ಮತ ಚಲಾವಣೆಗೆ ನಿಮ್ಮ ಕ್ಷೇತ್ರದ ಬದಲಾವಣೆಯನ್ನು ಆನ್ ಲೈನ್ ನಲ್ಲೇ ಮಾಡಿಕೊಳ್ಳಿ!

By Gizbot Bureau
|

ಎಲೆಕ್ಷನ್ 2019: ವೋಟರ್ ಐಡಿಯಲ್ಲಿ ನಿಮ್ಮ ಅಡ್ರೆಸ್ ನ್ನು ಆಲ್ ಲೈನ್ ನಲ್ಲಿ ಬದಲಾಯಿಸುವುದು ಹೇಗೆ ಮತ್ತು ಮನೆಯಿಂದ ಹೊರಗಡೆ ಇದ್ದರೂ ಕೂಡ ನಿಮ್ಮ ಮತವನ್ನು ಚಲಾಯಿಸುವುದು ಹೇಗೆ?

ಮತ ಚಲಾವಣೆಗೆ ನಿಮ್ಮ ಕ್ಷೇತ್ರದ ಬದಲಾವಣೆಯನ್ನು ಆನ್ ಲೈನ್ ನಲ್ಲೇ ಮಾಡಿಕೊಳ್ಳಿ!

ಮುಂಬರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.ಆನ್ ಲೈನ್ ನಲ್ಲಿ ಹಲವು ರೀತಿಯ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಚುನಾವಣಾ ಆಯೋಗವು ದೇಶದ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ಅದರಲ್ಲಿ ಪ್ರಮುಖವಾಗಿ ವೋಟರ್ ಐಡಿಯಲ್ಲಿರುವ ನಿಮ್ಮ ವಿಳಾಸವನ್ನು ಬದಲಾಯಿಸಿಕೊಳ್ಳುವುದು ಕೂಡ ಸೇರಿದೆ.

ಒಂದು ವೇಳೆ ನೀವು ನಿಮ್ಮ ಸಿಟಿಯಿಂದ ದೂರವಿದ್ದರೆ, ಅಥವಾ ನಿಮ್ಮ ಮನೆಯನ್ನು ಬದಲಾಯಿಸಿ ಹೊಸ ಮನೆಗೆ ಶಿಫ್ಟ್ ಆಗಿದ್ದರೆ ವೋಟರ್ ಐಡಿಯಲ್ಲಿ ನಮೂದಾಗಿರುವ ನಿಮ್ಮ ಹಳೆಯ ವಿಳಾಸವನ್ನು ಬದಲಾಯಿಸಿಕೊಂಡು ಹೊಸ ವಿಳಾಸಕ್ಕೆ ಅಪ್ ಡೇಟ್ ಆಗುವುದಕ್ಕೆ ಆನ್ ಲೈನ್ ನಲ್ಲಿಯೇ ಅವಕಾಶವಿದೆ.”ಫಾರ್ಮ್ 6” ನ್ನು ಆನ್ ಲೈನಿನ ರಾಷ್ಟ್ರೀಯ ವೋಟರ್ ಸೇವೆಯ ಪೋರ್ಟಲ್ ನಲ್ಲಿ ತುಂಬಿಸುವ ಮೂಲಕ ಮಾಡಿಕೊಳ್ಳಬಹುದು. ವೆಬ್ ಸೈಟ್ ವಿಳಾಸ ಇಂತಿದೆ- https://www.nvsp.in/Forms/Forms/form6.

ಮೊದಲ ಬಾರಿಗೆ ವೋಟರ್ ಐಡಿ ಪಡೆದುಕೊಳ್ಳುವವರು ಕೂಡ ಇದೇ ವಿಧಾನದಿಂದ ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಹೊಸ ವೋಟರ್ ಅಥವಾ ಹತ್ತಿರದ ಕ್ಷೇತ್ರಕ್ಕೆ ಮತದಾನ ಮಾಡುವುದಕ್ಕೆ ನಿಮ್ಮ ಹೆಸರನ್ನು ನೊಂದಾವಣಿ ಮಾಡಿಕೊಳ್ಳುವುದು ಹೇಗೆ, ಆನ್ ಲೈನ್ ನಲ್ಲಿಯೇ ಅಪ್ಲೈ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಸೂಚನೆ: ಒಂದು ವಿಳಾಸದಲ್ಲಿ ಒಂದೇ ಕ್ಷೇತ್ರದಲ್ಲಿ ಒಂದು ವೋಟರ್ ಐಡಿಯನ್ನು ಹೊಂದಿರುವುದಕ್ಕೆ ಮಾತ್ರವೇ ಅವಕಾಶವಿರುತ್ತದೆ. ಎರಡು ಕ್ಷೇತ್ರದಲ್ಲಿ ಮತದಾನ ಮಾಡುವುದು ಕಾನೂನುಬಾಹಿರವಾಗಿರುತ್ತದೆ ಮತ್ತು ಒಂದು ವೇಳೆ ತಪ್ಪಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಕ್ಷೇತ್ರದ ಬದಲಾವಣೆಗೆ ಅಥವಾ ಹೊಸದಾಗಿ ವೋಟರ್ ಐಡಿ ಪಡೆಯುವುದಕ್ಕಾಗಿ ಫಾರ್ಮ್ 6 ನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಬಹುದು.

