ಕಳೆದ ಸಿಮ್, ಡಿಎಲ್ ಯಾವುದೇ ದಾಖಲೆ ಪಡೆಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ!!..ಏಕೆ ಗೊತ್ತಾ?

By Bhaskar

  ಪಾಸ್‌ಪೋರ್ಟ್, ಸಿಮ್‌ಕಾರ್ಡ್ ಡ್ರೈವಿಂಗ್ ಲೈಸನ್ಸ್, ವಾಹನಗಳ ನೊಂದಣಿ ಪುಸ್ತಕ, ಶೈಕ್ಷಣಿಕ ಪ್ರಮಾಣ ಪತ್ರಗಳು, ಪಾನ್‌ಕಾರ್ಡ್ ಗಳು ಇನ್ನು ಮುಂತಾದ ಕಳೆದುಹೋದ ವಸ್ತುಗಳ/ದಾಖಲಾತಿಗಳನ್ನು ಪುನರ್ ಪಡೆಯಲು ಕೋರಿಕೆ ಸಲ್ಲಿಸುವ ಸಂದರ್ಭಗಳಲ್ಲಿ ಕಳೆದು ಹೋದ ವಸ್ತುಗಳು/ದಾಖಲಾತಿಗಳ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ವರದಿ ಸಲ್ಲಿಸುವುದು ಅನಿವಾರ್ಯ

  ಹಾಗಾಗಿ, ಕಳೆದುಹೋದ/ಕಾಣೆಯಾದ ವಸ್ತುಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗದೆ ನೇರವಾಗಿ ಮೊಬೈಲ್ ಫೋನ್ ಮತ್ತು ವೆಬ್‌ಸೈಟ್ ಮುಖಾಂತರ ವರದಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಬೆಂಗಳೂರು ಪೊಲೀಸ್ ಯೋಜನೆಯನ್ನು ರೂಪಿಸಿದೆ. ಈ ಸೇವೆಯಿಂದಾಗಿ ದಾಖಲಾತಿಗಳನ್ನು ಪುನರ್ ಪಡೆಯಲು ಕೇವಲ ಒಂದು ವೆಬ್‌ಸೈಟ್‌ ಮೂಲಕ ದೂರು ದಾಖಲಿಸಿದರೆ ಸಾಕಾಗುತ್ತದೆ.

  ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

  ಈ ಯೋಜನೆಯಿಂದಾಗಿ ಸಾರ್ವಜನಿಕರು ವರದಿಯನ್ನು ಯಾವುದೇ ಸ್ಥಳದಿಂದ ಸಲ್ಲಿಸಬಹುದು ಮತ್ತು ವರದಿದಾರರು ತಾವು ಸಲ್ಲಿಸಿದ ವರದಿಯ ಪ್ರತಿಯಾಗಿ ಡಿಜಿಟಲ್ ಸಹಿಯುಳ್ಳ ಸ್ವೀಕೃತಿಯನ್ನು ತಮ್ಮ ಇ-ಮೇಲ್ ಮುಖಾಂತರ ಪಡೆಯಬಹುದು. ಹಾಗಾದರೆ, ಸರ್ಕಾರದ ಆ ವೆಬ್‌ಸೈಟ್ ಯಾವುದು? ಈ ಬಗ್ಗೆ ಸಾಮಾನ್ಯವಾಗಿ ಕೇಳಲಿರುವ ಪ್ರಶ್ನೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  'ಇ-ಲಾಸ್ಟ್ ಅಂಡ್ ಫೌಂಡ್' ವೆಬ್‌ಸೈಟ್‌!

  ಆನ್‌ಲೈನ್ ಮುಖಾಮತರ ಕಳೆದುಕೊಂಡ ವಸ್ತುಗಳ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ 'ಇ-ಲಾಸ್ಟ್ ಅಂಡ್ ಫೌಂಡ್' (e-Lost & Found Report) ಎಂಬ ವೆಬ್‌ಸೈಟ್‌ ರಚಿಸಿದೆ. ಈ ವೆಬ್‌ಸೈಟ್ ಮೂಲಕ ಕಳೆದುಹೋದ ವಸ್ತುಗಳ ಬಗ್ಗೆ ದೂರುದಾಖಲಿಸಬಹುದಾಗಿದ್ದಯ, ನೀವು ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ.

  ಹೇಗೆ ಕಾರ್ಯ ನಿರ್ವಹಿಸುತ್ತದೆ ವೆಬ್‌ಸೈಟ್?

  ಬೆಂಗಳೂರು ನಗರದಲ್ಲಿ ಕಳೆದುಹೋದ ವಸ್ತು/ದಾಖಲೆಗಳ ವಿವರಗಳನ್ನು ನೋಂದಾಯಿಸಲು ಈ ಅಪ್ಲಿಕೇಷನ್ ಸುಲಭವಾಗಿಸಿದೆ.ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದ್ದು, ಪ್ರಜೆಗಳಿಗೆ ಅನುಕೂಲವಾಗಲು ಈ ವೆಬ್‌ಸೈಟ್‌ ರಚಿಸಿದೆ. ಹಾಗಾಗಿ, ನೀವು ಏನನ್ನೇ ಕಳೆದುಕೊಂಡರು ಈ ವೆಬ್‌ಸೈಟ್‌ ಮೂಲಕ ದೂರು ದಾಖಲಿಸಬಹುದು.! ಎಚ್ಚರ ಸುಳ್ಳು ದೂರಿಗೆ ಶಿಕ್ಷೆ ವಿಧಿಸಲಾಗುತ್ತದೆ.

  ಸಾಮಾನ್ಯ ಪ್ರಾಶ್ನೆಗಳು ಮತ್ತು ಉತ್ತರ.

  'ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್‌ ಕಾರ್ಯನಿರ್ವಹಣೆ ಬಗ್ಗೆ ಎಲ್ಲರಿಗೂ ಸಾಮಾನ್ಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.! ಹಾಗಾಗಿ, ಪೊಲೀಸ್ ಇಲಾಖೆ ನೀಡಿರುವ ಹಲವು ಸಾಮಾನ್ಯ ಪ್ರಶ್ನೆಗಳು ಮತ್ತು ಅದಕ್ಕೆ ನೀಡಿರುವ ಉತ್ತರಗಳನ್ನು ಈ ಕೆಳಗೆ ತಿಳಿಸಲಾಗಿದೆ. ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.

  ಪ್ರಶ್ನೆ 1: ಯಾವ ವಿಧಾನದಲ್ಲಿ ವರದಿಯನ್ನು ದಾಖಲಿಸಬೇಕು ?

  ಉತ್ತರ: ನಕಲು ದಾಖಲಾತಿಗಳನ್ನು ಪಡೆಯುವ ಸಂದರ್ಭಗಳಲ್ಲಿ ದಾಖಲಾತಿಗಳು ಕಳೆದು ಹೋದ ಬಗ್ಗೆ ಪೊಲೀಸ್ ವರದಿಯನ್ನು ಸಲ್ಲಿಸುವಂತೆ ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ನಕಲು ದಾಖಲಾತಿಗಳು/ವಸ್ತುಗಳು ಕಳೆದುಹೋದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ವರದಿಯನ್ನು ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಈ ವೆಬ್ ಸೈಟ್ ನ ಸಹಾಯ ದಿಂದಾಗಿ ಮೊಬೈಲ್ ಮತ್ತು ಇಂಟರ್ನೆಟ್ ಮುಖೇನ ಬೆಂಗಳೂರು ನಗರದಲ್ಲಿ ಕಳೆದುಹೋದ ದಾಖಲಾತಿಗಳು/ವಸ್ತುಗಳ ಬಗ್ಗೆ ವರದಿಯನ್ನು ಸಲ್ಲಿಸಬಹುದು.

  ಪ್ರಶ್ನೆ 2: ವಸ್ತು ಕಳೆದು ಹೊದ ಸಮಯ ಮತ್ತು ದಿನಾಂಕ ಗೊತ್ತಿಲ್ಲವಾದಲ್ಲಿ ಎನು ಮಾಡಬಹುದು ?

  ಉತ್ತರ:ಹೆಚ್ಚು ಸಂದರ್ಭಗಳಲ್ಲಿ ದಾಖಲಾತಿಗಳು/ ವಸ್ತುಗಳು ಕಳೆದುಹೋದ ದಿನಾಂಕ ಮತ್ತು ಸಮಯದ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲ. ಈ ಸಂದರ್ಭಗಳಲ್ಲಿ ಯಾವ ದಿನಾಂಕದಿಂದ ಮತ್ತು ಯಾವ ದಿನಾಂಕದ ವರೆಗಿನ ಅವಧಿಯಲ್ಲಿ ಕಳೆದುಹೋದ ಬಗ್ಗೆ ಮಾಹಿತಿ ನೀಡುವುದು.

  ಪ್ರಶ್ನೆ 3: ವಸ್ತು ಕಳೆದ ನಿಖರ ಸ್ಥಳ ಗೊತ್ತಿಲ್ಲದಿದ್ದಲ್ಲಿ ಎನು ಮಾಡಬಹುದು ?

  ಉತ್ತರ: ಹೆಚ್ಚುಬಾರಿ ವ್ಯಕ್ತಿಯ ಪ್ರಮಾಣ ಮಾಡುವ ಸಂದರ್ಭಗಳಲ್ಲಿ ದಾಖಲಾತಿ/ ಸ್ವತ್ತುಗಳನ್ನು ಕಳೆದುಕೊಳ್ಳಬಹುದು, ಮತ್ತು ಅಂತಹ ವ್ಯಕ್ತಿಗೆ ದಾಖಲಾತಿಗಳ ಬಗ್ಗೆ ಬಹು ದಿನಗಳ ನಂತರ ಗೊತ್ತಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮಗೆ ಗೊತ್ತಿರುವ ಮಾಹಿತಿಯನ್ನು ಭರ್ತಿಮಾಡಿ. ಜಿಲ್ಲೆ ಗೊತ್ತಿದಲ್ಲಿ ನಮೂದಿಸಿ. ಬೆಂಗಳೂರು ನಗರದ ವ್ಯಾಪ್ತಿ ಹೊರಗೆ ಕಳೆದುಕೊಂಡ ದಾಖಲಾತಿ/ವಸ್ತುಗಳ ಬಗ್ಗೆ ನೀಡಿದ ವರದಿಯು ಕಾನೂನು ಮಾನ್ಯತೆ ಪಡೆಯುವುದಿಲ್ಲ.

  ಪ್ರಶ್ನೆ 4: ವಸ್ತು ಕಳೆದ ಬಗ್ಗೆ ವರದಿಯವರ ನೀಡಿದ ನಂತರ ಪೊಲೀಸರ ಕ್ರಮ ಎನು ?

  ಉತ್ತರ: ಕಳೆದುಹೋದ ದಾಖಲಾತಿ/ವಸ್ತುಗಳ ಬಗ್ಗೆ ದಾಖಲಾದ ವರದಿಗಳು ಎಸ್.ಸಿ.ಆರ್.ಬಿ ನಲ್ಲಿ ದಾಖಲಾಗುತ್ತವೆ. ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ/ ತನಿಖೆ ಕೈಗೊಳ್ಳಲಾಗುವುದಿಲ್ಲ.

  ಪ್ರಶ್ನೆ 5: ವರದಿಯನ್ನು ನೊಂದಯಿಸಿದ ನಂತರ ಎನಾಗುತ್ತದೆ ?

  ಉತ್ತರ:ಸಹಿಯಾದ ಕಳೆದುಹೋದ ಬಗ್ಗೆ ವರದಿಗಳು ಬಳಕೆದಾರರ ಮೊಬೈಲ್ ಪೋನ್ ಮತ್ತು ಇ-ಮೇಲ್ ಐಡಿಗೆ ರಾವನೆಯಾಗುತ್ತದೆ.

  ಪ್ರಶ್ನೆ 6: ಯಾವ ರೀತಿಯ ಪಿರ್ಯಾದುಗಳನ್ನು ದಾಖಲಿಸಬಹುದು ?

  ಉತ್ತರ: ಬೆಂಗಳೂರು ನಗರ ವ್ಯಾಪ್ತಿ ಪ್ರದೇಶದಲ್ಲಿ ಕಳೆದುಹೋದ ದಾಖಲಾತಿ/ ವಸ್ತುಗಳ ಬಗ್ಗೆ ಮಾತ್ರ ಈ ವೆಬ್ ಸೈಟ್ ನಲ್ಲಿ ಮಾಹಿತಿ ಲಭಿಸುತ್ತದೆ.ಬೆಂಗಳೂರು ನಗರದ ಹೊರಗೆ ಕೆಳೆದುಹೋದ ದಾಖಲಾತಿಗಳು/ವಸ್ತುಗಳ ಬಗ್ಗೆ ಈ ವೆಬ್ ಸೈಟ್ ನಲ್ಲಿ ದಾಖಲಿಸಿದ ವರದಿಯು ಕಾನೂನು ಮಾನ್ಯತೆ ಪಡೆಯುವುದಿಲ್ಲ. ಕಳ್ಳತನ ಮತ್ತು ಇತರೆ ಅಪರಾಧಗಳಿಗಾಗಿ ಡಯಲ್ 100 ಬಳಸಿ ಮತ್ತು ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

  ಪ್ರಶ್ನೆ 7: ವರದಿಯನ್ನು ದಾಖಲಿಸಿದ ನಂತರ ಈ ಮೇಲ್ ಬಾರದಿದ್ದರೆ ಎನು ಮಾಡಬಹುದು ?

  ಉತ್ತರ: ತಪ್ಪು, ಇ-ಮೇಲ್ ವಿಳಾಸವನ್ನು ನೀಡಿದಲ್ಲಿ ತಮ್ಮ ಮೊಬೈಲ್ ಪೋನ್ ನಲ್ಲಿ ತಮ್ಮ ವರಿದಿಗೆ ನೀಡಿರುವ ಎಲ್.ಎ (ಲಾಸ್ಟ್ ಆರ್ಟಿಕಲ್) ನಂಬರ್ ನಲ್ಲಿ ಆಕ್ಸೇಸ್ ಮಾಡಿ ವರದಿಯನ್ನು ಪಡೆದುಕೊಳ್ಳಬಹುದು. ಅಥವಾ ಎಸ್.ಸಿ.ಆರ್.ಬಿ ರವರನ್ನು ಸಂಪರ್ಕಿಸಿ ವರದಿ ಪಡೆದುಕೊಳ್ಳಬಹುದು.

  ಪ್ರಶ್ನೆ 8:ವಸ್ತು ಕಳೆದುಕೊಂಡ ಬಗ್ಗೆ ವರದಿಯನ್ನು ಹೇಗೆ ಪರಿಶೀಲಿಸುವುದು ?

  ಉತ್ತರ: ಬಿಸಿಪಿ. ವೆಬ್ ಸೈಟ್ ನಲ್ಲಿ ಎಲ್.ಎ ನಂಬರ್ ಸಹಾಯದಿಂದ ಯಾರಾದರೂ ವರದಿಯನ್ನು ಪರಿಶೀಲಿಸಬಹುದು.

  ಪ್ರಶ್ನೆ 9: ನಾನು ವಿದೇಶಿಯನಾದರೂ ಈ ಅಪ್ಲಿಕೇಶನ್ ಮುಖಾಂತರ ವರದಿಯನ್ನು ಸಲ್ಲಿಸಬಹುದೆ ?

  ಉತ್ತರ: ನೀವು ಯಾವುದಾದರು ದಾಖಲಾತಿಗಳನ್ನು/ ವಸ್ತುಗಳನ್ನು ಕೆಳೆದುಕೊಂಡಿದಲ್ಲಿ ಈ ಅಪ್ಲಿಕೇಶನ್ ನ ಸಹಾಯದಿಂದ ವರದಿಯನ್ನು ದಾಖಲಿಸಬಹುದು.

  ಪ್ರಶ್ನೆ 10: ದೂರು ದಾಖಲಾದ ನಂತರ ಪೊಲೀಸರಿಂದ ವಿಚಾರಣೆಯಾಗುತ್ತದೆಯೆ ?

  ಉತ್ತರ: ಇದು ಪೊಲೀಸರಿಗೆ ಕೇವಲ ಮಾಹಿತಿಯಾಗಿರುತ್ತದೆ. ಈ ಆಧಾರದ ಮೇಲೆ ಯಾವುದೇ ವಿಚಾರಣೆ/ತನಿಖೆಯನ್ನು ಕೈಗೊಳ್ಳುವುದಿಲ್ಲ. ಈ ವರದಿಯು ಯಾವುದೇ ಏಜೆನ್ಸಿಯ ಮಾಹಿತಿಗಾಗಿ ಮತ್ತು ಪರಿಶೀಲನೆಗಾಗಿ ವಿದ್ಯುನ್ಮಾನ ದಾಖಲೆಯಾಗಿರುತ್ತೆ.

  ಪ್ರಶ್ನೆ 11: ನಕಲು ಪ್ರತಿಯನ್ನು ಪಡೆಯಲು ಮಾನ್ಯತೆ ಪಡೆಯುವುದೆ ?

  ಉತ್ತರ: ಹೌದು, ವರದಿಯು ಡಿಜಿಟಲ್ ಸಹಿಯನ್ನು ಹೊಂದಿದೆ ಮತ್ತು ಯಾವುದೇ ಪ್ರಾಧಿಕಾರವು ನಕಲನ್ನು ನೀಡಲು ಆನ್ ಲೈನ್ ಮೂಲಕ ಪರಿಶೀಲಿಸ ಬಹುದು.

  ಪ್ರಶ್ನೆ 12: ಸುಳ್ಳು ದೂರು ದಾಖಲಾದಲ್ಲಿ ಅರ್ಜಿದಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದೆ ?

  ಉತ್ತರ: ಪೊಲೀಸರಿಗೆ ತಪ್ಪು ಮಾಹಿತಿಯನ್ನು ನೀಡುವುದು ಶಿಕ್ಷಾರ್ಹ ಅಪರಾಧ, ತಪ್ಪು ಮಾಹಿತಿ ನೀಡುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪ್ರಶ್ನೆ 13: ದೂರು ಅರ್ಜಿಯ ಪ್ರತಿಯನ್ನು ಪೊಲೀಸ್ ಠಾಣೆಯಲ್ಲಿ ಸಲ್ಲಿಸಬೇಕೆ? ?
  ಉತ್ತರ:
  ಇಲ್ಲ

  ಪ್ರಶ್ನೆ 14: ಬೆಂಗಳೂರಿನ ಹೊರಗೆ ದಾಖಲಾತಿಗಳನ್ನು ಕಳೆದುಕೊಂಡರೆ ಬೆಂಗಳೂರಿನಲ್ಲಿ ದೂರನ್ನು ದಾಖಲಿಸಬಹುದೆ ?
  ಉತ್ತರ:
  ಇಲ್ಲ, ಅಂತಹ ದಾಖಲಾತಿಗಳು ಕಾನೂನು ಸಮ್ಮತವಾಗಿರುವುದಿಲ್ಲ.

  ಪ್ರಶ್ನೆ 15:ದಾಖಲಾದ ದೂರಿನ ದಿನಾಂಕವನ್ನು ಬದಲಾಯಿಸಬಹುದೆ ?
  ಉತ್ತರ:
  ಹೌದು, ನೀವು ವೀವ್ ರಿಜಿಸ್ಟರ್ ರಿಪೋರ್ಟ್ ಗುಂಡಿಯನ್ನು ಒತ್ತಿರಿ.

  ಪ್ರಶ್ನೆ 16: ಡೇಟಾ ಕನೆಕ್ಷನ್ ಕಡ್ಡಾಯವೆ ?
  ಉತ್ತರ:
  ಹೌದು

  ಪ್ರಶ್ನೆ 17: ಅಪ್ಲಿಕೇಶನ್ ಬಳಕೆಯಲ್ಲಿ ಮತ್ತು ಡೌನ್ ಲೋಡ್ ಮಾಡಿದಲ್ಲಿ ಶುಲ್ಕ ಅನ್ವಯಿಸಲಾಗುವುದೆ ?
  ಉತ್ತರ:
  ಬೆಂಗಳೂರು ನಗರ ಪೊಲೀಸ್ ಈ ಸೇವೆಯನ್ನು ಉಚಿತವಾಗಿ ಒದಗಿಸಿದೆ. ನಿಮ್ಮ ಮೊಬೈಲ್ ಆಪರೇಟರ್ ಗಳು, ಜಿಪಿಆರ್ ಎಸ್/3ಜಿ ಬಳಕೆಗೆ ಶುಲ್ಕ ವಿಧಿಸಬಹುದು. ಡೇಟಾ ಟಾರಿಫ್ ಮತ್ತು ಇತರೆ ವಿವರಗಳಿಗೆ ನಿಮ್ಮ ಮೊಬೈಲ್ ಆಪರೇಟರ್ ರವರುಗಳೊಂದಿಗೆ ಪರಿಶೀಲಿಸಿ.

  ಪ್ರಶ್ನೆ 18: ಅಪ್ಲಿಕೇಶನ್ ಗೆ ಲಾಗಿನ್ ಆಗುವುದು ಹೇಗೆ ?
  ಉತ್ತರ:
  ಹೊಸ ಮತ್ತು ಪ್ರಚಲಿತ ಬಳಕೆದಾರರುಗಳು ಲಾಗಿನ್ ಆಗಲು ಎರಡು ಪ್ರತ್ಯೇಕ ವಿಧಾನಗಳಿವೆ.ಅಪ್ಲಿಕೇಶನ್ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ವಿಳಾಸವನ್ನು ನಮೂದಿಸತಕ್ಕದ್ದು.ಅಪ್ಲಿಕೇಶನ್ ಅನ್ನು ಬಳಸುವ ಹೊಸ ಬಳಕೆದಾರರು ರಿಜಿಸ್ಟೇಷನ್ ಮಾಡಿಕೊಳ್ಳುವಾಗ ಮತ್ತು ಇ-ಮೇಲ್ ವಿಳಾಸವನ್ನು ತುಂಬಿದ ನಂತರ ತಮ್ಮ ಮೊಬೈಲ್ ಪೊನ್ ಮತ್ತು ಇ-ಮೇಲ್ ವಿಳಾಸಕ್ಕೆ ಒನ್ ಟೈಮ್ ರಹಸ್ಯಪದ (OTP) ವನ್ನು ಕಳುಹಿಸಲಾಗುವುದು. ಈ ರಹಸ್ಯಪದದ(OTP) ಸಹಾಯದಿಂದ ಉಳಿದ ವಿವರಗಳನ್ನು ಭರ್ತಿ ಮಾಡಬಹುದು.

  ಪ್ರಶ್ನೆ 19: ಲಾಸ್ಟ್ ಆರ್ಟಿಕಲ್ ರಿರ್ಪೊಟ್ ನಲ್ಲಿ ರಿಜಿಸ್ಟರ್ ಆಗುವುದು ಹೇಗೆ ?
  ಉತ್ತರ:
  ಮುಖಪುಟದಲ್ಲಿರುವ "ರಿಜಿಸ್ಟರ್ ಲಾಸ್ಟ್ ರಿಪೋರ್ಟ್ " ಕ್ಲಿಕ್ ಮಾಡಿ. ಅರ್ಜಿದಾರರು ತಮ್ಮ ವಿಳಾಸ. ಮೊಬೈಲ್ ನಂಬರ್ ಇತ್ಯಾದಿಗಳನ್ನು ನಮೂದಿಸುವುದು. ದಾಖಲಾತಿಗಳನ್ನು ಕೆಳೆದುಕೊಂಡ ಸ್ಥಳ. ಸಮಯ, ಜಿಲ್ಲೆ, ಪೊಲೀಸ್ ಠಾಣೆ ಮುಂತಾದ ವಿವರಗಳನ್ನು ಭರ್ತಿ ಮಾಡುವುದು. ಕಳೆದುಕೊಂಡ ದಾಖಲೆಗಳ ವಿವರಗಳನ್ನು ನಮೂದಿಸುವುದು.ಎಲ್ಲಾ ವಿವಿರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಎಲ್.ಎ (ಲಾಸ್ಟ್ ಆರ್ಟಿಕಲ್) ನಂಬರನ್ನು ತಮಗೆ ನೀಡಲಾಗುವುದು.

  ಪ್ರಶ್ನೆ 20:ವಸ್ತು ಕಳೆದ ವರದಿಯನ್ನು ಹೇಗೆ ಪಡೆಯಬಹುದು ?
  ಉತ್ತರ:
  ನಿಮ್ಮ ವರದಿಯು ವಿದ್ಯುನ್ಮಾನ ಪ್ತತಿಯನ್ನು ಪಡೆಯಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ. ವರದಿಯನ್ನು ಡೌನ್ ಲೋಡ್ ಮಾಡಲು " ಲಾಸ್ಟ್ ಆರ್ಟಿಕಲ್ ರಿಪೊರ್ಟ್ " ಅನ್ನು ಸೆಲೆಕ್ಟ್ ಮಾಡುವುದು. ವರದಿಯ ಪ್ರತಿಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮತ್ತು ಇ-ಮೇಲ್ ವಿಳಾಸ ನೀಡಿದಲ್ಲಿ ಪ್ರತಿಯನ್ನು ತಮ್ಮ ಇ-ಮೇಲ್ ವಿಳಾಸಕ್ಕೆ ಮೇಲ್ ಮಾಡಲಾಗುವುದು.

  ಪ್ರಶ್ನೆ 21: ನನ್ನ ವರದಿಯನ್ನು ಬೇರೆ ಯಾರು ತೆಗೆದುಕೊಳ್ಳದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ?
  ಉತ್ತರ: ಬೆಂಗಳೂರು ನಗರ ಪೋಲಿಸ್ ವೆಬ್ ಸೈಟ್ ನಲ್ಲಿ ಪ್ರವೇಶಿಸಲು ಮತ್ತು ಕಳೆದುಹೋದ ವಸ್ತುಗಳ ವರದಿ/ಮಾಹಿತಿಯನ್ನು ಪಡೆಯಲು ವರದಿಯನ್ನು ದಾಖಲು ಮಾಡಿದ ಸಂದರ್ಭದಲ್ಲಿ ಬಳಸಿದ ಮೊಬೈಲ್ ನಂಬರ್ / ಇಮೇಲ್ ಐಡಿ ಮತ್ತು ಎಲ್.ಎ ನಂಬರ್ ನ್ನು ನಮೂದಿಸಬೇಕು. ಅಪೂರ್ಣ ಮಾಹಿತಿಯನ್ನು ನೀಡಿದಲ್ಲಿ ವರದಿಯು ಡೌನ್ ಲೋಡ್ ಆಗುವುದಿಲ್ಲ.

  How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?

  ಈ ಮಾಹಿತಿಯನ್ನು ಶೇರ್ ಮಾಡಿ. ಮತ್ತು ಎಲ್ಲರಿಗೂ ಮಾಹಿತಿ ತಿಳಿಸಿ

  ಕೃಪೆ: ಕರ್ನಾಟಕ ಪೊಲೀಸ್ ಇಲಾಖೆ

  English summary
  There is no need to visit a police station and you are e- mailed a digitally-signed copy on the app itself acknowledging your lost report.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more