ಎಸ್‌ಎಮ್‌ಎಸ್ ಇತಿಹಾಸ ಕೆದಕಿದಾಗ ಕಂಡುಬಂತು ರಹಸ್ಯ

By Shwetha
|

ಟೆಕ್ಸ್ಟ್ ಮೆಸೇಜ್ ಅಥವಾ ಎಸ್‌ಎಮ್‌ಎಸ್‌ಗಳನ್ನು ಇದೀಗ ಸ್ಮಾರ್ಟ್‌ಫೋನ್ ಯುಗದಲ್ಲಿ ಕಡಿಮೆ ಬಳಸುತ್ತಿದ್ದಾರೆ. ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್, ವೈಬರ್‌ಗಳಲ್ಲೇ ಫೋನ್ ಬಳಕೆದಾರರು ಸಂವಹನವನ್ನು ನಡೆಸುತ್ತಿದ್ದಾರೆ. ಆದ್ದರಿಂದಲೇ ಪಠ್ಯ ಸಂದೇಶವನ್ನು ನಡೆಸುವುದು ಇದೀಗ ಔಟ್ ಆಫ್ ಫ್ಯಾಶನ್ ಎಂದೆನಿಸಿದೆ.

ಅದಾಗ್ಯೂ ವ್ಯವಹಾರಸ್ಥರು ಮತ್ತು ತುರ್ತು ಸಂವಹವನ್ನು ನಡೆಸುವವರು ಇಂದಿಗೂ ಪಠ್ಯ ಸಂದೇಶವನ್ನು ನೆಚ್ಚಿಕೊಂಡಿದ್ದಾರೆ. ಎಸ್‌ಎಮ್‌ಎಸ್ ಇಂದು 22 ಕ್ಕೆ ಕಾಲಿರಿಸಿದೆ. ಆ ವಿಶೇಷವಾಗಿ ಪಠ್ಯ ಸಂದೇಶದ ಸುತ್ತ ಮುತ್ತ ಇಣುಕು ನೋಟವನ್ನು ಹರಿಸೋಣ.

#1

#1

ಕಂಪ್ಯೂಟರ್ ಇಂಜಿನಿಯರ್ ನೇಲ್ ಪಾಪ್‌ವರ್ತ್ ಡಿಸೆಂಬರ್ 3 ರಂದು ಯುಕೆನಲ್ಲಿ "ಮೆರ್ರಿ ಕ್ರಿಸ್‌ಮಸ್" ಎಂಬ ಸಂದೇಶವನ್ನು ತನ್ನ ವೈಯಕ್ತಿಕ ಕಂಪ್ಯೂಟರ್ ಅನ್ನು ಬಳಸಿ ಕಳುಹಿಸಿದ್ದಾರೆ.

#2

#2

160 ಪದಗಳ ಸೀಮಿತ ಬಳಕೆಗೆ ನಿಜಕ್ಕೂ ಧನ್ಯವಾದಗಳನ್ನು ಅರ್ಪಿಸಬೇಕು. ಇಲ್ಲದಿದ್ದರೆ ಪಠ್ಯ ಸಂದೇಶಗಳ ಶಿಸ್ತೇ ಹಾಳಾಗಿ ಹೋಗುತ್ತಿತ್ತು. ಪೋಸ್ಟ್ ಕಾರ್ಡ್ ಮತ್ತು ಟೆಲಿಕ್ಸ್ ಟ್ರಾನ್ಸ್‌ಮಿಶನ್ ಮೂಲಕ ಕಳುಹಿಸಿದ ಪದಗಳು 160 ಕ್ಕಿಂತ ಹೆಚ್ಚಿನ ಪದಗಳನ್ನು ಒಳಗೊಂಡಿರುತ್ತಿತ್ತು. ಆದ್ದರಿಂದಲೇ ಎಸ್‌ಎಮ್‌ಎಸ್‌ನಲ್ಲೂ 160 ಪದಗಳನ್ನು ನಿರ್ದಿಷ್ಟಪಡಿಸಲಾಯಿತು.

#3

#3

2009 ರಲ್ಲಿ, ಹೆಲ್ಲೋ ಫ್ರಮ್ ಅರ್ತ್ ಎಂಬ ವೆಬ್‌ಸೈಟ್ ಜನರಿಗೆ ಪಠ್ಯ ಸಂದೇಶಗಳನ್ನು ರವಾನಿಸಲು ಅನುಮತಿಸಿತು ಎಂಬ ಪ್ರತೀತಿ ಇದೆ. ಇದು ರೇಡಿಯೊ ಅಲೆಗಳ ಮೂಲಕ ಸಂದೇಶಗಳನ್ನು ರವಾನಿಸುತ್ತಿತ್ತು.

#4

#4

ಇನ್ನು ಸಾಮಾಜಿಕ ತಾಣದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಟ್ವಿಟ್ಟರ್ ಎಸ್‌ಎಮ್‌ಎಸ್‌ನಿಂದ ಪ್ರೇರಣೆಯನ್ನು ಪಡೆದುಕೊಂಡಿದೆ. ಟ್ವಿಟ್ಟರ್‌ನಲ್ಲಿ 140 ಅಕ್ಷರಗಳ ಮಿತಿಯನ್ನು ಸೀಮಿತಗೊಳಿಸಲಾಗಿದೆ.

#5

#5

2010 ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ 3.6 ಬಿಲಿಯನ್ ಜಾಗತಿಕ ಬಳಕೆದಾರರಲ್ಲಿ ಹೆಚ್ಚು ಬಳಕೆಯಲ್ಲಿರುವ ಡೇಟಾ ಅಪ್ಲಿಕೇಶನ್ ಆಗಿ ಎಸ್‌ಎಮ್‌ಎಸ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

#6

#6

ನೋಕಿಯಾ ಫೋನ್ ಬೀಪ್ "ಎಸ್‌ಎಮ್‌ಎಸ್‌" ನ ಕೋಡ್ ಆಗಿದೆ.

#7

#7

ವಿಶೇಷ ಸಂದರ್ಭಗಳಲ್ಲಿ 51% ದಷ್ಟು ಮಹಿಳೆಯರು ಪಠ್ಯ ಸಂದೇಶವನ್ನು ಹೆಚ್ಚು ಬಯಸುತ್ತಾರಂತೆ.

#8

#8

ನಿಮ್ಮ ಪ್ರೇಕ್ಷಕರನ್ನು ನೀವು ತಲುಪಲು ಪಠ್ಯ ಸಂದೇಶವನ್ನು ಮಾಡುವ ಸಮಯ ರಾತ್ರಿ 10:30 ಯಿಂದ 11:30 ಆಗಿದೆ.

#9

#9

ಪಠ್ಯ ಸಂದೇಶವನ್ನು ಬಳಸದ ಮಕ್ಕಳಿಗಿಂತಲೂ ಎಸ್‌ಎಮ್‌ಎಸ್‌ ಪ್ರಯೋಗ ಮಾಡುವ ಪ್ರಾಥಮಿಕ ಶಾಲೆಯ ಮಕ್ಕಳ ವ್ಯಾಕರಣ ನಿಖರವಾಗಿರುತ್ತದೆ ಎಂದು ಸಂಶೋಧನೆ ತಿಳಿಸಿದೆ.

#10

#10

ಪಠ್ಯ ಸಂದೇಶವು ಡಿಸೆಂಬರ್ 3, 1992 ರಂದು ಯುಕೆನಲ್ಲಿ ಜನ್ಮ ತಾಳಿತು.

Best Mobiles in India

English summary
This article tells about Text messaging or SMSes might be one of the lesser-used features in the smartphone age, but the fact remains that no one has yet been able to fully replace it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X