ಸ್ಯಾಮ್ಸಂಗ್ ಫೋನನ್ನು ಲೊಕ್‍ಸ್ಕ್ರೀನ್ ಪ್ಯಾಟರ್ನ್,ಪಿನ್ ಅಥವಾ ಪಾಸ್‍ವರ್ಡ್ ಮರೆತಾಗ ಹೇಗೆ ಅನ್‍ಲೊಕ್ ಮಾಡುವುದು

By Prateeksha
|

ಎಲ್ಲಾ ಆಧುನಿಕ ಸ್ಮಾರ್ಟ್‍ಫೋನ್‍ಗಳು ಡಿವೈಜ್ ಮತ್ತು ಮಾಹಿತಿಯನ್ನು ಸುರಕ್ಷಿತವಾಗಿಡಲು ಕೆಲ ರೀತಿಯ ಲೊಕ್ ಸ್ಕ್ರೀನ್ ಸೆಕ್ಯುರಿಟಿಯೊಂದಿಗೆ ಬರುತ್ತಿವೆ.

ಸ್ಯಾಮ್ಸಂಗ್ ಫೋನನ್ನು ಲೊಕ್‍ಸ್ಕ್ರೀನ್ ಪ್ಯಾಟರ್ನ್,ಪಿನ್ ಅಥವಾ ಪಾಸ್‍ವರ್ಡ್ ಮರೆತಾಗ

ನಿಮ್ಮ ಫೋನ್ ಅನ್ನು ಅದರೊಳಗಿನ ಮಾಹಿತಿಯನ್ನು ಪಿನ್, ಪಾಸ್‍ವರ್ಡ್ ಅಥವಾ ಪ್ಯಾಟರ್ನ್ ನಿಂದ ಸುರಕ್ಷಿತಗೊಳಿಸಿದ ಮೇಲೆ ನೀವು ಅದನ್ನು ಮರೆಯುವ ಸಾಧ್ಯತೆ ತುಂಬಾ ಇರುತ್ತದೆ. ಲೊಕ್‍ಸ್ಕ್ರೀನ್ ಪಾಸ್‍ವರ್ಡ್, ಪ್ಯಾಟರ್ನ್ ಅಥವಾ ಪಿನ್ ಅನ್ನು ಮರೆತು ಹೋಗುವುದು ತುಂಬಾ ಭಯಾನಕವಾಗಿರುತ್ತದೆ ಕಾರಣ ನೀವು ನಿಮ್ಮ ಫೋನನ್ನು ಮತ್ತೆ ಉಪಯೋಗಿಸಲಾಗುವುದಿಲ್ಲಾ.

ಓದಿರಿ: ವಿಶ್ವದಲ್ಲೇ ಅತಿ ಕಡಿಮೆ 4ಜಿ ಡೇಟಾ ದರಗಳು: ಜಿಯೋ ವಿಶೇಷತೆ

ಅದೃಷ್ಟವಶಾತ್, ಲೊಕ್ ಸ್ಕ್ರೀನ್ ಸೆಕ್ಯುರಿಟಿಯನ್ನು ದಾಟಿ ನಿಮ್ಮ ಫೋನನ್ನು ಪಡೆಯಲು ಬಹಳಷ್ಟು ದಾರಿಗಳಿವೆ. ಅಂತಹ ಕೆಲ ವಿಧಗಳನ್ನು ಉಪಯೋಗಿಸಿ ಸ್ಯಾಮ್ಸಂಗ್ ಡಿವೈಜ್ ಅನ್‍ಲೊಕ್ ಹೇಗೆ ಮಾಡುವುದೆಂದು ನೀವು ಕೆಳಗೆ ಕಾಣಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಅನ್ನು ಅನ್‍ಲೊಕ್ ಮಾಡಲು ಉಪಯೋಗಿಸಿ

ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಅನ್ನು ಅನ್‍ಲೊಕ್ ಮಾಡಲು ಉಪಯೋಗಿಸಿ

ಅನ್‍ಲೊಕ್ ಮಾಡಲು ಒಂದು ದಾರಿ ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ . ಕಂಪ್ಯೂಟರ್ ಅಥವಾ ಮೊಬೈಲ್ ಫೋನಿನಲ್ಲಿ, ವೆಬ್‍ಸೈಟ್ ಅನ್ನು ಭೇಟಿನೀಡಿ google.com/android/devicemanager . ಲೊಕ್ ಆದ ಫೋನಿನಲ್ಲಿ ಉಪಯೋಗಿಸಿದ ಗೂಗಲ್ ಲೊಗಿನ್ ಡಿಟೇಲ್ಸ್ ಉಪಯೋಗಿಸಿ ಲೊಗಿನ್ ಆಗಿ, ನಂತರ ನೀವು ಅನ್‍ಲೊಕ್ ಮಾಡಬೇಕಾಗಿರುವ ಫೋನನ್ನು ಆಯ್ಕೆ ಮಾಡಿ ಮತ್ತು ‘ಲೊಕ್'ಅನ್ನು ಆಯ್ಕೆ ಮಾಡಿ. ಟೆಂಪರರಿ ಪಾಸ್‍ವರ್ಡ್ ಹಾಕಿ ಲೊಕ್ ಪುನಃ ಕ್ಲಿಕ್ ಮಾಡಿ. ಬೊಕ್ಸ್ ಕೆಳಗೆ ನಿಮಗೆ ಕನಫರ್ಮೆಷನ್ ಗಾಗಿ ಕೇಳುತ್ತದೆ 3 ಬಟನ್ ನೊಂದಿಗೆ - ರಿಂಗ್,ಲೊಕ್ ಮತ್ತು ಎರೆಸ್. ಈಗ ನಿಮಗೆ ಪಾಸ್‍ವರ್ಡ್ ಫೀಲ್ಡ್ ಸಿಗುತ್ತದೆ ಫೋನಿನಲ್ಲಿ, ಅದರಲ್ಲಿ ನೀವು ಟೆಂಪರರಿ ಪಾಸ್‍ವರ್ಡ್ ಎಂಟರ್ ಮಾಡಬೇಕು. ಇದು ನಿಮ್ಮ ಫೋನನ್ನು ಅನ್‍ಲೊಕ್ ಮಾಡಬೇಕು. ಅದನ್ನು ಆಮೇಲೆ ಬದಲಾಯಿಸಬಹುದು.

ಗೂಗಲ್ ಲೊಗಿನ್ ಅನ್ನು ಲೊಕ್ ಸ್ಕ್ರೀನ್ ಪ್ಯಾಟರ್ನ್ ಅನ್‍ಲೊಕ್ ಮಾಡಲು ಬಳಸಿ

ಗೂಗಲ್ ಲೊಗಿನ್ ಅನ್ನು ಲೊಕ್ ಸ್ಕ್ರೀನ್ ಪ್ಯಾಟರ್ನ್ ಅನ್‍ಲೊಕ್ ಮಾಡಲು ಬಳಸಿ

ಈ ದಾರಿ ಆಂಡ್ರೊಯಿಡ್ 4.4 ಕಿಟ್‍ಕ್ಯಾಟ್ ಮತ್ತು ಅದಕ್ಕೂ ಕೆಳಗಿನದರಲ್ಲಿ ಕೆಲಸಮಾಡುತ್ತದೆ. ಇದು ತ್ವರಿತವಾಗಿ ಅನ್‍ಲೊಕ್ ಮಾಡುವ ವಿಧಾನ. ನಿಮಗೆ ಲೊಕ್ ಸ್ಕ್ರೀನ್ ಪ್ಯಾಟರ್ನ್ ಮರೆತು ಹೋದಲ್ಲಿ ನೀವು 5 ಅಥವಾ ಅದಕ್ಕಿಂತ ಹೆಚ್ಚು ತಪ್ಪು ಪ್ಯಾಟರ್ನ್ ಹಾಕಿ ಫೊರ್ಗೊಟ್ ಪ್ಯಾಟರ್ನ್ ಆಯ್ಕೆ ಮಾಡಬಹುದು. ಬ್ಯಾಕಪ್ ಪಿನ್ ಅಥವಾ ಗೂಗಲ್ ಲೊಗಿನ್ ಡಿಟೇಲ್ಸ್ ಎಂಟರ್ ಮಾಡಿ. ಇದು ಅನ್‍ಲೊಕ್ ಮಾಡುತ್ತದೆ.

ಸ್ಯಾಮ್ಸಂಗ್ ನ ಫೈಂಡ್ ಮೈ ಮೊಬೈಲ್ ಟೂಲ್ ಬಳಿಸಿ

ಸ್ಯಾಮ್ಸಂಗ್ ನ ಫೈಂಡ್ ಮೈ ಮೊಬೈಲ್ ಟೂಲ್ ಬಳಿಸಿ

ನಿಮ್ಮ ಸ್ಯಾಮ್ಸಂಗ್ ಡಿವೈಜ್ ಸ್ಯಾಮ್ಸಂಗ್ ಅಕೌಂಟ್ ನೊಂದಿಗೆ ರೆಜಿಸ್ಟರ್ ಆಗಿದ್ದರೆ, ಫೋನ್ ಅನ್‍ಲೊಕ್ ಮಾಡಬಹುದು ಫೈಂಡ್ ಮೈ ಮೊಬೈಲ್ ಟೂಲ್ ನೊಂದಿಗೆ. ಟೂಲ್ ಗೆ ಹೋಗಿ ಮತ್ತು ಸ್ಯಾಮ್ಸಂಗ್ ಲೊಗಿನ್ ಡಿಟೇಲ್ಸ್ ನೊಂದಿಗೆ ಸೈನ್ ಇನ್ ಆಗಿ. ನೀವು ರೆಜಿಸ್ಟರ್ಡ್ ಫೋನ್ ಕಾಣಬಹುದು ಎಡಬದಿಗೆ ಮತ್ತು ‘ಅನ್‍ಲೊಕ್ ಮೈ ಸ್ಕ್ರೀನ್' ಆಯ್ಕೆ ಮಾಡಿ. ಅನ್‍ಲೊಕ್ ಆಯ್ಕೆ ಮಾಡಿ ಮತ್ತು ಕೆಲ ಸೆಕೆಂಡುಗಳ ವರೆಗೆ ಕಾಯಿರಿ, ಆಗ ನಿಮಗೆ ಸ್ಕ್ರೀನ್ ಅನ್‍ಲೊಕ್ ಆಗಿರುವ ಬಗ್ಗೆ ನೊಟಿಫಿಕೇಷನ್ ಬರುತ್ತದೆ.

ಲೊಕ್ ಸ್ಕ್ರೀನ್ ಡಿಸೇಬಲ್ ಮಾಡಲು ಕಸ್ಟಮ್ ರಿಕವರಿ ಪ್ರಯತ್ನಿಸಿ

ಲೊಕ್ ಸ್ಕ್ರೀನ್ ಡಿಸೇಬಲ್ ಮಾಡಲು ಕಸ್ಟಮ್ ರಿಕವರಿ ಪ್ರಯತ್ನಿಸಿ

ಈ ವಿಧಾನ ಪ್ರಯತ್ನಿಸಲು ನಿಮ್ಮ ಫೋನಿನಲ್ಲಿ ಎಸ್‍ಡಿ ಕಾರ್ಡ್ ಇರಬೇಕು. ಹೇಳಬೇಕೆಂದರೆ ಇದು ಅನ್‍ಲೊಕ್ ಮಾಡಲು ಆಧುನಿಕ ವಿಧಾನವಾಗಿದೆ.ಜಿಪ್ ಫೈಲ್ ಡೌನ್‍ಲೊಡ್ ಮಾಡಿ ಪ್ಯಾಟರ್ನ್ ಪಾಸ್‍ವರ್ಡ್ ಡಿಸೆಬಲ್ ಅನ್ನು ಕಂಪ್ಯೂಟರ್ ನಲ್ಲಿ ಮತ್ತು ಎಸ್‍ಡಿ ಕಾರ್ಡ್‍ನಲ್ಲಿ ಸೇವ್ ಮಾಡಿ. ನಿಮ್ಮ ಫೋನಿನಲ್ಲಿ ಕಾರ್ಡ್ ಇನ್ಸರ್ಟ್ ಮಾಡಿ ಮತ್ತು ರಿಬೂಟ್ ಮಾಡಿ ರಿಕವರಿ ಗಾಗಿ. ಕಾರ್ಡ್ ನಲ್ಲಿ ಜಿಪ್ ಫೈಲ್ ಫ್ಲಾಷ್ ಮಾಡಿ ಮತ್ತು ಡಿವೈಜ್ ರಿಬೂಟ್ ಮಾಡಿ. ನಿಮ್ಮ ಫೋನ್ ಲೊಕ್ಡ್ ಸ್ಕ್ರೀನ್ ಇಲ್ಲದೆ ಬೂಟಪ್ ಆಗುತ್ತದೆ. ಅದು ಪಾಸ್‍ವರ್ಡ್ ಅಥವಾ ಗೆಸ್ಚರ್ ಲೊಕ್ ಸ್ಕ್ರೀನ್ ತೋರಿಸುತ್ತದೆ ಮತ್ತು ನೀವು ಕೇವಲ ಯಾವುದಾದರು ಪಾಸ್‍ವರ್ಡ್ ಅಥವಾ ಗೆಸ್ಚರ್ ಅನ್ನು ಟೈಪ್ ಮಾಡಿ ಫೋನನ್ನು ಅನ್‍ಲೊಕ್ ಮಾಡಲು.

ಕೊನೆಯ ಆಯ್ಕೆಯಾಗಿ ಫಾಕ್ಟರಿ ರಿಸೆಟ್

ಕೊನೆಯ ಆಯ್ಕೆಯಾಗಿ ಫಾಕ್ಟರಿ ರಿಸೆಟ್

ಹೌದು,ಫ್ಯಾಕ್ಟರಿ ರಿಸೆಟ್ ಫೋನಿನಲ್ಲಿನ ನಿಮ್ಮೆಲ್ಲಾ ಮಾಹಿತಿಗಳನ್ನು ಅಳಿಸಿ ಹಾಕುವುದೆನೊ ನಿಜ. ಹೀಗಾಗಿ ಈ ಆಯ್ಕೆ ಎಲ್ಲಕ್ಕಿಂತ ಕೊನೆಯದಾಗಿ ಇರಬೇಕು ನೀವು ಅನ್‍ಲೊಕ್ ಮಾಡುವ ಪಾಸ್‍ವರ್ಡ್, ಪಿನ್ ಅಥವಾ ಪ್ಯಾಟರ್ನ್ ಮರೆತಲ್ಲಿ.

Best Mobiles in India

English summary
If you own a Samsung smartphone and you don't remember the PIN, password or pattern of the lock screen, you can follow the different ways detailed here to unlock the phone. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X