ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಲು ಈ ಕ್ರಮ ಅನುಸರಿಸಿ!

|

ಪ್ರಸ್ತುತ ಆಧಾರ್ ಎಲ್ಲ ಕೆಲಸಗಳಿಗೂ ಅವಶ್ಯವಾಗಿದ್ದು, ಬ್ಯಾಂಕ್ ಖಾತೆ, ಡ್ರೈವಿಂಗ್ ಲೈಸನ್ಸ್‌, ಪ್ಯಾನ್ ಕಾರ್ಡ್‌ ಹೀಗೆ ಪ್ರತಿಯೊಂದು ದಾಖಲೆಗಳಿಗೂ ಆಧಾರ್ ನಂಬರ್ ಲಿಂಕ್ ಮಾಡುವುದು ಅಗತ್ಯವಾಗಿದೆ. ಮುಖ್ಯವಾಗಿ ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್ ಮಾಡಬೇಕಿದ್ದು, ಇದು ನಿಮ್ಮ ಬ್ಯಾಂಕ್ ಖಾತೆ ಸುರಕ್ಷತೆಗೆ ಅಗತ್ಯವಾಗಿದೆ. ಹೀಗಾಗಿ ಬ್ಯಾಂಕ್‌ ಖಾತೆಯೊಂದಿಗೆ ನಿಮ್ಮ ಆಧಾರ್ ನಂಬರ್ ಲಿಂಕ್ ಆಗಿದೆಯೇ ಎಂಬುದನ್ನು ಆನ್‌ಲೈನ್‌ ಮೂಲಕ ತಿಳಿಯಬಹುದಾಗಿದೆ.

ಖಾತೆಯನ್ನು

ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಆನ್‌ಲೈನ್ ಮೂಲಕ, ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್, ಫೋನ್ ಬ್ಯಾಂಕಿಂಗ್, ಎಟಿಎಂ ಮೂಲಕ ಅಥವಾ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಬಹುದು. ಈಗಾಗಲೇ ಆಧಾರ್ ಲಿಂಕ್ ಆಗಿದೆಯೇ ಎನ್ನುವುದನ್ನು UIDAI's - ಯುಐಡಿಎಐನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆಧಾರ್‌ನೊಂದಿಗೆ ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ ಎಂದು ನೀವು ಪರಿಶೀಲಿಸಬಹುದು.

ಬಳಕೆದಾರರು

ಬಳಕೆದಾರರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೇ, ಎಲ್ಲಾ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದಾಗಿದೆ. ಹಾಗೆಯೇ ಆಧಾರ್‌ನೊಂದಿಗೆ ಎಷ್ಟು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ತಿಳಿಯಬಹುದು. ಈ ಮೂಲಕ ನಕಲಿ ಬ್ಯಾಂಕ್ ಖಾತೆಯ ಬಗ್ಗೆಯೂ ಎಚ್ಚರಿಕೆಯಿಂದ ಇರಬಹುದು. ಏಕೆಂದರೇ ಒಂದು ಆಧಾರ್‌ನಲ್ಲಿ ಅನೇಕ ನಕಲಿ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಆಧಾರ್‌ಗೆ ಯಾವುದೇ ನಕಲಿ ಖಾತೆಯನ್ನು ಲಿಂಕ್ ಮಾಡುವುದನ್ನು ತಡೆಯಲು ಬಳಕೆದಾರರು ಪರಿಶೀಲಿಸುತ್ತಿರುವುದು ಉತ್ತಮ. ಹಾಗಾದರೇ ಆಧಾರ್ ಸಂಖ್ಯೆ - ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡುವ ಬಗ್ಗೆ ಮುಂದೆ ತಿಳಿಸಲಾಗಿದೆ ಮುಂದೆ ಓದಿರಿ.

ಆಧಾರ್ ಸಂಖ್ಯೆ - ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಲು ಹೀಗೆ ಮಾಡಿ:

ಆಧಾರ್ ಸಂಖ್ಯೆ - ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಲು ಹೀಗೆ ಮಾಡಿ:

ಹಂತ 1. ಯುಐಡಿಎಐ-UIDAI ಅಧಿಕೃತ ವೆಬ್‌ಸೈಟ್ www.uidai.gov.in ಗೆ ಹೋಗಿ.
ಹಂತ 2. ಈಗ ಮುಖ್ಯ ಪುಟಕ್ಕೆ ಬಂದ ನಂತರ, ನೀವು ಮೈ ಆಧಾರ್ (MY Aadhaar) ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
ಹಂತ 3. ಈಗ ಹೊಸ ಪುಟದಲ್ಲಿ, ನೀವು ಆಧಾರ್ ಸೇವೆಗೆ ಹೋಗಬೇಕಾಗಿದೆ.
ಹಂತ 4. ಈಗ ನೀವು ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಮಾಡುವ ಆಯ್ಕೆಗೆ ಹೋಗಬೇಕಾಗುತ್ತದೆ.

ಕ್ಯಾಪ್ಚಾವನ್ನು

ಹಂತ 5. ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಹೊಸ ಪುಟ ತೆರೆಯುತ್ತದೆ.
ಹಂತ 6. ನೀವು ಹೊಸ ಪುಟಕ್ಕೆ ಬಂದ ತಕ್ಷಣ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಕ್ಯಾಪ್ಚಾವನ್ನು ಸಹ ಭರ್ತಿ ಮಾಡಬೇಕು.
ಹಂತ 7. ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿದ ನಂತರ, ಈಗ ನೀವು ಲಾಗಿನ್ ಬಟನ್ ಕ್ಲಿಕ್ ಮಾಡಬೇಕು.
ಹಂತ 8. ಈಗ ನೀವು ಹೊಸ ಪುಟಕ್ಕೆ ಬರುತ್ತೀರಿ ಮತ್ತು ನಿಮ್ಮ ಆಧಾರ್‌ಗೆ ಯಾವ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿಯುತ್ತದೆ.

Best Mobiles in India

English summary
You can check whether any of your bank accounts are linked with Aadhaar or not.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X