ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್‌ ಹೆಚ್ಚಿಸಲು ಹೀಗೆ ಮಾಡಿ!

|

ಸದ್ಯ ಸ್ಮಾರ್ಟ್‌ಫೋನ್ ಇಲ್ಲದೇ ಯಾವ ಕೆಲಸವು ನಡೆಯುವುದಿಲ್ಲ ಎನ್ನಬಹುದಾಗಿದೆ. ಏಕೆಂದರೇ ಅಷ್ಟರಮಟ್ಟಿಗೆ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅಗತ್ಯ ಡಿವೈಸ್‌ ಆಗಿದೆ. ಹೀಗೆ ಅಗತ್ಯ ಮತ್ತು ಅನಿವಾರ್ಯ ಆಗಿರುವ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿಯೇ ಪ್ರಮುಖ ಪಾತ್ರವಹಿಸುತ್ತದೆ. ಗ್ರಾಹಕರು ಫೋನ್ ಖರೀದಿಸುವಾಗ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ನತ್ತ ಹೆಚ್ಚು ಒಲವು ನೀಡುತ್ತಿದ್ದಾರೆ. ಹೀಗಾಗಿ ಕಂಪನಿಗಳು ಸಹ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಬ್ಯಾಟರ್ ಲೈಫ್‌ ನೀಡುತ್ತಿವೆ.

ಸ್ಮಾರ್ಟ್‌ಫೋನಿಗೆ

ಹೌದು, ಸ್ಮಾರ್ಟ್‌ಫೋನಿಗೆ ಜೀವ ತುಂಬುವ ಬ್ಯಾಟರಿ ಲೈಫ್‌ ಉತ್ತಮವಾಗಿರಲಿ ಎಂದು ಪ್ರತಿ ಗ್ರಾಹಕರು ಬಯಸುತ್ತಾರೆ. ಅತ್ಯುತ್ತಮ ಬ್ಯಾಟರಿ ಲೈಫ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೂ ಕೆಲವೊಮ್ಮೆ ಬ್ಯಾಟರಿ ಬಾಳಿಕೆ ಸರಿಯಾಗಿ ಬರುವುದಿಲ್ಲ. ಅದಕ್ಕೆ ಅನೇಕ ಕಾರಣಗಳಿವೆ. ಆದ್ರೆ ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್‌ ಉತ್ತಮಗೊಳಿಸಲು ಸಾಧ್ಯ. ಹಾಗಾದರೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಏರೋಪ್ಲೇನ್‌ ಮೋಡ್‌ಗೆ ಹಾಕಿ

ಏರೋಪ್ಲೇನ್‌ ಮೋಡ್‌ಗೆ ಹಾಕಿ

ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಏರೋಪ್ಲೇನ ಮೋಡ್‌ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಬಹುದು. ಆದ್ರೆ ಬಳಕೆದಾರರಿಗೆ ನೆಟವರ್ಕ ಕನೆಕ್ಷನ್ ಲಭ್ಯವಾಗುವುದಿಲ್ಲ. ಬ್ಯಾಟರಿ ಉಳಿಕೆ ಅತೀ ಅಗತ್ಯ ಇದ್ದಾಗ ಮಾತ್ರ ಈ ಆಯ್ಕೆಯನ್ನು ಬಳಕೆ ಉತ್ತಮ. ಏರೋಪ್ಲೇನ್ ಮೋಡ್‌ನಲ್ಲಿ ನೆಟವರ್ಕ್ ಇರುವುದಿಲ್ಲ ಬದಲಿಗೆ ಗೇಮ್ಸ್‌, ಮ್ಯೂಸಿಕ್ ಆಪ್‌, ವಿಡಿಯೊ ಪ್ಲೇಯರ್, ಮಲ್ಟಿಮೀಡಿಯಾ ಸೌಲಭ್ಯಗಳನ್ನು ಬಳಕೆ ಮಾಡಬಹುದು.

ಆಟೋ ಸಿಂಕ್ ಬೇಡ

ಆಟೋ ಸಿಂಕ್ ಬೇಡ

ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯನ್ನು ಆನ್ ಇಟ್ಟಿರುತ್ತಾರೆ. ಇದು ಬ್ಯಾಟರಿ ಬಳಕೆಯನ್ನು ಹಿರುತ್ತದೆ. ಬ್ಯಾಟರಿ ಉಳಿಸಬೇಕು ಅಥವಾ ಬ್ಯಾಟರಿ ಲೈಫ್ ಹೆಚ್ಚಳ ಮಾಡಿಕೊಳ್ಳಬೇಕು ಅನ್ನುವವರು ಆಟೋ ಸಿಂಕ್ ಆಯ್ಕೆಯನ್ನು ಆಫ್ ಮಾಡುವುದು ಉತ್ತಮ.

ಜಿಪಿಎಸ್ ಮತ್ತು ವೈಫೈ

ಜಿಪಿಎಸ್ ಮತ್ತು ವೈಫೈ

ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಕ್ವಿಕ್ ಖಾಲಿಯಾಗಲು ಜಿಪಿಎಸ್‌ ಮತ್ತು ವೈಫೈ ಆಯ್ಕೆಯ ಸಕ್ರಿಯತೆಯು ಒಂದು ಕಾರಣ. ಅಗತ್ಯ ಇದ್ದಾಗ ಮಾತ್ರ ಜಿಪಿಎಸ್ ಮತ್ತು ವೈಫೈ ಸೌಲಭ್ಯವನ್ನು ಆನ್ ಮಾಡುವುದು ಸೂಕ್ತ. ಅಗತ್ಯ ಇಲ್ಲದಿದ್ದಾಗ ಜಿಪಿಎಸ್ ಮತ್ತು ವೈಫೈ ಆಯ್ಕೆಗಳನ್ನು ಆಫ್ ಮಾಡುವುದು ಬ್ಯಾಟರಿ ಲೈಫ್‌ ಹೆಚ್ಚಳಕ್ಕೆ ನೆರವಾಗಲಿದೆ.

ಆಂಡ್ರಾಯ್ಡ್‌ ಅಪ್‌ಡೇಟ್ ಮರೆಯಬೇಡಿ

ಆಂಡ್ರಾಯ್ಡ್‌ ಅಪ್‌ಡೇಟ್ ಮರೆಯಬೇಡಿ

ಸ್ಮಾರ್ಟ್‌ಫೋನ್‌ಗಳು ಮೇಲಿಂದ ಮೇಲೆ ಅಂಡ್ರಾಯ್ಡ್ ಅಪ್‌ಡೇಟ್ ಬೇಡುತ್ತಿರುತ್ತವೆ. ಅಪ್‌ಡೇಟ್ ಇದ್ದಾಗ ಫೋನ್ ಅಪ್‌ಡೇಟ್ ಮಾಡಿಬಿಡಿ. ಅಪ್‌ಡೇಟ್ ಮಾಡಿದರೇ ಫೋನಿನಲ್ಲಿ ಹೊಸ ಫೀಚರ್ಸ್‌ಗಳೊಂದಿಗೆ ಬ್ಯಾಟರಿ ಲೈಫ್‌ ಸಹ ವೃದ್ಧಿ ಆಗುತ್ತದೆ. ವೈಫೈ ಬಳಸಿ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದರಿಂದ ಬೇಗ ಅಪ್‌ಡೇಟ್ ಪ್ರಕ್ರಿಯೇ ಮುಗಿಯುತ್ತದೆ.

ಚಾರ್ಜ್ ಮಾಡುವಾಗ

ಚಾರ್ಜ್ ಮಾಡುವಾಗ

ಸ್ಮಾರ್ಟ್‌ಫೋನ್‌ ಬಳಕೆದಾರರ ದೊಡ್ಡ ಸಮಸ್ಯೆ ಎಂದರೇ ಬ್ಯಾಟರಿ ಬಾಳಿಕೆ ಹೆಚ್ಚು ಕಾಲ ಬರುತ್ತಿಲ್ಲ ಎನ್ನುವುದೇ ಆಗಿದೆ. ಆದ್ರೆ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಫೋನ್‌ಗೆ ವೇಗವಾಗಿ ಚಾರ್ಜ್ ಒದಗಿಸುತ್ತವೆ. ಫಾಸ್‌ ಚಾರ್ಜರ್‌ ಆಯ್ಕೆ ಇಲ್ಲದಿದ್ದರೇ ಬಳಕೆದಾರರು ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಸ್ಮಾರ್ಟ್‌ಫೋನ್‌ ಅನ್ನು ಏರೋಪ್ಲೇನ್‌ ಮೋಡ್‌ಗೆ ಹಾಕುವದು ಉತ್ತಮ. ಇದು ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ.

Best Mobiles in India

English summary
You can improve your Android smartphone’s battery life. by following these steps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X