ಆಗತ್ಯ ಡಾಕ್ಯುಮೆಂಟ್ ಗಳು:

ಆಗತ್ಯ ಡಾಕ್ಯುಮೆಂಟ್ ಗಳು:

ಪಾಸ್ ಪೋರ್ಟ್ ಸೈಜಿನ ಫೋಟೋ, ವಯಸ್ಸು ಮತ್ತು ವಿಳಾಸವನ್ನು ಸಾಕ್ಷೀಕರಿಸುವ ದಾಖಲಾತಿಗಳು

ಬಳಕೆದಾರರು ಪಾಸ್ ಪೋರ್ಟ್ ಸೈಜಿನ ಫೋಟೋ, ವಯಸ್ಸಿನ ಸಾಕ್ಷಿ ಮತ್ತು ವಿಳಾಸವನ್ನು ಸಾಕ್ಷೀಕರಿಸುವ ದಾಖಲಾತಿಗಳನ್ನು ಸಪೋರ್ಟಿಂಗ್ ಡಾಕ್ಯುಮೆಂಟ್ ಸೆಕ್ಷನ್ ನಲ್ಲಿ ಅಪ್ ಲೋಡ್ ಬಟನ್ ಕ್ಲಿಕ್ಕಿಸುವ ಮೂಲಕ ನೀಡಬೇಕಾಗುತ್ತದೆ. ಫೈಲ್ ಸೈಜ್ 2ಎಂಬಿಗಿಂತ ಅಧಿಕವಾಗಿರುವಂತಿಲ್ಲ ಎಂಬುದು ನೆನಪಿರಲಿ.

ವಯಸ್ಸಿನ ಸಾಕ್ಷಿಗಾಗಿ ನೀಡಬಹುದಾದ ದಾಖಲಾತಿಗಳು:

ವಯಸ್ಸಿನ ಸಾಕ್ಷಿಗಾಗಿ ನೀಡಬಹುದಾದ ದಾಖಲಾತಿಗಳು:

ಜನನ ಪ್ರಮಾಣಪತ್ರ, 10,5 ಅಥವಾ 8ನೇ ತರಗತಿಯ ಮಾರ್ಕ್ಸ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ ಮತ್ತು ಯುಐಡಿಎಐ ನಿಂದ ನೀಡಲಾಗಿರುವ ಆಧಾರ್ ಕಾರ್ಡ್.

ವಿಳಾಸದ ಸಾಕ್ಷಿಗಾಗಿ ನೀಡಬಹುದಾದ ದಾಖಲಾತಿಗಳು: ಡ್ರೈವಿಂಗ್ ಲೈಸನ್ಸ್, ಭಾರತೀಯ ಪಾಸ್ ಪೋರ್ಟ್, ರೇಷನ್ ಕಾರ್ಡ್, ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಬಾಡಿಗೆ ಒಪ್ಪಂದದ ಪತ್ರ, ನೀರಿನ ಬಿಲ್, ಟೆಲಿಫೋನ್ ಬಿಲಿ, ಬ್ಯಾಂಕ್/ಕಿಸಾನ್/ ಪೋಸ್ಟ್ ಆಫೀಸ್ ಪಾಸ್ ಬುಕ್, ಗ್ಯಾಸ್ ಕನೆಕ್ಷನ್ ಬಿಲ್, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿ.

ನಿಮ್ಮ ಫೋನಿನಲ್ಲಿ, ಪಿಸಿ ಅಥವಾ ಲ್ಯಾಪ್ ಟಾಪ್ ನಲ್ಲಿ ‘National Voters' ಸರ್ವೀಸ್ ಪೋರ್ಟಲ್ ನ್ನು ತೆರೆಯಿರಿ:

‘https://www.nvsp.in/' ಗೆ ತೆರಳಿ

ಮೊದಲಿಗೆ ಇದನ್ನು ಕ್ಲಿಕ್ಕಿಸಿ ‘Apply online for registration of new voter/due to shifting from AC'

ಇದು ಫಾರ್ಮ್ 6 ಆಗಿರುತ್ತದೆ. ಇದನ್ನು ಬಳಕೆದಾರರು ತುಂಬಿಸಬೇಕಾಗುತ್ತದೆ ಮತ್ತು ಎಲಕ್ಟ್ರಾಲ್ ಲಿಸ್ಟ್ ನಲ್ಲಿ ತಮ್ಮನ್ನ ತಾವು ಈ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ಫಾರ್ಮ್ 6 ಗಾಗಿ ನಿಮಗೆ ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿ. ಮೇಲ್ಬಾಗದ ಬಲ ಬದಿಯಲ್ಲಿ ಭಾಷೆಯ ಆಯ್ಕೆಗೆ ಅವಕಾಶವಿರುತ್ತದೆ.

ಮೂರು ವಿಭಿನ್ನ ಭಾಷೆಗಳಲ್ಲಿ ಫಾರ್ಮ್ 6 ಲಭ್ಯವಿದೆ - ಇಂಗ್ಲೀಷ್, ಹಿಂದಿ ಮತ್ತು ಮಳಯಾಳಂ. ಬಳಕೆದಾರರು ತಮಗೆ ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಫಾರ್ಮ್ 6 ನ್ನು ತುಂಬಿಸಿ.

ಫಾರ್ಮ್ 6 ನ್ನು ತುಂಬಿಸಿ.

ಫಾರ್ಮ್ 6 ನಲ್ಲಿ ಆರು ಭಾಗಗಳಿರುತ್ತದೆ. - ಖಡ್ಡಾಯವಾಗಿ ತುಂಬಿಸಬೇಕಾಗಿರುವ ಅಂಶಗಳು, ವಿಳಾಸ, ಐಚ್ಛಿಕ ವಿವರಗಳು, ಪೋಷಕ ದಾಖಲಾತಿಗಳು ಮತ್ತು ಘೋಷಣೆಗಳು

ಪ್ರತಿಯೊಂದು ವಿವರಗಳನ್ನು ಅರ್ಜಿದಾರ ತುಂಬಿಸಬೇಕಾಗುತ್ತದೆ. ಐಚ್ಛಿಕ ವಿವರಗಳನ್ನು ಮಾತ್ರವೇ ತುಂಬಿಸುವ ಅಗತ್ಯವಿರುವುದಿಲ್ಲ.ಅರ್ಜಿಯನ್ನು ಸಲ್ಲಿಸಿದ ನಂತರ ನೀವು ದಾಖಲಿಸಿದ ಮೊಬೈಲ್ ನಂಬರಿಗೆ ಒಂದು ಕನ್ಫರ್ ಮೇಷನ್ ಎಸ್ಎಂಎಸ್ ಬರುತ್ತದೆ.

ಅಗತ್ಯ ವಿವರಗಳನ್ನು ಮೊದಲಿಗೆ ತುಂಬಿಸಿ ಉದಾಹರಣೆಗೆ ಕ್ಷೇತ್ರ, ಜಿಲ್ಲೆ ಅಥವಾ ಸಂಬಂಧಪಟ್ಟ ರಾಜ್ಯ- ನೀವು ಮತದಾನ ಮಾಡಲು ಇಚ್ಛಿಸುವ ಲೋಕಸಭಾ ಕ್ಷೇತ್ರದ ಬಗ್ಗೆ ಸರಿಯಾದ ಮಾಹಿತಿಯನ್ನು ಅರ್ಜಿಯಲ್ಲಿ ನೀಡಬೇಕಾಗುತ್ತದೆ.

ಮೊದಲ ಬಾರಿಗೆ ವೋಟ್ ಮಾಡುತ್ತಿರುವವರಾ ಅಥವಾ ಕ್ಷೇತ್ರದ ಬದಲಾವಣೆಯನ್ನು ನೀವು ಇಚ್ಛಿಸುತ್ತಿದ್ದೀರಾ ಎಂಬುದನ್ನು ಆಯ್ಕೆ ಮಾಡಿ. ಒಂದು ವೇಳೆ ನೀವು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆಯಾಗಿದ್ದು ಹಳೆಯ ಕ್ಷೇತ್ರಕ್ಕೆ ಚಲಿಸಿ ಮತದಾನ ಮಾಡಲು ಅಸಾಧ್ಯವಾಗಿದ್ದು ನೀವು ಮತಕ್ಷೇತ್ರದ ವರ್ಗಾವಣೆಯನ್ನು ನೀವು ಬಯಸುತ್ತಿದ್ದೀರಾ ಅಥವಾ ಮೊದಲ ಬಾರಿಗೆ ವೋಟಿಂಗ್ ಮಾಡಲು ಅವಕಾಶ ಕೇಳುತ್ತಿದ್ದೀರಾ ಎಂಬುದನ್ನು ಆಯ್ಕೆ ಮಾಡುವ ಹಂತ ಇದಾಗಿರುತ್ತದೆ.

ಖಡ್ಡಾಯವಾಗಿ ಭರ್ತಿ ಮಾಡಬೇಕಾಗಿರುವ ವಿಭಾಗದಲ್ಲಿ ಅರ್ಜಿದಾರರು ಹೆಸರು,ಉಪನಾಮ, ವಯಸ್ಸು, ಸಂಬಂಧಿಗಳ ಹೆಸರು ಇತ್ಯಾದಿಗಳನ್ನು ನಿಮ್ಮ ಭಾಷೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಭರ್ತಿ ಮಾಡಬೇಕು. ಕೀಬೋರ್ಡ್ ನಲ್ಲಿ ಟ್ಯಾಬ್ ಕೀಯನ್ನು ಪ್ರೆಸ್ ಮಾಡುವ ಮೂಲಕ ಸ್ವಯಂಚಾಲಿತವಾಗಿ ವೆಬ್ ಸೈಟ್ ಪ್ರಾದೇಶಿಕ ಭಾಷೆಗೆ ಟ್ರಾನ್ಸ್ ಲೇಟ್ ಆಗುತ್ತದೆ.

ಮುಂದಿನ ಎರಡು ಸೆಕ್ಷನ್ ನಲ್ಲಿ ನಿಮ್ಮ ಈಗಿನ ವಿಳಾಸ ಮತ್ತು ಶಾಶ್ವತ ವಿಳಾಸವನ್ನು ನಮೂದಿಸಬೇಕು. ಅದರಲ್ಲಿ ಮನೆಯ ನಂಬರ್, ಸ್ಟ್ರೀಟ್ ವಿಳಾಸ, ಟೌನ್, ಪಿನ್ ಕೋಡ್ ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ.

ಇಮೇಲ್ ಐಡಿ, ಮೊಬೈಲ್ ನಂಬರ್ ಇತ್ಯಾದಿ ಐಚ್ಛಿಕ ವಿವರಗಳನ್ನು ಭರ್ತಿ ಮಾಡಿ

ಇಮೇಲ್ ಐಡಿ, ಮೊಬೈಲ್ ನಂಬರ್ ಇತ್ಯಾದಿ ಐಚ್ಛಿಕ ವಿವರಗಳನ್ನು ಭರ್ತಿ ಮಾಡಿ

ಲಿಸ್ಟ್ ನಲ್ಲಿ ಕೆಲವು ಆಯ್ಕೆಗಳನ್ನು ಈ ವಿಭಾಗದಲ್ಲಿ ಅರ್ಜಿದಾರರು ಗಮನಿಸಬಹುದು ಮತ್ತು ಈ ವಿಭಾಗದಲ್ಲಿ ಖಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ.

ಮೇಲೆ ತಿಳಿಸಿರುವ ಸಂಬಂಧಪಟ್ಟ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಿ.

ಡಿಕ್ಲರೇಷನ್ ವಿವರಣೆಯನ್ನು ತುಂಬಿಸಿ

ಸ್ಥಳ ಮತ್ತು ಕ್ಯಾಪ್ಚಾವನ್ನು ಎಂಟರ್ ಮಾಡಿ ನಂತರ ಸಬ್ಮಿಟ್ ಬಟನ್ ನ್ನು ಹಿಟ್ ಮಾಡಿ. ಪೇಜಿನ ಕೆಳಭಾಗದಲ್ಲಿ ಈ ಬಟನ್ ನ್ನು ನೀವು ಗಮನಿಸಬಹುದು. ಇದು ಅಂತಿಮ ಅರ್ಜಿ ಸಲ್ಲಿಕೆಗಾಗಿ ಬಳಕೆದಾರರು ಮಾಡಬೇಕಾಗಿರುವ ಕೆಲಸವಾಗಿರುತ್ತದೆ.

Most Read Articles
Best Mobiles in India

English summary
Elections 2019: How to change your address on voter ID card online and cast vote even if away from home

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more