Subscribe to Gizbot

ಆಪಲ್ ಐಫೋನ್ 6 ಅಮೂಲಾಗ್ರ ವಿಶೇಷತೆಗಳು

Posted By:

ಆಪಲ್ ಐಫೋನ್ 6 ಅನ್ನು ಖರೀದಿಸಿ ನಿಮ್ಮದಾಗಿಸಿಕೊಂಡಿರುವಿರಿ ಆದರೆ ಫೋನ್ ಜೊತೆಗೆ ಬಂದಿರುವ ಹತ್ತು ಅಮೂಲಾಗ್ರ ವಿಶೇಷತೆಗಳನ್ನು ನೀವು ಗಮನಿಸಿದ್ದೀರಾ? ಐಓಎಸ್ 8.1 ಹೊಸ ಹೊಸ ಫೀಚರ್‌ಗಳ ಜೊತೆಗೆ ಬಂದಿದ್ದು ನಿಮಗಿನ್ನೂ ಇದರ ಬಗ್ಗೆ ಗೊತ್ತಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಎಸ್‌ಎಮ್‌ಎಸ್ ಇತಿಹಾಸ ಕೆದಕಿದಾಗ ಕಂಡುಬಂತು ರಹಸ್ಯ

ನಿರ್ದಿಷ್ಟ ಸಮಯದಲ್ಲಿ ನಿಮ್ಮ ಸ್ಥಾನವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ನಿರ್ದಿಷ್ಟ ಸಂಪರ್ಕಗಳಿಂದ ಪಠ್ಯ ಸಂದೇಶಗಳನ್ನು ನಿಶ್ಯಬ್ಧಗೊಳಿಸುವುದು ಹೇಗೆ? ಹಾಗಿದ್ದರೆ ನೀವು ತಿಳಿದುಕೊಳ್ಳಲೇಬೇಕಾದ ಐಫೋನ್ 6 ಮತ್ತು ಐಓಎಸ್ 8.1 ಸಲಹೆಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನೇಹಿತರೊಂದಿಗೆ ನಿಮ್ಮ ಸ್ಥಾನವನ್ನು ಹಂಚಿಕೊಳ್ಳುವುದು

#1

ಐಓಎಸ್ 8.1 ನಲ್ಲಿ ನೀವು ಸಂದೇಶ ನಡೆಸುತ್ತಿರುವಾಗಲೇ ನೀವು ಸುಲಭವಾಗಿ ನಿಮ್ಮ ಸ್ಥಾನವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಮೇಲ್ಭಾಗದಲ್ಲಿರುವ 'ಡೀಟೈಲ್ಸ್' ಕ್ಲಿಕ್ ಮಾಡಿ ಮತ್ತು 'ಸೆಂಡ್ ಮೈ ಲೊಕೇಶನ್' ಅನ್ನು ಆಯ್ಕೆಮಾಡಿ ಮತ್ತು ನಿಮ್ಮ ನಿಖರವಾದ ಸಂಘಟನೆಗಳು ತುರ್ತಾಗಿ ಕಳುಹಿಸಲಾಗುತ್ತದೆ.

ಐಪ್ಯಾಡ್ ಚಾರ್ಜರ್‌ನೊಂದಿಗೆ ವೇಗದ ಚಾರ್ಜ್‌ಗಾಗಿ

#2

ಬ್ಯಾಟರಿಗೆ ಯಾವುದೇ ಹಾನಿಯಾಗದೇ ನಿಮ್ಮ ಐಫೋನ್ 6 ಅನ್ನು ಐ ಪ್ಯಾಡ್ ಚಾರ್ಜರ್‌ನೊಂದಿಗೆ ನೀವು ಚಾರ್ಜ್ ಮಾಡಬಹುದು. 2.1A ಪವರ್ ಸಪ್ಲೈನೊಂದಿಗೆ ಐಫೋನ್ 6 ಹಾಗೂ 6 ಪ್ಲಸ್ ಅನ್ನು ಐಲಾಂಜ್ ಬಳಸಿ ಚಾರ್ಜ್ ಮಾಡಬಹುದಾಗಿದೆ.

