ಆ್ಯಂಡ್ರಾಯ್ಡ್ ಸಾಧನದಲ್ಲಿ ಪ್ರಾಥಮಿಕ ಗೂಗಲ್ ಖಾತೆ ಬದಲಿಸುವುದು ಹೇಗೆ ಗೊತ್ತೆ?

|

ನೀವು ಆ್ಯಂಡ್ರಾಯ್ಡ್ ಸಾಧನವನ್ನು ಉಪಯೋಗಿಸುತ್ತಿದ್ದರೆ, ನಿಮ್ಮ ಫೋನಿನಲ್ಲಿ ಅಂತರ್ಜಾಲ ಜಾಲಾಡಲು, ಈಮೇಲ್ ನೋಡಲು ಒಂದು ಪ್ರಾಥಮಿಕ ಗೂಗಲ್ ಖಾತೆ ಬೇಕು ಎಂಬುದರ ಅರಿವು ನಿಮಗಿದ್ದೇ ಇದೆ.

ಆ್ಯಂಡ್ರಾಯ್ಡ್ ಸಾಧನದಲ್ಲಿ ಪ್ರಾಥಮಿಕ ಗೂಗಲ್ ಖಾತೆ ಬದಲಿಸುವುದು ಹೇಗೆ ಗೊತ್ತೆ?

ಒಂದು ವೇಳೆ ನಿಮಗೆ ಇನ್ನೊಂದು ಗೂಗಲ್ ಖಾತೆಯ ಅವಶ್ಯಕತೆಯಿದ್ದರೆ, ಅದನ್ನೂ ನಿಮ್ಮ ಗೂಗಲ್ ಸಾಧನಕ್ಕೆ ಸೇರಿಸಬಹುದು ಮತ್ತು ನಿಮ್ಮ ಅಗತ್ಯಕ್ಕನುಗುಣವಾಗಿ ಡಾಟಾ ಅನ್ನು ಸಿನ್ಕ್ರೊನೈಜ್ ಮಾಡಬಹುದು. ಸಿನ್ಕ್ರೊನೈಜಿಂಗ್ ಮಾಡುವುದರ ಜೊತೆಗೆ, ನಿಮ್ಮ ಪ್ರಾಥಮಿಕ ಗೂಗಲ್ ಖಾತೆಯನ್ನು ಬದಲಿಸಲೂ ಅವಕಾಶವುಂಟು.

ಓದಿರಿ: ಸ್ಯಾಮ್ಸಂಗ್ ಫೋನನ್ನು ಲೊಕ್‍ಸ್ಕ್ರೀನ್ ಪ್ಯಾಟರ್ನ್,ಪಿನ್ ಅಥವಾ ಪಾಸ್‍ವರ್ಡ್ ಮರೆತಾಗ ಹೇಗೆ ಅನ್‍ಲೊಕ್ ಮಾಡುವುದು

ಆ್ಯಂಡ್ರಾಯ್ಡ್ ಬಳಕೆದಾರರೆಲ್ಲರಿಗೂ ಪ್ರಾಥಮಿಕ ಗೂಗಲ್ ಖಾತೆಯನ್ನು ಬದಲಿಸುವ ಅವಶ್ಯಕತೆ ಇಲ್ಲದೇ ಇರಬಹುದು, ಆದರೆ ಕೆಲವರಿಗೆ ತಮ್ಮ ವೃತ್ತಿಯ ಈ ಮೇಲ್ ಅನ್ನು ಪ್ರಾಥಮಿಕ ಖಾತೆಯನ್ನಾಗಿ ಮಾಡಿಕೊಳ್ಳಬೇಕಿರುತ್ತದೆ ಅಥವಾ ಮತ್ಯಾವ ಕಾರಣವೂ ಇದ್ದಿರಬಹುದು.

ಓದಿರಿ: ಜಿಯೋ 4G ನೆಟ್‌ವರ್ಕ್‌ ಮತ್ತು ಡೌನ್‌ಲೋಡ್‌ ಸಮಸ್ಯೆಗೆ ಪರಿಹಾರ ಏನು ಗೊತ್ತೇ?

ಮುಂದೆ ಓದುವ ಮೂಲಕ ಪ್ರಾಥಮಿಕ ಗೂಗಲ್ ಖಾತೆಯನ್ನು ಬದಲಿಸುವ ವಿಧಾನವನ್ನು ತಿಳಿದುಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಾಥಮಿಕ ಖಾತೆಯೆಂದರೆ ಏನು?

ಪ್ರಾಥಮಿಕ ಖಾತೆಯೆಂದರೆ ಏನು?

ಗೂಗಲ್ ನೌ ಕಾರ್ಡ್, ಗೂಗಲ್ ಸರ್ಚ್, ವಾಯ್ಸ್ ಕಮ್ಯಾಂಡ್ಸ್ ಹಾಗೂ ಇನ್ನಿತರೆ ಕಾರ್ಯಗಳಿಗೆ ಉಪಯೋಗಿಸಲಾಗುವ ಖಾತೆಯೇ ಪ್ರಾಥಮಿಕ ಖಾತೆ. ಸಾಮಾನ್ಯವಾಗಿ ಪ್ರಾಥಮಿಕ ಖಾತೆಯನ್ನು ಬದಲಿಸುವುದರಿಂದ ಕೆಲವು ಕೆಲಸಗಳು ಸರಿಯಾಗಿ ನಡೆಯದೇ ಹೋಗಬಹುದು. ಉದಾಹರಣೆಗೆ, ಗೂಗಲ್ ನೌ ಸರಿಯಾಗಿ ಕಾರ್ಯನಿರ್ವಹಿಸದೇ ಹೋಗಬಹುದು. ಗೂಗಲ್ ನೌ ಆಫ್ ಆಗಿದೆ ಎಂಬ ಸಂದೇಶ ನಿಮಗೆ ಬಂದರೆ ನಿಮ್ಮ ಪ್ರಾಥಮಿಕ ಖಾತೆ ಬದಲುಗೊಂಡಿದೆ ಎಂದರ್ಥ.

ಪ್ರಾಥಮಿಕ ಖಾತೆಯನ್ನು ಬದಲಿಸಬಹುದು.

ಪ್ರಾಥಮಿಕ ಖಾತೆಯನ್ನು ಬದಲಿಸಬಹುದು.

ಹೌದು, ನಿಮ್ಮ ಪ್ರಾಥಮಿಕ ಖಾತೆಯನ್ನು ಬದಲಿಸಬಹುದು. ಕೆಲವು ಸರಳ ವಿಧಾನಗಳನ್ನು ಅನುಸರಿಸುವುದರಿಂದ ಇದನ್ನು ಮಾಡಬಹುದು.

ಎರಡನೇ ಖಾತೆಯನ್ನು ಸೇರಿಸಿ

ಎರಡನೇ ಖಾತೆಯನ್ನು ಸೇರಿಸಿ

ಪ್ರಾಥಮಿಕ ಖಾತೆಯನ್ನು ಬದಲಿಸಲು ಪ್ರಯತ್ನಿಸುವುದಕ್ಕೆ ಮೊದಲು, ನಿಮ್ಮ ಸಾಧನದಲ್ಲಿ ಎರಡೆರಡು ಖಾತೆಗಳಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ಮತ್ತೊಂದು ಖಾತೆಯನ್ನು ಸೇರಿಸಿ.

ಪ್ರಾಥಮಿಕ ಗೂಗಲ್ ಖಾತೆಯನ್ನು ಬದಲಿಸಿ.

ಪ್ರಾಥಮಿಕ ಗೂಗಲ್ ಖಾತೆಯನ್ನು ಬದಲಿಸಿ.

ಒಂದು ಸಲ ನಿಮ್ಮ ಆ್ಯಂಡ್ರಾಯ್ಡ್ ಸಾಧನದಲ್ಲಿ ಎರಡು ಖಾತೆಗಳನ್ನು ಸೇರಿಸಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎರಡರಲ್ಲಿ ಒಂದನ್ನು ಪ್ರಾಥಮಿಕ ಖಾತೆಯನ್ನಾಗಿ ಬಳಸಬಹುದು. ಹೀಗೆ ಮಾಡುವುದರಿಂದ ನಿಮ್ಮಡೀ ಫೋನಿನಲ್ಲಿ ಪ್ರಾಥಮಿಕ ಖಾತೆ ಬದಲಾವಣೆಗೊಳ್ಳುತ್ತದೆ.

ಇನ್ನೊಂದು ಖಾತೆಯಿಂದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಇನ್ನೊಂದು ಖಾತೆಯಿಂದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಪ್ರಾಥಮಿಕ ಖಾತೆ ಬದಲಿಸುವುದರಿಂದ, ಹೊಸದಾಗಿ ಸೇರಿಸಿದ ಖಾತೆಯಿಂದಲೇ ನೀವು ಸರ್ಚ್ ಮಾಡಬಹುದು ಡೌನ್ ಲೋಡ್ ಮಾಡಬಹುದು.

Best Mobiles in India

English summary
Did you know that there is a way to change the primary Google account on your Android smartphone or tablet? Well, you can do one from the settings menu of your Android device. Check out from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X