ನಿಮ್ಮ ಮರಣದ ನಂತರ ಫೇಸ್ ಬುಕ್ ಆಕೌಂಟ್ ಏನಾಗಲಿದೆ..?

ನಿಮ್ಮ ಆಸ್ತಿಗೆ ನಾಮಿನಿ ಮಾಡುವ ರೀತಿಯಲ್ಲಿ ಫೇಸ್ ಬುಕ್ ಗೂ ಸಹ ನಾಮಿನಿಯನ್ನು ಮಾಡಬಹುದಾಗಿದೆ. ಅದಕ್ಕಾಗಿ ನಾಮಿನಿ ಪರ್ಸನ್ ಆಡ್ ಮಾಡಬಹುದಾಗಿದೆ.

By Precilla Dias
|

ಸೋಶಿಯಲ್ ಮೀಡಿಯಾ ಕಿಂಗ್ ಎನ್ನಿಸಿಕೊಂಡಿರುವ ಫೇಸ್ ಬುಕ್ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಈಗಾಗಲೇ ಹಲವಾರು ಆಯ್ಕೆಗಳನ್ನು ಬಳಕೆದಾರರಿಗೆ ನೀಡಿರುವ ಫೇಸ್ ಬುಕ್ ಈ ಬಾರಿ ತನ್ನ ಬಳಕೆದಾರರಿಗೆ ತಾವು ಮರಣ ಹೊಂದಿದ ನಂತರದಲ್ಲಿ ತಮ್ಮ ಆಕೌಂಟ್ ಅನ್ನು ಏನಾಗಬೇಕು ಎನ್ನುವುದನ್ನು ನಿರ್ಧರಿಸುವ ಅವಕಾಶವನ್ನು ನೀಡಿದೆ.

ನಿಮ್ಮ ಮರಣದ ನಂತರ ಫೇಸ್ ಬುಕ್ ಆಕೌಂಟ್ ಏನಾಗಲಿದೆ..?

ಈಗಾಗಲೇ ಫೇಸ್ ಬುಕ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದ್ದು, ತಮ್ಮ ಆಕೌಂಟ್ ಗಳನ್ನು ಸೆಕ್ಯೂರ್ ಆಗಿ ತಾವೇ ಬಳಸುತ್ತಾರೆ ಆದರೆ ತಾವು ಕಾಲವಾದ ನಂತರದಲ್ಲಿ ಮಾಡುವುದೇನು ಎಂಬುದಕ್ಕೆ ಫೇಸ್ ಬುಕ್ ಉತ್ತರ ನೀಡಿದೆ.

ನಿಮ್ಮ ಆಸ್ತಿಗೆ ನಾಮಿನಿ ಮಾಡುವ ರೀತಿಯಲ್ಲಿ ಫೇಸ್ ಬುಕ್ ಗೂ ಸಹ ನಾಮಿನಿಯನ್ನು ಮಾಡಬಹುದಾಗಿದೆ. ಅದಕ್ಕಾಗಿ ನಾಮಿನಿ ಪರ್ಸನ್ ಆಡ್ ಮಾಡಬಹುದಾಗಿದೆ.

ನೀವು ನಾಮಿನಿಯನ್ನು ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಾಮಿನಿಯನ್ನು ಮಾಡಬಹುದು.

ಹಂತ ಒಂದು: ನಿಮ್ಮ ಫೇಸ್ ಬುಕ್ ಆಕೌಂಟ್ ಗೆ ಲಾಗ್ ಇನ್ ಆಗಿರಿ.

ಹಂತ ಎರಡು: ಸೆಟ್ಟಿಂಗ್ಸ್ ನಲ್ಲಿ ಸೆಕ್ಯೂರಿಟಿ ಆಪ್ಷನ್ ಕ್ಲಿಕ್ ಮಾಡಿ.

ಹಂತ ಮೂರು: ಲೆಗಸಿ ಕಾಂಟೆಕ್ಟ್ ಮೇಲೆ ಕ್ಲಿಕ್ ಮಾಡಿ.

ಹಂತ ನಾಲ್ಕು: ಆಕೌಂಟ್ ರಿಕ್ವೆಸ್ಟ್ ನೀಡಿರಿ.

ಹಂತ ಐದು: ಎಲ್ಲಾ ಆದ ಮೇಲೆ ಡಿಲಿಟ್ ಆಫ್ಟರ್ ಡೆತ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Best Mobiles in India

Read more about:
English summary
The Facebook platform has options which allow a deceased person’s Facebook profile to be memorialized. Check out more information here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X