ಅಪ್ಲಿಕೇಶನ್‌ನಿಂದ ಹೊರಗೆ ಹೋಗದೆ ಪಠ್ಯಕ್ಕೆ ಪ್ರತ್ಯುತ್ತರಿಸುವುದು

#3

ಐಓಎಸ್ 8.1 ನಲ್ಲಿ ನಿಮ್ಮ ಅಧಿಸೂಚನೆಗಳು ಸಂವಾದಾತ್ಮಕವಾಗಿರುತ್ತವೆ. ಅಂದರೆ ಸಂದೇಶಕ್ಕೆ ಉತ್ತರಿಸಲು ನೀವು ಅಪ್ಲಿಕೇಶನ್ ತ್ಯಜಿಸಬೇಕಾದ ಅಗತ್ಯವೇನಿಲ್ಲ. ಪರದೆಯ ಮೇಲ್ಭಾಗದಿಂದ ಅಧಿಸೂಚನೆಯನ್ನು ಸುಮ್ಮನೆ ಕೆಳಕ್ಕೆ ಎಳೆದರೆ ಸಾಕು ಮತ್ತು ಟೆಕ್ಸ್ಟ್ ಬಾಕ್ಸ್‌ ಒದಗಿಸಿರುವ ಸಣ್ಣ ಜಾಗದಲ್ಲಿ ನಿಮ್ಮ ಪ್ರತ್ಯುತ್ತರವನ್ನು ಬರೆಯಿರಿ.

ಬ್ಯಾಟರಿ ಬರಿದಾಗುತ್ತಿದೆಯೇ?

#4

ನಿಮ್ಮ ಐಓಎಸ್‌ನಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಬ್ಯಾಟರಿಯನ್ನು ಖಾಲಿ ಮಾಡುತ್ತಿರಬಹುದು. ಜನರಲ್ > ಯೂಸೇಜ್ > ಬ್ಯಾಟರಿ ಯೂಸೇಜ್ ಇಲ್ಲಿ ನಿಮಗೆ ಯಾವೆಲ್ಲಾ ಅಪ್ಲಿಕೇಶನ್‌ಗಳು ಎಷ್ಟೆಷ್ಟು ಬ್ಯಾಟರಿಯನ್ನು ಬಳಸುತ್ತಿವೆ ಎಂಬುದು ತಿಳಿದು ಬರುತ್ತದೆ.

ಫೋಟೋಗಳನ್ನು ಮರೆ ಮಾಡಲು

#5

ಐಫೋನ್ 6 ನಲ್ಲಿರುವ ಹೊಸ ಹೈಡ್ ಫೀಚರ್ ಅನ್ನು ಬಳಸಿಕೊಂಡು ನಿಮ್ಮ ಖಾಸಗಿ ಫೋಟೋಗಳನ್ನು ಮರೆಮಾಡಬಹುದಾಗಿದೆ. ಯಾವ ಫೋಟೋಗಳನ್ನು ನೀವು ಮರೆ ಮಾಡಬೇಕೆಂದು ಬಯಸುತ್ತೀರೋ ಅದನ್ನು ಆರಿಸಿ ಮತ್ತು ಅವುಗಳು 'ಹಿಡನ್ ಫೋಲ್ಡರ್' ಗೆ ಸೇರಿಬಿಡುತ್ತವೆ.

ಅಡ್ಡಿ ಪಡಿಸದಿರಿ

#6

ಸಂದೇಶದಲ್ಲಿ ಡೀಟೈಲ್ಸ್ ಮೆನುವಿನಲ್ಲಿರುವ 'ಡುನಾಟ್ ಡಿಸ್ಟರ್ಬ್' ಆಯ್ಕೆಯನ್ನು ಆರಿಸುವ ಮೂಲಕ ನಿರ್ದಿಷ್ಟ ಜನರಿಂದ ಪಠ್ಯ ಸಂದೇಶಗಳಿಗಾಗಿ ಎಚ್ಚರಿಕೆಗಳನ್ನು ನಿಮಗೆ ಮ್ಯೂಟ್ ಮಾಡಬಹುದು.

ಕ್ರೆಡಿಟ್ ಕಾರ್ಡ್ ಸ್ಕ್ಯಾನರ್

#7

ಸಫಾರಿಯ ಮೂಲಕ ನೀವು ಏನನ್ನಾದರೂ ಖರೀದಿಸುತ್ತೀರಿ ಎಂದಾದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಡೀಟೈಲ್ಸ್‌ನಲ್ಲಿ ಟೈಪ್ ಮಾಡುವ ಬದಲಿಗೆ ಐಫೋನ್‌ನ ಕ್ಯಾಮೆರಾದೊಂದಿಗೆ ನಿಮ್ಮ ಕಾರ್ಡ್ ಅನ್ನು ನಿಮಗೆ ಸ್ಕ್ಯಾನ್ ಮಾಡಬಹುದಾಗಿದೆ.

