Subscribe to Gizbot

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

Posted By:

ಪ್ರೇಮಿಗಳ ದಿನಾಚರಣೆ ಪ್ರೇಮಿಗಳಿಗೆ ಹೇಗೆ ಹಬ್ಬವೋ ಅದೇ ರೀತಿಯಲ್ಲಿ ಹ್ಯಾಕರ್‌ಗಳಿಗೂ ಹಬ್ಬ. ಹ್ಯಾಕರ್‌ ವಿವಿಧ ಕುತಂತ್ರಂಶಗಳನ್ನು ಇಂಟರ್‌ನೆಟ್‌ನಲ್ಲಿ ಬಿಟ್ಟು, ವ್ಯಾಪಾರದ ಸೋಗಿನಲ್ಲಿ ಹ್ಯಾಕ್‌ ಮಾಡುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಇಂಟರ್‌ನೆಟ್‌ನಲ್ಲಿ ಪ್ರೇಮಿಗಳು ವ್ಯವಹರಿಸುವಾಗ ಎಚ್ಚರದಲ್ಲಿರಬೇಕಾಗುತ್ತದೆ. ವಿಶ್ವದ ಖ್ಯಾತ ಆಂಟಿವೈರಸ್‌ ಸಂಸ್ಥೆ ಬಿಟ್‌ಫೆಂಡರ್‌ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಹೇಗೆ ಹ್ಯಾಕರ್‌ಗಳಿ ನಿಮ್ಮ ಮಾಹಿತಿಯನ್ನು ಕದಿಯುತ್ತಾರೆ ಎಂಬುದನ್ನು ಪಟ್ಟಿ ಮಾಡಿದೆ. ಈ ಪಟ್ಟಿಯನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ನಿಮ್ಮ ಸಂಬಂಧ ಉತ್ತಮ ಪಡಿಸುವುದು ಹೇಗೆ ?, ಯಾವ ರೀತಿ ಸ್ನೇಹಿತರೊಂದಿಗೆ ಮಾತನಾಡಬೇಕು ? ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವುದು ಹೇಗೆ? ಈ ರೀತಿ ಮನಸ್ಸಿನ ಭಾವನೆಗಳ ಜೊತೆ ಆಟವಾಡುವಂತೆ ಪ್ರಚೋದಿಸುವಂತಹ ವೆಬ್‌ಸೈಟ್‌ಗಳಿಂದ ದೂರವಿರಿ.

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಇನ್ನು ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಕೆಲವೊಂದು ವೆಬ್‌ಸೈಟ್‌ಗಳು ಕಡಿಮೆ ಬೆಲೆಯ ವಜ್ರದ ಉತ್ಪನ್ನಗಳನ್ನು ಖರೀದಿಸಿ, ಹವಳದ ಉತ್ಪನ್ನಗಳು ನಮ್ಮಲ್ಲಿ ಮಾತ್ರ..ಈ ರೀತಿ ಆಫರ್‌ಗಳನ್ನು ಹರಿಬಿಡುತ್ತವೆ. ಹಾಗಾಗಿ ಅನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದುಈ ತಾಣಗಳಲ್ಲಿ ವ್ಯವಹಾರ ಮಾಡಬೇಡಿ. ಪ್ರಖ್ಯಾತ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಿಂದಲೇ ನಿವು ಇ ವ್ಯವಹಾರ ಮಾಡಿದ್ರೆ ಒಳ್ಳೆಯದು.

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಕೆಲವರಿಗೆ ಲವ್‌ ಸಿಂಬಲ್‌ ಮೇಲೆ ಯಾಕೋ ಪ್ರೀತಿ ಜಾಸ್ತಿಯಾಗುತ್ತದೆ. ಇದೇ ಮನಸ್ಥಿತಿಯನ್ನು ಲಾಭ ಮಾಡುವುದಕ್ಕೆ ಕೆಲವು ಹ್ಯಾಕರ್‌ಗಳು ಈ ರೀತಿಯ ಮೇಲ್‌ಗಳನ್ನು, ಕಳುಹಿಸುತ್ತಾರೆ. ಹೀಗಾಗಿ ಈ ರೀತಿಯ ಮೇಲ್‌, ಜಾಹಿರಾತಿಗೆ ಮಾರು ಹೋಗಿ ಡೌನ್‌ಲೋಡ್‌ ಮಾಡದಿರಿ.

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ಪ್ರೇಮಿಗಳೇ ಇಂಟರ್‌ನೆಟ್‌ನಲ್ಲಿ ವ್ಯವಹರಿಸುವಾಗ ಇರಲಿ ಎಚ್ಚರ

ನೀವು ಯಾವುದೋ ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೋ ವೆಬ್‌ಸೈಟ್‌ಗಳಲ್ಲಿ ಹುಡುಕುತ್ತಿರುತ್ತೀರಿ ಈ ಸಂದರ್ಭದಲ್ಲಿ ನೀವು ಮಾಹಿತಿ ಡೌನ್‌ಲೋಡ್‌ ಬಟನ್‌ ಕ್ಲಿಕ್‌ ಮಾಡುವಾಗ್ಲೇ ' ಪ್ರೇಮಿಗಳ ದಿನಾಚರಣೆಯ ಸಂಬಂಧಿಸಿದಂತೆ ಸ್ಮಾರ್ಟ್‌ಫೋನ್‌, ಕೈಗಡಿಯಾರ ಬಹುಮಾನವನ್ನು ನೀವು ಗೆದ್ದಿದ್ದಿರಿ' ಎನ್ನುವ ಮೆಸೇಜ್‌ ನಿಮ್ಮ ಸ್ಕ್ರೀನ್‌ನಲ್ಲಿ ಮೂಡಿ ಬರುತ್ತದೆ.ಇಂತಹ ಮೆಸೇಜ್‌ಗಳಿಗೆ ಕ್ಲಿಕ್‌ ಮಾಡಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot