ಫೇಸ್‌ಬುಕ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಬರೆಯುವುದು ಹೇಗೆ?

Written By:

ಫೇಸ್‌ಬುಕ್ ಇಂದು ಮಿಲಿಯನ್‌ಗಟ್ಟಲೆ ಜನರಿಗೆ ಲಭ್ಯವಾಗುತ್ತಿದೆ. ಇಂಗ್ಲೀಷ್ ಭಾಷೆಯಲ್ಲಿ ಮಾತ್ರವಲ್ಲದೆ ಅವರವರ ಮಾತೃಭಾಷೆಯಲ್ಲಿ ಕೂಡ ಫೇಸ್‌ಬುಕ್ ಲಭ್ಯವಾದಲ್ಲಿ ಮಾತ್ರವೇ ಇದು ಸರಿಯಾದ ಬಳಕೆದಾರರನ್ನು ತಲುಪುತ್ತಿದೆ ಎಂದರ್ಥ. ತಮ್ಮ ಸ್ಟೇಟಸ್‌ಗಳನ್ನು ಸ್ಥಳೀಯ ಭಾಷೆಯಲ್ಲಿ ಅಪ್‌ಡೇಟ್ ಮಾಡಲು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಫೇಸ್‌ಬುಕ್‌ನಲ್ಲಿ ಸೌಲಭ್ಯವಿರುತ್ತಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು ಅಲ್ಲವೇ? ಚಿಂತೆ ಬಿಡಿ ನಿಮ್ಮ ಸ್ಥಳೀಯ ಭಾಷೆಯಲ್ಲಿ ಕೂಡ ಸ್ಟೇಟಸ್ ಅಪ್‌ಡೇಟ್ ಮಾಡಲು ಫೇಸ್‌ಬುಕ್ ನಿಮಗೆ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಅದಕ್ಕಾಗಿ ಕೆಳಗೆ ನಾವು ನೀಡಿರುವ ಹಂತಗಳನ್ನು ಅನುಸರಿಸಿದರೆ ಸಾಕು.

ಓದಿರಿ: ಗೂಗಲ್ ಮ್ಯಾಪ್ಸ್ ಆಫ್‌ಲೈನ್ ಬಳಕೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಥಳೀಯ ಭಾಷೆ

ಸ್ಥಳೀಯ ಭಾಷೆ

ನಿಮ್ಮ ಸ್ಥಳೀಯ ಭಾಷೆಯಲ್ಲಿ ಏಕೆ?

ನಿಮ್ಮ ಸ್ಥಳೀಯ ಭಾಷೆಯಲ್ಲಿ ನಿಮ್ಮ ಮನದ ಭಾವನೆಗಳನ್ನು ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದಲ್ಲಿ ಇದು ಹಲವರನ್ನು ತಲುಪುವುದು ಖಂಡಿತ. ಸಾವಿರಾರು ಆಡಿಯನ್ಸ್‌ ಅನ್ನು ಇದು ತಲುಪುತ್ತದೆ ನಿಮ್ಮ ಪೋಸ್ಟ್ ಬೇರೆ ಪ್ರದೇಶಗಳಲ್ಲಿರುವ ಭಾಷೆಗೂ ಅನುವಾದಗೊಳ್ಳುತ್ತದೆ. ವಿಶೇಷವಾಗಿ ನಿಮ್ಮ ಪುಟವನ್ನು ನಿರ್ವಹಿಸುತ್ತಿರುವ ಕಾರ್ಪೊರೇಟ್ಸ್ ಮತ್ತು ವ್ಯವಹಾರಸ್ಥರಿಗೆ ಈ ತಂತ್ರದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ನಿಮ್ಮ ಪೋಸ್ಟ್ ತಲುಪುತ್ತದೆ.

ಹಂತ 1

ಹಂತ 1

#2

ಬಹು ಭಾಷೆಗಳಲ್ಲಿ ನಿಮ್ಮ ಸ್ಟೇಟಸ್ ಪೋಸ್ಟ್ ಮಾಡಲು ನಿಮ್ಮ ಖಾತೆ ಸೆಟ್ಟಿಂಗ್‌ಗಳಿಗೆ ಹೋಗಿ. 'ಜನರಲ್' ಟ್ಯಾಬ್ ಅಡಿಯಲ್ಲಿ 'ಪೋಸ್ಟ್ ಇನ್ ಮಲ್ಟಿಪಲ್ ಲಾಂಗ್ವೇಜಸ್' ಅನ್ನು ಸಕ್ರಿಯಗೊಳಿಸಿ. ಗ್ರೂಪ್ ಮತ್ತು ಪೇಜ್ ಅಡ್ಮಿನ್ಸ್ ಇದನ್ನು ಸಕ್ರಿಯಗೊಳಿಸಲು ಸಾಧ್ಯ.

ಹಂತ: 2

ಹಂತ: 2

#3

'ಎಡಿಟ್' ಕ್ಲಿಕ್ ಮಾಡಿ ಮತ್ತು ಬದಲಾವಣೆಗಳನ್ನು ಉಳಿಸಿ.

ಹಂತ: 3

ಹಂತ: 3

#4

ಒಮ್ಮೆ ನೀವು ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಸ್ಟೇಟಸ್ ಅನ್ನು ಪೋಸ್ಟ್ ಮಾಡಲು ಹಿಂತಿರುಗಬಹುದು. ಈ ಸಮಯದಲ್ಲಿ, ನೀವು ಪೋಸ್ಟ್ ಮಾಡ ಬಯಸುವ ಭಾಷೆಯನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. "ವ್ರೈಟ್ ಸಮ್‌ಥಿಂಗ್" ಸೆಕ್ಶನ್‌ನಲ್ಲಿ ಕರ್ಸರ್ ಅನ್ನು ಇರಿಸುವ ಮೂಲಕ, "ವ್ರೈಟ್ ಪೋಸ್ಟ್ ಇನ್ ಅನದರ್ ಲಾಂಗ್ವೇಜ್" ಹೆಚ್ಚುವರಿ ಆಯ್ಕೆಯನ್ನು ಕಾಣಬಹುದಾಗಿದೆ.

ಹಂತ: 4

ಹಂತ: 4

#5

ಬೇಕಾದಲ್ಲಿ, ಮೂರನೇ ಭಾಷೆಯಲ್ಲಿ "ವ್ರೈಟ್ ಪೋಸ್ಟ್ ಇನ್ ಅನದರ್ ಲಾಂಗ್ವೇಜ್" ಅನ್ನು ಕ್ಲಿಕ್ ಮಾಡುವ ಮೂಲಕ ಅದೇ ಪೋಸ್ಟ್ ಅನ್ನು ನೀವು ಸೇರಿಸಿಕೊಳ್ಳಬಹುದಾಗಿದೆ. ನೀವು ಒಮ್ಮೆ ಪೋಸ್ಟ್ ಮಾಡಿದ ನಂತರ, ಫೇಸ್‌ಬುಕ್‌ನಲ್ಲಿರುವ ನಿಮ್ಮ ಸ್ನೇಹಿತರು ಮತ್ತು ಇತರರು ಪೋಸ್ಟ್ ಅನ್ನು ಓದುವ ಇತರ ಭಾಷೆಯನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The social network has so many users now using the local versions even to post their status updates too in their mother tongue. So do you update your status in your local language? We take you through it step-by-step.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot