Subscribe to Gizbot

ವಾಟ್ಸಾಪ್'ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆ?

Written By:

ವಾಟ್ಸಾಪ್ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್ ಆಪ್‌ ಆಗಿದ್ದು, ವಿಶ್ವದಾದ್ಯಂತ 1 ಶತಕೋಟಿಗಿಂತ ಹೆಚ್ಚು ಬಳಕೆದಾರರು ಆಪ್‌ ಅನ್ನು ಬಳಸುತ್ತಿದ್ದಾರೆ. ಅಂದಹಾಗೆ ವಾಟ್ಸಾಪ್ ಕಡಿಮೆ ಸಮಯದಲ್ಲಿ ಹೆಚ್ಚು ಪಾಪುಲರ್‌ ಆಗಲು ಇನ್ನೊಂದು ಕಾರಣವೆಂದರೆ, ಇದು ಫೇಸ್‌ಬುಕ್‌ ಮಾಲೀಕತ್ವದ ಕಂಪನಿ ಆಗಿರುವುದು.

ಲೇಟ್ ಆದರೂ ಲೇಟೆಸ್ಟ್ ಆಗಿ ವಾಟ್ಸಾಪ್ ಹಲವು ಆಕರ್ಷಕ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಇತ್ತೀಚೆಗೆ ವಾಟ್ಸಾಪ್ ಇಮೇಜ್‌ ಎಡಿಟ್, ವೀಡಿಯೊ ಎಡಿಟ್ ಫೀಚರ್, ಜಿಫ್ ಕ್ರಿಯೇಟ್ ಫೀಚರ್‌ ಅನ್ನು ಪರಿಚಯಿಸಿತ್ತು. ಈಗ ಇನ್ನೂ ಲೇಟೆಸ್ಟ್‌ ಆಗಿ ವಾಟ್ಸಾಪ್‌ ತನ್ನ ಲೈವ್‌ ವೀಡಿಯೊ ಕರೆ ಫೀಚರ್ ಅನ್ನು ಬಿಡುಗಡೆಗೊಳಿಸಿದೆ. ವಾಟ್ಸಾಪ್‌(WhatsApp) ಪ್ರೇಮಿಗಳು ಇನ್ನುಮುಂದೆ ತಮ್ಮ ಪ್ರೇಮಿಗಳು ಸೇರಿದಂತೆ, ಇತರರಿಗೂ ಲೈವ್‌ ವೀಡಿಯೊ ಕರೆ ಮಾಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಸರಳ ಟ್ರಿಕ್ಸ್‌ಗಳನ್ನು ಓದಿ ತಿಳಿಯಿರಿ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಲೈವ್‌ ವೀಡಿಯೊ ಕರೆ

ವಾಟ್ಸಾಪ್‌ ಲೈವ್‌ ವೀಡಿಯೊ ಕರೆ

ಅಂದಹಾಗೆ ವಾಟ್ಸಾಪ್‌ ಲೈವ್ ವೀಡಿಯೊ ಕರೆ ಫೀಚರ್‌ ಆಂಡ್ರಾಯ್ಡ್ ಮತ್ತು ವಿಂಡೋಸ್‌ ಫೋನ್ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಆದರೆ ವೀಡಿಯೊ ಕರೆ ಫೀಚರ್ ಬಳಸಲು ಬೇಟಾ ಬಳಕೆದಾರರು ಇಬ್ಬರೂ ಸಹ ಆಗಿರಬೇಕು.

 ವಾಟ್ಸಾಪ್‌ ಲೇಟೆಸ್ಟ್ ವರ್ಸನ್‌ ಅಗತ್ಯ

ವಾಟ್ಸಾಪ್‌ ಲೇಟೆಸ್ಟ್ ವರ್ಸನ್‌ ಅಗತ್ಯ

ಮೊದಲಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ನ ಲೇಟೆಸ್ಟ್ ವರ್ಸನ್ ಇನ್‌ಸ್ಟಾಲ್‌ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇನ್‌ಸ್ಟಾಲ್‌ ಆಗಿಲ್ಲದಿದ್ದಲ್ಲಿ, ವಾಟ್ಸಾಪ್ APK ಬೇಟಾ ವರ್ಸನ್‌ ನಂಬರ್ 2.16.318 ಅನ್ನು ಇನ್‌ಸ್ಟಾಲ್‌ ಮಾಡಿ. ಆದರೆ ವಾಟ್ಸಾಪ್ ವೀಡಿಯೊ ಕರೆ ಫೀಚರ್‌ ಇರುವ ಆಪ್ ಅನ್ನು ಇದುವರೆಗೆ ಗೂಗಲ್‌ ಪ್ಲೇ ಸ್ಟೊರ್‌ನಲ್ಲಿ ಅಪ್‌ಡೇಟ್‌ ಮಾಡಿಲ್ಲ.

ವೀಡಿಯೊ ಕರೆ ಮಾಡಲು ಎರಡು ಬಳಕೆದಾರರು ಸಹ ಬೇಟಾ ವರ್ಸನ್ ಇನ್‌ಸ್ಟಾಲ್‌ ಮಾಡಬೇಕು

ವೀಡಿಯೊ ಕರೆ ಮಾಡಲು ಎರಡು ಬಳಕೆದಾರರು ಸಹ ಬೇಟಾ ವರ್ಸನ್ ಇನ್‌ಸ್ಟಾಲ್‌ ಮಾಡಬೇಕು

ನೀವು ವೀಡಿಯೊ ಕರೆ ಮಾಡುವ ವಾಟ್ಸಾಪ್‌ ಬಳಕೆದಾರರು ಸಹ, ವೀಡಿಯೊ ಕರೆ ಫೀಚರ್‌ ಹೊಂದಿರುವ ಬೇಟಾ ವರ್ಸನ್‌ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿರಬೇಕು. ಇನ್‌ಸ್ಟಾಲ್‌ ಆಗಿರದಿದ್ದರೇ, ವೀಡಿಯೊ ಕರೆ ಮಾಡಲು ಸಾಧ್ಯವಿಲ್ಲ.ಕರೆ ಮಾಡಿದಾಗ ಇನ್‌ಸ್ಟಾಲ್‌ ಆಗಿಲ್ಲದಿದ್ದಲ್ಲಿ ಕರೆ ಸ್ವೀಕೃತದಾರರು ಆಪ್ ಅಪ್‌ಡೇಟ್‌ ಮಾಡಿಕೊಳ್ಳಬೇಕು ಎಂದು ನೋಟಿಫಿಕೇಶನ್‌ ಬರುತ್ತದೆ.

ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಯ್ಸ್ ಕರೆ ಮಾಡುವಂತೆಯೇ, ವೀಡಿಯೊ ಕರೆಯನ್ನು ಸರಳವಾಗಿ ಮಾಡಬಹುದು. ಕಾಂಟ್ಯಾಕ್ಟ್‌ ಮೇಲೆ ಕ್ಲಿಕ್‌ ಮಾಡಿ, ಕರೆ ಆಪ್ಶನ್‌ ಅನ್ನು ಕ್ಲಿಕ್‌ ಮಾಡಿ. ವಾಯ್ಸ್ ಕರೆ ಕನೆಕ್ಟ್‌ ಆಗುವ ಬದಲು ವಾಯ್ಸ್ ಅಥವಾ ವೀಡಿಯೊ ಕರೆ ಆಪ್ಶನ್‌ಗಳನ್ನು ಆಯ್ಕೆ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How to Make WhatsApp Video Calls. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot