ವಾಟ್ಸಾಪ್‌ನಲ್ಲಿ ಸ್ಮಾರ್ಟ್ ಆಗಿ ಚಾಟ್‌ ಮಾಡಲು 10 ಟಿಪ್ಸ್‌ಗಳು

By Suneel
|

ವಾಟ್ಸಾಪ್, ಪ್ರಾರಂಭವಾದ 2009 ರಿಂದಲೂ ಸಹ ಪ್ರತಿಯೊಂದು ಸ್ಮಾರ್ಟ್‌ಫೋನ್‌ಗಳಿಗೂ ಲೈಫ್‌ಲೈನ್‌ ಆಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅತಿ ಹೆಚ್ಚು ಪ್ರಖ್ಯಾತವಾದ ಚಾಟ್‌ ಆಪ್‌ ಆಗಿದ್ದು, ತಿಂಗಳಿಗೆ 1 ಶತಕೋಟಿಯಷ್ಟು ಬಳಕೆದಾರರನ್ನು ಹೊಂದಿದೆ.

ಇಂದು ಬಹುಸಂಖ್ಯಾತರು ವಾಟ್ಸಾಪ್ ಬಳಸುತ್ತಿದ್ದರೂ, ವಾಟ್ಸಾಪ್‌ನ ಹೊಸ ಫೀಚರ್‌ಗಳನ್ನು ಟ್ರ್ಯಾಕ್‌ ಮಾಡಿಕೊಂಡು ಬಳಸುವಲ್ಲಿ ವಿಫಲರಾಗಿದ್ದಾರೆ. ಈ ವರ್ಷದ ಆರಂಭದಿಂದಲೂ ಸಹ ವಾಟ್ಸಾಪ್ 2 ವಾರಗಳಿಗೊಮ್ಮೆಯಂತೆ ಹಲವು ಹೊಸ ಫೀಚರ್‌ಗಳನ್ನು ಪಡೆದಿದೆ. ಈ ಫೀಚರ್‌ಗಳನ್ನು ಬಹುಶಃ ನೀವು ಸ್ಮಾರ್ಟ್‌ ವೇನಲ್ಲಿ ಬಳಸದೇ ಇರಬಹುದು. ಅಂತಹ ವಾಟ್ಸಾಪ್‌ ಫೀಚರ್‌ಗಳನ್ನು ಇಂದಿನ ಲೇಖನದಲ್ಲಿ ತಿಳಿದು ನೀವು ಬಳಸಿರಿ.

ಮಾತನಾಡಲು ಜಸ್ಟ್‌ ಟ್ಯಾಪ್‌ ಮಾಡಿ

ಮಾತನಾಡಲು ಜಸ್ಟ್‌ ಟ್ಯಾಪ್‌ ಮಾಡಿ

ಕೆಲವೊಮ್ಮೆ ದೀರ್ಘ ಮೆಸೇಜ್‌ಗಳನ್ನು ಟೈಪ್‌ ಮಾಡಲು ಸಾಧ್ಯವಾಗದಿದ್ದಲ್ಲಿ, ಕೀಬೋರ್ಡ್‌ನಲ್ಲಿ ಮೈಕ್‌ ಬಟನ್‌ ಪ್ರೆಸ್‌ ಮಾಡಿ ಮಾತನಾಡಿ ಸೆಂಡ್‌ ಮಾಡಿ.

ಗ್ರೂಪ್‌ ಚಾಟ್‌ನಲ್ಲಿ ನಿಮ್ಮ ಮೆಸೇಜ್‌ ಯಾರು ಓದಿದ್ದಾರೆ ತಿಳಿಯಿರಿ

ಗ್ರೂಪ್‌ ಚಾಟ್‌ನಲ್ಲಿ ನಿಮ್ಮ ಮೆಸೇಜ್‌ ಯಾರು ಓದಿದ್ದಾರೆ ತಿಳಿಯಿರಿ

ಗ್ರೂಪ್‌ ಚಾಟ್‌ನಲ್ಲಿ ಹಾಕಿದ ಮೆಸೇಜ್‌ ಅನ್ನು ಗ್ರೂಪ್‌ನ ಎಲ್ಲರೂ ಓದಿದ ನಂತರವಷ್ಟೇ ಡಬಲ್ ನೀಲಿ ಟಿಕ್‌ ಕಾಣುತ್ತದೆ. ಆದರೆ ನಿಮ್ಮ ಮೆಸೇಜ್‌ ಅನ್ನು ಗ್ರೂಪ್‌ನಲ್ಲಿ ಯಾರು ಓದಿದ್ದಾರೆ ಎಂದು ತಿಳಿಯಲು ನೀವು ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಟ್ಯಾಪ್‌ ಮಾಡಿ ಹೋಲ್ಡ್‌ ಮಾಡಿ. ನಂತರ 'Info' ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿದರೆ ಮೆಸೇಜ್‌ ಎಷ್ಟು ಗಂಟೆಗೆ ಡೆಲಿವರಿ ಯಾಗಿದೆ, ಯಾರು ಓದಿದ್ದಾರೆ ಎಂಬ ಪೂರ್ಣ ಮಾಹಿತಿ ಸಿಗುತ್ತದೆ.

 ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡಿ

ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡಿ

ವಾಟ್ಸಾಪ್‌ ಚಾಟ್‌ನಲ್ಲಿ ನಿಮ್ಮ ಸ್ನೇಹಿತರು ಶೀಘ್ರವಾಗಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆದರೆ ನೀವು ನೀಡಿದ ಉತ್ತರ ಯಾವ ಪ್ರಶ್ನೆಗೆ ಎಂಬುದು ಕೆಲವೊಮ್ಮೆ ಗೊಂದಲ ಉಂಟುಮಾಡಬಹುದು. ಆದ್ದರಿಂದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡಲು ಪ್ರಶ್ನೆಯ ಮೆಸೇಜ್‌ ಅನ್ನು ಟ್ಯಾಪ್‌ ಮಾಡಿ ರೀಪ್ಲೇ ಬಟನ್‌ ಆಯ್ಕೆ ಮಾಡಿ ನಂತರ ನಿಮ್ಮ ಮೆಸೇಜ್‌ ಅನ್ನು ಸೆಂಡ್ ಮಾಡಿ. ನಿಮ್ಮ ಸ್ನೇಹಿತರಿಗೆ ಪ್ರಶ್ನೆಯ ಸಹಿತ ಉತ್ತರ ಕಾಣುತ್ತದೆ.

ಮುಖ್ಯ ಸಂಪರ್ಕಗಳಿಗೆ(ಕಾಂಟ್ಯಾಕ್ಟ್) ಶಾರ್ಟ್‌ಕಟ್‌ ಕ್ರಿಯೇಟ್‌ ಮಾಡಿ

ಮುಖ್ಯ ಸಂಪರ್ಕಗಳಿಗೆ(ಕಾಂಟ್ಯಾಕ್ಟ್) ಶಾರ್ಟ್‌ಕಟ್‌ ಕ್ರಿಯೇಟ್‌ ಮಾಡಿ

ನಿಮ್ಮ ಮುಖ್ಯ ಸಂಪರ್ಕಗಳನ್ನು ಹೋಮ್‌ ಸ್ಕ್ರೀನ್‌ನಲ್ಲಿ ಶಾರ್ಟ್‌ಕಟ್‌ ಆಗಿ ಬಳಸಬಹುದು. ಸಂಪರ್ಕಗಳನ್ನು ಹೋಮ್‌ ಸ್ಕ್ರೀನ್‌ನಲ್ಲಿ ಶಾರ್ಟ್‌ಕಟ್‌ ಮಾಡಲು Contacts chat Window>>Settings>>More>>Add Shortcut.

ಮೆಸೇಜ್‌ಗಳಿಗೆ ಟೆಕ್ಸ್ಟ್ ಸ್ಟೈಲ್ ಆಡ್‌ ಮಾಡಿ

ಮೆಸೇಜ್‌ಗಳಿಗೆ ಟೆಕ್ಸ್ಟ್ ಸ್ಟೈಲ್ ಆಡ್‌ ಮಾಡಿ

ನಿಮ್ಮ ಮೆಸೇಜ್‌ಗಳನ್ನು ಹೈಲೈಟ್‌ ಮಾಡಲು ಬೋಲ್ಡ್, ಇಟಾಲಿಕ್‌, ಸ್ಟ್ರೈಕ್‌ ಥ್ರೂ ಆಡ್‌ ಮಾಡಬಹುದು. ಉದಾಹರಣೆಗೆ ಬೋಲ್ಡ್‌ಗಾಗಿ *Hi *, ಇಟಾಲಿಕ್‌ಗಾಗಿ _Hi _, ಸ್ಟ್ರೈಕ್‌ ಥ್ರೂಗಾಗಿ ~Hi ~ ಈ ರೀತಿ ಟೈಪಿಸಿ.

ಕಿರಿಕಿರಿ ಉಂಟುಮಾಡುವ ಗ್ರೂಪ್ ಅನ್ನು ಮ್ಯೂಟ್‌ ಮಾಡಿ

ಕಿರಿಕಿರಿ ಉಂಟುಮಾಡುವ ಗ್ರೂಪ್ ಅನ್ನು ಮ್ಯೂಟ್‌ ಮಾಡಿ

ನೀವು ಸದಸ್ಯರಾಗಿರುವ ಯಾವುದಾದರೂ ಗ್ರೂಪ್‌ನಿಂದ ಅನಗತ್ಯವಾಗಿ ಚಾಟಿಂಗ್‌ ನಡೆಯುತ್ತಿದ್ದು, ನಿಮಗೆ ಕಿರಿಕಿರಿ ನೋಟಿಫಿಕೇಶನ್‌ಗಳು ಬರುತ್ತಿದ್ದಲ್ಲಿ ಅಂತಹ ಗ್ರೂಪ್‌ಗಳನ್ನು ಮ್ಯೂಟ್ ಮಾಡಿ. ಮ್ಯೂಟ್‌ ಮಾಡಲು ಗ್ರೂಪ್‌ ಹೆಸರಿನ ಮೇಲೆ ಟ್ಯಾಪ್‌ ಮಾಡಿ>> ಮ್ಯೂಟ್‌ ಬಟನ್‌ ಆಯ್ಕೆ ಮಾಡಿ>> ಮ್ಯೂಟ್ ಸಮಯವನ್ನು ಆಯ್ಕೆ ಮಾಡಿ.

ಲೈವ್‌ ಬ್ರಾಡ್‌ಕಾಸ್ಟ್ ಫೀಚರ್

ಲೈವ್‌ ಬ್ರಾಡ್‌ಕಾಸ್ಟ್ ಫೀಚರ್

ಹಲವು ಸ್ನೇಹಿತರಿಗೆ ನೀವು ಹಬ್ಬದ ಶುಭಾಷಯಗಳನ್ನು ತಿಳಿಸಬೇಕಿರುತ್ತದೆ. ಆದರೆ ನೀವು ಶುಭಾಷಯ ತಿಳಿಸಿದ ಮೆಸೇಜ್‌ ಒಬ್ಬರಿಗೊಬ್ಬರಿಗೆ ತಿಳಿಯದಂತೆ ಒಮ್ಮೆಯೇ ಮೆಸೇಜ್‌ ಸೆಂಡ್ ಮಾಡಲು 'ಬ್ರಾಡ್‌ಕಾಸ್ಟ್‌ ಲೈವ್ ಫೀಚರ್‌ ಅನ್ನು ಬಳಸಿ. ಚಾಟ್‌ ಸ್ಕ್ರೀನ್‌>> ಮೆನು ಬಟನ್‌ ಪ್ರೆಸ್‌ ಮಾಡಿ>> ನ್ಯೂ ಬ್ರಾಡ್‌ಕಾಸ್ಟ್ ಆಯ್ಕೆ ಮಾಡಿ>> ನಿಮ್ಮ ಕಾಂಟ್ಯಾಕ್ಟ್‌ಗಳನ್ನು ಸೆಲೆಕ್ಟ್‌ ಮಾಡಿ. ಸಿಂಗಲ್‌ ಮೆಸೇಜ್‌ನಿಂದ ಎಲ್ಲರಿಗೂ ಶುಭಾಷಯಗಳನ್ನು ಇತರರಿಗೆ ತಿಳಿಯದಂತೆ ಸೆಂಡ್‌ ಮಾಡಿ.

ಸ್ಥಳದ ಮಾಹಿತಿ ಕಳುಹಿಸಿ

ಸ್ಥಳದ ಮಾಹಿತಿ ಕಳುಹಿಸಿ

ನಿಮ್ಮ ಸ್ನೇಹಿತರಿಗೆ ನೀವು ಇರುವ ಸ್ಥಳ ಅಥವಾ ಸಭೆ ಸ್ಥಳ ತಿಳಿಸಲು ಶೇರ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ>> ಸೆಂಡ್ ಲೊಕೇಶನ್‌ ಆಯ್ಕೆ ಮಾಡಿ. ಸ್ಥಳದ ಮಾಹಿತಿ ಸೆಂಡ್ ಮಾಡುವ ಮೊದಲು ಜಿಪಿಎಸ್‌ ಆನ್‌ ಆಗಿರಬೇಕು.

 ವಾಟ್ಸಾಪ್‌ ವೈಯಕ್ತಿಕ ಫೀಚರ್‌

ವಾಟ್ಸಾಪ್‌ ವೈಯಕ್ತಿಕ ಫೀಚರ್‌

ನಿಮ್ಮ ವಾಟ್ಸಾಪ್‌ನ ವಾಲ್‌ಪೇಪರ್‌ ಅನ್ನು ಬದಲಿಸಬಹುದಾಗಿದೆ. ಈ ಆಯ್ಕೆಯನ್ನು ಸೆಟ್ಟಿಂಗ್ಸ್‌ನಲ್ಲಿ ಪಡೆಯಬಹುದು.

ನಿಖರ ಚಾಟ್‌ ಇತಿಹಾಸ ತಿಳಿಯಿರಿ

ನಿಖರ ಚಾಟ್‌ ಇತಿಹಾಸ ತಿಳಿಯಿರಿ

ಚಾಟ್‌ನಲ್ಲಿ ನಿಖರ ಚಾಟ್‌ ಇತಿಹಾಸ ತಿಳಿಯಬಹುದು. ಮೆಸೇಜ್‌ ಪತ್ತೆಹಚ್ಚಬೇಕಾದ ಕ್ಯಾಂಟ್ಯಾಕ್ಟ್‌ ಸ್ಕ್ರೀನ್‌ಗೆ ಹೋಗಿ. ಆಪ್ಶನ್‌ ಬಟನ್‌ ಟ್ಯಾಪ್‌ ಮಾಡಿ>>ಸರ್ಚ್>> ಚಾಟ್‌ನಲ್ಲಿ ಸೆಂಡ್‌ ಮಾಡಿದ ಟೆಕ್ಸ್ಟ್‌ ಅನ್ನು ಟೈಪ್‌ ಮಾಡಿ. ನೀವು ಹುಡುಕುತ್ತಿರುವ ಚಾಟ್‌ ಅನ್ನು ಆಪ್‌ ಸರ್ಚ್‌ ಮುಖಾಂತರ ನೀಡುತ್ತದೆ.

Best Mobiles in India

Read more about:
English summary
Chat smart! 10 tips that will make you WhatsApp expert. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X