ಇಂಟರ್ನೆಟ್ ಜಮಾನದಲ್ಲಿ ಇದಕ್ಕೆ ಟ್ರೋಲ್ (troll) ಎನ್ನುತ್ತಾರೆ!..ಆದರೆ, ವಾಸ್ತವ ಸ್ಥಿತಿಯೇ ಬೇರೆ!!

  ಯಾರು ಯಾರಿಗೂ ತಿಳಿಯದವರನ್ನು ಒಂದು ಮಾಡಿದ ಕೀರ್ತಿಗೆ ಪಾತ್ರವಾದ ಸಾಮಾಜಿಕ ಮಾಧ್ಯಮಗಳೆಲ್ಲವೂ ಒಂದು ಬಗೆಹರಿಸಲಾಗದ ಸಮಸ್ಯೆಯೊಂದನ್ನು ತಂದಿಟ್ಟಿವೆ. ಜನರ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯಾಗಿ ಕಾಣಿಸಿಕೊಂಡ ಇವುಗಳು, ಇಂದು ತಳಬುಡವಿಲ್ಲದೆ ಬೈಯುವುದು, ಲೇವಡಿ ಮಾಡುವುದಕ್ಕೆ ಸೀಮಿತವಾಗಿ ಸೀಮಿತವಾಗಿಬಿಟ್ಟಿವೆ.!

  ಇಂಟರ್ನೆಟ್ ಜಮಾನದಲ್ಲಿ ಇದಕ್ಕೆ ಟ್ರೋಲ್ (troll) ಎನ್ನುವ ಇಂಗ್ಲಿಷ್ ಪದವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೈಯುವುದು, ಹಾಸ್ಯ ಮಾಡುವುದು, ಆರೋಪಿಸುವುದು, ಅವಮಾನಿಸುವುದೆಲ್ಲಾ ಈಗ ಟ್ರೋಲ್ ಆಗಿಬಿಟ್ಟಿದೆ ಎಂದರೆ, ಈ ಸಾಮಾಜಿಕ ಜಾಲತಾಣಗಳು ಜನರ ಇಷ್ಟಪಡದ ವರ್ತನೆಗಳಿಗೆ ಹೇಗೆ ಸಾಕ್ಷಿಯಾಗಿದೆ ಎಂಬುದನ್ನು ತಿಳಿಯಬಹುದು.

  ಇಂಟರ್ನೆಟ್ ಜಮಾನದಲ್ಲಿ ಇದಕ್ಕೆ ಟ್ರೋಲ್ (troll) ಎನ್ನುತ್ತಾರೆ!..ಆದರೆ, ವಾಸ್ತವ?

  ಹಾಗಾಗಿ, ಈ ಸಾಮಾಜಿಕ ಜಾಲತಾಣಗಳಿಗೆ ನೀವು ತೆರೆದುಕೊಂಡಿದ್ದೀರಿ ಎಂದರೆ ನೀವು ನಿಮ್ಮ ಸೇಫ್‌ಜೋನ್‌ನಿಂದ ತುಸು ಹೊರಗೆ ಬಂದಿದ್ದೀರಿ ಎಂದೇ ಅರ್ಥ. ಹಾಗಾಗಿ, ಟ್ರೋಲಿಗರ ದಾಳಿಗೆ ಒಳಗಾದಾಗ ಮಾನಸಿಕವಾಗಿ ಖಿನ್ನರಾಗದೆ ಏನು ಮಾಡಬೇಕು ಎಂಬ ನೆಟಿಜನ್ನರನ್ನು ಕಾಡುವ ಬಹುಮುಖ್ಯ ಪ್ರಶ್ನೆಗೆ ಇಂದಿನ ಲೇಖನದಲ್ಲಿ ತಿಳಿಯೋಣ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಟೀಕೆಯನ್ನೂ ಸ್ವೀಕರಿಸಬೇಕಾಗುತ್ತದೆ.!

  ನೀವು ಪೋಸ್ಟ್ ಮಾಡುವ ಫೋಟೊಗಳು, ಬರಹಗಳಿಗೆ ಸಾಕಷ್ಟು ಜನರು ಲೈಕ್, ಕಾಮೆಂಟ್ ಮಾಡುತ್ತಾರಲ್ಲ, ಅವುಗಳೆಲ್ಲವನ್ನು ಖುಷಿಯಾಗಿ ಸ್ವೀಕರಿಸಿರುವ ನೀವು ಆದೇ ರೀತಿ ಟೀಕೆಯನ್ನೂ ಸ್ವೀಕರಿಸಬೇಕಾಗುತ್ತದೆ. ‌ ನಿಮ್ಮ ಅಭಿಪ್ರಾಯ , ಆಲೋಚನೆಗಳಿಗೆ ವಿರುದ್ದವಾದ ಪರಿಚಯ ಇಲ್ಲದವರೂ ನಿಮ್ಮ ಮೇಲೆ ಟೀಕಾಪ್ರಹಾರ ನಡೆಸುತ್ತಿರುತ್ತಾರೆ. ನಿಮ್ಮ ಜಾತಿ, ಧರ್ಮ, ಲಿಂಗಗಳೂ ಟೀಕೆಯಾಗುವುದರಿಂದ ಅಂತವುಗಳನ್ನು ಬ್ಲಾಕ್ ಮಾಡುವುದು ಉತ್ತಮ .

  ವಾದ ಮಾಡುವ ಮುನ್ನ!

  ನಿಮ್ಮ ಹೇಳಿಕೆ ಅಥವಾ ಪೋಸ್ಟ್‌ನ ಒಂದು ಎಳೆ ಹಿಡಿದು ಆರಂಭವಾಗುವ ಟೀಕೆಗಳು ಅನೇಕ ಸಂದರ್ಭಗಳಲ್ಲಿ ತೀರಾ ವೈಯಕ್ತಿಕವಾಗಿ ಟೀಕೆಗೆ ಒಳಗಾಗುತ್ತವೆ. ಅಯ್ಯೋ, ನಾನು ಹಾಗೆ ಹೇಳಲಿಲ್ಲ. ಇವರೆಲ್ಲ ಏಕೆ ಹೀಗೆ ಮಾತನಾಡುತ್ತಿದ್ದರೆ ಎಂದು ಹಲವರು ಕೊರುಗುತ್ತಾರೆ.ಟ್ರೋಲ್ ಮಾಡುವವರ ಉದ್ದೇಶವೂ ಇದೇ ಆಗಿರುವುದರಿಂದ ಅವರ ಬಳಿ ವಾದ ಮಾಡುವ ಮುನ್ನ ಒಮ್ಮೆ ಯೋಚಿಸಿ.

  ಯಾವುದೇ ಕಾರಣಕ್ಕೂ ಖಿನ್ನರಾಗಬೇಡಿ!

  ಸಾಮಾಜಿಕ ಜಾಲತಾಣಗಳಲ್ಲಿ ತೀರಾ ವೈಯಕ್ತಿಕವಾಗಿ ಟೀಕೆಗೆ ಒಳಗಾದರೆ ಎಲ್ಲರಿಗೂ ಮನಸ್ಸಿನಲ್ಲಿ ಕಳವಳ ಉಂಟಾಗುವುದು ಸಾಮಾನ್ಯವಾಗಿದೆ. ಇದು ಅಪರಿಚಿತರಿಗೂ ತೆರೆದುಕೊಂಡಿರುವ ಸಾಮಾಜಿಕ ಜಾಲತಾಣವೇ ಆಗಿರುವುದರಿಂದ ಏನು ಸಂವಾದ ನಡೆದರೂ ನನ್ನ ಬಗ್ಗೆಯೇ ಮಾತನಾಡುತ್ತಿರಬಹುದು ಎನಿಸುತ್ತದೆ. ಹಾಗಾಗಿ, ಇಂತಹ ಚಿಂತನೆಗಳಿಂದ ದೂರವಿರಿ. ಯಾರೋ ಗೊತ್ತಿಲ್ಲದವರು ಮಾಡಿದ ಟೀಕೆಗೆ ನಾವೇಕೆ ಖಿನ್ನರಾಗಬೇಕು?..ಅಲ್ಲವೆ?

  ದಾಖಲೆ ಇದ್ದರೆ ಬಯಲು ಮಾಡಿ!!

  ನಿಮ್ಮ ವಿರುದ್ಧ ಟ್ರೋಲ್ ಮಾಡುತ್ತಿರುವವರು ಯಾರು ಎಂದು ನಿಮಗೆ ಸ್ಪಷ್ಟವಾಗಿ ತಿಳಿದಿದ್ದರೆ ಅವರ ಉದ್ದೇಶ ಮತ್ತು ನಿಜಬಣ್ಣ ಬಯಲು ಮಾಡಿ. ನಿಮ್ಮ ಬದುಕಿನ ಖಾಸಾಗಿ ವಿಷಯಗಳ ಬಗ್ಗೆ ಟ್ರೋಲಿಂಗ್ ಮಾಡುವುದು ಹದ್ದು ಮೀರಿದರೆ ಖಂಡಿತ ಪೊಲೀಸರ ಸಹಾಯ ಪಡೆದುಕೊಳ್ಳಿ. ಇಂಥ ಸಂದರ್ಭದಲ್ಲಿ ಉದ್ವೇಗದಿಂದ ನೀವು ಅಶ್ಲೀಲ ಮಾತುಗಳನ್ನು ಬಳಸಬೇಡಿ. ಏಕೆಂದರೆ, ನಿಮ್ಮ ಕಾಮೆಂಟ್‌ಗಳು ನಿಮ್ಮ ಗೆಳೆಯರಿಗೂ ಗೋಚರಿಸುತ್ತವೆ ಎಂಬುದು ನೆಬನಪಿರಲಿ.

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ವಾಸ್ತವ ಒಪ್ಪಿಕೊಳ್ಳಿ!!

  ವಾಸ್ತವ ಒಪ್ಪಿಕೊಳ್ಳಿ!!

  ನೀವು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದೀರಾ ಎಂದರೆ ಕಂಡಿತವಾಗಿಯೂ ಟ್ರೋಲಿಂಗ್ ಮಾಡುವ ವಾಸ್ಟತವವನ್ನು ಒಪ್ಪಿಕೊಲ್ಳಿ. ನಿಮ್ಮ ಅಭಿಪ್ರಾಯಗಳಿಗನ್ನು ಇತರರು ಒಪ್ಪದೇ ಇರಬಹುದು. ಹಾಗಾಗಿ, ಅವರು ನಿಮ್ಮ ಮೇಲೆ ಮುಗಿಬೀಳುತ್ತಾರೆ. ಅಂತಹುಗಳನ್ನು ನಿರ್ಲಕ್ಷಿಸುವುದು ಒಳಿತು. ಎಕೆಂದರೆ, ತಂತ್ರಜ್ಞಾನ ಬದಲಾದಂತೆ ಪ್ರಪಂಚವು ಜಾಗತಿಕ ಹಳ್ಳಿಯಾಗಿತ್ತಿದೆಯೋ ಅಥವಾ ಜಾಗತಿಕ ಕಾಡಾಗುತ್ತಿದೆಯೋ ಎಂಬ ಪ್ರಶ್ನೆ ಹುಟ್ಟಿದೆ.

  ಓದಿರಿ:ಫೇಸ್‌ಬುಕ್ ಮೂಲಕವೇ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?..ಇಲ್ಲಿದೆ ಮಾಹಿತಿ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Five ways to protect yourself against cyberhate and trolls. Get your psychological armour on. Forewarned is forewarned, as the saying goes. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more