ನಿಮ್ಮ ಫೇಸ್‌ಬುಕ್ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

|

ಫೇಸ್‌ಬುಕ್‌ ವಿಶ್ವದ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಗಳಲ್ಲಿ ಒಂದಾಗಿದೆ. ಇನ್ನು ಫೇಸ್‌ಬುಕ್‌ ಮೂಲಕ ನೀವು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಫೇಸ್‌ಬುಕ್‌ ಬಳಕೆದಾರನ ಜೊತೆಗೂ ಸ್ನೇಹ ಸಂಪಾದಿಸಬಹುದಾಗಿದೆ. ಅಲ್ಲದೆ ನಿಮ್ಮ ಭಾವನೆಗಳು, ವಿಚಾರಗಳು, ವಿಡಿಯೋಗಳು, ಫೊಟೋಗಳು ಇತ್ಯಾದಿಗಳನ್ನ ಶೇರ್‌ ಮಾಡಬಹುದು, ನಿಮ್ಮ ಪೋಸ್ಟ್‌ಗಳನ್ನು ಪ್ರತಿಯೊಬ್ಬರೂ ನೋಡಬಹುದಾಗಿದೆ. ಆದರೂ ಕೆಲವೊಮ್ಮೆ ಫೇಸ್‌ಬುಕ್‌ ಖಾತೆಯಿಂದ ದೂರ ಉಳಿಯಬೇಕು ಎಂದು ಕೆಲವರು ಅಂದುಕೊಳ್ಳುತ್ತಾರೆ. ಅಲ್ಲದೆ ತಮ್ಮ ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದಕ್ಕೆ ಮುಂದಾಗುತ್ತಾರೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಅಕೌಂಟ್‌ ಬಳಸಿ ನಿಮಗೆ ಬೇಸರವಾಗಿದೆಯಾ? ನೀವು ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡಬೇಕು ಎಂದು ಕೊಂಡಿದ್ದರೆ ಚಿಮತಿಸಬೇಕಾದ ಅಗತ್ಯವಿಲ್ಲ. ಪೇಸ್‌ಬುಕ್‌ನಲ್ಲಿ ನಿಮ್ಮ ಅಕೌಂಟ್‌ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕಿದೆ. ಹಾಗಾದ್ರೆ ಫೇಸ್‌ಬುಕ್‌ ಅಕೌಂಟ್‌ ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಫೇಸ್‌ಬುಕ್‌ನಲ್ಲಿ ಅಕೌಂಟ್‌ ಹೊಂದಿರುವ ಬಳಕೆದಾರ ತನ್ನ ಅಕೌಂಟ್‌ ಅನ್ನು ಡಿಲೀಟ್‌ ಮಾಡಬಹುದಾಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವ ಹಾಗೇ ಫೆಸ್‌ಬುಕ್ ಖಾತೆಯನ್ನು ಕೇವಲ ಡಿಆಕ್ಟಿವೇಟ್ ಮಾತ್ರ ಮಾಡಬಹುದಾಗಿತ್ತು. ಅಲ್ಲದೆ ನಿಮಗೆ ಬೇಕೆನಿಸಿದಾಗ ಮತ್ತೆ ನಿಮ್ಮ ಅಕೌಂಟ್‌ ಅನ್ನು ಆಕ್ಟಿವ್‌ ಮಾಡಬಹುದಾಗಿತ್ತು. ಆದರೆ, ಫೇಸ್‌ಬುಕ್‌ ಅಕೌಂಟ್‌ ಅನ್ನು ಶಾಶ್ವತವಾಗಿಯೂ ಸಹ ಡಿಲೀಟ್‌ ಮಾಡಬಹುದಾಗಿದೆ. ನೀವು ನಿಮ್ಮ ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಒಂದೇ ಒಂದು ಲಿಂಕ್ ಸಾಕು. https://www.facebook.com/help/delete_account ಎಂದು ನಿಮ್ಮ URL ನಲ್ಲಿ ಹಾಕಿ ಎಂಟರ್ ನೀಡಿದರೆ ನಿಮ್ಮ ಅಕೌಂಟ್‌ ಶಾಶ್ವತವಾಗಿ ಡಿಲೀಟ್ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

ನಿಮ್ಮ ಫೇಸ್‌ಬುಕ್ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡುವ ಮೊದಲು, ನಿಮ್ಮ ಅಕೌಂಟ್‌ನಲ್ಲಿರುವ ಎಲ್ಲಾ ಡೇಟಾವನ್ನು ಒಂದೇ ಫೈಲ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಇದಾದ ನಂತರ ಡಿಲೀಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನ ಅನುಸರಿಸಿ.

ಡೌನ್‌ಲೋಡ್

ಹಂತ 1: ಸೆಟ್ಟಿಂಗ್‌ಗಳಿಗೆ ಹೋಗಿ ನಂತರ '' ನಿಮ್ಮ ಮಾಹಿತಿಯನ್ನು ಡೌನ್‌ಲೋಡ್ ಮಾಡಿ '' ಕ್ಲಿಕ್ ಮಾಡಿ.

ಹಂತ 2: ಒಮ್ಮೆ ನೀವು ನಿಮ್ಮ ಎಲ್ಲಾ ಡೇಟಾವನ್ನು ಡೌನ್‌ಲೋಡ್ ಮಾಡಿದ ನಂತರ '' Account ownership and control option'' ಕ್ಲಿಕ್ ಮಾಡಿ.

ಹಂತ 3: ನಂತರ ನೀವು ''Deactivation and deletion option '' ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Delete account ಆಯ್ಕೆಯನ್ನು ಆರಿಸಿ.

ಫೇಸ್‌ಬುಕ್

ಹಂತ 4: ಅದರ ನಂತರ, ಫೇಸ್‌ಬುಕ್ ಗುರುತಿಗಾಗಿ ಪಾಸ್‌ವರ್ಡ್ ಕೇಳುತ್ತದೆ ಎಂಟರ್ ಮಾಡಿ ನಂತರ ಮತ್ತೆ Delete account ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5: ಇದೀಗ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಆಗಲಿದೆ. ಆದರೂ ನೀವು ಮುಂದಿನ 30 ದಿನಗಳ ಒಳಗೆ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು ಎಂದು ಹೇಳುವ ಟಿಪ್ಪಣಿಯನ್ನು ಕಾಣಬಹುದಾಗಿದೆ. ಇಲ್ಲಿ ನೀವು 30 ದಿನಗಳಲ್ಲಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ಗೆ ಲಾಗ್ ಇನ್ ಆಗದಿದ್ದರೆ, ನಿಮ್ಮ ಖಾತೆಯನ್ನು ಶಾಶ್ವತವಾಗಿ ಅಳಿಸಲಾಗುತ್ತದೆ.

Most Read Articles
Best Mobiles in India

Read more about:
English summary
many people want to move away from Facebook. Well, you can delete your account permanently in that case.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X