ಫಾಸ್ಟ್ಯಾಗ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಗೊತ್ತಾ?

|

ಭಾರತ ಸರ್ಕಾರವು ಡಿಜಿಟಲ್‌ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿದ್ದು, ಫಾಸ್ಟ್ಯಾಗ್ ಅದರ ಒಂದು ಭಾಗವಾಗಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯ ವಾಹನಗಳ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯವಾಗಿ ಬಳಸುವುದನ್ನು ಭಾರತೀಯ ಸಾರಿಗೆ ಸಚಿವಾಲಯ ಘೋಷಿಸಿತ್ತು. ಇನ್ನು ಈ ಹೊಸ ಫಾಸ್ಟ್ಯಾಗ್ ಟೋಲ್-ಸಂಗ್ರಹ ವ್ಯವಸ್ಥೆಯು RFID (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ತಂತ್ರಜ್ಞಾನವನ್ನು ಆಧರಿಸಿದೆ. ಫೆ.15ರಿಂದ ಟೋಲ್​ಗಳಲ್ಲಿ ಫಾಸ್ಟ್​ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.

ಫಾಸ್ಟ್ಯಾಗ್

ಜನವರಿ 1ರಿಂದಲೇ ಟೋಲ್​ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಆದರೆ, ಈ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇಲ್ಲದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ನಲ್ಲಿ ಫಾಸ್ಟ್ಯಾಗ್ ಕಡ್ಡಾಯ ಮಾಡುವ ಡೆಡ್‌ಲೈನ್ ಅನ್ನು ಫೆ. 15ರ ವರೆಗೆ ವಿಸ್ತರಿಸಲಾಗಿತ್ತು. ಫಾಸ್ಟ್ಯಾಗ್ ಇದ್ದರೇ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಸಕ್ರಿಯಗೊಳಿಸಲಾದ ETC (ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್) ಅನ್ನು ವಾಹನ ದಾಟಿದಾಗ, ಟೋಲ್ ಹಣವನ್ನು ವಾಹನಕ್ಕೆ ಸಂಬಂಧಿಸಿದ ಡಿಜಿಟಲ್ ವ್ಯಾಲೆಟ್‌ನಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ಹಾಗಾದರೇ ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್‌ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ:

ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ:

ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್‌ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಹಂತ 1: ಬ್ಯಾಂಕ್ ನೀಡುವ ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ನೀವು ಆನ್‌ಲೈನ್‌ನಲ್ಲಿ ಮೀಸಲಾದ ಪೋರ್ಟಲ್‌ಗೆ ಭೇಟಿ ನೀಡಬಹುದು.
ಹಂತ 2: ನೀವು ಬ್ಯಾಂಕ್ ಖಾತೆಗೆ ಲಾಗಿನ್ ಆಗಬೇಕು ಮತ್ತು ಬಾಕಿ ಪರಿಶೀಲಿಸಲು ಮುಖಪುಟದಿಂದ ಫಾಸ್ಟ್ಯಾಗ್ ಆಯ್ಕೆಗೆ ಹೋಗಿ.

ಚೆಕ್

NHAI ವಾಲೆಟ್ ಆಯ್ಕೆಯ ಮೂಲಕ ಚೆಕ್ ಮಾಡ ಬಯಸಿದರೆ, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಅದನ್ನು ಮಾಡಬಹುದು. ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡಬಹುದು. ಆದಾಗ್ಯೂ, ನಾವು ಆಂಡ್ರಾಯ್ಡ್ ಓಎಸ್‌ಗೆ ಸಂಬಂಧಿಸಿದಂತೆ ಹಂತಗಳನ್ನು ತಿಳಿಸಲಾಗಿದೆ.


ಹಂತ 1: ಗೂಗಲ್ ಪ್ಲೇ ಸ್ಟೋರ್‌ ತೆರೆಯಿರಿ ಮತ್ತು 'My FASTag' ಅಪ್ಲಿಕೇಶನ್‌ನ ಸರ್ಚ್ ಮಾಡಿ.


ಹಂತ 2: ನಂತರ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.


ಹಂತ 3: ನಿಮ್ಮ ಖಾತೆಯನ್ನು ನಿಮಗೆ ಲಾಗ್ ಇನ್ ಮಾಡಿ. ನೀವು ಮೊದಲ ಬಾರಿಗೆ ಅಪ್ಲಿಕೇಶನ್ ಬಳಸುತ್ತಿದ್ದರೆ ನೀವು ನೋಂದಾಯಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.


ಹಂತ 4: ಲಾಗಿನ್ ಯಶಸ್ವಿಯಾದ ನಂತರ, ಲಭ್ಯವಿರುವ ಬ್ಯಾಲೆನ್ಸ್ ಅನ್ನು ನೀವು ಕಾಣಬಹುದು.

ಅಪ್ಲಿಕೇಶನ್

ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್‌ ಮಾಡುವ ಇನ್ನೊಂದು ಆಯ್ಕೆ ಅಂದರೇ ಅದು Paytm UPI ಅಪ್ಲಿಕೇಶನ್ ಮೂಲಕ. ಈ ಆಪ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಹಂತಗಳನ್ನು ಮುಂದೆ ನೋಡೋಣ ಬನ್ನಿರಿ.


ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ.
ಹಂತ 2: ಬ್ಯಾಲೆನ್ಸ್ ಮತ್ತು ಹಿಸ್ಟರಿ ಆಯ್ಕೆಗೆ ಹೋಗಿ.
ಹಂತ 3: ಪೇಟಿಎಂ ಬ್ಯಾಲೆನ್ಸ್ ಪಕ್ಕದಲ್ಲಿರುವ ಕೆಳಗಿರುವ ಎರೋ ಗುರುತಿನ ಮೇಲೆ ಕ್ಲಿಕ್ ಮಾಡಿ. ಆ ನಂತರ ನೀವು ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ನೀವು ಕಾಣಬಹುದು.

Best Mobiles in India

Read more about:
English summary
The FASTag is one such initiative that has been introduced in recent times helping the masses with easy commute across the national highways.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X