ಮನೆಯಲ್ಲೇ ಕುಳಿತು ಗ್ಯಾಸ್‌ ಬುಕ್‌ ಮಾಡಿ

Written By:

ನೀವು ಭಾರತ್‌ ಗ್ಯಾಸ್‌ ಗ್ರಾಹಕರೇ ? ಭಾರತ್‌ ಗ್ಯಾಸ್‌ ಬುಕ್‌ ಮಾಡಲು ನಿಮಗೆ ಕಷ್ಟವಾಗುತ್ತಿದೆಯೇ ? ಹಾಗಾದ್ರೆ ಇನ್ನು ಮುಂದೆ ನೀವು ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಲು ಕಷ್ಟ ಪಡಬೇಕಾಗಿಲ್ಲ. ಗಿಜ್ಬಾಟ್‌ ಸರಳ ಮಾಹಿತಿಯನ್ನು ತಂದಿದ್ದು ನೀವು ಮನೆಯಲ್ಲೇ ಕುಳಿತು ಭಾರತ್‌ ಗ್ಯಾಸ್‌ ಬುಕ್‌ ಮಾಡಬಹುದು.

ಮನೆಯಲ್ಲೇ ಕುಳಿತು ಗ್ಯಾಸ್‌ ಬುಕ್‌ ಮಾಡಿ

ಭಾರತ್‌ ಗ್ಯಾಸ್‌ನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ನೀವು ಬುಕ್‌ ಮಾಡುವ ಮೊದಲು ರಿಜಿಸ್ಟರ್‌ ಆಗಬೇಕು. ಗ್ರಾಹಕರ ನಂ ಮತ್ತು ಭಾರತ್‌ ಗ್ಯಾಸ್‌ ಎಜೆನ್ಸಿಯ ಕೋಡ್‌ನ್ನು ಅಲ್ಲಿ ನಮೂದಿಸುವ ಮೂಲಕ www.ebharatgas.com ರಿಜಿಸ್ಟರ್‌ ಆಗಿ
ರಿಜಿಸ್ಟಾರ್‌ ಆದ ಮೇಲೆ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವ ಮೂಲಕ ನೀವು ಗ್ಯಾಸ್‌ ಬುಕ್‌ ಮಾಡಬಹುದು.


ಮೊಬೈಲ್‌ನಲ್ಲಿ ರಿಜಿಸ್ಟಾರ್‌ ಮಾಡವುದು ಹೇಗೆ ?
ಭಾರತ್‌ ಗ್ಯಾಸ್‌ ಎಸ್‌ಎಂಎಸ್‌ ಬುಕಿಂಗ್‌ ಸೇವೆ ಮೆಟ್ರೋ ನಗರಗಳಾದ ದೆಹಲಿ,ಹೈದರಾಬಾದ್,ಬೆಂಗಳೂರು, ಪುಣೆ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಈ ಸೇವೆ ಲಭ್ಯವಿದೆ.
ಮೊಬೈಲ್‌ನಲ್ಲಿ ರಿಜಿಸ್ಟಾರ್‌ ಮಾಡುವ ಮೊದಲು ನೀವು ಆನ್‌ಲೈನ್‌ನಲ್ಲಿ ರಿಜಿಸ್ಟಾರ್‌ ಆಗಬೇಕು ಅಥವಾ ಎಸ್‌ಎಂಎಸ್‌ ಕಳುಹಿಸುವ ಮೂಲಕ ರಿಜಿಸ್ಟಾರ್‌ ಆಗಬಹುದು.


ಮೊಬೈಲ್‌ನಲ್ಲಿ ರಿಜಿಸ್ಟಾರ್‌ ಆಗುವುದು ಹೇಗೆ ?

REG>SPACE< DistributorSAPCode>space ಟೈಪ್‌ ಮಾಡಿ 57333ಗೆ ಮೆಸೇಜ್‌ ಮಾಡಿ

ವಡಾಫೋನ್‌,ಎಂಟಿಎನ್‌ಎಲ್‌,ಐಡಿಯಾ,ಏರ್‌ಟೆಲ್‌ ಮತ್ತು ಟಾಟಾ ಮೊಬೈಲ್‌ ಗ್ರಾಹಕರು ಎಸ್‌ಎಂಎಎಸ್‌ನ್ನು 52725 ಕಳುಹಿಸಿ ರಿಜಿಸ್ಟಾರ್‌ ಆಗಬಹುದು.
ಒಂದು ವೇಳೆ ಗ್ರಾಹಕರಿಗೆ ವಿತರಕರ ಕೋಡ್‌ ನಂ ಗೊತ್ತಿಲ್ಲದಿದ್ದರೆ ನೀವು ಭಾರತ್‌ಗ್ಯಾಸ್‌ಸ್ಯಾಪ್ ಕೋಡ್‌ನ್ನು ಇಲ್ಲಿ ಪಡೆಯಬಹುದು.

ಈ ಮಾಹಿತಿಗಳಂತೆ ನೀವು ರಿಜಿಸ್ಟಾರ್‌ ಆದ ಮೇಲೆ ನಿಮಗೆ ಅಧಿಕೃತವಾಗಿ ಭಾರತ್‌ಗ್ಯಾಸ್‌ನಿಂದ ರಿಜಿಸ್ಟಾರ್‌ ಬಗ್ಗೆ ಮೆಸೇಜ್‌ ಬರುತ್ತದೆ.

ಎಸ್‌ಎಂಎಸ್‌ ಮೂಲಕ ಭಾರತ್‌ಗ್ಯಾಸ್‌ ಬುಕ್‌ ಮಾಡುವುದು ಹೇಗೆ?
ಮೊಬೈಲ್‌ನಿಂದ LPG ಎಂದು ಟೈಪ್‌ ಮಾಡಿ 57333 ನಂಬರಿಗೆ ಮೆಸೇಜ್‌ ಕಳುಹಿಸಿ ಬುಕ್‌ ಮಾಡಬಹುದು.
ವಡಾಪೋನ್‌,ಎಂಟಿಎನ್‌ಎಲ್‌,ಐಡಿಯಾ,ಏರ್‌ಟೆಲ್‌ ಮತ್ತು ಟಾಟಾ ಗ್ರಾಹಕರು 52725 ಮೆಸೇಜ್‌ ಕಳುಹಿಸಿ ಬುಕ್‌ ಮಾಡಬಹುದು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot