ಬ್ಲಾಕ್ ಆದ ವೆಬ್‌ಸೈಟ್ ಪ್ರವೇಶಿಸುವುದು ಹೇಗೆ?

By Shwetha
|

ನಿರ್ದಿಷ್ಟ ವೆಬ್‌ಸೈಟ್‌ಗಳಿಗೆ ನಿರ್ಬಂಧವನ್ನು ಹಲವಾರು ಕಾರಣಗಳಿಗಾಗಿ ಅಧಿಕಾರಿಗಳು ಹೇರಿರುತ್ತಾರೆ. ಅಂತೆಯೇ ಕೆಲವು ಕಚೇರಿಗಳು ಸಾಮಾಜಿಕ ಸೈಟ್‌ಗಳು ಮತ್ತು ನಿಮ್ಮ ವೈಯಕ್ತಿಕ ಇಮೇಲ್‌ಗೆ ನಿರ್ಬಂಧವನ್ನು ಹೇರಿರುತ್ತವೆ. ಇನ್ನು ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಕೂಡ ಸೈಟ್ ನಿರ್ಬಂಧತೆಯ ಅನುಭವ ನಿಮಗೆ ಉಂಟಾಗಿರಬಹುದು.

ಓದಿರಿ: ವಿಂಡೋಸ್ ವೈಫೈ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?

ಇಂದಿನ ಲೇಖನದಲ್ಲಿ ಈ ನಿರ್ಬಂಧಿತ ಸೈಟ್ ಅನ್ನು ಪ್ರವೇಶಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ಓಎಸ್ ಎಕ್ಸ್

ಓಎಸ್ ಎಕ್ಸ್

ಕೆಲವೊಂದು ಸಾಫ್ಟ್‌ವೇರ್ ವೆಬ್‌ಸೈಟ್ ಪುಟಗಳನ್ನು ತನ್ನ ಹೆಸರು ಅಥವಾ ಯುಆರ್‌ಎಲ್‌ನಿಂದ ಬ್ಲಾಕ್ ಮಾಡಿರುತ್ತವೆ. ಓಎಸ್ ಎಕ್ಸ್ ಅಥವಾ ಕಮಾಂಡ್ ಪ್ರಾಂಪ್ಟ್‌ನಿಂದ ಐಪಿಯನ್ನು ನೀವು ಪಡೆದುಕೊಳ್ಳಬಹುದು.

ವೆಬ್ ಪ್ರಾಕ್ಸಿ

ವೆಬ್ ಪ್ರಾಕ್ಸಿ

ವೆಬ್ ಅನ್ನು ನಿರಂತರವಾಗಿ ಬ್ರೌಸ್ ಮಾಡಲು ಹಲವಾರು ವೆಬ್ ಪ್ರಾಕ್ಸಿಗಳು ಸೇವೆಗಳನ್ನು ಒದಗಿಸುತ್ತಿವೆ. ಯಾವುದೇ ಬ್ಲಾಕ್ ಆಗಿರುವ ಸೈಟ್‌ಗಳನ್ನು ಪ್ರವೇಶಿಸಲು ಇದನ್ನು ನಿಮಗೆ ಬಳಸಿಕೊಳ್ಳಬಹುದು. ವೆಬ್‌ಸೈಟ್‌ಗೆ ಹೋಗಿ ಮತ್ತು ನೀವು ಬ್ರೌಸ್ ಮಾಡಬೇಕೆಂದಿರುವ ಯುಆರ್‌ಎಲ್ ನಮೂದಿಸಿ.

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಅಥವಾ ವಿಪಿಎನ್ ರಿಮೋಟ್ ಸರ್ವರ್ ಆಗಿದ್ದು ಸಾರ್ವಜನಿಕ ನೆಟ್‌ವರ್ಕ್ ಮೂಲಕ ಖಾಸಗಿ ಪ್ರವೇಶವನ್ನು ಇದು ನೀಡುತ್ತದೆ.

ಲೊಕೇಶನ್ ಟ್ರ್ಯಾಕ್

ಲೊಕೇಶನ್ ಟ್ರ್ಯಾಕ್

ನಿಮ್ಮ ಲೊಕೇಶನ್ ಟ್ರ್ಯಾಕ್ ಮಾಡುವ ಅಪಾಯವನ್ನು ಕಡಿಮೆ ಮಾಡುವ, ಖಾಸಗಿತನವನ್ನು ಖಾತ್ರಿಪಡಿಸುತ್ತಾ ನಿಮಗಿಲ್ಲಿ ಅನಿಯಮಿತವಾಗಿ ಬ್ರೌಸ್ ಮಾಡಬಹುದು. ಇದಕ್ಕಾಗಿ TOR ಬ್ರೌಸರ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗುತ್ತದೆ. ಸಾಮಾನ್ಯ ಅಪ್ಲಿಕೇಶನ್‌ನಂತೆ ಇದನ್ನು ಇನ್‌ಸ್ಟಾಲ್ ಮಾಡಿ. ಅಪ್ಲಿಕೇಶನ್ ತೆರೆಯಿರಿ, TOR ನೆಟ್‌ವರ್ಕ್‌ನೊಂದಿಗೆ ನಿಮ್ಮ ಸಂಪರ್ಕವನ್ನು ಆರಂಭಿಸಲು ಕನೆಕ್ಟ್ ಕ್ಲಿಕ್ ಮಾಡಿ.

ವೆಬ್‌ಸೈಟ್‌ ಬ್ಲಾಕ್

ವೆಬ್‌ಸೈಟ್‌ ಬ್ಲಾಕ್

ಕೆಲವು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ಸ್ ತಮ್ಮದೇ ಡಿಎನ್‌ಎಸ್ ಅನ್ನು ಬಳಸಿಕೊಳ್ಳುತ್ತವೆ. ಗೂಗಲ್ ಪಬ್ಲಿಕ್ ಡಿಎನ್‌ಎಸ್ ಬಳಸಿಕೊಂಡು ಐಎಸ್‌ಪಿನಿಂದ ನಿರ್ಬಂಧವನ್ನು ನಿವಾರಿಸಿಕೊಳ್ಳಬಹುದು.

ವೆಬ್‌ಸೈಟ್ ವಿಷಯ

ವೆಬ್‌ಸೈಟ್ ವಿಷಯ

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವೆಬ್‌ಸೈಟ್ ವಿಷಯವನ್ನು ಅನುವಾದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ಬ್ರೌಸರ್ ಪ್ರಾಕ್ಸಿ

ಬ್ರೌಸರ್ ಪ್ರಾಕ್ಸಿ

ನಿಮ್ಮ ಬ್ರೌಸರ್ ಪ್ರಾಕ್ಸಿಯನ್ನು ಹೊಂದಿಸಲು, ಸಾರ್ವಜನಿಕ ಪ್ರಾಕ್ಸಿಗಳನ್ನು ನೀವು ಮೊದಲು ಪಡೆದುಕೊಳ್ಳಬೇಕಾಗುತ್ತದೆ.

ಐಪಿ ವಿಳಾಸ

ಐಪಿ ವಿಳಾಸ

ಬ್ಲಾಕ್ ಮಾಡಿರುವ ಡೊಮೇನ್ ಮತ್ತು ಉಪಡೊಮೇನ್‌ಗಳ ಐಪಿ ವಿಳಾಸವನ್ನು ಪಡೆದುಕೊಳ್ಳಲು ಪೆಂಟೆಸ್ಟ್ ಟೂಲ್ಸ್‌ನಿಂದ ಈ ಸೇವೆಯನ್ನು ಬಳಸಿಕೊಳ್ಳಬಹುದು.

ಕಮಾಂಡ್ ಚಾಲನೆ

ಕಮಾಂಡ್ ಚಾಲನೆ

SSH ಟ್ಯೂನಲ್ಸ್ ಬಳಸಿಕೊಂಡು ಪೋರ್ಟ್ 12345 ನಲ್ಲಿ ಸಾಕ್ಸ್ ಸರ್ವರ್ ಅನ್ನು ಕಮಾಂಡ್ ಚಾಲನೆ ಮಾಡುತ್ತದೆ. ಇದಕ್ಕೆ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನೀವು ನಮೂದಿಸಬೇಕಾಗುತ್ತದೆ.

Best Mobiles in India

English summary
In this article we are giving you some tips on how to access blocked website in an easy manner. These tips helps you to access the blocked website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X