ಏನಿದು ಫೇಸ್‌ಬುಕ್‌ ಸೌಂಡ್‌ಬೈಟ್‌ ಫೀಚರ್?..ಇದರ ಬಳಕೆ ಹೇಗೆ?

|

ಸದ್ಯ ಸೋಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಮೆಟಾ ಮಾಲೀಕ ಫೇಸ್‌ಬುಕ್‌ ಹೆಚ್ಚು ಜನಪ್ರಿಯತೆಯಲ್ಲಿ ಕಾಣಿಸಿಕೊಂಡಿದೆ. ಇದೀಗ ಕ್ಲಬ್‌ಹೌಸ್ ಮತ್ತು ಸ್ಪಾಟಿಫೈಗೆ ಸ್ಪರ್ಧಿಸಲು ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಆಡಿಯೊ ಆಧಾರಿತ ಫೀಚರ್‌ ಅನ್ನು ಪ್ರಕಟಿಸಿದೆ. ಅದುವೇ 'ಸೌಂಡ್‌ಬೈಟ್ಸ್'. ಇದು ಕಿರು-ರೂಪದ ಆಡಿಯೊ ಕಥೆಗಳು ಮತ್ತು ಐದು ನಿಮಿಷಗಳ ಅವಧಿಯ ಸಂಭಾಷಣೆಗಳನ್ನು ಹೊಂದಿದೆ.

ಏನಿದು ಫೇಸ್‌ಬುಕ್‌ ಸೌಂಡ್‌ಬೈಟ್‌ ಫೀಚರ್?..ಇದರ ಬಳಕೆ ಹೇಗೆ?

ಹೌದು, ಫೇಸ್‌ಬುಕ್ ಸೌಂಡ್‌ಬೈಟ್‌ ಆಯ್ಕೆ ಪರಿಚಯಿಸಿದೆ. ಈ ಸೌಂಡ್‌ಬೈಟ್‌ ಫೀಚರ್ ಬಳಕೆದಾರರಿಗೆ, ಸ್ಟೋರಿ, ಹಾಸ್ಯಗಳು, ಸ್ಫೂರ್ತಿಯ ಕ್ಷಣಗಳು ಮತ್ತು ಇತರ ವಿಷಯಗಳ ಜೊತೆಗೆ ಕವಿತೆಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ ಎಂದು ಫೇಸ್‌ಬುಕ್ ಹೇಳಿದೆ. ಸಂಸ್ಥೆಯ ಈ ಫೀಚರ್ ಅನ್ನು ಡ್ರೂ ಲಿಂಚ್, ಲೊಲೊ ಸ್ಪೆನ್ಸರ್, ಟೋಬೆ ನ್ವಿಗ್ವೆ, ಮೊಲ್ಲಿ ಬರ್ಕ್ ಮತ್ತು ಜೋಶ್ ಸುಂಡ್‌ಕ್ವಿಸ್ಟ್ ಸೇರಿದಂತೆ ಸಣ್ಣ ಸಂಖ್ಯೆಯ ಕ್ರಿಯೆಟರ್‌ಗಳನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಪರೀಕ್ಷಿಸಲು ಪ್ರಾರಂಭಿಸುತ್ತದೆ. ಹಾಗಾದರೇ ಫೇಸ್‌ಬುಕ್‌ನ ಈ ಸೌಂಡ್‌ಬೈಟ್‌ ಫೀಚರ್ ಬಳಕೆ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೇಸ್‌ಬುಕ್‌ನಲ್ಲಿ ಸೌಂಡ್‌ಬೈಟ್ ರಚಿಸುವುದು ಹೇಗೆ?

ಹಂತ 1: ಫೇಸ್‌ಬುಕ್‌ ಆಪ್‌ನಲ್ಲಿ ನಿಮ್ಮ ಪುಟದಿಂದ, ಮೆನುಗೆ ನ್ಯಾವಿಗೇಟ್ ಮಾಡಲು ಕೆಳಗಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ.

ಹಂತ 2: ವೀಕ್ಷಿಸಿ ಬುಕ್‌ಮಾರ್ಕ್‌ನಲ್ಲಿ ವೀಡಿಯೊಗಳನ್ನು ಟ್ಯಾಪ್ ಮಾಡಿ.

ಹಂತ 3: ಪುಟದ ಮೇಲ್ಭಾಗದಲ್ಲಿರುವ ಆಡಿಯೋ ಟ್ಯಾಪ್ ಮಾಡಿ.

ಹಂತ 4: ಸೌಂಡ್‌ಬೈಟ್ಸ್ ವಿಭಾಗವನ್ನು ಹುಡುಕಿ. ನಂತರ ರಚಿಸಿ ಟ್ಯಾಪ್ ಮಾಡಿ.

ಹಂತ 5: ಸೌಂಡ್‌ಬೈಟ್ ಅನ್ನು ರೆಕಾರ್ಡ್ ಮಾಡಲು ಮೈಕ್ರೊಫೋನ್ ಅನುಮತಿಗಳನ್ನು ನೀಡಿ.

ಏನಿದು ಫೇಸ್‌ಬುಕ್‌ ಸೌಂಡ್‌ಬೈಟ್‌ ಫೀಚರ್?..ಇದರ ಬಳಕೆ ಹೇಗೆ?

ಹಂತ 6: ನಿಮ್ಮ ಸೌಂಡ್‌ಬೈಟ್ ರಚಿಸಲು ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ಆಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿ ಮತ್ತು ರೆಕಾರ್ಡಿಂಗ್ ನಿಲ್ಲಿಸಲು ವಿರಾಮ ಬಟನ್ ಮೇಲೆ ಟ್ಯಾಪ್ ಮಾಡಿ. ನೀವು ಇನ್ನೊಂದು ಆಡಿಯೊ ಕ್ಲಿಪ್ ಅನ್ನು ಸೇರಿಸಲು ಬಯಸಿದರೆ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡಿ. ನೀವು ಹಿನ್ನೆಲೆಯಲ್ಲಿ ವಿವಿಧ ಧ್ವನಿ ಪರಿಣಾಮಗಳನ್ನು ಕೂಡ ಸೇರಿಸಬಹುದು.

ಹಂತ 7: ಒಮ್ಮೆ ನೀವು ನಿಮ್ಮ ಸೌಂಡ್‌ಬೈಟ್ ಅನ್ನು ಎಡಿಟ್ ಮಾಡುವುದನ್ನು ಪೂರ್ಣಗೊಳಿಸಿದ ನಂತರ, ನೀವು ಪ್ರಕಟಿಸುವ ಮೊದಲು ವಿವರಗಳನ್ನು ಸೇರಿಸಲು ಮೇಲಿನ ಬಲಭಾಗದಲ್ಲಿರುವ ಮುಂದೆ ಟ್ಯಾಪ್ ಮಾಡಿ.

ಹಂತ 8: ಪ್ರಕಟಿಸಿ (publish) ಟ್ಯಾಪ್ ಮಾಡಿ.

ಲೈವ್ ಆಡಿಯೋ ರೂಮ್‌ಗಳು
ಸಂಸ್ಥೆಯು ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿ ಹೊಸ ಲೈವ್ ಆಡಿಯೊ ರೂಮ್‌ಗಳ ವೈಶಿಷ್ಟ್ಯವನ್ನು ಘೋಷಿಸಿತು. ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಲೈವ್ ಆಡಿಯೊ ರೂಮ್‌ಗಳನ್ನು ಪರೀಕ್ಷಿಸಲು ಪ್ರಾರಂಭಿಸುವುದಾಗಿ ಹೇಳಿದೆ. ಇದು ಪ್ರತಿ ತಿಂಗಳು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗುಂಪುಗಳನ್ನು ಬಳಸುವ 1.8 ಬಿಲಿಯನ್ ಜನರಿಗೆ ಲಭ್ಯವಾಗುವಂತೆ ಮಾಡುತ್ತದೆ. ಬೇಸಿಗೆಯ ವೇಳೆಗೆ ಜಗತ್ತಿನಾದ್ಯಂತ ಫೇಸ್‌ಬುಕ್ ಅಪ್ಲಿಕೇಶನ್ ಮತ್ತು ಮೆಸೆಂಜರ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುವ ನಿರೀಕ್ಷೆಯಿದೆ.

ಇನ್ನು ಫೇಸ್‌ಬುಕ್ ಸಂಸ್ಥೆಯು ಪಾಡ್‌ಕಾಸ್ಟ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಫೇಸ್‌ಬುಕ್ ಅಪ್ಲಿಕೇಶನ್‌ನ ಮುಖ್ಯಸ್ಥ ಫಿಡ್ಜಿ ಸಿಮೊ ಬ್ಲಾಗ್ ಪೋಸ್ಟ್‌ನಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ, ಫೇಸ್‌ಬುಕ್ ಬಳಕೆದಾರರು ನೇರವಾಗಿ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಪಾಡ್‌ಕಾಸ್ಟ್‌ಗಳನ್ನು ಕೇಳಲು ಸಾಧ್ಯವಾಗುತ್ತದೆ. ಅಪ್ಲಿಕೇಶನ್ ಬಳಸುವಾಗ ಅಥವಾ ಅಪ್ಲಿಕೇಶನ್ ಹಿನ್ನೆಲೆಯಲ್ಲಿರುವಾಗ. ಹಾಗೆಯೇ ನೀವು ಇಷ್ಟಪಡುವ ಪಾಡ್‌ಕಾಸ್ಟ್‌ಗಳನ್ನು ಅನ್ವೇಷಿಸಲು ಇನ್ನೂ ಕಷ್ಟವಾಗಿರುವುದರಿಂದ, ನಿಮ್ಮ ಆಸಕ್ತಿಗಳ ಆಧಾರದ ಮೇಲೆ ಹೊಸ ಪಾಡ್‌ಕಾಸ್ಟ್‌ಗಳು ಮತ್ತು ಸಂಚಿಕೆಗಳನ್ನು ಸುಲಭವಾಗಿ ಹುಡುಕಲು ನಾವು ನಿಮಗೆ ಸಹಾಯ ಮಾಡುತ್ತೇವೆ.

Best Mobiles in India

English summary
Facebook brings soundbites to rival Clubhouse: How to Create it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X