ಅಳಿಸಿ ಹೋದ ಫೋಟೋಗಳನ್ನು ಹಿಂದಕ್ಕೆ ತರಲು

#8

ಅಕಸ್ಮಾತ್ತಾಗಿ ಫೋಟೋಗಳನ್ನು ನೀವು ಅಳಿಸಿದಿರಿ ಎಂದಾದಲ್ಲಿ, 'ರೀಸೆಂಟ್ಲೀ ಡಿಲೀಟೆಡ್' ಇಲ್ಲಿಗೆ ಹೋಗುವ ಮೂಲಕ ಫೋಟೋಗಳನ್ನು ಮರುಪಡೆದುಕೊಳ್ಳಬಹುದಾಗಿದೆ. ಇಲ್ಲಿ 30 ದಿನಗಳಿಗಾಗಿ ಫೋಟೋಗಳು ಸಂಗ್ರಹವಾಗಿರುತ್ತದೆ. ನಂತರ ಅವುಗಳು ಅಳಿಸಿ ಹೋಗುತ್ತವೆ.

ಡಿಸ್‌ಪ್ಲೇ ಬಣ್ಣ ಬದಲಾಯಿಸಲು

#9

ನಿಮ್ಮ ಐಫೋನ್‌ನಲ್ಲಿ ಗ್ರೇ ಸ್ಕೇಲ್ ಮೋಡ್ ಅನ್ನು ಆನ್ ಮಾಡುವ ಮೂಲಕ ಎಲ್ಲವನ್ನೂ ಕಪ್ಪು ಹಾಗೂ ಬಿಳುಪನ್ನಾಗಿ ನಿಮಗೆ ಮಾಡಬಹುದು. ಸೆಟ್ಟಿಂಗ್ಸ್>ಜನರಲ್ >ಆಕ್ಸಸಿಬಿಲಿಟಿ>ಗ್ರೇಸ್ಕೇಲ್.

ಸೆಲ್ಫ್ ಡಿಸ್ಟ್ರಕ್ಟಿಂಗ್ ಫೋಟೋಸ್

#10

ಸ್ವಲ್ಪ ಸಮಯಗಳ ನಂತರ ಸೆಲ್ಫ್ ಡಿಸ್ಟ್ರಕ್ಟ್ ಆಗುವಂತಹ ಫೋಟೋಗಳನ್ನು ಇನ್ನೊಂದು ಐಮೆಸೇಜ್ ಬಳಕೆದಾರರಿಗೆ ನೀವು ಕಳುಹಿಸಬಹುದು. ಐಮೆಸೇಜ್ ಅನ್ನು ನೀವು ಕಳುಹಿಸುವಾಗ, ಕ್ಯಾಮೆರಾ ಐಕಾನ್ ಅನ್ನು ಕೆಳಕ್ಕೆ ಒತ್ತಿಹಿಡಿಯಿರಿ ಆಗ ಕ್ಯಾಮೆರಾ ಅಪ್ಲಿಕೇಶನ್ ಮೇಲಕ್ಕೆ ಬರುತ್ತದೆ.

ಲೊಕೇಶನ್ ಆಧಾರಿತ ಅಪ್ಲಿಕೇಶನ್ ಶಿಫಾರಸ್ಸುಗಳು

#11

ಐಓಎಸ್ ಅಪ್ಲಿಕೇಶನ್ ಅನ್ನು ಹೊಂದಿರುವ ವ್ಯವಹಾರವನ್ನು ನೀವು ನಡೆಸುತ್ತೀರಿ ಎಂದಾದಲ್ಲಿ, ನಿಮ್ ಐಫೋನ್‌ನ ಕೆಳ ಮೂಲೆಯಲ್ಲಿ ಸಣ್ಣ ಅಧಿಸೂಚನೆ ಇರುವ ಪಾಪ್ ಅಪ್ ಕಂಡುಬರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The iPhone 6, together with iOS 8.1, comes with a range of new features that you might yet not be aware of.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot