್ ಪರ್ ಇಂಚ್ ಎಂದಾಗಿದೆ. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

  ಡಿಪಿಐ ಎಂದರೇನು?

  ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್‌ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ.ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

  ಡಿಪಿಐ ಮೌಲ್ಯ ತಿಳಿಯುವುದು ಹೇಗೆ?

  ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ಕಂಡುಕೊಳ್ಳಲು, ನೀವು "ಡಿಸ್‌ಪ್ಲೇ ಇನ್‌ಫೋ" ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈಗ ಡೆನ್ಸಿಟಿ ಕ್ಷೇತ್ರದತ್ತ ಗಮನಹರಿಸಿ ಮತ್ತು ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೈಟ್‌ಗೆ ಹೋಗಿ. ನಂತರ ಮೊಬೈಲ್ ಹ ಹೆಸರಿನಲ್ಲಿರುವ ಡಿಪಿಐ ಮೌಲ್ಯವನ್ನು ಪರಿಶೀಲಿಸಿಕೊಳ್ಳಬಹುದು.

  How to Send a WhatsApp Message Without Saving the Contact in Your Phone - GIZBOT KANNADA
  ಉತ್ತಮ ಸ್ಮಾರ್ಟ್‌ಫೋನ್ ಖರಿದಿಸಿ!!

  ಉತ್ತಮ ಸ್ಮಾರ್ಟ್‌ಫೋನ್ ಖರಿದಿಸಿ!!

  ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ತಿಳಿದುಕೊಮಡ ನಂತರವಷ್ಟೇ ಸ್ಮಾರ್ಟ್‌ಪೋನ್ ಖರೀದಿಸಲು ಮುಂದಾಗಿ. ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಈ ವಿಷಯದಲ್ಲಿ ಹೆಚ್ಚು ಸೂಕ್ತವಾಗಿವೆ. ಹಾಗಾಗಿ, ನಿಮಗೆ ನಿಖರವಾದ ಡಿಪಿಐ ಮೌಲ್ಯ ದೊರಕಿಲ್ಲ ಎಂದಾದಲ್ಲಿ ಹೆಚ್ಚಿನ ಅವೃತ್ತಿ ಸ್ಮಾರ್ಟ್‌ಫೋನ್ ಖರೀದಿಸುವುದು ಬೆಸ್ಟ್ ಆಗಿರುತ್ತದೆ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How to Find Your Phone Screen Density Value (320 DPI, 480 DPI, 640 DPI, etc).to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more