'ಫೇಸ್‌ಬುಕ್‌ ಮೆಸೆಂಜರ್‌'ನಲ್ಲಿ ನಿಮಗೆ ಗೊತ್ತಿರದ 5 ಫೀಚರ್ಸ್‌ಗಳು!

|

ಪ್ರಸ್ತುತ ಮೆಸೆಜಿಂಗ್ ಅಪ್ಲಿಕೇಶನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದು, ಅನೇಕ ಹೊಸ ಹೊಸ ಮೆಸೆಜ್‌ ಆಪ್ಸ್‌ಗಳು ಆಪ್‌ ಸ್ಟೋರ್‌ ಸೇರಿಕೊಳ್ಳುತ್ತಿವೆ. ಆದರೆ ಅವುಗಳಲ್ಲಿ ಫೇಸ್‌ಬುಕ್ ಅದೀನದಲ್ಲಿರುವ ವಾಟ್ಸಪ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್ ಆಪ್ಸ್‌ಗಳು ಹೆಚ್ಚಿನ ಬಳಕೆದಾರರನ್ನು ಹೊಂದಿವೆ. ಆದರೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿರುವ ಕೆಲವು ಫೀಚರ್ಸ್‌ಗಳ ಬಗ್ಗೆ ಇನ್ನೂ ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ.

'ಫೇಸ್‌ಬುಕ್‌ ಮೆಸೆಂಜರ್‌'ನಲ್ಲಿ ನಿಮಗೆ ಗೊತ್ತಿರದ 5 ಫೀಚರ್ಸ್‌ಗಳು!

ಹೌದು, ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಹೊಸ ಅಪ್‌ಡೇಟ್‌ ವರ್ಷನ್‌ಗಳನ್ನು ಕಂಡಿದ್ದು, ನೂತನ ಫೀಚರ್ಸ್‌ಗಳು ಸೇರ್ಪಡೆ ಆಗಿವೆ. ಆದರೆ ಆಪ್‌ನಲ್ಲಿರುವ ಹಲವು ಫೀಚರ್ಸ್‌ಗಳನ್ನು ಇನ್ನೂ ಬಳಕೆದಾರರು ಬಳಸಿಲ್ಲ. ಹೀಗಾಗಿ ಈ ಲೇಖನದಲ್ಲಿ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿರು ಕೆಲವು ವಿಶೇಷ ಫೀಚರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗಾದರೇ ಮೆಸೆಂಜರ್‌ನಲ್ಲಿರುವ ವಿಶೇಷ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

<strong>ಓದಿರಿ : ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!</strong>ಓದಿರಿ : ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!

ಪೇಮೆಂಟ್ ಫೀಚರ್

ಪೇಮೆಂಟ್ ಫೀಚರ್

ಫೇಸ್‌ಬುಕ್ ಮೆಸೆಂಜರ್ ಆಪ್‌ನಲ್ಲಿ ಪೇಮೆಂಟ್ ಕಳುಹಿಸಬಹುದಾಗ ಆಯ್ಕೆ ಸಹ ನೀಡಲಾಗಿದೆ. ಮೆಸೆಂಜರ್ ಪೇಮೆಂಟ್ ಆಯ್ಕೆಯು ಪೇ ಪಲ್ ಪೇಮೆಂಟ್ ಸಿಸ್ಟಮ್ ತರಹವೆ ಇದ್ದು, ನಿಮ್ಮ ಫೇಸ್‌ಬುಕ್ ಖಾತೆಯಲ್ಲಿರುವ ಗೆಳೆಯರಿಗೆ ಹಣ ಸೇಂಡ್ ಮಾಡಬಹುದಾಗಿದೆ. ಪೇಮೆಂಟ್ ಫೀಚರ್‌ ಅನ್ನು ಮೈ ಪ್ರೊಫೈಲ್ ಅಕೌಂಟ್‌ ಐಕಾನ್‌ ಕೆಳಗಿನ ಆಯ್ಕೆಗಳಲ್ಲಿ ಕಾಣಬಹುದಾಗಿದೆ.

ಚಾಟ್ ಮ್ಯೂಟ್ ನೋಟಿಫಿಕೇಶನ್

ಚಾಟ್ ಮ್ಯೂಟ್ ನೋಟಿಫಿಕೇಶನ್

ಮೆಸೆಂಜರ್‌ನಲ್ಲಿ ಕೆಲವು ಸ್ನೇಹಿತರು ಅಥವಾ ಗ್ರೂಪ್‌ಗಳ ಮೆಸೆಜ್‌ಗಳಿಂದ ನಿಮಗೆ ಕಿರಿ ಕಿರಿ ಅನಿಸುತ್ತಿದ್ದರೇ, ಆ ಮೆಸೆಜ್‌ಗಳನ್ನು ಮ್ಯೂಟ್‌ ಮೋಡ್‌ಗೆ ಹಾಕಬಹುದಾದ ಆಯ್ಕೆ ಇದೆ. ಮ್ಯೂಟ್‌ ಮಾಡುವ ಸ್ನೇಹಿತರ ಚಾಟ್‌ ತೆರೆದು ಬಲಭಾಗದ ಮೆನು ಕ್ಲಿಕ್ ಮಾಡಿ, ಮ್ಯೂಟ್ ಬಟನ್ ಒತ್ತಿರಿ. ಆಗ ಕೆಲವು ಮ್ಯೂಟ್‌ ಆಯ್ಕೆಗಳು ಕಾಣಿಸುತ್ತವೆ ಅವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿರಿ.

ಶೇರ್ ಲೊಕೇಶನ್

ಶೇರ್ ಲೊಕೇಶನ್

ಮೆಸೆಂಜರ್‌ನಲ್ಲಿ ಇನ್ನೊಂದು ಬೆಸ್ಟ್‌ ಫೀಚರ್‌ ಎಂದರೇ ಅದು ಲೊಕೇಶನ್ ಶೇರ್ ಮಾಡುವ ಆಯ್ಕೆ ಆಗಿದೆ. ಒಂದು ಗಂಟೆಯವರೆಗೂ ಲೊಕೇಶನ್ ಶೇರ್ ಮಾಡುವ ಆಯ್ಕೆಯು ಇದ್ದು, ಅದಕ್ಕಾಗಿ ಚಾಟ್ ಕನ್ವರ್ಸೆಶನ್ ತೆರೆದು ಶೇರ್ ಲೊಕೇಶನ್ ಆಯ್ಕೆ ಕ್ಲಿಕ್ ಮಾಡಿರಿ. ಹಾಗೂ ಶೇರ್ ಮಾಡುವುದು ಬೇಡವಾದಾಗ ಮತ್ತೆ ಅದೇ ಆಯ್ಕೆ ತೆರೆದು ಸ್ಟಾಪ್ ಲೊಕೇಶನ್ ಶೇರ್ ಕ್ಲಿಕ್ ಮಾಡಿರಿ.

ಬಲೂನ್ ಸೆಂಡ್ ಮಾಡುವ ಆಯ್ಕೆ

ಬಲೂನ್ ಸೆಂಡ್ ಮಾಡುವ ಆಯ್ಕೆ

ನಿಮ್ಮ ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಗೆಳೆಯರ ಹುಟ್ಟಹಬ್ಬ ಇದ್ದರೇ, ಅಥವಾ ಪರಿಚಯಸ್ಥರ ಆನಿವರ್ಸರಿ ಇದ್ದರೇ, ಅಥವಾ ಇತರೆ ಶುಭ ಸಂದರ್ಭಗಳಲ್ಲಿ ಅವರಿಗೆ ನೀವು ಅನಿಮೇಶನ್ ಬಲೂನ್ ಕಳುಹಿಸಬಹುದು. ಯಾರಿಗೆ ಶುಭ ಕೋರ ಬೇಕಿರುತ್ತದೊ ಅವರ ಚಾಟ್‌ ಕನ್ವರ್ಸೆಶನ್ ತೆರೆದು ಬಲೂನ್ ಐಕಾನ್ ಕ್ಲಿಕ್ ಮಾಡಿರಿ. ಅವರು ಮೆಸೆಜ್ ತೆರೆದಾಗ ಬಲೂನ್‌ಗಳ ಮೂಮೆಂಟ್‌ ಕಾಣಿಸುತ್ತವೆ.

ಡಾರ್ಕ್‌ ಮೋಡ್ ಆಯ್ಕೆ

ಡಾರ್ಕ್‌ ಮೋಡ್ ಆಯ್ಕೆ

ಸದ್ಯ ಡಾರ್ಕ್‌ಮೋಡ್‌ ಫೀಚರ್ ಹೆಚ್ಚು ಜನಪ್ರಿಯವಾಗಿದ್ದು, ಫೇಸ್‌ಬುಕ್‌ ಮೆಸೆಂಜರ್ ಸಹ ಡಾರ್ಕ್‌ ಮೋಡ್ ಫೀಚರ್ ಅನ್ನು ಅಪ್‌ಡೇಟ್ ವರ್ಷನ್‌ನಲ್ಲಿ ಅಳವಡಿಸಿದೆ. ಡಾರ್ಕ್ ಮೋಡ್‌ ಆಕ್ಟಿವ್ ಮಾಡಲು ಸ್ನೇಹಿತರೊಂದಿಗೆ ಚಾಟ್‌ ಮಾಡುವಾಗ ಅರ್ಧಚಂದ್ರ ಇಮೋಜಿ ಸೇಂಡ್‌ ಮಾಡುವುದು, ಆಗ ಸೆಟ್ಟಿಂಗ್ ಆಯ್ಕೆ ಲಭ್ಯವಾಗುತ್ತದೆ. ಆಗ ಡಾರ್ಕ್‌ ಮೋಡ್‌ ಆನ್ ಮಾಡಿಕೊಳ್ಳಬಹುದಾಗಿದೆ.

<strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!</strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!

Best Mobiles in India

English summary
Messenger best tricks to help you get the most out of Facebook Messenger. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X